ಅಳಿಯ ನನ್ನ ಮಧ್ಯೆ ಏನಿಲ್ಲ ಏನಿಲ್ಲ ಅಂದೇಬಿಟ್ಟಳು ಅತ್ತೆ – ಸವತಿ ಮತ್ಸರಕ್ಕೆ ಗುರಿಯಾದಳಾ ಮಲತಾಯಿ?
ಸವತಿ ಮತ್ಸರಕ್ಕೆ ಕಳ್ಳ ಸಂಬಂಧ ಕಟ್ಟಿದ್ರಾ?- ಮಲ ಮಗಳೇ ಈ ಕಥೆಯ ವಿಲನ್..!

ಅಳಿಯ ನನ್ನ ಮಧ್ಯೆ ಏನಿಲ್ಲ ಏನಿಲ್ಲ ಅಂದೇಬಿಟ್ಟಳು ಅತ್ತೆ – ಸವತಿ ಮತ್ಸರಕ್ಕೆ ಗುರಿಯಾದಳಾ ಮಲತಾಯಿ?ಸವತಿ ಮತ್ಸರಕ್ಕೆ ಕಳ್ಳ ಸಂಬಂಧ ಕಟ್ಟಿದ್ರಾ?- ಮಲ ಮಗಳೇ ಈ ಕಥೆಯ ವಿಲನ್..!

ಕೆಲದಿನಗಳ ಹಿಂದೆ ತಲ್ಲಣ ಸೃಷ್ಟಿಸಿದ್ದ ಅತ್ತೆ ಅಳಿಯನ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಅಳಿಯನ ಜೊತೆ ಅತ್ತೆ ಪರಾರಿಯಾಗಿದ್ದಾಳೆ ಅಂತಾ ಹೇಳಲಾಗುತ್ತಿದ್ದ ಕಥೆಯಲ್ಲಿ ಈಗ ಸವತಿ ಮತ್ಸರ ಎದ್ದು ಕಾಣುತ್ತಿದೆ ಅಂತಾ ಹೇಳಲಾಗುತ್ತಿದೆ. ಮಲಮಗಳು ತನ್ನ ತಾಯಿಗೋಸ್ಕರ ಮಲತಾಯಿ ಬಗ್ಗೆ ಕಟ್ಟುಕಥೆ ಕಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದರೂ ಕೂಡಾ ಪೊಲೀಸ್ ತನಿಖೆಯಲ್ಲಿ ವಿಚಾರ ಬಯಲಾಗಬೇಕಿದೆ. ಹಾಗಾದರೆ, ಇದೇನಿದು ಅತ್ತೆ ಅಳಿಯನ ಸಂಬಂಧ, ಅತ್ತೆ ಪ್ರತ್ಯಕ್ಷವಾಗಿದ್ದಾಯ್ತು, ಅಳಿಯ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅತ್ತೆ ಜೊತೆ ಅಳಿಯನ ಡಿಂಗ್ ಡಾಂಗ್ – ಮಗಳ ಗಂಡನ ಜೊತೆ 55 ವರ್ಷದ ಆಂಟಿ ಎಸ್ಕೇಪ್..!

ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಅತ್ತೆ ಹಾಗೂ ಅಳಿಯ ಪರಾರಿಯಾಗಿದ್ದಾರೆ ಎಂಬ ಪ್ರಕರಣ ಮತ್ತೊಂದು ತಿರುವು ಕಂಡಿದೆ. ಕಳೆದ ಮೇ 2ರಂದು ನಾಪತ್ತೆಯಾಗಿದ್ದ ಅತ್ತೆ ಶಾಂತಾ ಎಂಬವರು ಇದೀಗ ಮುದ್ದೇನಹಳ್ಳಿಗೆ ವಾಪಸ್ ಬಂದಿದ್ದಾರೆ. ಈ ಬಗ್ಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಶಾಂತಾರ ಪತಿ ನಾಗರಾಜ್, ತನ್ನ ಪತ್ನಿ ಕಾಣೆಯಾಗಿದ್ದಾರೆಂದು ಮೇ 2ರಂದು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಎರಡು ದಿನಗಳ ಹಿಂದೆ ಶಾಂತಾ ಮನೆಗೆ ಮರಳಿದ್ದಾರೆ. ಇದೇ ವೇಳೆ, ಅಳಿಯ ಗಣೇಶ್ ಎಂಬ ಯುವಕನ ಪತ್ತೆಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.

ವಾಪಸ್ ಮನೆಗೆ ಮರಳಿರುವ ಅತ್ತೆ ಶಾಂತಮ್ಮ, ನನಗೆ ಗಣೇಶ್‌ ಜೊತೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿದ್ದಾರೆ. ಕುಟುಂಬಸ್ಥರೇ ನನ್ನ ವಿರುದ್ಧ ಸಂಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಂದಹಾಗೆ ಈ ಪ್ರಕರಣದಲ್ಲಿ ಮುದ್ದೇನಹಳ್ಳಿಯ ನಾಗರಾಜ್‌ ಎಂಬವರ ಪತ್ನಿಯರ ಕಲಹವೇ ಹೈಲೆಟ್ಸ್. ಮೊದಲು ನಾಬಿಯಾ ಎಂಬವರೊಂದಿಗೆ ವಿವಾಹವಾಗಿದ್ದ ನಾಗರಾಜ್‌ಗೆ ಹೇಮಾವತಿ ಎಂಬ ಮಗಳಿದ್ದಾಳೆ. ಕೆಲ ವರ್ಷದ ಜೀವನದ ಬಳಿಕ ನಾಬಿಯಾ ಜತೆ ವಿಚ್ಛೇದನ ಪಡೆದು ಶಾಂತಮ್ಮರನ್ನು ನಾಗರಾಜ್‌ ಮದುವೆಯಾಗಿದ್ದರು. ನಾಬಿಯಾ ಮಗಳು ಹೇಮಾವತಿಯನ್ನು ನಾಗರಾಜ್‌ ಬಳಿ ಬಿಟ್ಟಿದ್ದಳು. ಈ ನಡುವೆ ಮರವಂಜಿ ಗ್ರಾಮದ ಗಣೇಶ್‌ ಎಂಬಾತನ ಜತೆ ಹೇಮಾವತಿಯ ವಿವಾಹ ಮಾಡಲಾಗಿತ್ತು. ಇದರ ನಡುವೆ ಒಂದೇ ದಿನ ಅಳಿಯ ಗಣೇಶ್ ಮತ್ತು ಅತ್ತೆ ಶಾಂತಾ ನಾಪತ್ತೆಯಾಗಿದ್ದರು. ನಾಗರಾಜ್‌ ಅವರ ಮೊದಲ ಪತ್ನಿ ನಾಬಿಯಾ ಕೂಡ ತನ್ನ ಮಗಳಿಗೆ ಅನ್ಯಾಯವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಆದರೆ, ನಾಪತ್ತೆಯಾಗಿರುವ ಅತ್ತೆ ಶಾಂತಮ್ಮ ಊರಿಗೆ ಹಿಂದಿರುಗಿದ್ದಾರೆ. ಜೊತೆಗೆ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ. ” ನಾನು ಎಲ್ಲಿಯೂ ಹೋಗಿರಲಿಲ್ಲ. ಆ ಹುಡುಗನಿಗೂ ನನಗೂ ಸಂಬಂಧವೇ ಇಲ್ಲ. ಆತ ಎಲ್ಲಿ ಹೋಗಿದ್ದಾನೆ ನನಗೆ ಗೊತ್ತಿಲ್ಲ. ನಾನು ಎಲ್ಲಿದ್ದೆ ಎಂದು ಆತನಿಗೆ ಗೊತ್ತಿಲ್ಲ. ಇದು ಕುಟುಂಬಸ್ಥರು ಮಾಡಿರುವ ಸಂಚು. ನನ್ನ ಹೆಸರಿನಲ್ಲಿ ಸಾಲ ತೆಗೆದು ಕೊನೆಗೆ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನು ನನ್ನ ಸಂಬಂಧಿಕರ ಮನೆಗೆ ಹೋಗಿದ್ದೆ. ನಾನು ಎಂಟು ವರ್ಷ ಹೇಮಾವತಿಯನ್ನು ಸಾಕಿದ್ದೇನೆ. ನನ್ನ ಪತಿ ನಾಗರಾಜ್ ನನ್ನ ಹೆಸರಿನಲ್ಲಿ ಸಾಲ ಮಾಡಿಸಿ, ಆ ಸಾಲವನ್ನು ಹಿಂತಿರುಗಿಸದೆ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನನಗೆ ಹೊಡೆದು ಓಡಿಸಿ ನೆಂಟರ ಮನೆಯಲ್ಲಿ ಇರುವಂತೆ ಮಾಡಿ. ನಾನು ನಾಪತ್ತೆಯಾಗಿದ್ದೆ ಎಂದು ಮಾಧ್ಯಮಗಳಿಗೆ ಸುಳ್ಳು ಹೇಳಲಾಗಿದೆ. ಮನೆ ಕಟ್ಟಲು ಹಾಗೂ ಮದುವೆಗೆ ಸಾಲ ಮಾಡಲಾಗಿತ್ತು. ಆದರೆ ಸಾಲಗಾರರು ಹಣ ಕೇಳಿದಾಗ ನನ್ನ ಪತಿ ಸ್ಪಂದಿಸುತ್ತಿಲ್ಲ. ನನಗೆ ಗಣೇಶ್ ನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈಗ ನಮ್ಮಿಬ್ಬರ ಮಧ್ಯೆ ಸಂಬಂಧ ಕಟ್ಟುತ್ತಿದ್ದಾರೆ. ಮಲ ತಾಯಿ ಅನ್ನುತ್ತಿದ್ದಾರೆ. ನಾನು ಮಗಳಿಂದ ಹೆಚ್ಚಾಗಿ ಅವಳನ್ನು ಊಟ ಹಾಕಿ ನೋಡಿಕೊಂಡಿದ್ದೇನೆ. ಆದರೆ ನಮ್ಮಿಬ್ಬರಲ್ಲಿ ಸಂಬಂಧ ಇದೆ ಎಂದು ಕಟ್ಟು ಕಥೆ ಹೇಳಿ ಈಗ ನನ್ನ ಮರ್ಯಾದೆ ತೆಗೆದರು. ಇಬ್ಬರು ನನ್ನನ್ನು ಹೊಡೆದು ಹೊರಗೆ ಹಾಕಿದ್ದಾರೆ. ಮೊದಲ ಪತ್ನಿಯಿಂದ ವಿಚ್ಚೇದನ ಪಡೆದ ನಂತರ ನಾನು ನಾಗರಾಜ್ ಗೆ ಮೂರನೇ ಪತ್ನಿ ಆಗಿದ್ದೇನೆ. ಈಗ ದೊಡ್ಡ ಅವಾಂತರ ಮಾಡಿ ಕಥೆ ಕಟ್ಟಿದ್ದಾರೆ. ನಾನು ಇದೇ ಊರಲ್ಲೇ ಇದ್ದೆ. ಇರೋ ಹೆಂಡತಿ ಜೊತೆಗೆ ಮನೆ ಬೀಗ ಹಾಕಿ ಮಜಾ ಮಾಡಿಕೊಂಡಿದ್ದಾರೆ. ಊರಿನವರೆಲ್ಲ ಬಲವಂತ ಮಾಡಿ ನ್ಯಾಯ ಕೊಡಿಸುತ್ತೇವೆ ಎಂದು ಕರೆದಿದ್ದರು. ಜೀವ ಭಯಕ್ಕೆ ಹೆದರಿಕೊಂಡು ಹೋಗಿದ್ದೆ ಹೊರತು ಬೇರೆನೂ ಅಲ್ಲ. ಅವಳು ಡಿವೋರ್ಸ್ ಆಗಿರುವ ಹೆಂಡತಿ ಆಸ್ತಿ ಮತ್ತು ಮನೆಗೋಸ್ಕರ ಈಗ ನನ್ನನ್ನು ಕಟ್ಟು ಕಥೆ ಕಟ್ಟಿ ಹೀಗೆ ಮಾಡಿದ್ದಾರೆ. ಪರಾರಿ ಆಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವನು ಅವರ ತಂಗಿ ಮಗ. ಇಬ್ಬರೂ ಚೆನ್ನಾಗಿದ್ದರು ಹಾಗೆ ಮದುವೆ ಮಾಡಿಕೊಂಡಿದ್ದ. ನನ್ನನ್ನು ಮನೆಯಿಂದ ಹೊರಗೆ ಹಾಕಲು ತಂತ್ರ ಮಾಡಿ ಈ ರೀತಿ ಮಾಡಿದ್ದಾರೆಂದು ಎಂದು ಅಳಲು ತೋಡಿಕೊಂಡಿದ್ದಾರೆ. ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ ” ಎಂದು ದೂರಿದ್ದಾರೆ.

Sulekha