ಬ್ರಿಟಿಷರ ಬೇಟೆಗೆ ಭಾರತಕ್ಕೆ ಬ್ರಹ್ಮಾಸ್ತ್ರ – ಸ್ಪಿನ್ ಅಸ್ತ್ರ.. ಪ್ಲೇಯಿಂಗ್ 11ನಲ್ಲಿ ಟ್ವಿಸ್ಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಜುಲೈ 2 ರಿಂದ ಬರ್ಮಿಂಗ್ ಹ್ಯಾಮ್ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತವನ್ನ 5 ವಿಕೆಟ್ಗಳಿಂದ ಸೋಲಿಸಿತ್ತು. ಇದೀಗ ಎರಡನೇ ಪಂದ್ಯವನ್ನ ಗೆದ್ದು ಸರಣಿ ಸಮಬಲ ಮಾಡಿಕೊಳ್ಳೋಕೆ ಭಾರತ ಪ್ಲೇಯಿಂಗ್ 11ನಲ್ಲಿ ಸರ್ಜರಿಗೆ ಮುಂದಾಗಿದೆ. ಇಬ್ಬರು ಸ್ಪಿನ್ನರ್ರೊಂದಿಗೆ ಕಣಕ್ಕಿಳಿಸೋಕೆ ಪ್ಲ್ಯಾನ್ ಮಾಡಿದೆ. ಹಾಗೇ ಜಸ್ಪ್ರೀತ್ ಬುಮ್ರಾ ಆಡ್ತಾರೋ ಇಲ್ವೋ ಅನ್ನೋ ಸಸ್ಪೆನ್ಸ್ ಹಾಗೇ ಕಂಟಿನ್ಯೂ ಆಗಿದೆ.
ಇದನ್ನೂ ಓದಿ : ಕ್ಯಾಪ್ಟನ್ ಕೂಲ್ ಇನ್ನು ಮುಂದೆ ಧೋನಿಗೆ ಸ್ವಂತ – ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್‌ಗಾಗಿ ಧೋನಿ ಅರ್ಜಿ
ಕುಲ್ದೀಪ್ ಗಿಂತ ವಾಷಿಂಗ್ ಟನ್ ಸುಂದರ್ ಗೆ ಸಿಗುತ್ತಾ ಚಾನ್ಸ್?
ಟೀಂ ಇಂಡಿಯಾದ ಪ್ಲೇಯಿಂಗ್ 11 ಬಗ್ಗೆ ತಂಡದ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್ ಮಾಹಿತಿ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಬಗ್ಗೆ ತಜ್ಞರಿಂದ ಸಲಹೆ ಪಡೆದು ಅವ್ರನ್ನ ಆಡಿಸ್ಬೇಕೋ ಬೇಡ್ವೋ ಅನ್ನೋ ಬಗ್ಗೆ ಡಿಸೈಡ್ ಮಾಡ್ತೇವೆ. ಅಲ್ದೇ ಈ ಪಂದ್ಯಕ್ಕೆ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಲು ಯೋಜನೆ ಇದೆ. ಆ ಪ್ರಕಾರ ಕುಲ್ದೀಪ್ ಯಾದವ್ ಅಥವಾ ವಾಷಿಂಗ್ಟನ್ ಸುಂದರ್ ಅವರಿಗೆ ತಂಡದಲ್ಲಿ ಅವಕಾಶ ಸಿಗಬಹುದು. ಅದ್ರಲ್ಲೂ ಕುಲ್ದೀಪ್ಗಿಂದ ಸುಂದರ್ಗೆ ಹೆಚ್ಚು ಫೋಕಸ್ ಮಾಡ್ತಿದ್ದೇವೆ. ಸುಂದರ್ ಪ್ಲೇಯಿಂಗ್ 11ನಲ್ಲಿ ಬಂದ್ರೆ ಬ್ಯಾಟಿಂಗ್ ಡೆಪ್ತ್ ಕೂಡ ಚೆನ್ನಾಗಿರುತ್ತೆ. ಹೀಗಾಗಿ ಆಟಗಾರರ ಫಾರ್ಮ್ ನೋಡ್ಕೊಂಡು ಡಿಸೈಡ್ ಮಾಡ್ತೇವೆ ಎಂದಿದ್ದಾರೆ. ಇನ್ನು ಕುಲ್‌ದೀಪ್ ಇಂಗ್ಲೆಂಡ್ ವಿರುದ್ಧ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅಲ್ಲಿ 21 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಬ್ಯಾಟಿಂಗ್ & ಬೌಲಿಂಗ್ ಫೇಲ್.. ಠಾಕೂರ್ ಹೊರಕ್ಕೆ?
ಭಾರತ ತಂಡದಲ್ಲಿ ಆಲ್‌ರೌಂಡರ್ ಆಗಿ ಸ್ಥಾನ ಪಡೆದಿದ್ದ ಶಾರ್ದೂಲ್ ಠಾಕೂರ್ ಸದ್ಯ ಎರಡನೇ ಪಂದ್ಯದಲ್ಲಿ ಆಡೋದು ಡೌಟಿದೆ. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಬ್ಯಾಟಿಂಗ್‌ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನೂ ಕೂಡ ಡ್ರಾಪ್ ಮಾಡಬಹುದು. ಶಾರ್ದೂಲ್ ಠಾಕೂರ್ ಸ್ಥಾನಕ್ಕೆ ನಿತೀಶ್ ಕುಮಾರ್ ರೆಡ್ಡಿ ಬರಬಹುದು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್ ಇವ್ರು. ಆಲ್‌ರೌಂಡರ್ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ.
ಕರುಣ್ ಅಥವಾ ಸಾಯಿ ಸುದರ್ಶನ್ ಇಬ್ಬರಲ್ಲಿ ಒಬ್ರು ಡ್ರಾಪ್?
ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಸಾಯಿ ಸುದರ್ಶನ್ ಹಾಗೂ ಕರುಣ್ ನಾಯರ್ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಫೇಲ್ಯೂರ್ ಆಗಿದ್ರು. ಹೀಗಾಗಿ ಇವರಿಬ್ಬರಲ್ಲಿ ಒಬ್ಬರ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇನ್ನು ಈ ಸ್ಥಾನವನ್ನು ತುಂಬಲು ತಮಿಳುನಾಡಿನ ಅಭಿಮನ್ಯು ಈಶ್ವರನ್ ಸಿದ್ಧರಾಗಿದ್ದಾರೆ. ಇವರು ಈಗಾಗಲೇ ಭಾರತ ಎ ತಂಡದ ಪರ ಅಮೋಘ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. ಅಲ್ಲದೆ ದೇಶೀಯ ಟೂರ್ನಿಗಳಲ್ಲೂ ಸ್ಥಿರ ಪ್ರದರ್ಶನ ನೀಡಿದ್ದರು. ಹೀಗಾಗಿ ಇವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಇವರಿಗೆ ತಂಡದಲ್ಲಿ ಸ್ಥಾನ ಲಭಿಸಿದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದಾಗಿದೆ. ಸೋ ಟೀಂ ಹೀಗೆ ಪ್ಲೇಯಿಂಗ್ 11ನಲ್ಲಿ ಯಾರನ್ನ ಆಡ್ಸೋದು ಅನ್ನೋ ಕನ್ಫ್ಯೂಷನ್ನಲ್ಲಿದ್ರೆ ಇಂಗ್ಲೆಂಡ್ ಮಾತ್ರ ಆಲ್ರೆಡಿ ಸೆಕೆಂಡ್ ಮ್ಯಾಚ್ಗೆ ಆಡುವ ಬಳಗವನ್ನ ಅನೌನ್ಸ್ ಮಾಡಿದೆ.

ನೋಡಿರಿ

