ಸ್ನೇಹಾ ಡ್ರಾಮಾ ಕಡೆಗೂ ಬಯಲು.. 1 ಸುಳ್ಳು.. ಕಂಠಿಯಿಂದ ದೂರ? – ಮನೆಯಿಂದ ಆಚೆ ಹಾಕ್ತಾನಾ ಶ್ರೀ?

ಸ್ನೇಹಾ ಡ್ರಾಮಾ ಕಡೆಗೂ ಬಯಲು.. 1 ಸುಳ್ಳು.. ಕಂಠಿಯಿಂದ ದೂರ? – ಮನೆಯಿಂದ ಆಚೆ ಹಾಕ್ತಾನಾ ಶ್ರೀ?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಕತೆ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ.. ಪಾತ್ರಕ್ಕೆ ತಕ್ಕಂತೆ ಕತೆ ಸಾಗ್ತಾ ಇದೆ. ಇದೀಗ ಡಿಸಿ ಸ್ನೇಹ ಆತ್ಮ ಕಾಣಿಸಿಕೊಂಡಿದೆ.. ಎಲ್ಲರನ್ನ ಭಯಪಡಿಸ್ತಿದೆ ಅಂತಾ ತೋರಿಸಲಾಗ್ತಿದೆ.. ಇವೆದ್ರ ಮಧ್ಯೆ ಈಗ ಸೀರಿಯಲ್‌ ಡೈರೆಕ್ಟರ್‌ ಮತ್ತೊಂದು ಟ್ವಿಸ್ಟ್‌ ಕೊಟ್ಟಿದ್ದಾರೆ. ಇದೀಗ ಸ್ನೇಹ ಡ್ರಾಮಾ ಎಲ್ಲರ ಮುಂದೆ ಬಯಲಾಗಿದೆ.

ಇದನ್ನೂ ಓದಿ: ENG ಸರಣಿ ಆಡ್ಬೇಕಿತ್ತಾ ಶ್ರೇಯಸ್ ಅಯ್ಯರ್ -ವೈಟ್ ಬಾಲ್ ಹೀರೋ ಟೆಸ್ಟ್ ಗಿಲ್ಲ ಯಾಕೆ?

ಪುಟ್ಟಕ್ಕ ಮಕ್ಕಳು ಸೀರಿಯಲ್‌ ಸ್ಟೋರಿ ಎತ್ತ ಸಾಗ್ತಿದೆ ಅನ್ನೋದನ್ನೇ ಅರ್ಥ ಮಾಡಿಕೊಳ್ಳೋಕೆ ಆಗ್ತಿಲ್ಲ.. ಯಾಕಂದ್ರೆ ಪಾತ್ರಕ್ಕೆ ತಕ್ಕಂತೆ ಸ್ಟೋರಿ ಚೇಂಜ್‌ ಆಗ್ತಾ ಹೋಗ್ತಿದೆ. ಕೆಲ ದಿನ ಸ್ನೇಹ ಕಂಠಿ ಪ್ರೀತಿ.. ಮದುವೆ ಸ್ಟೋರಿಯನ್ನ ರಬ್ಬರ್‌ ತರ ಎಳೆಯಲಾಗಿತ್ತು. ಅದಾದ್ಮೇಲೆ ಪುಟ್ಟಕ್ಕನ ಮೆಸ್‌ ವಿವಾದ, ಸುಮಾ ಕಿಡ್ನ್ಯಾಪ್‌ ಅನ್ನ ತೋರಿಸಲಾಯ್ತು.. ಈಗ ಡಿಸಿ ಸ್ನೇಹ ಆತ್ಮದ ಸುತ್ತ ಕತೆ ಹೆಣೆದಿದ್ದಾರೆ ಸೀರಿಯಲ್‌ ಡೈರೆಕ್ಟರ್..‌ ಇದೀಗ ಡಿಸಿ ಸ್ನೇಹ ಆತ್ಮ ಊರೆಲ್ಲಾ ಓಡಾಡ್ತಿದೆ. ಕೆಟ್ಟವರನ್ನ ಹೆದರಿಸ್ತಿದೆ.. ಪುಟ್ಟಕ್ಕನಿಗೆ ನ್ಯಾಯ ಕೊಡಿಸಲು ಡಿಸಿ ಸ್ನೇಹ ಆತ್ಮ ಮುಂದಾಗಿದೆ. ಇವೆಲ್ಲದ್ರ ಮಧ್ಯೆ ಈಗ ಎಲ್ಲರ ಮುಂದೆ ಮತ್ತೊಬ್ಬಳು ಸ್ನೇಹಳ ಡ್ರಾಮ ಬಯಲಾಗಿದೆ.

ಹೌದು.. ಪುಟ್ಟಕ್ಕನಿಗೆ ಕುತಂತ್ರಿಗಳು ಒಂದಾದ ಮೇಲೊಂದು ಕಷ್ಟ ಕೊಡ್ತಾನೆ ಬಂದಿದ್ದಾರೆ. ಹೀಗಾಗಿ ಕಂಠಿ ಅವರನ್ನ ಮಟ್ಟ ಹಾಕದೇ ಬಿಡಲ್ಲ ಅಂತಾ ಪ್ರತಿಜ್ಞೆ ಮಾಡಿದ್ದಾನೆ. ಆದ್ರೆ ಸ್ನೇಹ ಕಂಠಿಯನ್ನ ತಡೆದಿದ್ದಾಳೆ. ಯಾಕಂದ್ರೆ ಕಂಠಿಗೆ ಒಂಚೂರು ತಾಳ್ಮೆ ಇಲ್ಲ.. ಕೆಟ್ಟವರಿಗೆ ಅವನ್ನೇ ಸ್ಟೈಲ್‌ ನಲ್ಲಿ ಉತ್ತರಕೊಡ್ತಾನೆ.. ಸಾಯೋತರ ಹೊಡಿತಾನೆ.. ಹೀಗಾಗಿ ಸ್ನೇಹ ಆತನನ್ನ ತಡೆದಿದ್ದಾಳೆ. ತಾನೇ ಸರಿಮಾಡ್ತೇನೆ ಅಂತಾ ಹೇಳಿದ್ಲು.. ಆದ್ರೆ ಕಂಠಿ ಇದಕ್ಕೆ ಡೆಡ್‌ಲೈನ್‌ ಕೊಟ್ಟಿದ್ದ. ಸಮಸ್ಯೆ ಬಗೆಹರಿದಿಲ್ಲ ಅಂತಾ ನಾನೇ ಸರಿ ಮಾಡ್ತೀನಿ ಅಂತಾ ಹೇಳಿದ್ದಾನೆ. ಹೀಗಾಗಿ ಸ್ನೇಹ ಹೊಸ ಡ್ರಾಮಾ ಮಾಡಿದ್ಲು.. ಡಿಸಿ ಸ್ನೇಹ ತರ ಡ್ರಾಮಾ ಮಾಡಿದ್ದಾಳೆ. ಪ್ರೇತದ ಹಾಗೇ ವೇಷ ಹಾಕಿ ಊರು ತುಂಬಾ ಸುತ್ತಾಡಿದ್ದಾಳೆ.. ಕುತಂತ್ರಿಗಳಿಗೆ ಸರಿಯಾಗೆ ಪಾಠ ಕಲಿಸಿದ್ದಾಳೆ. ಆದ್ರೀಗ ಸ್ನೇಹ ಸಿಕ್ಕಿಬಿದ್ದಾಳೆ.

ಹೌದು, ಡಿಸಿ ಸ್ನೇಹ ಆತ್ಮ ಓಡಾಡಿದೆ ಅನ್ನೋ ಸುದ್ದಿ ಹರಿದಾಡ್ತಿದ್ದಂತೆ ಎಲ್ಲರೂ ಭಯಬಿದ್ದಿದ್ರು.. ಆದ್ರೆ ಪುಟ್ಟಕ್ಕನ ಮನೆಗೆ ಒಳ್ಳೆಯದ್ದೇ ಆಗಿದೆ. ಆದ್ರೆ ಇದ್ರಲ್ಲಿ ಏನೋ ಮಸಲತ್ತು ಇದೆ ಅಂತ ಕಂಠಿ ಹೇಳಿದ. ಅಷ್ಟೊತ್ತಿಗೆ ಸ್ನೇಹ ತಾಂಡವ್‌ ಓಡಿಹೋಗಿದ್ದು ಸುಳ್ಳಾ ಅಂತಾ ಕೇಳಿದ್ಲು.. ಆಗ ಕಂಠಿ ಅವ್ನು ಇಷ್ಟು ಹೇಗೆ ಹೆದ್ರಿಕೊಂಡ ಅನ್ನೋದೇ ಡೌಟು ಅಂತಾ ಹೇಳಿದ್ದಾನೆ. ಆಗ ಹೆದ್ರಿಸಿದ್ರೆ, ಹೆದ್ರುಕೊತಾರೆ ಅಂತಾ ಸ್ನೇಹ ಹೇಳಿದ್ದಾಳೆ. ಇದೀಗ ಸ್ನೇಹ ಡ್ರಾಮಾ ಎಲ್ಲರ ಮುಂದೆ ಬಯಲಾಗುತ್ತಾ? ಅಥವಾ ಬೇರೆನಾದ್ರೂ ಹೇಳಿ ಎಲ್ಲರ ದಾರಿ ತಪ್ಪಿಸ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಂದ್ವೇಳೆ ಸ್ನೇಹ ಈ ರೀತಿ ಮಾಡಿದ್ದು ಗೊತ್ತಾದ್ರೆ ಕಂಠಿ ಆಕೆಯನ್ನ ಕ್ಷಮಿಸಲ್ಲ.. ಯಾಕಂದ್ರೆ ಕಂಠಿ ಡಿಸಿ ಸ್ನೇಹಳನ್ನ ತುಂಬಾ ಪ್ರೀತಿಸ್ತಿದ್ದ.. ಆಕೆಯ ವಿಚಾರದಲ್ಲಿ ಯಾರಾದ್ರೂ ಆಟ ಆಡಿದ್ರೆ ಸುಮ್ನೆ ಬಿಡ್ತಿರ್ಲಿಲ್ಲ.. ಈಗ ಸ್ನೇಹ ಈ ರೀತಿ ನಾಟಕ ಮಾಡಿದ್ದಾಳೆ ಅಂತಾ ಗೊತ್ತಾದ್ರೆ ಆತ ಆಕೆಯನ್ನ ಮನೆಯಿಂದ ಆಚೆ ಹಾಕೋದು ಪಕ್ಕ.. ಅಷ್ಟೇ ಅಲ್ಲ ಅವರಿಬ್ರು ಮತ್ತೆ ದೂರ ಆಗೋ ಸಾಧ್ಯತೆ ಹೆಚ್ಚಿದೆ.

Shwetha M