ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ – ಸಿಲಿಂಡರ್‌ ದರ ಎಷ್ಟು?

ವಾಣಿಜ್ಯ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬೆಲೆ ಭಾರಿ ಇಳಿಕೆ – ಸಿಲಿಂಡರ್‌ ದರ ಎಷ್ಟು?

ಬೆಲೆ ಏರಿಕೆಯಿಂದಾಗಿ ದೇಶದ ಜನರು ಕಂಗೆಟ್ಟು ಹೋಗಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದೀಗ ವಾಣಿಜ್ಯ ವಲಯದವರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

ಇದನ್ನೂ ಓದಿ: ನೀವು ವರ್ಷಕ್ಕೆ ಒಮ್ಮೆಯೂ ಕೂದಲು ಕತ್ತರಿಸಲ್ವಾ? – ನಿಮ್ಮ ಕೇಶರಾಶಿಗೆ ಕಾದಿದೆ ಕಂಟಕ!

ತೈಲ ಮಾರುಕಟ್ಟೆಗಳಿಂದ ಬೆಲೆ ಪರಿಷ್ಕರಣೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 58.50 ರೂ.ಗಳಷ್ಟು ಕಡಿಮೆಯಾಗಿದ್ದು, ಇಂದಿನಿಂದಲೇ (ಜು.1) ಜಾರಿಗೆ ಬರಲಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಹೊಸ ಚಿಲ್ಲರೆ ಬೆಲೆ ಈಗ 1,665 ರೂ. ಗಳಾಗಿದ್ದು, ಈಗಾಗಲೇ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳೊಂದಿಗೆ ಹೋರಾಡುತ್ತಿರುವ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಅಡುಗೆ ತಯಾರಿಕರು ನಿಟ್ಟುಸಿರು ಬಿಡುವಂತಾಗಿದೆ. 14.2 ಕೆಜಿ ದೇಶೀಯ ಸಿಲಿಂಡರ್‌ನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಏಪ್ರಿಲ್‌ನಲ್ಲಿ 41 ರೂ.ಗಳಷ್ಟು ಬೆಲೆ ಕಡಿಮೆ ಮಾಡಲಾಯಿತು. ನಂತರ ಮೇ ತಿಂಗಳಲ್ಲಿ 14.50 ರೂ. ಮತ್ತು ಜೂನ್‌ನಲ್ಲಿ 24 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು.

Shwetha M