ಮೃತಪಟ್ಟ ಹುಲಿಗಳ ಹೊಟ್ಟೆಯಲ್ಲಿ ಕೀಟನಾಶಕದಲ್ಲಿರೋ ಫೋರೇಟ್ ಎಂಬ ವಿಷಕಾರಿ ಅಂಶ ಪತ್ತೆ

ಮೃತಪಟ್ಟ ಹುಲಿಗಳ ಹೊಟ್ಟೆಯಲ್ಲಿ ಕೀಟನಾಶಕದಲ್ಲಿರೋ ಫೋರೇಟ್ ಎಂಬ ವಿಷಕಾರಿ ಅಂಶ ಪತ್ತೆ

ಎಂಎಂ ಹಿಲ್ಸ್‌ನಲ್ಲಿ ಸಾವನ್ನಪ್ಪಿದ 5 ಹುಲಿಗಳ ಹೊಟ್ಟೆಯಲ್ಲಿ ಮತ್ತು ಸತ್ತ ಹಸುವಿನ ಮಾಂಸದಲ್ಲಿ ಕೀಟನಾಶಕಗಳಲ್ಲಿ ಕಂಡುಬರುವ ಫೋರೇಟ್ ಎಂಬ ರಾಸಾಯನಿಕ ಅಂಶಗಳು ಪತ್ತೆಯಾಗಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ..

ಫೋರೇಟ್ ಕೀಟನಾಶಕಗಳಲ್ಲಿ ಕಂಡುಬರುವ ಕಾರ್ಬೋನೇಟ್ ಸಂಯುಕ್ತವಾಗಿದೆ. ಸತ್ತ ಎತ್ತಿನ ಮೇಲೆ ಫೋರೇಟ್ ಅಂಶ ಹೊಂದಿರುವ ದೊಡ್ಡ ಪ್ರಮಾಣದ ಕೀಟನಾಶಕಗಳನ್ನು ಪಾಪಿಗಳು ಹಾಕಿ ಹುಲಿಗಳ ಸಾವಿಗೆ ಕಾರಣವಾಗಿದ್ದಾರೆ. ಇದನ್ನು ತಿಂದ ಹುಲಿಗಳು ಒಂದೆರಡು ಗಂಟೆಗಳಲ್ಲಿ ಸಾವನ್ನಪ್ಪಿವೆ ಎಂದು  ಪಶುವೈದ್ಯರು ತಿಳಿಸಿದ್ದಾರೆ. ಜೀರ್ಣಕ್ರಿಯೆ ಪೂರ್ಣಗೊಂಡಾಗ ವಿಷ ಮಿಶ್ರಿತ ಆಹಾರವನ್ನು ಸೇವಿಸಿದ 4-5 ಗಂಟೆಗಳ ನಂತರ ಪ್ರಾಣಿಗಳು ಸಾಯುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ, ವಿಷದ ಅಂಶ ಹೆಚ್ಚಿದ್ದರೆ ಅವು ಒಂದೆರಡು ಗಂಟೆಗಳಲ್ಲಿ ಸಾಯುತ್ತವೆ ಎಂದು ತಿಳಿಸಿದ್ದಾರೆ.

ಎಫ್‌ಎಸ್‌ಎಲ್ ವರದಿಗಳ ಮೊದಲ ಸೆಟ್ ಮೂರು ದಿನಗಳಲ್ಲಿ ಲಭ್ಯವಾಗಲಿದೆ ಮತ್ತು ವಿವರವಾದ ಅಂತಿಮ ವರದಿಯು ಒಂದು ಅಥವಾ ಎರಡು ವಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಮತ್ತೊಬ್ಬ ಹಿರಿಯ ಅಧಿಕಾರಿತಿಳಿಸಿದ್ದಾರೆ.  . ಹುಲಿಗೆ ಒಂಬತ್ತು ವರ್ಷ ವಯಸ್ಸಾಗಿತ್ತು, ಆದರೆ ಅದರ ಮರಿಗಳಿಗೆ ಒಂದು ವರ್ಷ ವಯಸ್ಸಾಗಿತ್ತು.  ಅದು ಹಾಲುಣಿಸುವ ತಾಯಿಯಾಗಿರಲಿಲ್ಲ, ಸಂತಾನೋತ್ಪತ್ತಿ ಹೆಣ್ಣು ಹುಲಿಯಾಗಿತ್ತು. ಹಾಗೇ ಈಗ ಮೃತಪಟ್ಟ ಮರಿಗಳು ಬೇಟೆಯಾಡಲು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಲಿಯುತ್ತಿದ್ದವು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Kishor KV