ಶಮಿ ಬದುಕಲ್ಲಿ ಮತ್ತೆ ಬಿರುಗಾಳಿ! ಗೆದ್ದಿತು ಹಸೀನಾಳ ಹಸಿ ಸುಳ್ಳು
ನೆಮ್ಮದಿ ಕಳ್ಕೊಂಡ ಸ್ಟಾರ್ ಬೌಲರ್!

ಶಮಿ ಬದುಕಲ್ಲಿ ಮತ್ತೆ ಬಿರುಗಾಳಿ! ಗೆದ್ದಿತು ಹಸೀನಾಳ ಹಸಿ ಸುಳ್ಳುನೆಮ್ಮದಿ ಕಳ್ಕೊಂಡ ಸ್ಟಾರ್ ಬೌಲರ್!

ಮದುವೆ ಅನ್ನೋದು ಏಳೇಳು ಜನುಮದ ಅನುಬಂಧ ಅಂತಾರೆ. ಎಷ್ಟೇ ಕಷ್ಟ ಬಂದ್ರೂ ಗಂಡ ಹೆಂಡತಿ ದೂರ ಆಗಲ್ಲ.. ಕಷ್ಟ ಸುಖವನ್ನ ಹಂಚಿಕೊಂಡು ಸಾಗ್ತಾರೆ ಅಂತಾರೆ.. ಆದ್ರೆ ಈಗಿನ ಕಾಲದಲ್ಲಿ ಮದುವೆ ಏಳೇಳು ಜನುಮ ಇರ್ಲಿ, 7 ದಿನ ಕೂಡ ನೆಟ್ಟಗೆ ಇರಲ್ಲ.. ಮದುವೆ ಅನ್ನೋದು ಒಂದು ರೀತಿಯ ಬ್ಯುಸನೆಸ್ ಆಗಿದೆ. ನಾಲ್ಕು ದಿನ ಒಟ್ಟಿಗಿದ್ದು, ಆಮೇಲೆ ದೂರ ದೂರ ಆಗಿ..  ಆಮೇಲೆ ಡೈವರ್ಸ್.. ಕೋರ್ಟ್.. ಜೀವನಾಂಶ ಅನ್ನೋದು ಈಗ ಕಾಮನ್ ಆಗಿದೆ. ಅದ್ರಲ್ಲೂ ಕ್ರಿಕೆಟರ್  ಮೊಹಮ್ಮದ್ ಶಮಿ ಈ ವಿಷ್ಯ  ನೆಮ್ಮದಿಯನ್ನೇ ಕಳ್ಕೊಂಡಿದ್ದಾರೆ. ಇವರಿಗೆ ನಾನ್ ಯಾಕಾದ್ರೂ ಮದುವೆ ಅದ್ನೋ ಅನಿಸಿದೆ.. ಡೈವರ್ಸ್ ಆದ್ರೂ ಮೇಲೂ ಶಮಿ ನೆಮ್ಮದಿಯನ್ನ ಕೋರ್ಟ್ ಕಿತ್ತು ಕೊಂಡಿದೆ.

ಇದನ್ನೂ ಓದಿ: ಹೋಟೆಲ್ ಉದ್ಯಮಿಯಾದ ಮೊಹಮ್ಮದ್ ಸಿರಾಜ್ – ಟೀಮ್ ಇಂಡಿಯಾ ವೇಗಿ ಬದುಕಿನಲ್ಲಿ ಹೊಸ ಇನ್ನಿಂಗ್ಸ್

ಮಾಜಿ ಹೆಂಡತಿಯಿಂದ ನೆಮ್ಮದಿ ಕಳ್ಕೊಂಡ ಶಮಿ

ನಿಮ್ಗೆಲ್ಲಾ ಮೊಹಮ್ಮದ್ ಶಮಿ ಗೊತ್ತೆ ಇದೆ.. ಇವರು ಇಂಡಿಯಾದ ಈ ಸೀನಿಯರ್​​ ಬೌಲರ್‌.. ಭಾರತ ಕಂಡ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾಗಿದ್ದರೂ ವೈಯಕ್ತಿಕ ಬದುಕಿನಲ್ಲಿ ಅನೇಕ ಏರುಪೇರುಗಳನ್ನು ಕಂಡಿದ್ದಾರೆ.  ಶಮಿ ಕ್ರಿಕೆಟ್‌ಗಿಂತ ಹೆಚ್ಚಾಗಿ ವೈಯಕ್ತಿಕ ಜೀವನದಿಂದ ನೊಂದು ಹೋಗಿದ್ದಾರೆ. ಮೊಹಮ್ಮದ್ ಶಮಿ 2014 ರಲ್ಲಿ ಹಸಿನ್ ಜಹಾನ್ ಅವರನ್ನು ಮದುವೆಯಾಗಿದ್ರು. ದಂಪತಿಗೆ ಐರಾ ಎಂಬ ಹೆಣ್ಣು ಮಗಳಿದ್ದಾಳೆ. ಕೇವಲ ನಾಲ್ಕೇ ನಾಲ್ಕು ವರ್ಷ ಇವರಿಬ್ಬರು ಒಟ್ಟಿಗೆ ಸಂಸಾರ ಮಾಡಿದ್ದಾರೆ. ಆಮೇಲೆ ಇವರ ಸಂಸಾರದಲ್ಲಿ ಬಿರುಗಾಳಿ ಎದ್ದು 2018 ಮಾರ್ಚ್ ನಲ್ಲಿ ಅವರು  ಶಮಿ ಪತ್ನಿ ಹಸಿನ್ ಜಹಾನ್ ಅವರು ಶಮಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ವ್ಯಭಿಚಾರದ ಆರೋಪ ಹೊರಿಸಿ ಕೇಸು ದಾಖಲಿಸಿದ್ರು. ಕೊಲೆ ಯತ್ನ, ವಿಷಪ್ರಾಶನ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಅಪರಾಧಗಳ ಆರೋಪವೂ ಶಮಿ ಮೇಲೆ ಇತ್ತು. ಆದರೆ ಶಮಿ ಅವರು ಮಾತ್ರ ಈ ಎಲ್ಲಾ ಆರೋಪಗಳನ್ನೂ ನಿರಾಕರಿಸಿದ್ರು.. ಇದು ಪಕ್ಕಾ ಪ್ಲ್ಯಾನ್ ಮಾಡಿ ನನ್ನ ಮೇಲೆ ಆರೋಪ ಹೊರಿಸಿದ್ದಾರೆ ಅಂತಾ ಹೇಳಿದ್ರು. ಬಿಸಿಸಿಐ ಕೂಡ ಶಮಿ ಅವರನ್ನು ತಮ್ಮ ರಾಷ್ಟ್ರೀಯ ಒಪ್ಪಂದಗಳ ಪಟ್ಟಿಯಿಂದ ತಡೆಹಿಡಿಯಿತು. ಅಷ್ಟೇ ಅಲ್ಲ ಶಮಿ ಅವರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಅವರ ಪತ್ನಿ ಕೂಡ ಹೇಳಿದ್ದರು.  ಬಳಿಕ ಶಮಿ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ಕೂಡ ತನಿಖೆ ನಡೆಸಿದ್ದು ನಂತ್ರ ಕ್ಲೀನ್​ಚಿಟ್ ಕೊಟ್ಟಿತ್ತು. ಟೀಂ ಇಂಡಿಯಾ ವೇಗಿಯ ಬೆನ್ನಿಗೆ ಬಿಸಿಸಿಐ ನಿಂತುಕೊಂಡಿತ್ತು. ಆದ್ರೆ ಸಂಕಷ್ಟದ ಸಂದರ್ಭದಲ್ಲಿ ಮೊಹಮ್ಮದ್ ಶಮಿ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ರಂತೆ. ಆ ಟೈಂನಲ್ಲಿ   ವಿರಾಟ್ ಕೊಹ್ಲಿ ಮತ್ತು ಎಲ್ಲಾ ಪ್ಲೇಯರ್ಸ್​​ಗಳು, ಬಿಸಿಸಿಐ ಕಂಪ್ಲೀಟ್ ಸಪೋರ್ಟ್​ ಮಾಡಿದ್ರಿಂದ ಸೂಸೈಡಲ್​ ಥಾಟ್ಸ್​​ನಿಂದ ಶಮಿ ಹೊರ ಬಂದ್ರಂತೆ.. ಹೆಂಡತಿ ಕೊಟ್ಟ ನೋವಿನಿಂದ ಹೊರ ಬಂದ ಶಮಿಗೆ ಈಗ ಕೋರ್ಟ್ ಬಿಗ್ ಶಾಕ್ ಕೊಟ್ಟಿದೆ.

 ಶಮಿಗೆ  ಬಿಗ್ ಶಾಕ್ ಕೊಟ್ಟ ಕೋರ್ಟ್  –  ತಿಂಗಳಿಗೆ ಹೆಂಡತಿಗೆ 4 ಲಕ್ಷ ರೂ. ಪರಿಹಾರ

ಹೌದು.. ಮಳೆ ನಿಂತ್ರೂ ಮಳೆ ಹನಿ ನಿಂತಿಲ್ಲ ಅನ್ನೋ ಹಾಗೇ.. ಶಮಿ ಹೆಂಡತಿಯಿಂದ ದೂರವಾದ್ರೂ ಸಮಸ್ಯೆಗಳು ಮಾತ್ರ ಕಮ್ಮಿಯಾಗಿಲ್ಲ. ಭಾರತದ ಕ್ರಿಕೆಟಿಗ ಮೊಹಮ್ಮದ್‌ ಶಮಿ ತನ್ನಿಂದ ದೂರವಾಗಿರುವ ಪತ್ನಿಗೆ ತಿಂಗಳಿಗೆ ನಾಲ್ಕು ಲಕ್ಷ ಜೀವನಾಂಶ ಕೊಡುವಂತೆ ಕೋಲ್ಕತ್ತಾ ಹೈಕೋರ್ಟ್‌ ಆದೇಶ ಹೊರಡಿಸಿದೆ.  ನಾಯಮೂರ್ತಿ ಅಜಯ್ ಕುಮಾರ್ ಮುಖರ್ಜಿ ಅವರಿದ್ದ ಪೀಠವು ಆದೇಶ ಹೊರಡಿಸಿದೆ. ಶಮಿ ಪತ್ನಿ ಜಹಾನ್ ವೈಯಕ್ತಿಕ ಜೀವನಾಂಶಕ್ಕಾಗಿ ತಿಂಗಳಿಗೆ 1.5 ಲಕ್ಷ ರೂಪಾಯಿ ಮತ್ತು ಅಪ್ರಾಪ್ತ ಮಗಳ ಆರೈಕೆ, ವೆಚ್ಚಗಳಿಗಾಗಿ 2.5 ಲಕ್ಷ ರೂಪಾಯಿಗಳನ್ನು ಪಾವತಿಸಬೇಕೆಂದು ಆದೇಶ ನೀಡಿದೆ.

ಅಂದಹಾಗೇ ಹೆಂಡತಿಗೆ ತಿಂಗಳಿಗೆ 50,000 ರೂ. ಮತ್ತು ತಮ್ಮ ಮಗಳ ಖರ್ಚಿಗಾಗಿ ಹೆಚ್ಚುವರಿಯಾಗಿ 80,000 ರೂ.ಗಳನ್ನು ಪಾವತಿಸುವಂತೆ ಕೋಲ್ಕತ್ತಾದ ಅಲಿಪೋರ್ ನ್ಯಾಯಾಲಯವು 2018 ರಲ್ಲಿ ನೀಡಿದ್ದ ಆದೇಶದ ವಿರುದ್ಧ ಜಹಾನ್ ಮೇಲ್ಮನವಿ ಸಲ್ಲಿಸಿದ್ದರು. ಆ ಸಮಯದಲ್ಲಿ, ಜಹಾನ್ ತನಗೆ 7 ಲಕ್ಷ ರೂ. ಮತ್ತು ತನ್ನ ಮಗಳಿಗೆ 3 ಲಕ್ಷ ರೂ.ನಂತೆ ಒಟ್ಟು 10 ಲಕ್ಷ ರೂ. ಕೇಳಿದ್ದರು. ಆದರೆ, ಕೆಳಹಂತದ ನ್ಯಾಯಾಲಯವು ಅವರ ವಿನಂತಿಯನ್ನು ವಜಾಗೊಳಿಸಿತ್ತು. ಶಮಿ ಆರ್ಥಿಕ ಪರಿಸ್ಥಿತಿಯು ಹೆಚ್ಚಿನ ಜೀವನಾಂಶವನ್ನು ನೀಡಲು ಸಹಾಯ ಮಾಡುತ್ತದೆ ಎಂದು ಜಹಾನ್ ಕಾನೂನು ಸಲಹೆಗಾರರು ತಮ್ಮ ಮೇಲ್ಮನವಿಯಲ್ಲಿ ವಾದಿಸಿದ್ದರು. 2021 ರ ಹಣಕಾಸು ವರ್ಷದ ಅವರ ಆದಾಯ ತೆರಿಗೆ ರಿಟರ್ನ್ ಪ್ರಕಾರ, ಶಮಿ ಅವರ ವಾರ್ಷಿಕ ಆದಾಯ ಸುಮಾರು 7.19 ಕೋಟಿ ರೂ. ಅಂದರೆ, ತಿಂಗಳಿಗೆ ಸುಮಾರು 60 ಲಕ್ಷ ರೂ. ಆಗಿತ್ತು. ಜಹಾನ್ ತನ್ನ ಮಗಳ ಖರ್ಚು ಸೇರಿದಂತೆ ತನ್ನ ಒಟ್ಟು ಮಾಸಿಕ ಖರ್ಚು 6 ಲಕ್ಷ ರೂ. ಮೀರಿದೆ ಎಂದು ಹೇಳಿಕೊಂಡಿದ್ರು.  ಈ ವಿವರಗಳನ್ನು ಗಣನೆಗೆ ತೆಗೆದುಕೊಂಡು, ಹೈಕೋರ್ಟ್ ಜಹಾನ್ ಪರವಾಗಿ ತೀರ್ಪು ನೀಡಿದೆ.  ಶಮಿ ಗಳಿಕೆ ಚೆನ್ನಾಗಿಯೇ ಇದೆ. ಅವರ ಪತ್ನಿ ಜಹಾನ್ ಮರುಮದುವೆಯಾಗಿಲ್ಲ. ತನ್ನ ಮಗಳೊಂದಿಗೆ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಹೀಗಾಗಿ, ಹಿಂದಿನ ತೀರ್ಪಿನಲ್ಲಿ ತಿದ್ದುಪಡಿ ಅಗತ್ಯವಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕಳೆದ 7 ವರ್ಷಗಳಿಂದ ಲೆಕ್ಕಹಾಕಿ ಜೀವನಾಂಶ ಕೊಡಬೇಕು

 ತಿಂಗಳಿಗೆ ನಾಲ್ಕು ಲಕ್ಷದಂತೆ ಕಳೆದ ಕಳೆದ 7 ವರ್ಷಗಳ ಹಿಂದಿನಿಂದ ಲೆಕ್ಕ ಹಾಕಿ ನೀಡಬೇಕು ಹೈಕೋರ್ಟ್ ಆದೇಶ ನೀಡಿದೆ. ಡೈವರ್ಸ್ ಯಾವಾಗ ಆಯ್ತೋ ಅಲ್ಲಿಂದ ಲೆಕ್ಕಹಾಕಿ ಕೊಡಬೇಕು.. 7 ವರ್ಷ ಅಂದ್ರೆ ಹಳೇ ಬಾಕಿನೇ 3 ಕೋಟಿ 36 ಲಕ್ಷ ನೀಡಬೇಕು.. ಜೊತೆಗೆ ಇನ್ಮುಂದೆ ತಿಂಗಳಿಗೆ ನಾಲ್ಕು ಲಕ್ಷ ನೀಡಬೇಕು.. ವರ್ಷಕ್ಕೆ 48 ಲಕ್ಷ ಮಾಜಿ ಹೆಂಡತಿಗೆ ಶಮಿ ಕೊಡಬೇಕು.. ಕೇವಲ ನಾಲ್ಕೇ ನಾಲ್ಕು ವರ್ಷ ಸಂಸಾರ ಮಾಡಿದ್ದಾಕ್ಕೆ ಮೊಹಮ್ಮದ್ ಶಮಿ ದೊಡ್ಡ ಬೆಲೆಯನ್ನೇ ಕಟ್ಟಿದ್ದಾರೆ.

 

 

Kishor KV