ವಿರಾಟ್ ಇದ್ದಾಗ ವೈಭವ.. ಇಲ್ಲದಿದ್ದಾಗ ಸೈಲೆಂಟ್ – ಸೈಡ್ ಲೈನ್ ಆಗ್ತಾರಾ ಮೊಹಮ್ಮದ್ ಸಿರಾಜ್?

ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಸೂಪರ್ ಹೀರೋ. ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕೆ ಬರೋ ಸಾವಿರಾರು ಯುವಮನಸುಗಳಿಗೆ ರೋಲ್ ಮಾಡೆಲ್. ವಿರಾಟ್ರನ್ನೇ ಆರಾಧಿಸೋ ಅಸಂಖ್ಯಾತ ಅಭಿಮಾನಿಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ರು. ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲೇ ಟೀಂ ಇಂಡಿಯಾಗೆ ಕಾಲಿಟ್ಟ ಸಿರಾಜ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸೋ ಮಟ್ಟಿಗೆ ಚೆಂಡಿನಲ್ಲೇ ಬೆಂಡೆತ್ತುತ್ತಿದ್ರು. ಆ ಕಣ್ಗಳಲ್ಲಿ ಸದಾ ಉರಿಯೋ ಜ್ವಾಲೆ ಕಾಣ್ತಿತ್ತು. ಸಿರಾಜ್ ಒಂದೊಂದು ವಿಕೆಟ್ ತೆಗೆದಾಗ್ಲೂ ಕೊಹ್ಲಿಯೇ ಹೆಚ್ಚು ಸಂಭ್ರಮಿಸ್ತಿದ್ರು. ಆದ್ರೀಗ ವಿರಾಟ್ ಇಲ್ಲ ಅಂತಾನೋ ಏನೋ ಸಿರಾಜ್ ಕೂಡ ಮಂಕಾಗಿದ್ದಾರೆ.
ಇದನ್ನೂ ಓದಿ : PAK ಎದೆ ಸೀಳೋಕೆ ಅಗ್ನಿ-5 ರೆಡಿ – ಭಾರತಕ್ಕೆ ಬಂಕರ್ ಬಸ್ಟರ್ ಬಲ!
ವಿರಾಟ್ ಇದ್ದಾಗ ವೈಭವ.. ಇಲ್ಲದಿದ್ರೆ ಸಿರಾಜ್ ಸೈಲೆಂಟ್!
ಟೀಂ ಇಂಡಿಯಾದಲ್ಲಿ ಜಸ್ಪ್ರೀತ್ ಬುಮ್ರಾ ಬಿಟ್ರೆ ಬೌಲಿಂಗ್ ಅಟ್ಯಾಕ್ನ ಪ್ರಮುಖ ಅಸ್ತ್ರವೇ ಮೊಹಮ್ಮದ್ ಸಿರಾಜ್. ಕಿಂಗ್ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ನೀಡಿದ್ದ ಸಿರಾಜ್ ಡೆಡ್ಲಿ ಬೌಲಿಂಗ್ ಸ್ಪೆಲ್ಗಳ ಮೂಲಕವೇ ಮೈದಾನದಲ್ಲಿ ಮಿಂಚು ಹರಿಸ್ತಿದ್ರು. ಅಗ್ರೆಸ್ಸಿವ್ ಇಂಟೆಂಟ್ನಲ್ಲೇ ಪಂದ್ಯದ ದಿಕ್ಕನ್ನೇ ಬದಲಿಸುತ್ತಿದ್ರು. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಾನೇ ಸೂಪರ್ ಸ್ಟಾರ್ ಆಗಿ ಬೆಳೆದ ಸಿರಾಜ್ ಈಗ ಒಂದೊಂದು ವಿಕೆಟ್ಗೂ ಸರ್ಕಸ್ ಮಾಡ್ತಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲೂ ವಿಕೆಟ್ ತೆಗೆಯೋಕೆ ಹರಸಾಹಸ ಪಡ್ತಿದ್ದಾರೆ. ಲೀಡ್ಸ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 41 ಓವರ್ಗಳನ್ನ ಬೌಲ್ ಮಾಡಿದ್ದ ಸಿರಾಜ್, 4.21 ಎಕಾನಮಿಯಲ್ಲಿ ಬರೋಬ್ಬರಿ ನೀಡಿದ್ದು 173 ರನ್ ನೀಡಿದ್ದಾರೆ. ಬಟ್ ಪಡೆದಿದ್ದು ಕೇವಲ ಎರಡೇ ಎರಡು ವಿಕೆಟ್. ಇದೇ ಪ್ರದರ್ಶನವೇ ಈಗ ಸಿರಾಜ್ ವೈಫಲ್ಯಕ್ಕೆ ಕೊಹ್ಲಿ ನಿವೃತ್ತಿಯೇ ಕಾರಣ ಅನ್ನೋ ಚರ್ಚೆ ಹುಟ್ಟು ಹಾಕಿದೆ. ಅಂಕಿ ಅಂಶಗಳೂ ಕೂಡ ಇದಕ್ಕೆ ಪುಷ್ಠಿ ನೀಡ್ತಿವೆ.
ಕೊಹ್ಲಿ ಇದ್ರಷ್ಟೇ ಸಿರಾಜ್ ಸಿಡಿಗುಂಡು!
ಸಿರಾಜ್ ಟೆಸ್ಟ್ ಕೆರಿಯರ್ ಆರಂಭಿಸಿದ್ದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ
ಸಿರಾಜ್ ನನ್ನು ಮುಂದಿಟ್ಟು ಕೊಹ್ಲಿ ರೂಪಿಸುತ್ತಿದ್ದ ತಂತ್ರಗಳು ಫಲ
ಕೊಹ್ಲಿಯ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್ ಕಡೆಯಿಂದ ನಿರಾಸೆ
ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಈವರೆಗೆ 37 ಟೆಸ್ಟ್ ಪಂದ್ಯ
69 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಸಿರಾಜ್ ಬರೋಬ್ಬರಿ 103 ವಿಕೆಟ್
ವಿರಾಟ್ ಕೊಹ್ಲಿ ತಂಡದಲ್ಲಿದ್ದಾಗ 51 ಟೆಸ್ಟ್ ಇನಿಂಗ್ಸ್ ಗಳಲ್ಲಿ ಬರೋಬ್ಬರಿ 81 ವಿಕೆಟ್
ಕೊಹ್ಲಿಯ ಅನುಪಸ್ಥಿತಿಯ ನಡುವೆ ಮೊಹಮ್ಮದ್ ಸಿರಾಜ್ 18 ಟೆಸ್ಟ್ ಇನಿಂಗ್ಸ್
20 ವಿಕೆಟ್ ಮಾತ್ರ, ಒಂದು ವಿಕೆಟ್ ಪಡೆಯಲು ಕನಿಷ್ಠ 71 ಎಸೆತಗಳು ಬೇಕು
ಇದೇ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದಾಗ ಮೊಹಮ್ಮದ್ ಸಿರಾಜ್ ‘ನನ್ನ ಸೂಪರ್ ಹೀರೋ’ನನ್ನು ನಾನು ಇನ್ಮುಂದೆ ಮಿಸ್ ಮಾಡಿಕೊಳ್ಳಲಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್ ಎಷ್ಟು ಮಹತ್ವದ್ದು ಅನ್ನೋದು ಈಗ ಜಗಜ್ಜಾಹೀರಾಗ್ತಿದೆ. ವಿರಾಟ್ ಸಾಮ್ರಾಟನಾಗಿದ್ದ ವೇಳೆ ಮೈದಾನದಲ್ಲಿ ಮದ್ದಾನೆಯಂತಿದ್ದ ಸಿರಾಜ್ ಈಗ ದಾರಿ ತಪ್ಪಿದ ಸಲಗದಂತಾಗಿದ್ದಾರೆ. ಆದ್ರೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಮೊದಲಿದ್ದ ಸಿಡಿಗುಂಡಿನ ಪ್ರದರ್ಶನ ಬರಲೇಬೇಕಿದೆ. ಇಲ್ಲದೇ ಇದ್ರೆ ಮುಂದೊಂದು ದಿನ ಗೌತಮ್ ಗಂಭೀರ್ ಗರಡಿಯಿಂದ ಹೊರ ಬಿದ್ರೂ ಅಚ್ಚರಿ ಪಡ್ಬೇಕಿಲ್ಲ.

ನೋಡಿರಿ

