BIGG BOSS 12ಕ್ಕೆ ಕಿಚ್ಚನೇ ಬಾಸ್! – ಸುದೀಪ್ ಹಾಕಿದ ಕಂಡೀಷನ್ಸ್ ಏನು?
ವಿವಾದ.. ರೀಲ್ಸ್ ಸ್ಟಾರ್ಸ್ಗೆ ಚಾನ್ಸ್ ಇಲ್ವಾ?

ಬಿಗ್ ಬಾಸ್ ಕನ್ನಡ 12 ಯಾರು ಹೋಸ್ಟ್ ಮಾಡ್ತಾರೆ ಅನ್ನೋದು ಬಿಗ್ಬಾಸ್ ವೀಕ್ಷಕರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಕಿಚ್ಚನೇ ಬಿಗ್ ಶೋ ನ ಹೋಸ್ಟ್ ಮಾಡ್ಲಿ ಅನ್ನೋದು ಅದೆಷ್ಟೋ ಫ್ಯಾನ್ಸ್ ಆಸೆ ಆಗಿತ್ತು.. ಕಡೆಗೂ ಬಾದ್ಷಾ ಫ್ಯಾನ್ಸ್ ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಈ ಬಾರಿಯೂ ಬಿಗ್ಬಾಸ್ಗೆ ಕಿಚ್ಚನೇ ಬಾಸ್ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿ ನಡೆಸಿದ್ದು, ಸುದೀಪ್ ಸೀಸನ್ 12 ಹೋಸ್ಟ್ ಅನ್ನೋದನ್ನ ರಿವೀಲ್ ಮಾಡಲಾಗಿದೆ.
ಇದನ್ನೂ ಓದಿ: 9ನೇ ಕ್ಲಾಸ್ ಫೇಲ್.. ಶಿಕ್ಷಣ ಅಧಿಕಾರಿ – ರಿಂಕುಗೆ ಅರ್ಹತೆ ಮೀರಿದ ಹುದ್ದೆ ಸರಿನಾ?
ಬಿಗ್ ಬಾಸ್ ಅಂದ್ರೆ ಥಟ್ ಅಂತಾ ನೆನಪಾಗೋದೇ ಕಿಚ್ಚ ಸುದೀಪ್. ಬಿಗ್ ಬಾಸ್ಗೆ ಬಾದ್ಷಾನೇ ಕಿಂಗ್.. ಬಿಗ್ ಬಾಸ್ ಶೋ ಶುರುವಾದರೆ ಸಾಕು, ಕನ್ನಡಿಗರು ವೀಕೆಂಡ್ ಬರೋದನ್ನೇ ಕಾಯುತ್ತಾ ಇರ್ತಾರೆ. ಯಾಕಂದ್ರೆ, ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ತಮ್ಮದೇ ಶೈಲಿಯಲ್ಲಿ ತೆಗೆದುಕೊಳ್ಳುವ ಕ್ಲಾಸ್, ಕಿಚಾಯಿಸುವ ರೀತಿ, ಆಡುವ ಮಾತುಗಳು ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ.ಕಿಚ್ಚ ಸುದೀಪ್ ಚಾರ್ಮ್ ಹಾಗೂ ಖಡಕ್ ಮಾತುಗಳನ್ನ ಕಣ್ಣಾರೆ ಕಾಣುವ ಸಲುವಾಗಿ ಬಿಗ್ ಬಾಸ್ ಆರಂಭಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಆದ್ರೆ ಸೀಸನ್ 11 ಮುಕ್ತಾಯಕ್ಕೂ ಮುನ್ನವೇ ಇದೇ ನನ್ನ ಕಡೆಯ ಸೀಸನ್.. ಮುಂದಿನ ಸೀಸನ್ ಹೋಸ್ಟ್ ಮಾಡಲ್ಲ ಎಂದು ಸುದೀಪ್ ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ರು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಸುದೀಪ್ ಇಲ್ಲ ಎಂದರೆ ಬಿಗ್ ಬಾಸ್ ಕಾರ್ಯಕ್ರಮವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೀಕ್ಷಕರು ಹೇಳಿದ್ರು. ಅಷ್ಟೇ ಅಲ್ಲ ಕಿಚ್ಚ ಸುದೀಪ್ ಸ್ಥಾನಕ್ಕೆ ಯಾರು ನಿರೂಪಕರಾಗಿ ಬರ್ತಾರೆ ಅನ್ನೋ ಕ್ಯೂರಿಯಾಸಿಟಿ ಇತ್ತು.. ಆದ್ರೀಗ ಈಗ ಕಿಚ್ಚ ಸುದೀಪ್ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ. ಮತ್ತೆ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡಲು ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲೇ ಮುಂದುವರಿಯಲಿದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿ ಘೋಷಣೆ ಮಾಡಿದೆ.
ಕಿಚ್ಚ ಸುದೀಪ್ ಬಿಗ್ ಬಾಸ್ ಶೋ ನಡೆಸ್ತಾರಾ ಇಲ್ವಾ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿಇತ್ತು. ಇದೀಗ ಶೋನಲ್ಲಿ ಮುಂದುವರಿಯೋದಾಗಿ ಸುದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲ ಶೋನಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ದು ಯಾಕೆ ಅಂತಾ ಹೇಳಿದ್ದಾರೆ. ಶೋ ಬಿಡುವ ನಿರ್ಧಾರ ಸೀಸನ್ 11 ರ ಆರಂಭದಲ್ಲೇ ಮಾಡಿದ್ದೆ. ಯಾವುದೋ ಪಾರ್ಟಿ ಮೂಡ್ನಲ್ಲಿದ್ದುಕೊಂಡು ಟ್ವೀಟ್ ಮಾಡಿದ್ದಲ್ಲ.. ಬಿಗ್ಬಾಸ್ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ.. ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ. ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ. ನಾನು ವಾಪಸ್ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್ಬಾಸ್ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ವಾಪಾಸ್ ಬಂದಿದ್ದೇನೆ ಅಂತ ಹೇಳಿದ್ದಾರೆ.
ಇನ್ನು ಸುದೀಪ್ ಸೀಸನ್ 12 ಒಪ್ಪಿಕೊಳ್ಳೋಕೆ ಕೆಲ ಕಂಡಿಷನ್ಸ್ ಹಾಕಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಈ ಬಗ್ಗೆಯೂ ಬಾದ್ಷಾ ಉತ್ತರ ನೀಡಿದ್ದಾರೆ. ವಿವಾದಿತ ಸ್ಪರ್ಧಿಗಳನ್ನ ಕರೆಸ್ಬಾರ್ದು ಅಂತ ಕಂಡೀಷನ್ ಹಾಕಿದ್ದೀರಾ ಅಂತಾ ಕೇಳಿದ್ದಕ್ಕೆ ಉತ್ತರಿಸಿದ್ದಾರೆ. ಬಿಗ್ ಬಾಸ್ ಅಂದ್ರೆ ಎಲ್ಲ ಮನಸ್ಥಿತಿಯವರು ಇರ್ತಾರೆ.. ಒಂದೇ ಮನಸ್ಥಿತಿಯವನ್ನ ಕರೆಸಿದ್ರೆ ಶೋ ಅಂತಾ ಕೆರೆಸಿಕೊಳ್ಳಲ್ಲ.. ಹಾಗೇ ಶೋ ನಡೆಸ್ಬೇಕು ಅಂತಾ ಯಾರನ್ನೋ ಕರೆಸಿಕೊಳ್ಳೋದಲ್ಲ. ಸ್ಪರ್ಧಿಗಳನ್ನ ಆಯ್ಕೆ ಮಾಡುವಾಗ ಕ್ಲಾರಿಟಿ ಇರ್ಬೇಕು.. ನನಗೆ ಯಾವುದೇ ರೀತಿಯ ಸ್ಟ್ರೆಸ್ ಆಗ್ಬಾರ್ದು.. ಯಾವುದೇ ಸ್ಪರ್ಧಿಗಳನ್ನ ಕಳ್ಸಿದ್ರು ನಾನು ಹ್ಯಾಂಡಲ್ ಮಾಡ್ತೀನಿ.. ಯಾರು ಬೇಕು, ಬೇಡ ಅಂತಾ ನಾನು ಯಾವುದೇ ಕಂಡೀಷನ್ಸ್ ಹಾಕಿಲ್ಲ.. ತಪ್ಪು ಮಾಡಿದ್ರೆ ಅವ್ರನ್ನ ಹೊರಗೆ ಕಳಿಸ್ತೀವಿ ಅಂತಾ ಹೇಳಿದ್ದಾರೆ ಕಿಚ್ಚ..
ಇನ್ನು ಶೋನಲ್ಲಿ ಕನ್ನಡ ಭಾಷೆ ಬಳಸದೇ ಇರೋದು ಕಿಚ್ಚ ಸುದೀಪ್ಗೆ ಬೇಸರ ತರಿಸಿದೆ ಅನ್ನೋ ಸುದ್ದಿಯೂ ಇತ್ತು. ಈ ಬಗ್ಗೆ ಸುದೀಪ್ ಸಜೆಷನ್ಸ್ ಕೊಟ್ಟಿರೋದು ನಿಜ.. ಇದನ್ನ ನಾವು ಈ ಸೀಸನ್ ನಲ್ಲಿ ಅಳವಡಿಸಿಕೊಳ್ತೀವಿ ಅಂತಾ ಶೋ ಆಯೋಜಕರು ಹೇಳಿದ್ದಾರೆ. ಇನ್ನು ಆರು ತಿಂಗಳು ಬಿಗ್ ಬಾಸ್ ಕನ್ನಡ ಶೋ ನಡೆಯುತ್ತಾ ಅಂತಾ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಶೋ ಆಯೋಜಕರು ಉತ್ತರ ನೀಡಿದ್ದಾರೆ. ಸುದೀಪ್ ಬಿಗ್ ಬಾಸ್ ಶೋನಿಂದ ಸಿನಿಮಾ ಮಾಡ್ತಿಲ್ಲ ಅನ್ನೋ ಮಾತು ಇದೆ. ಸುದೀಪ್ ವರ್ಷಕ್ಕೆ ಎರಡು ಸಿನಿಮಾ ಮಾಡ್ತಾರೆ ಅಂತಾ ಫ್ಯಾನ್ಸ್ ಗೆ ಮಾತುಕೊಟ್ಟಿದ್ದಾರೆ. ಹೀಗಾಗಿ ಬಿಗ್ ಬಾಸ್ ಶೋ 6 ತಿಂಗಳು ನಡೆಸಲ್ಲ ಅಂತಾ ಆಯೋಜಕರು ಹೇಳಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾ ಸ್ಟಾರ್ಸ್ ಶೋಗೆ ಬರ್ಬೇಕು ಅಂತಾ ಹುಚ್ಚು ಹುಚ್ಚಾಗಿ ಆಡ್ತಾರೆ. ಅಂತವರಿಗೆ ಏನ್ ಹೇಳ್ತಿರಾ ಅಂತಾ ಸುದೀಪ್ ಅವ್ರನ್ನ ಕೇಳಲಾಯ್ತು. ಇದಕ್ಕೆ ಸುದೀಪ್ ಬರ್ಲಿ.. ಶೋ ನಡೆಸ್ತಿರೋದೇ ಹುಚ್ಚ.. ಅವ್ರು ಬರ್ಲಿ ಅಂತಾ ಹೇಳಿದ್ದಾರೆ. ಸುದೀಪ್ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ. ಒಟ್ಟಾರೆ ಸುದೀಪ್ ಶೋಗೆ ಬರೋದು ಪಕ್ಕಾ ಆಗಿದೆ.. ಈ ಬಾರಿಯೂ ಬಿಗ್ ಬಾಸ್ಗೆ ಕಿಚ್ಚನೇ ಕಿಂಗ್ ಆಗಿದ್ದಾರೆ. ಇದು ಬಿಗ್ಬಾಸ್ ವೀಕ್ಷಕರಿಗೂ ಖುಷಿಯಾಗಿದೆ.

ನೋಡಿರಿ

