ENG ಸರಣಿ ಆಡ್ಬೇಕಿತ್ತಾ ಶ್ರೇಯಸ್ ಅಯ್ಯರ್ -ವೈಟ್ ಬಾಲ್ ಹೀರೋ ಟೆಸ್ಟ್ ಗಿಲ್ಲ ಯಾಕೆ?
BCCI ಎಡವಟ್ಟಿಗೆ ಪಂದ್ಯ ಕೈ ಚೆಲ್ಲಿದ್ರಾ?

ENG ಸರಣಿ ಆಡ್ಬೇಕಿತ್ತಾ ಶ್ರೇಯಸ್ ಅಯ್ಯರ್ -ವೈಟ್ ಬಾಲ್ ಹೀರೋ ಟೆಸ್ಟ್ ಗಿಲ್ಲ ಯಾಕೆ?BCCI ಎಡವಟ್ಟಿಗೆ ಪಂದ್ಯ ಕೈ ಚೆಲ್ಲಿದ್ರಾ?

ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಶ್ರೇಯಸ್ ಅಯ್ಯರ್ ಕಳೆದ ಒಂದೂವರೆ ವರ್ಷದಿಂದಲೂ ಸಾಲಿಡ್ ಫಾರ್ಮ್​ನಲ್ಲಿದ್ದಾರೆ. ಅವ್ರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತೆ ತಂಡಗಳ ಪ್ರದರ್ಶನವೂ ಬೊಂಬಾಟ್ ಆಗಿದೆ. ಐಪಿಎಲ್​ನಲ್ಲೂ ಕೂಡ ಅವ್ರ ಪರ್ಫಾಮೆನ್ಸ್ ಅತ್ಯದ್ಭುತವಾಗಿತ್ತು. ಸೋ ಇಂಗ್ಲೆಂಡ್ ಸರಣಿಗೆ ಅವ್ರನ್ನ ಸೆಲೆಕ್ಟ್ ಮಾಡಿಕೊಳ್ಳೋದು ಹಂಡ್ರೆಡ್ ಪರ್ಸೆಂಟ್ ಫಿಕ್ಸ್ ಅಂತಾನೇ ಹೇಳಲಾಗಿತ್ತು. ಬಟ್ ಬಿಸಿಸಿಐ ಶ್ರೇಯಸ್​​ರನ್ನ ಕೈಬಿಟ್ಟಿತ್ತು. ಇದೀಗ ಶ್ರೇಯಸ್ ಎಂಥಾ ಒಳ್ಳೆ ಆಟಗಾರ ಅನ್ನೋದನ್ನ ಆಕಾಶ್ ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ : 2ನೇ ಪಂದ್ಯಕ್ಕಿಲ್ಲ ಬುಮ್ರಾ, ಪ್ರಸಿದ್ಧ್, ಸುದರ್ಶನ್ – ಪಂದ್ಯದ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ

ಸಂದರ್ಶನವೊಂದರಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ಶ್ರೇಯಸ್ ಅಯ್ಯರ್​ರನ್ನ ಹಾಡಿ ಹೊಗಳಿದ್ದಾರೆ. ಮಿಡಲ್ ಆರ್ಡರ್ ಬ್ಯಾಟಿಂಗ್​ ಕ್ರಮಾಂದಲ್ಲಿ ಸಾಕಷ್ಟು ಪೈಪೋಟಿಗಳು ಇದ್ದ ಕಾರಣಕ್ಕೆ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಿಲ್ಲ. ಐದು ಪಂದ್ಯಗಳ ಟೆಸ್ಟ್ ಸರಣಿಗೆ ತಂಡವನ್ನು ಘೋಷಿಸಿದಾಗ, ಮುಂಬೈ ಪರ ಪ್ರಥಮ ದರ್ಜೆ ಪಂದ್ಯಗಳಲ್ಲಿ ಅಬ್ಬರಿಸಿದ್ದ ಶ್ರೇಯಸ್ ಅವರನ್ನು ನಿರ್ಲಕ್ಷಿಸಿದ್ದಕ್ಕಾಗಿ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆದಾರರ ಅಧ್ಯಕ್ಷ ಅಜಿತ್ ಅಗರ್ಕರ್ ವಿರುದ್ಧ ಬಹಳಷ್ಟು ಕೋಪ ಬಂದಿತ್ತು. ಆದ್ರೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವ ವಿಶ್ವಾಸವಿದೆ ಎಂದಿದ್ದಾರೆ. ಪ್ರಸ್ತುತ ಟೀಂ ಇಂಡಿಯಾದಲ್ಲಿ ಮಿಡಲ್ ಆರ್ಡರ್​​ನಲ್ಲಿ ಒಳ್ಳೆ ರನ್ಸ್ ಬಂದಿಲ್ಲ. ಇದೇ ಈಗ ಹಿನ್ನಡೆಗೆ ಕಾರಣ ಆಗಿದೆ.

ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಗೆ ಕೀ ಪ್ಲೇಯರ್ ಆಗಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿ ಅಭಿಯಾನದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರಾಗಿದ್ದರು. 30 ವರ್ಷ ವಯಸ್ಸಿನ ಶ್ರೇಯಸ್ ದೇಶೀಯ ಪಂದ್ಯಗಳಲ್ಲಿ ಹಾಗೇ 2025ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರು. ಆದ್ರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವ್ರ ಸರದಿ ಇನ್ನೂ ಬಂದಿಲ್ಲ ಎಂದು ಚೋಪ್ರಾ ಹೇಳಿದ್ದಾರೆ. ವಾಸ್ತವವಾಗಿ, ಟೆಸ್ಟ್ ಆಯ್ಕೆಗೆ ಬಂದಾಗ ಶ್ರೇಯಸ್‌ಗಿಂತ ಮುಂದೆ ಸರ್ಫರಾಜ್ ಖಾನ್‌ನಂತಹ ಹಲವಾರು ಇತರ ಬ್ಯಾಟ್ಸ್‌ಮನ್‌ಗಳು ಕಾಯುತ್ತಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.

ಅಸಲಿಗೆ ಶ್ರೇಯಸ್ ಅಯ್ಯರ್ ಕೊನೆಯ ಬಾರಿಗೆ 2024 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ಸರಣಿಯ ಮಧ್ಯದಲ್ಲಿ ಅವರನ್ನು ತಂಡದಿಂದ ಕೈಬಿಡಲಾಗಿತು. ನಂತರ ಅವರನ್ನು ರಣಜಿ ಟ್ರೋಫಿ ಆಡಲು ಸೂಚನೆ ನೀಡಲಾಗಿತ್ತು. ಬಟ್ ಶ್ರೇಯಸ್ ಕಣಕ್ಕಿಳಿಯಲಿಲ್ಲ. ಹೀಗಾಗಿ ರಾಜ್ಯ ಪರ ಆಡಲು ವಿಫಲರಾದ ಕಾರಣ ಬಿಸಿಸಿಐ ಅವರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಹೊರಗಿಟ್ಟಿತ್ತು. ಆದ್ರೂ ಕುಡ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ   ಮಿಂಚು ಹರಿಸಿದ್ರು. 2024/25 ರ ರಣಜಿ ಟ್ರೋಫಿಯಲ್ಲಿ ಕೇವಲ ಏಳು ಇನ್ನಿಂಗ್ಸ್‌ಗಳಲ್ಲಿ ಅಯ್ಯರ್ 68.57 ರ ಸರಾಸರಿಯಲ್ಲಿ ಮತ್ತು 90 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ 480 ರನ್ ಗಳಿಸಿದರು. ಇನ್ನು 18ನೇ ಸೀಸನ್ ಐಪಿಎಲ್​ನಲ್ಲಿ ತಮಗೆ ನೀಡಿದ್ದ 26.75 ಕೋಟಿ ರೂಪಾಯಿ ಸಂಭಾವನೆಯನ್ನ ಸಮರ್ಥಿಸಿಕೊಳ್ಳುವಂತೆ ಪಂಜಾಬ್ ಕಿಂಗ್ಸ್ ಪರ ಧೂಳೆಬ್ಬಿಸಿದ್ರು. ತಂಡವನ್ನ ಫೈನಲ್​ಗೆ ಮುನ್ನಡೆಸಿದ್ದೂ ಅಲ್ಲದೆ 17 ಪಂದ್ಯಗಳಲ್ಲಿ 604 ರನ್‌ಗಳನ್ನು ಗಳಿಸುವ ಮೂಲಕ ಸಕ್ಸಸ್ ಕಂಡಿದ್ರು. ಹೀಗಿದ್ರೂ ಟೆಸ್ಟ್ ಪಂದ್ಯಕ್ಕೆ ಸೆಲೆಕ್ಟ್ ಆಗದೇ ಇದ್ದದ್ದು ಸಾಕಷ್ಟು ಜನರಲ್ಲಿ ಅಚ್ಚರಿ ಮೂಡಿಸಿತ್ತು. ಇದೀಗ ಭಾರತ ಮೊದಲ ಪಂದ್ಯ ಸೋತ ಮೇಲೆ ಶ್ರೇಯಸ್ ಹೆಸರು ಮತ್ತೆ ಸದ್ದು ಮಾಡ್ತಿದೆ.

Shantha Kumari