ರಮೋಲಾಗೆ ವೇದಿಕೆಯಲ್ಲೇ ರಕ್ಷಕ್ ಕಿಸ್.. ಬುಲೆಟ್ ಮಗ ಪ್ರೀತಿಯಲ್ಲಿ ಬಿದ್ರಾ? – ಅಮ್ರಿಟಾಗೆ ಸುನೀಲ್ ಲವ್ಲೀ ಪ್ರಪೋಸ್!

ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಭರ್ಜರಿಯಾಗೇ ಮನರಂಜನೆ ನೀಡ್ತಿದೆ. ವೀಕ್ಷಕರಿಗೆ ಸಖತ್ ಮನರಂಜನೆ ನೀಡ್ತಾ ಇದ್ದಾರೆ. ಬ್ಯಾಚುಲರ್ಸ್ ಆಗಿ ಶೋಗೆ ಬಂದ ಬಾಯ್ಸ್ ಈಗ ಶೋನಲ್ಲೇ ಮಿಂಗಲ್ ಆದ್ರಾ ಅನ್ನೋ ಪ್ರಶ್ನೆ ವೀಕ್ಷಕರಿಗೆ ಕಾಡ್ತಿದೆ.. ಇದೀಗ ಶೋನಲ್ಲಿ ಎರಡು ಜೋಡಿಗಳು ಭಾರಿ ಸದ್ದು ಮಾಡ್ತಿದ್ದಾರೆ.. ಶೋನಲ್ಲೇ ಪ್ರೀತಿಯಲ್ಲಿ ಬಿದ್ರಾ ಅಂತಾ ವೀಕ್ಷಕರು ಕೇಳ್ತಿದ್ದಾರೆ. ಆ ಜೋಡಿಗಳು ಬೇರೆ ಯಾರು ಅಲ್ಲ.. ಸುನೀಲ್ ಮತ್ತು ಅಮ್ರಿಟಾ ಮತ್ತು ರಕ್ಷಕ್ ಬುಲೆಟ್, ರಮೋಲಾ.. ಇದೀಗ ಈ ಜೋಡಿ ರಿಯಲ್ ಆಗೇ ಮದ್ವೆ ಆಗ್ತಾರೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಜೊತೆ ಹೆಜ್ಜೆ ಹಾಕಿದ್ದ ನಟಿ ಇನ್ನಿಲ್ಲ – ಶೆಫಾಲಿ ಹೃದಯಾಘಾತದಿಂದ ನಿಧನ
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಈಗ ಅಂತಿಮ ಹಂತಕ್ಕೆ ಬಂದಿದೆ. ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ನಡಿತಾ ಇದೆ.. 10 ಬ್ಯಾಚುಲರ್ಸ್ ಮೆಂಟರ್ಸ್‌ನ ಮೆಚ್ಚಿಸಲು ವಿಭಿನ್ನ ಕಾನ್ಸೆಪ್ಟ್‌ಗಳ ಪ್ರತಿ ಸಂಚಿಕೆಯಲ್ಲಿ ಕಾಣಿಸಿಕೊಳ್ತಿದ್ದಾರೆ.. ಡ್ರೋನ್ ಪ್ರತಾಪ್ ಐಡಿಯಾಗಳಂತೂ ಡಿಂಫ್ರೆಂಟ್ ಆಗೇ ಇರುತ್ತೆ.. ಹೊಸ ಹೊಸ ಐಡಿಯಾಗಳಿಂದ ಗಗನಾಳನ್ನ ಇಂಪ್ರೆಸ್ ಮಾಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ.. ಫ್ಯೂಚರ್ ಹೆಂಡ್ತಿನಾ ಹೇಗೆ ನೋಡಿಕೊಳ್ಳಬೇಕು.. ಇಂಪ್ರೆಸ್ ಮಾಡ್ಬೇಕು ಅಂತಾ ತಮ್ಮ ಮೆಂಟರ್ಸ್‌ಗಳ ಮೂಲಕ ಕಲಿತಾ ಇದ್ದಾರೆ.. ಆದ್ರೆ ಈ ಎರಡು ಜೋಡಿಗಳ ವಿಚಾರದಲ್ಲಿ ಹಾಗಿಲ್ಲ. ಮೆಂಟರ್ಸೇ ಲೈಫ್ ಪಾರ್ಟ್ನರ್ ಆಗ್ತಾರಾ ಅಂತಾ ವೀಕ್ಷಕರಲ್ಲಿ ಕ್ಯೂರಿಯಾಸಿಟಿ ಮೂಡಿದೆ..
ಹೌದು, ಭರ್ಜರಿ ಬ್ಯಾಚುಲರ್ಸ್ ನಲ್ಲಿ ರಕ್ಷಕ್ ಬುಲೆಟ್ ಹಾಗೂ ರಮೋಲಾ ಜೋಡಿ ಮೋಡಿ ಮಾಡ್ತಿದೆ. ಈ ಶೋಗೆ ಬಂದ್ಮೇಲೆ ರಕ್ಷಕ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ.. ಸದಾ ಡೈಲಾಗ್ ಹೊಡ್ಕೊಂಡು, ಶೋಅಪ್ ಮಾಡ್ತಿದ್ದ ರಕ್ಷಕ್ ಈಗ ಫುಲ್ ಸೀದಾ ಸಾದ ಮನುಷ್ಯ ಆಗಿದ್ದಾರೆ. ಈಗ ಜವಾಬ್ದಾರಿ ಇರೋ ಹುಡುಗನ ತರ ಆಗಿದ್ದಾರೆ.. ಈ ರಗಡ್ ಹುಡುಗ ಚೇಂಜ್ ಆಗೋಕೆ ಕಾರಣ ಮೆಂಟರ್ ರಮೋಲಾ ಅಂತಾನೇ ಹೇಳ್ಬೋದು.. ಆತನನ್ನ ಸಾಕಷ್ಟು ತಿದ್ದಿದ್ದಾರೆ. ಹೀಗಾಗೇ ರಮೋಲಾ ಎಲ್ಲರಿಗೂ ಇಷ್ಟ ಆಗಿದ್ದಾರೆ. ರಕ್ಷಕ್ ಮನೆಯವರು ಕೂಡ ರಮೋಲಾರಂತ ಸೊಸೆಯೇ ನಮಗೆ ಸಿಗ್ಲಿ ಅಂತಾ ಫ್ಯಾಮಿಲಿ ರೌಂಡ್‌ನಲ್ಲಿ ಹೇಳಿದ್ರು. ಇನ್ನು ರಮೋಲಾ ರಕ್ಷಕ್ ಕೆಮಿಸ್ಟ್ರಿ ಕೂಡ ಚೆನ್ನಾಗಿದೆ ಅಂತಾ ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದು ಇದೆ. ಇದೀಗ ರಕ್ಷಕ್ ರಮೋಲಾಗೆ ಪ್ರಪೋಸ್ ಮಾಡಿದ್ದಾರೆ.. ಸ್ಟೇಜ್ ನಲ್ಲೇ ತೇಲುವ ಸೆಟ್ ಹಾಕಿ, ರಮೋಲಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಬಳಿಕ ಆಕೆಯ ಹಣೆಗೆ ಮುತ್ತಿಟ್ಟಿದ್ದಾರೆ. ಇದನ್ನೆಲ್ಲಾ ನೋಡಿದ ವೀಕ್ಷಕರು ನೀವು ಶೋನಲ್ಲಿ ಮಾತ್ರ ಅಲ್ಲ ರಿಯಲ್ ಆಗಿಯೂ ಒಂದಾದ್ರೆ ಚೆನ್ನಾಗಿರುತ್ತೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಸುನೀಲ್ ಹಾಗೂ ಅಮ್ರಿಟಾ ಮಧ್ಯೆ ಸಂಥಿಂಗ್ ಸಂಥಿಂಗ್ ನಡಿತಾ ಇದೆ ಅಂತಾ ವೀಕ್ಷಕರು ಆರಂಭದಿಂದಲೇ ಹೇಳ್ತಾ ಬಂದಿದ್ರು.. ಆದ್ರೆ ಸುನೀಲ್ ಹಾಗೂ ಅಮ್ರಿಟಾ ಮಾತ್ರ ಈ ಗಾಸಿಪ್ ನ ತಳ್ಳಿ ಹಾಕಿದ್ರು.. ನಾವು ಜಸ್ಟ್ ಫ್ರೆಂಡ್ಸ್ ಅಂತ ಹೇಳಿದ್ರು.. ಆದ್ರೆ ಕಳೆದ ಸಂಚಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಈ ಶೋ ಮುಗಿಯೋದ್ರಳಗೆ ಇವರಿಬ್ರ ಮದ್ವೆ ಮಾಡಿಸ್ಬೇಕಾಗುತ್ತೇನೋ ಅಂತಾ ಹೇಳಿದ್ರು.. ರವಿಚಂದ್ರನ್ ಹೀಗೆ ಹೇಳ್ತಿದ್ದಂತೆ ಅಮ್ರಿಟಾ ಹಾಗೂ ಸುನೀಲ್ ನಾಚಿ ನೀರಾಗಿದ್ರು.. ಇದನ್ನ ನೋಡಿದ ಫ್ಯಾನ್ಸ್ ಇವರಿಬ್ರು ಮದುವೆ ಆಗೋದು ಪಕ್ಕಾ ಅಂತಾ ಹೇಳಿದ್ರು. ಈ ವಾರದ ಸಂಚಿಕೆಯಲ್ಲೂ ಸುನೀಲ್ ಅಮ್ರಿಟಾಗೆ ಬಿಗ್‌ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ಟೇಜ್ ಮೇಲೆ ಸುಂದರ ಹೂವಿನ ಲೋಕ ಸೃಷ್ಠಿಸಿದ್ದಾರೆ. ಬಳಿಕ ಅಮ್ರಿಟಾವನ್ನ ಸ್ಟೇಜ್ ಗೆ ಕರ್ಕೊಂಡು ಬಂದು ಪ್ರಪೋಸ್ ಮಾಡಿದ್ದಾರೆ.. ನೀನಂದ್ರೆ ತುಂಬಾ ಇಷ್ಟ ಎಂದಿದ್ದಾರೆ.. ಇದೀಗ ಇವರಿಬ್ರು ಪಕ್ಕಾ ಮದುವೆ ಆಗ್ತಾರೆ ಎಂದು ಕಾಮೆಂಟ್ ಮಾಡ್ತಿದ್ದಾರೆ ವೀಕ್ಷಕರು.

ನೋಡಿರಿ

