5 ಹುಲಿ ಕೊ*ದ ಕೇಸ್ಗೆ ಬಿಗ್ ಟ್ವಿಸ್ಟ್ – ಹಸುವಿನ ಮಾಲೀಕ ಸೇರಿದಂತೆ ಮೂವರು ಅಂದರ್

ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಕೊಂದ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಕೇಸ್ಗೆ ಸಂಬಂಧ ಪಟ್ಟಂತೆ ಮೃತ ಹಸುವಿನ ಮಾಲೀಕ ಸೇರಿದಂತೆ ಮೂವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಸುವಿನ ಮಾಲೀಕ ಕಳ್ಳಬೇದೊಡ್ಡಿಯ ಕೋನಪ್ಪ ಹಾಗೂ ಮಾದುರಾಜ್, ಕೊಪ್ಪ ಗ್ರಾಮದ ನಾಗರಾಜು ಮೂವರ ಬಂಧಿಸಲಾಗಿದೆ.
ನಿನ್ನೆ ಹಸು ಯಾರದೆಂಬ ಪತ್ತೆಗೆ ದನಗಾಹಿಗಳನ್ನು ಸ್ಥಳಕ್ಕೆ ಕರೆತಂದು ಅರಣ್ಯ ಸಿಬ್ಬಂದಿ ವಿಚಾರಣೆ ನಡೆಸಿದ್ದರು. ಈ ವೇಳೆ ಹಸುವಿನ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದಿದ್ದರು. ಹಸುವಿನ ಮಾಲೀಕ ಕೋನಪ್ಪ ಮತ್ತು ನಾಗರಾಜು ಇಬ್ಬರೂ ಅಮಾಯಕರಂತೆ ವರ್ತಿಸಿದ್ದರು. ಹಸುವನ್ನು ಗುರುತು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು. ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ.
ಹುಲಿಗಳ ಸಾವು ಪ್ರಕರಣದವನ್ನು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ತನಿಖೆ ನಡೆಸುತ್ತಿವೆ. ಕೊಳ್ಳೇಗಾಲ ವಿಜಿಲೆನ್ಸ್ ತಂಡ ಹಾಗೂ ಅರಣ್ಯ ಇಲಾಖೆಯ ಎಸಿಎಫ್ ಗಜಾನನ ಹೆಗಡೆ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ. ಮೀಣ್ಯಂ, ಗಾಜನೂರು, ಕಳಬಾಯಿ ದೊಡ್ಡಿ, ಕೊಪ್ಪ ಗ್ರಾಮದ ಕೆಲ ಶಂಕಿತರನ್ನು ತಂಡ ವಿಚಾರಣೆ ನಡೆಸಿತ್ತು. ರಾತ್ರಿ ವಿಚಾರಣೆ ವೇಳೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಕಳ್ಳಬೇದೊಡ್ಡಿಯ ಶಿವಣ್ಣ ಎಂಬಾತನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು. ತಡರಾತ್ರಿ ಶಿವಣ್ಣ ಪುತ್ರ ಮಾದರಾಜು ಅರಣ್ಯ ಇಲಾಖೆ ವಶಕ್ಕೆ ಸಿಕ್ಕಿದ್ದಾನೆ. ಈತ ಕೊಪ್ಪ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ.

ನೋಡಿರಿ

