ಮಳೆಯ ಅಬ್ಬರಕ್ಕೆ ತತ್ತರಿಸಿ ಹೋದ ಹಿಮಾಚಲ ಪ್ರದೇಶ – 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

ಈ ಬಾರಿ ಮಳೆಯ ಅಬ್ಬರ ಎಲ್ಲಾ ಕಡೆ ಹೆಚ್ಚಾಗಿದ್ದು, ಹಲವು ರಾಜ್ಯಗಳು ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ಅದ್ರಲ್ಲೂ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ನೀರು ಸಿಕ್ಕಿದ್ದನೆಲ್ಲಾ ಕೊಚ್ಚಿ ಕೊಂಡು ಹೋಗುತ್ತಿದ್ದು, 10 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ‘ಯಾಸ್ ನದಿ ಉಕ್ಕಿ ಹರಿಯುತ್ತಿದೆ. ಕರ್ಸೋಗ್, ಧರಂಪುರ, ಪಾಂಡೋಹ್ ಮತ್ತು ತುನಾಗ್ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. ಮಳೆಯಿಂದ ಹೊಳೆಗಳು ಮತ್ತು ನದಿಗಳು ಉಕ್ಕಿ ಹರಿಯುತ್ತಿದ್ದು, ಆ ನೀರು ಮನೆಗಳು ಮತ್ತು ರಸ್ತೆಗಳಿಗೆ ನುಗ್ಗುತ್ತಿದೆ. ಧರಂಪುರ್ನಲ್ಲಿ ನದಿಯು ಸಾಮಾನ್ಯ ಮಟ್ಟಕ್ಕಿಂತ ಸುಮಾರು 20 ಅಡಿಗಳಷ್ಟು ಉಕ್ಕಿ ಹರಿದಿದೆ. ಶಿಮ್ಲಾ ಬಳಿಯ ಭಟ್ಟಾಕುಫರ್ನಲ್ಲಿ, ಐದು ಅಂತಸ್ತಿನ ಕಟ್ಟಡವೊಂದು ಕುಸಿದಿತ್ತು. ಹಿಮಾಚಲ ಪ್ರದೇಶದ ಮಂಡಿ, ಶಿಮ್ಲಾ, ಕಾಂಗ್ರಾ, ಬಿಲಾಸ್ಪುರ್, ಸೋಲನ್, ಸಿರ್ಮೌರ್, ಹಮೀರ್ಪುರ್, ಉನಾ, ಕುಲ್ಲು ಮತ್ತು ಚಂಬಾ ಸೇರಿದಂತೆ 10 ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ನೀಡಿದೆ. ಮುಂದಿನ 24 ರಿಂದ 48 ಗಂಟೆಗಳಲ್ಲಿ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಹಠಾತ್ ಪ್ರವಾಹ, ಭೂಕುಸಿತ ಮತ್ತು ಮೂಲಸೌಕರ್ಯ ಕುಸಿತದ ಅಪಾಯ ಹೆಚ್ಚಿದೆ. ಧರ್ಮಶಾಲಾ, ಕುಲ್ಲು ಮತ್ತು ಸೋಲನ್ಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ.

ನೋಡಿರಿ

