ಪ್ರವಾಸಿಗರ ಸ್ವರ್ಗ ಎತ್ತಿನಭುಜಕ್ಕೆ ನೋ ಎಂಟ್ರಿ! – 1 ತಿಂಗಳು ಚಾರಣಕ್ಕೆ ಬ್ರೇಕ್!

ಪ್ರವಾಸಿಗರ ಸ್ವರ್ಗ ಎತ್ತಿನಭುಜಕ್ಕೆ ನೋ ಎಂಟ್ರಿ! – 1 ತಿಂಗಳು ಚಾರಣಕ್ಕೆ ಬ್ರೇಕ್!

ರಾಜ್ಯದಲ್ಲಿ ವರುಣನ ಅಬ್ಬರ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಜೋರಾಗಿ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರಿನಲ್ಲೂ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಚಾರಣವನ್ನು ಬಂದ್‌ ಮಾಡಲಾಗಿದೆ. ಇನ್ನು ಒಂದು ತಿಂಗಳು ಎತ್ತಿನಭುಜಕ್ಕೆ ಪ್ರವಾಸಿಗರನ್ನ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಕ್ಯಾಪ್ಟನ್ ಕೂಲ್ ಇನ್ನು ಮುಂದೆ ಧೋನಿಗೆ ಸ್ವಂತ – ಕ್ಯಾಪ್ಟನ್ ಕೂಲ್ ಟ್ರೇಡ್ ಮಾರ್ಕ್‌ಗಾಗಿ ಧೋನಿ ಅರ್ಜಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ಎತ್ತಿನಭುಜಕ್ಕೆ ನಿತ್ಯ ನೂರಾರು  ಪ್ರವಾಸಿಗರು ಭೇಟಿ ನೀಡುತ್ತಾರೆ. ಸುಮಾರು 7 ಕಿ.ಮೀ. ಚಾರಣ ಮಾಡಿ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುತ್ತಿದ್ದರು. ಆದರೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಭಾರೀ ಮಂಜು ಕವಿಯುತ್ತಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಚಾರಣಕ್ಕೆ ಬ್ರೇಕ್ ಹಾಕಿದೆ.

ಚಾರಣ ಮಾಡುವ ವೇಳೆ ಅನಾಹುತವಾದರೆ ರಕ್ಷಣೆ ಮಾಡೋದು ಭಾರೀ ಕಷ್ಟಸಾಧ್ಯ. ಜೊತೆಗೆ ಯಾವುದೇ ವಾಹನಗಳು ಹೋಗುವುದಿಲ್ಲ, ಹೊತ್ತೇ ತರಬೇಕು. ಅಲ್ಲದೇ ಕಾಡುಪ್ರಾಣಿಗಳ ಕಾಟ, ಮಳೆ, ಜಾರುವ ಪ್ರದೇಶವಾಗಿದ್ದು, ಸ್ಥಳೀಯರು ಚಾರಣವನ್ನ ಬಂದ್ ಮಾಡುವಂತೆ ಆಗ್ರಹಿಸಿದ್ದರು. ಹೀಗಾಗಿ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ಒಂದು ತಿಂಗಳ ಕಾಲ ಸಂಪೂರ್ಣ ಬಂದ್ ಮಾಡಿದ್ದಾರೆ.

Shwetha M