CSK & RR ಟ್ರೇಡ್ ವಿಂಡೋ ಟೆಕ್ನಿಕ್ – ಸಂಜುಗಾಗಿ ಅಶ್ವಿನ್ & ದುಬೆ ರಿಲೀಸ್?
MSD ಮೈಂಡ್ ಗೇಮ್.. ದ್ರಾವಿಡ್ ದಂಗು!

ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ಆಗಿರುವ ಸಂಜು ಸ್ಯಾಮ್ಸನ್ 2026ರ ಐಪಿಎಲ್ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಸೇರಿಕೊಳ್ತಾರೆ ಅನ್ನೋ ಸುದ್ದಿ ಕಳೆದ ಎರಡ್ಮೂರು ವಾರಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಕಳೆದ 8 ವರ್ಷಗಳಿಂದ ಅಂದ್ರೆ 2018ರಿಂದ ರಾಜಸ್ಥಾನ ರಾಯಲ್ಸ್ ಪರ ಕಣಕ್ಕಿಳಿಯುತ್ತಿರೋ ಸಂಜು ಸ್ಯಾಮ್ಸನ್ ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿಕೊಳ್ತಾರೆ ಅನ್ನೋದು ಹಾಟ್ ಟಾಪಿಕ್.. ಹಾಗೇ ಇದಕ್ಕೆ ಬದಲಿಯಾಗಿ ಸಿಎಸ್ಕೆಯಿಂದ ಇಬ್ಬರನ್ನ ಆರ್ಆರ್ ಟೀಮ್ಗೆ ಕಳಿಸಿಕೊಡೋ ತಂತ್ರವೂ ರೆಡಿಯಾಗಿದೆ.
ಇದನ್ನೂ ಓದಿ : ಕ್ಯಾಪ್ಟನ್ ಕೂಲ್ ಇನ್ನು ಮುಂದೆ ಧೋನಿಗೆ ಸ್ವಂತ – ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್ಗಾಗಿ ಧೋನಿ ಅರ್ಜಿ
ಸಿಎಸ್ ಕೆಗೆ ಸಂಜು.. ಆರ್ ಆರ್ ಗೆ ದುಬೆ & ಅಶ್ವಿನ್?
ವರದಿಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಶಿವಂ ದುಬೆ ಹಾಗೇ ರವಿಚಂದ್ರನ್ ಅಶ್ವಿನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಿ, ಸಂಜು ಸ್ಯಾಮ್ಸನ್ ಅವರನ್ನು ಖರೀದಿಸಲು ಸಿಎಸ್ಕೆ ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ. ಹಾಗೇ ಉಭಯ ಫ್ರಾಂಚೈಸಿಗಳ ನಡುವೆ ಈ ಬಗ್ಗೆ ಮಾತುಕತೆಗಳೂ ನಡೆಯುತ್ತಿವೆ ಎನ್ನಲಾಗಿದೆ. 2026ರ ಐಪಿಎಲ್ಗೆ ಟ್ರೇಡ್ ವಿಂಡೋ ಜುಲೈ 4 ರಿಂದ ಓಪನ್ ಆಗಲಿದೆ. ಈ ಆಯ್ಕೆಯ ಮೂಲಕ ಪರಸ್ಪರ ಆಟಗಾರರನ್ನು ಬದಲಿಸಲು ಹಾಗೂ ಖರೀದಿಸಲು ಅವಕಾಶ ಇರಲಿದೆ. ಈ ಆಯ್ಕೆಯ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಸಂಜು ಸ್ಯಾಮ್ಸನ್ ಅವರನ್ನು ಸಿಎಸ್ಕೆ ಕರೆತರೋ ಯೋಜನೆಯಲ್ಲಿದೆ. ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರೇಡ್ ಮಾರ್ಕ್ ಯಾರು ಎಂಬ ಪ್ರಶ್ನೆಗೆ ಸಿಎಸ್ಕೆ ಫ್ರಾಂಚೈಸಿ ಬಳಿ ಉತ್ತರವಿಲ್ಲ. ಹೀಗಾಗಿ ರಾಜಸ್ಥಾನದ ಪರ ಕೂಲ್ ಕ್ಯಾಪ್ಟನ್ ಎನಿಸಿಕೊಂಡಿರುವ ಸ್ಯಾಮ್ಸನ್ ಅವರನ್ನು ಕರೆತರೋ ಪ್ಲ್ಯಾನ್ನಲ್ಲಿದೆ. ಅಷ್ಟಕ್ಕೂ ಸಿಎಸ್ಕೆ ಇಂಥಾದ್ದೊಂದು ಯೋಜನೆಗೆ ಕಾರಣವೇ ಮಹೇಂದ್ರ ಸಿಂಗ್ ಧೋನಿ!
ಚೆನ್ನೈ ತಂಡಕ್ಕೆ ಯಾಕೆ ಸಂಜು?
ಪ್ರಸ್ತುತ ಸಿಎಸ್ ಕೆ ಕ್ಯಾಪ್ಟನ್ ಆಗಿರೋ ಧೋನಿಗೆ 43 ವರ್ಷ
ಸಂಜು ಆಯ್ಕೆಯಾದ್ರೆ ಬೆಟರ್ ಅನ್ನೋದು ಫ್ರಾಂಚೈಸಿ ಯೋಚನೆ
2021 ರಲ್ಲಿ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ಫೈನಲ್
ಸ್ಯಾಮ್ಸನ್ ನೇತೃತ್ವದಲ್ಲಿ 33 ಪಂದ್ಯಗಳಲ್ಲಿ ಜಯ, 32 ಪಂದ್ಯಗಳಲ್ಲಿ ಸೋಲು
18ನೇ ಆವೃತ್ತಿಯಲ್ಲಿ ಕೈ ಬೆರಳಿನ ಗಾಯದಿಂದ ಬಳಲಿದ್ದ ಸಂಜು ಸ್ಯಾಮ್ಸನ್
ಕೋಚ್ ರಾಹುಲ್ ದ್ರಾವಿಡ್ ಜತೆ ಮನಸ್ತಾಪ ಮಾಡಿಕೊಂಡಿದ್ದಾಗಿಯೂ ಸುದ್ದಿ
ಚೆನ್ನೈ ಪರ ಕಣಕ್ಕಿಳಿದಿದ್ದ ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್
ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿರುವ ಶಿವಂ ದುಬೆ ಕೈಬಿಟ್ಟು
ಅಶ್ವಿನ್ ಮತ್ತು ದುಬೆ ಒಟ್ಟಾಗಿ ₹21.75 ಕೋಟಿ ಮೌಲ್ಯವನ್ನು ಹೊಂದಿದ್ದಾರೆ
ಸಂಜು ಸ್ಯಾಮ್ಸನ್ ಅವರ ಬೆಲೆ ₹18 ಕೋಟಿ. ಸೋ ಇಬ್ಬರನ್ನ ಪಡೆದು ಸಂಜು ರಿಲೀಸ್
ರಾಯಲ್ಸ್ ತಂಡವು ಸಿಎಸ್ಕೆ ತಂಡಕ್ಕೆ ₹3.75 ಕೋಟಿ ಪರಿಹಾರ ನೀಡುವ ಸಾಧ್ಯತೆ
ಆರ್ ಅಶ್ವಿನ್ ಕಳೆದ ಸೀಸನಲ್ಲಿ 7 ವಿಕೆಟ್, ಶಿವಂ ದುಬೆ 357 ರನ್ ಗಳಿಸಿದ್ರು
ಅಷ್ಟಕ್ಕೂ ಇಂಥಾದ್ದೊಂದು ಸುದ್ದಿ ಸದ್ದು ಮಾಡೋಕೆ ಕಾರಣ ಒಂದು ಪೋಸ್ಟ್ ಮತ್ತು ಲೈಕ್. ಆರ್ ಅಶ್ವಿನ್ ಜೊತೆ ಕ್ಲೋಸ್ ರಿಲೇಷನ್ಶಿಪ್ ಹೊಂದಿರೋ ಕ್ರಿಕೆಟ್ ವಿಶ್ಲೇಷಕ ಪ್ರಸನ್ನ ಅಗೋರಾಮ್ ಮಾಡಿದ್ದ ಪೋಸ್ಟ್ನಿಂದಲೇ ಇಷ್ಟೆಲ್ಲಾ ಬೆಳವಣಿಗೆಗಳು ಆಗಿವೆ. ಸಂಜು ಸ್ಯಾಮ್ಸನ್ ಈ ವಿನಿಮಯ ಸೂಚಿಸುವ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗೇ ಅದಲು ಬದಲು ಆಟಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.

ನೋಡಿರಿ

