ಭಾರತಕ್ಕೆ 2nd ಟೆಸ್ಟ್ ಕಬ್ಬಿಣದ ಕಡಲೆ – ಎಡ್ಜ್ ಬಾಸ್ಟನ್ ನಲ್ಲಿ ಒಂದೂ ಪಂದ್ಯ ಗೆದ್ದಿಲ್ಲ ಟೀಂ ಇಂಡಿಯಾ!
58 ವರ್ಷ.. 8 ಮ್ಯಾಚ್.. ಹೇಗಿದೆ ರೆಕಾರ್ಡ್ಸ್?

ಭಾರತಕ್ಕೆ 2nd ಟೆಸ್ಟ್ ಕಬ್ಬಿಣದ ಕಡಲೆ – ಎಡ್ಜ್ ಬಾಸ್ಟನ್ ನಲ್ಲಿ ಒಂದೂ ಪಂದ್ಯ ಗೆದ್ದಿಲ್ಲ ಟೀಂ ಇಂಡಿಯಾ!58 ವರ್ಷ.. 8 ಮ್ಯಾಚ್.. ಹೇಗಿದೆ ರೆಕಾರ್ಡ್ಸ್?

2 ಇನ್ನಿಂಗ್ಸ್.. ಐದು ಸೆಂಚುರಿ.. 850+ ರನ್ಸ್.. ಹೀಗಿದ್ರೂ ಭಾರತ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಮೊದಲ ಪಂದ್ಯವನ್ನ ಗೆಲ್ಲೋಕೆ ಆಗ್ಲಿಲ್ಲ. ಇದೀಗ ಎರಡನೇ ಪಂದ್ಯ ಗಿಲ್ ಪಡೆಗೆ ಮಸ್ಟ್ ವಿನ್ ಮ್ಯಾಚ್. ಆದ್ರೆ ಪಂದ್ಯದ ಆರಂಭಕ್ಕೂ ಮುನ್ನವೇ ಕ್ರಿಕೆಟ್ ಪಂಡಿತರೆಲ್ಲಾ ಟೀಂ ಇಂಡಿಯಾ ಸೆಕೆಂಡ್ ಮ್ಯಾಚ್ ಗೆಲ್ಲೋದೂ ಕೂಡ ಡೌಟ್ ಅಂತಿದ್ದಾರೆ. ಅವ್ರ ಪ್ರೆಡಿಕ್ಷನ್​ಗೆ ಕಾರಣ ಈ ಹಿಂದಿನ ಅಂಕಿ ಅಂಶಗಳು.

ಇದನ್ನೂ ಓದಿ : 2ನೇ ಪಂದ್ಯಕ್ಕಿಲ್ಲ ಬುಮ್ರಾ, ಪ್ರಸಿದ್ಧ್, ಸುದರ್ಶನ್ – ಪಂದ್ಯದ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನ ಸಿದ್ಧವಾಗ್ತಿದೆ. ಜುಲೈ 2ರಿಂದ 6ರವರೆಗೆ ನಡೆಯಲಿರುವ ರಣರೋಚಕ ಪಂದ್ಯಕ್ಕೆ ಉಭಯ ತಂಡಗಳೂ ಗೇಮ್​ಪ್ಲ್ಯಾನ್ ಸಿದ್ಧ ಮಾಡಿಕೊಳ್ತಿವೆ. 2ನೇ ಪಂದ್ಯದಲ್ಲೂ ಗೆದ್ದು ಡಾಮಿನೇಟ್ ಮಾಡೋಕೆ ಆಂಗ್ಲರು ಕಾಯ್ತಿದ್ರೆ ಸರಣಿ ಸಮಬಲ ಮಾಡಿಕೊಳ್ಳೋಕೆ ಭಾರತವೂ ತಂತ್ರಗಾರಿಕೆಯಲ್ಲಿದೆ. ಆದ್ರೆ ಇತಿಹಾಸವನ್ನ ಕೆದಕಿದ್ರೆ ಬರ್ಮಿಂಗ್ ಹ್ಯಾಮ್​ ಸ್ಟೇಡಿಯಂ ಭಾರತದ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿದೆ. ಟೀಂ ಇಂಡಿಯಾ ಈ ಮೈದಾನದಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ ಅಂದ್ರೆ ನೀವು ನಂಬಲೇಬೇಕು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸಮರ ಶುರು ಆದ್ಮೇಲೆ ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ನಲ್ಲಿ ಟೀಮ್ ಇಂಡಿಯಾ ಈವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಕಳೆದ 58 ವರ್ಷಗಳಲ್ಲಿ ಈ ಮೈದಾನದಲ್ಲಿ ಭಾರತದ ಪರ ಅತಿರಥ ಮಹಾರಥರು ಕಣಕ್ಕಿಳಿದಿದ್ದಾರೆ. ಬಟ್ ಒಂದೇ ಒಂದು ಪಂದ್ಯದಲ್ಲಿ ಗೆದ್ದು ಬೀಗೋ ಅದೃಷ್ಟ ಸಿಕ್ಕಿಲ್ಲ. ಇತಿಹಾಸವನ್ನ ತೆಗೆದ್ರೆ ಎಡ್ಜ್​ಬಾಸ್ಟನ್ ಮೈದಾನದಲ್ಲೂ ಇಂಗ್ಲೆಂಡ್ ತಂಡವೇ ಗೆಲ್ಲುವ ಫೇವರೇಟ್ ಟೀಂ ಆಗಿದೆ.

ಗೆದ್ದೇ ಇಲ್ಲ ಭಾರತ!

ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈವರೆಗೆ 8 ಟೆಸ್ಟ್ ಪಂದ್ಯಗಳನ್ನಾಡಿವೆ

ಒಂದು ಮ್ಯಾಚಲ್ಲಿ ಡ್ರಾ, 7 ಮ್ಯಾಚ್​ ಗಳಲ್ಲೂ ಭಾರತ ತಂಡ ಸೋಲು

ಭಾರತ 8 ಪಂದ್ಯಗಳ 16 ಇನಿಂಗ್ಸ್​ಗಳಲ್ಲಿ 400+ ಸ್ಕೋರ್​ ಒಮ್ಮೆ ಮಾತ್ರ

ಬರ್ಮಿಂಗ್ ​ಹ್ಯಾಮ್​ ಮೈದಾನದಲ್ಲಿ ಆಂಗ್ಲ ಬೌಲರ್​ಗಳು ಪರಾಕ್ರಮ

2022 ರಲ್ಲಿ ನಡೆದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 416 ರನ್​

ಇಂಗ್ಲೆಂಡ್ ಮೊದಲ ಇನಿಂಗ್ಸ್ ​ನಲ್ಲಿ ಕಲೆಹಾಕಿದ್ದು ಕೇವಲ 284 ರನ್​

ಟೀಮ್ ಇಂಡಿಯಾವನ್ನು 245 ರನ್​ಗಳಿಗೆ ಆಲೌಟ್ ಮಾಡಿದ

ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆ ಗೆಲುವು ದಾಖಲಿಸುವಲ್ಲಿ ಯಶಸ್ವಿ

ಟೀಮ್ ಇಂಡಿಯಾ 7 ಮ್ಯಾಚ್​ಗಳಲ್ಲಿ ಸೋಲನುಭವಿಸಿದರೂ ಒಮ್ಮೆ ಮಾತ್ರ ಡ್ರಾ

ಟೀಮ್ ಇಂಡಿಯಾ 390 ರನ್​ ಬಾರಿಸಿ ಪ್ರಥಮ ಇನಿಂಗ್ಸ್ ಅಂತ್ಯಗೊಳಿಸಿತ್ತು

ಕೊನೆಯ ದಿನದಾಟದಲ್ಲಿ 5 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಡ್ರಾ

ಮೊದ್ಲೇ ಇಂಗ್ಲೆಂಡ್ ನಲ್ಲಿ ಟೆಸ್ಟ್ ಆಡೋದಂದ್ರೆ ಭಾರತಕ್ಕೆ ಸಾಲು ಸಾಲು ಸವಾಲುಗಳು ಇರುತ್ವೆ. ಈ ಬಾರಿಯೂ ಅದೇ ಆಗ್ತಿದೆ. ತವರಿನಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡ್ತಾ ಬಂದಿರೋ ಇಂಗ್ಲೆಂಡ್ ತಂಡ ಈ ಸಲವೂ ಅದೇ ಹುಮ್ಮಸ್ಸಿನಲ್ಲಿದೆ. ಹಾಗೇನಾದ್ರೂ ಈ ಬಾರಿ ಎಡ್ಜ್​ಬಾಸ್ಟನ್ ಮೈದಾನದಲ್ಲಿ ಭಾರತ ತಂಡವು ಗೆಲುವು ದಾಖಲಿಸಿದರೆ, ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈ ಟೆಸ್ಟ್ ಸರಣಿಯ ಮೊದಲ ಪಂದ್ಯವು ಲೀಡ್ಸ್​ನಲ್ಲಿ ಮುಗಿದಿದ್ದು, ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಬರ್ಮಿಂಗ್​ಹ್ಯಾಮ್ ಆತಿಥ್ಯವಹಿಸಲಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯವು ಕ್ರಿಕೆಟ್​ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ ನಾಲ್ಕನೇ ಪಂದ್ಯವು ಮ್ಯಾಚೆಂಸ್ಟರ್​​ನಲ್ಲಿ ನಡೆಯಲಿದ್ದು, ಐದನೇ ಪಂದ್ಯವು ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಜರುಗಲಿದೆ. ಈ ಸರಣಿಯಲ್ಲಿ ಗೆದ್ದವ್ರಿಗೆ ಬಂಪರ್ ಗಿಫ್ಟ್ ಸಿಗಲಿದೆ. ಅದೇನಂದ್ರೆ ಭಾರತ ವರ್ಸಸ್ ಇಂಗ್ಲೆಂಡ್ ಸರಣಿಯೊಂದಿಗೆ 2027ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಶುರುವಾಗಲಿದೆ. ಈ ಸರಣಿ ಗೆದ್ದು ಶುಭಾರಂಭಕ್ಕೆ ಎರಡೂ ತಂಡಗಳು ಕಾಯ್ತಿರೋದ್ರಿಂದ ಎರಡನೇ ಪಂದ್ಯದ ರಿಸಲ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ.

Shantha Kumari