ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡದ ಕಣ್ಣಪ್ಪ! – ಮೊದಲ ದಿನದ ಗಳಿಕೆ ಇಷ್ಟೇನಾ?

ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡದ ಕಣ್ಣಪ್ಪ! – ಮೊದಲ ದಿನದ ಗಳಿಕೆ ಇಷ್ಟೇನಾ?

ಬಹು ನಿರೀಕ್ಷಿತ ಸಿನಿಮಾ ಕಣ್ಣಪ್ಪ ನಿನ್ನೆ ರಿಲೀಸ್‌ ಆಗಿದೆ. ಈ ಸಿನಿಮಾ ಆರಂಭದಿಂದಲೂ ದೊಡ್ಡ ಮಟ್ಟದಲ್ಲಿ ಹೈಪ್‌ ಕ್ರಿಯೇಟ್‌ ಮಾಡ್ಬೇಕು. ವಿಷ್ಣು ಮಂಚು ಅವರ ಕನಸಿನ ಯೋಜನೆ, ಭಾರಿ ಬಜೆಟ್, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್, ಕಾಜಲ್ ಅಂತ ದೊಡ್ಡ ಸ್ಟಾರ್‌ಗಳು ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಅಬ್ಬರಿಸಿದ್ದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮಂಕಾಗಿದೆ. ಮೊದಲ ದಿನ ಒಂದಂಕಿ ಗಳಿಕೆ ಮಾಡಿದೆ.

ಇದನ್ನೂ ಓದಿ: ರಮೋಲಾಗೆ ವೇದಿಕೆಯಲ್ಲೇ ರಕ್ಷಕ್‌ ಕಿಸ್‌.. ಬುಲೆಟ್‌ ಮಗ ಪ್ರೀತಿಯಲ್ಲಿ ಬಿದ್ರಾ? – ಅಮ್ರಿಟಾಗೆ ಸುನೀಲ್‌ ಲವ್ಲೀ ಪ್ರಪೋಸ್‌!

ಹೌದು, ವಿಷ್ಣು ಮಂಚು ನಟಿಸಿ ನಿರ್ಮಿಸಿರೋ ಕಣ್ಣಪ್ಪ ಸಿನಿಮಾ ನಿನ್ನೆ ರಿಲೀಸ್ ಆಗಿದೆ. ಪ್ಯಾನ್‌ ಇಂಡಿಯಾ ಸಿನಿಮಾ ಬಜೆಟ್‌ 300 ಕೋಟಿ ರೂಪಾಯಿಗೂ ಆಧಿಕ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ ಧೂಳೆಬ್ಬಿಸೋದು ಪಕ್ಕಾ ಅಂತಾ ನಿರ್ದೇಶಕರು ಅಂದ್ಕೊಂಡಿದ್ರು.. ಆದ್ರೆ ಮೊದಲ ದಿನವೇ ಸಿನಿಮಾ ಟೀಮ್‌ ಗೆ ನಿರಾಸೆಯಾಗಿದೆ. ಮೊದಲ ದಿನ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕೇವಲ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸದ್ಯ ಈ ವಿಚಾರ ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ.

ಈ ಮೊದಲು ‘ರಾಮಾಯಣ’ದ ಕಥೆ ಇಟ್ಟುಕೊಂಡು ‘ಆದಿಪುರಷ್’ ಸಿನಿಮಾ ಮಾಡಲಾಗಿತ್ತು. ಈ ಚಿತ್ರದಲ್ಲಿ ಕಥೆಯನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿ ಬಂತು. ಈ ಕಾರಣದಿಂದಲೇ ಸಿನಿಮಾ ಟ್ರೋಲ್ ಆಯಿತು ಮತ್ತು ಕಳಪೆ ವಿಮರ್ಶೆ ಪಡೆಯಿತು. ಈ ಘಟನೆ ಬಳಿಕವೂ ಯಾರೂ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಕಣ್ಣಪ್ಪ ಚಿತ್ರ ಕೂಡ ಇದೇ ಹಾದಿ ಹಿಡಿದಿದೆ.  ಕಣ್ಣಪ್ಪ ಸಿನಿಮಾ ಪೌರಾಣಿಕ ವಿಚಾರವನ್ನು ಹೇಳಲಾಗಿದೆ. ಆದರೆ, ಇದರಲ್ಲಿ ರೊಮ್ಯಾಂಟಿಕ್ ಟ್ರ್ಯಾಕ್​ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ಭಾವನಾತ್ಮಕ ವಿಚಾರಗಳನ್ನು ಸರಿಯಾಗಿ ಹೇಳಲು ನಿರ್ದೇಶಕರು ವಿಫಲವಾಗಿದ್ದಾರೆ. ಬೇಕಾಬಿಟ್ಟಿ ಆ್ಯಕ್ಷನ್ ದೃಶ್ಯಗಳನ್ನು ಇಡಲಾಗಿದ್ದು, ಫೈಟ್​ಗೂ ಸಿನಿಮಾಗೂ ಯಾವುದೇ ಸಂಬಂಧವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಿನಿಮಾಗೆ ದೊಡ್ಡ ಹಿನ್ನಡೆಯನ್ನು ಉಂಟು ಮಾಡಿದೆ.

‘ಕಣ್ಣಪ್ಪ’ ಸಿನಿಮಾ ತೆಲುಗು ಜೊತೆ ತಮಿಳು, ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ವಿಷ್ಣು ಮಂಚು ಜೊತೆ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್​ಲಾಲ್ ಮೊದಲಾದವರು ನಟಿಸಿದ್ದಾರೆ. ಆದಾಗ್ಯೂ ಸಿನಿಮಾ ಉತ್ತಮ ಗಳಿಕೆ ಮಾಡಲು ವಿಫಲವಾಗಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಗಳಿಕೆ ಕೇವಲ 9 ಕೋಟಿ ರೂಪಾಯಿ.

‘ಕಣ್ಣಪ್ಪ’ ಸಿನಿಮಾ ಬುಕ್ ಮೈ ಶೋನಲ್ಲೂ ಅಂಥ ಉತ್ತಮ ರೇಟಿಂಗ್ ಏನೂ ಪಡೆದಿಲ್ಲ. ಚಿತ್ರಕ್ಕೆ ಸದ್ಯ 7.5 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಏರಿಕೆ ಕಂಡರೆ ನಿರ್ಮಾಪಕರ ಮೊಗದಲ್ಲಿ ನಗು ಮೂಡಲಿದೆ. ಇಲ್ಲವಾದಲ್ಲಿ ನಿರ್ಮಾಪಕರಿಗೆ ಭಾರೀ ನಷ್ಟ ಉಂಟಾಗಲಿದೆ.

Shwetha M