ಉತ್ತರಾಖಂಡದಲ್ಲಿ ತಗ್ಗಿದ ಮಳೆ – ಚಾರ್ಧಾಮ್ ಯಾತ್ರೆ ಮತ್ತೆ ಆರಂಭ

ಉತ್ತರಾಖಂಡದಲ್ಲಿ ಭಾರಿ ಮಳೆಯ ಪರಿಣಾಮ ಗುಡ್ಡಕುಸಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಚಾರ್ಧಾಮ್ ಯಾತ್ರೆಗೆ ನಿಷೇಧ ಹೇರಲಾಗಿತ್ತು. ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಯಾತ್ರೆ ಮತ್ತೆ ಪುನಾರಂಭಗೊಂಡಿದೆ.
ಇದನ್ನೂ ಓದಿ: ಸ್ನೇಹಾ ಡ್ರಾಮಾ ಕಡೆಗೂ ಬಯಲು.. 1 ಸುಳ್ಳು.. ಕಂಠಿಯಿಂದ ದೂರ? – ಮನೆಯಿಂದ ಆಚೆ ಹಾಕ್ತಾನಾ ಶ್ರೀ?
ಉತ್ತರಾಖಂಡದಲ್ಲಿ ಭಾರಿ ಮಳೆಯ ಪರಿಣಾಮ ಅಲ್ಲಲ್ಲಿ ಭೂಕುಸಿತ ಸಂಭವಿಸಿತ್ತು. ಇದ್ರ ಪರಿಣಾಮ ಕೇದಾರನಾಥ ಮತ್ತು ಬದರಿನಾಥಕ್ಕೆ ಪ್ರಯಾಣಿಸುತ್ತಿದ್ದ ನೂರಾರು ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ರು. ಇದೀಗ ಮಳೆಯ ಪ್ರಮಾಣ ತಗ್ಗಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಗೆ ಮತ್ತೆ ಅವಕಾಶ ಮಾಡಿಕೊಡುವಂತೆ ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಚಾರ್ಧಾಮ್ ಯಾತ್ರೆಗಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಯಾತ್ರಾ ಮಾರ್ಗದಲ್ಲಿರುವ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳಿಗೆ ಆಯಾ ಜಿಲ್ಲೆಗಳಲ್ಲಿನ ಹವಾಮಾನ ಪರಿಸ್ಥಿತಿಗಳನ್ನು ಅವಲೋಕಿಸಿ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ.
ಇನ್ನು ಜುಲೈ 3ರರಿಂದ ಅಮರನಾಥ ಯಾತ್ರೆ ಹಿನ್ನೆಲೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಜಮ್ಮುನಿಂದ ಕಾಶ್ಮೀರಕ್ಕೆ ಸಂಪರ್ಕಿಸುವ ಹೆದ್ದಾರಿ ಹಾಗೂ ಶ್ರೀನಗರದಿಂದ ಬಾಲ್ಟಾಲ್ ಬೇಸ್ ಕ್ಯಾಂಪ್ ರಸ್ತೆಯಲ್ಲಿ ಭಾರಿ ಭದ್ರತೆ ನೀಡಲಾಗಿದೆ. ಕೇಂದ್ರದ ಮೀಸಲು ಪಡೆಗಳಿಂದ ಭದ್ರತೆ ಹೆಚ್ಚಿಸಿದ್ದು, ಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆಯಿದೆ.

ನೋಡಿರಿ

