ಕಣ್ಣಲ್ಲಿ ಕಿಚ್ಚು.. ಕೈಯಲ್ಲಿ ಮಚ್ಚು.. ವೀರನಾರಿಯಾದ ರಶ್ಮಿಕಾ ಮಂದಣ್ಣ! – ಮೈಸಾದಲ್ಲಿ ಮಂದಣ್ಣ ರಕ್ತ ಸಿಕ್ತ ಲುಕ್‌

ಕಣ್ಣಲ್ಲಿ ಕಿಚ್ಚು.. ಕೈಯಲ್ಲಿ ಮಚ್ಚು.. ವೀರನಾರಿಯಾದ ರಶ್ಮಿಕಾ ಮಂದಣ್ಣ! – ಮೈಸಾದಲ್ಲಿ ಮಂದಣ್ಣ ರಕ್ತ ಸಿಕ್ತ ಲುಕ್‌

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ.. ಈ ಕೂರ್ಗ್‌ ಬ್ಯೂಟಿ ಈಗ ಮುಟ್ಟಿದ್ದೆಲ್ಲಾ ಚಿನ್ನ.. ಒಂದಾದಮೇಲೊಂದು ಬ್ಲಾಕ್‌ಬಾಸ್ಟರ್‌ ಸಿನಿಮಾ ಮೂಲಕ ತೆರೆಮೇಲೆ ಮಿಂಚುತ್ತಿದ್ದಾರೆ.. ಇದೀಗ ಕಾಂಟ್ರವರ್ಸಿ ಕ್ವೀನ್‌ ರೊಮ್ಯಾಂಟಿಕ್‌ ಸೀನ್‌ ನಿಂದ ಹೊರ ಬಂದು ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ರಶ್ಮಿಕಾ ಹೊಸ ಸಿನಿಮಾದ ಲುಕ್‌ ಹಾಗೇ ಟೈಟಲ್‌ ರಿವೀಲ್‌ ಆಗಿದೆ. ಕೊಡಗಿನ ಕುವರಿ ಕೈಯಲ್ಲಿ ಮಚ್ಚು ಹಿಡಿದು ರಕ್ತ ಸಿಕ್ತ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ರಶ್ಮಿಕಾ ಹೊಸ ಲುಕ್‌ ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ: RO-KO ಕ್ರೇಜ್ ಗೆ ಬೆಚ್ಚಿದ ಆಸೀಸ್ – ವಿದಾಯ ಗೌರವ.. ಟಿಕೆಟ್ಸ್ ಸೋಲ್ಡ್​ ಔಟ್!

ತನ್ನ ಮಾತುಗಳಿಂದಲೇ ಫ್ಯಾನ್ಸ್‌ ಕೆಂಗಣ್ಣಿಗೆ ಗುರಿಯಾಗೋ ಕೂರ್ಗ್‌ ಬ್ಯೂಟಿ ರಶ್ಮಿಕಾ, ಸಿನಿಮಾದಲ್ಲೂ ಎತ್ತಿದ ಕೈ.. ಒಂದಾದ ಮೇಲೊಂದು ಹಿಟ್‌ ಸಿನಿಮಾದ ಮೂಲಕ ತೆರೆಮೇಲೆ ಸದ್ದು ಮಾಡ್ತಿದ್ದಾರೆ ರಶ್ಮಿಕಾ.. ಸದಾ ರೊಮ್ಯಾಂಟಿಕ್‌ ಗ್ಲಾಮರಸ್‌ ಪಾತ್ರಗಳಲ್ಲಿ ಮಿಂಚಿದ್ದ ರಶ್ಮಿಕಾ ಈಗ ವಿಭಿನ್ನ ಪಾತ್ರದ ಮೂಲಕ ತೆರೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.  ಇದೀಗ ಹೊಸ ಸಿನಿಮಾದ ಟೈಟಲ್‌ ಹಾಗೇ ರಶ್ಮಿಕಾ ಲುಕ್‌ ರಿವೀಲ್‌ ಆಗಿದೆ. ಕಣ್ಣಲ್ಲಿ ಕಿಚ್ಚು.. ಕೈಯಲ್ಲಿ ಮಚ್ಚು ಹಿಡಿದು.. ವೀರನಾರಿಯಾಗಿ ಮಿಂಚೋಕೆ ಮಂದಣ್ಣ ರೆಡಿಯಾಗಿದ್ದಾರೆ. ಸದಾ ನಗು, ಪ್ರೀತಿ, ಕಾಳಜಿಯಂತಹ ಭಾವನೆಗಳನ್ನೇ ವ್ಯಕ್ತಪಡಿಸುವ ಪಾತ್ರಗಳಲ್ಲಿ ನಟಿಸಿದ್ದ ರಶ್ಮಿಕಾರ ರೌದ್ರಾವತಾರವನ್ನ ಮೈಸಾದಲ್ಲಿ ನೋಡಬಹುದಾಗಿದೆ. ರಶ್ಮಿಕಾ ರಕ್ತ ಸಿಕ್ತ ಅವತಾರ ನೋಡಿ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ. ಮೈಸಾ ಸಿನಿಮಾದ ಮೂಲಕ ಮತ್ತೆ ಫ್ಯಾನ್ಸ್‌ ಮುಂದೆ ಬರಲು ರಶ್ಮಿಕಾ ರೆಡಿಯಾಗಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ಕೊಟ್ಟಿದ್ದಾರೆ ಶ್ರೀವಲ್ಲಿ.

ಹೌದು, ರಶ್ಮಿಕಾ ವೀರನಾರಿಯಾಗಿ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಮಂದಣ್ಣ ಹೊಸ ಸಿನಿಮಾದ ಹೆಸರು  ಮೈಸಾ. ಇದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಮಹಿಳಾ ಪ್ರಧಾನ ಚಿತ್ರವಾಗಿರುವ ಮೈಸಾದಲ್ಲಿ ರಶ್ಮಿಕಾ ತಮ್ಮ ಹಿಂದಿನ ಎಲ್ಲಾ ಗೆಟಪ್​ಗಳನ್ನು ಮೀರಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಅಷ್ಟಕ್ಕೂ ರಶ್ಮಿಕಾ ಅಂದರೆ ರೊಮ್ಯಾಂಟಿಕ್​ ಎಂದೇ ಹೇಳಲಾಗುತ್ತದೆ. ಇಷ್ಟು ದಿನ ಗ್ಲಾಮರಸ್‌ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ರು.. ಪುಷ್ಪಾ ಸಿನಿಮಾದಲ್ಲಿ ರಶ್ಮಿಕಾ ಲುಕ್‌ ಡಲ್‌ ಆಗಿದ್ರೂ ಕೊಂಚ ವಿಭಿನ್ನ ರೋಲ್‌ ಮಾಡಿದ್ರು.. ಆದರೆ ಈ ಹೊಸ ಸಿನಿಮಾ ಮೈಸಾದಲ್ಲಿ ರಶ್ಮಿಕಾ ಸಂಪೂರ್ಣ ಬದಲಾಗಿದ್ದಾರೆ. ಕೈಯಲ್ಲಿ ಆಯುಧ ಹಿಡಿದು, ರಕ್ತಿಸಿಕ್ತ ಮುಖದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ರವೀಂದ್ರ ಪುಲ್ಲೇ ನಿರ್ದೇಶನ ಮಾಡುತ್ತಿದ್ದಾರೆ ಅಜಯ್ ಹಾಗೂ ಅನಿಲ್ ಸಯ್ಯಾಪುರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಈ ಬಿಗ್‌ ಬಜೆಟ್‌ ಸಿನಿಮಾವನ್ನ ನೋಡಲು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ.

ಇನ್ನು ರಶ್ಮಿಕಾ ಮೈಸಾ ಸಿನಿಮಾದ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾನು ಯಾವಾಗಲೂ ನಿಮಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತೇನೆ. ವಿಭಿನ್ನವಾದದ್ದು, ರೋಮಾಂಚನಕಾರಿಯಾದದ್ದನ್ನು.. ಈ ಸಿನಿಮಾ ಅಂತಹದ್ದರಲ್ಲಿ ಒಂದು. ನಾನು ಇದುವರೆಗೆ ನಟಿಸದ ಪಾತ್ರ, ನಾನು ಎಂದಿಗೂ ಕಾಲಿಡದ ಜಗತ್ತು, ಮತ್ತು ನಾನು ಇಲ್ಲಿಯವರೆಗೆ ಭೇಟಿಯಾಗದ ನನ್ನ ಒಂದು ಆವೃತ್ತಿ. ಇದು ಉಗ್ರವಾಗಿದೆ, ಇದು ತೀವ್ರವಾಗಿದೆ. ಇದು ಕೇವಲ ಆರಂಭ ಎಂದು ಪೋಸ್ಟ್‌ ಹಾಕಿದ್ದಾರೆ.

ಅಂದ್ಹಾಗೆ ನಟಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ  ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಚೊಚ್ಚಲ ಸಿನಿಮಾದಲ್ಲೇ ರಶ್ಮಿಕಾ ಕ್ಲಿಕ್‌ ಆದ್ರು. ಕಿರಿಕ್‌ ಪಾರ್ಟಿ ರಶ್ಮಿಕಾ ಸಿನಿಮಾ ಬದುಕಿಗೆ ಭದ್ರಬುನಾದಿಯನ್ನೇ ಹಾಕಿತು. ಎರಡನೇ ಸಿನಿಮಾದಲ್ಲೇ ಪುನೀತ್ ರಾಜ್‌ಕುಮಾರ್‌ ಅವರಿಗೆ ನಾಯಕಿಯಾದರು. ಗೋಲ್ಡನ್ ಸ್ಟಾರ್ ಗಣೇಶ್, ದರ್ಶನ್, ಧ್ರುವ ಸರ್ಜಾ ಹೀಗೆ ಸ್ಟಾರ್ ನಟರ ಚಿತ್ರಗಳೇ ರಶ್ಮಿಕಾರನ್ನು ಹುಡುಕಿಕೊಂಡು ಬಂದವು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೆಲುವಿನ ಏಣಿ ಏರಿಯೇ ಬಿಟ್ಟರು ರಶ್ಮಿಕಾ ಮಂದಣ್ಣ. ಸ್ಯಾಂಡಲ್‌ವುಡ್‌ನಲ್ಲಿ ಸಕ್ಸಸ್‌ ಕಾಣ್ತಿದ್ದಂತೆ ರಶ್ಮಿಕಾ ಮೇಲೆ  ಪರಭಾಷಾ ನಿರ್ದೇಶಕರ ಕಣ್ಣು ಬಿತ್ತು. ಸ್ಯಾಂಡಲ್‌ ವುಡ್‌ ಬಳಿಕ ಟಾಲಿವುಡ್‌ ಗೂ ಎಂಟ್ರಿ ಕೊಟ್ರು ರಶ್ಮಿಕಾ ಮಂದಣ್ಣ. ರಶ್ಮಿಕಾ ಅದೃಷ್ಟವೋ, ಸಿನಿಮಾ ತಂಡದ ಶ್ರಮವೋ.. ತೆಲುಗಿನಲ್ಲೂ ಗೆಲುವಿನ ನಾಗಾಲೋಟ ಮುಂದುವರೆಸಿದರು. ಯಾವಾಗ ತೆಲುಗು ಸಿನಿಮಾಗಳು ಹಿಟ್‌ ಆಗ್ತಾ ಹೋಯ್ತೋ ಅಲ್ಲಿಂದ ರಶ್ಮಿಕಾ ಕನ್ನಡದ ಸಿನಿಮಾಗಳನ್ನ ಮರೆತೇ ಬಿಟ್ರು..  ಕಳೆದ ಐದು ವರ್ಷಗಳಿಂದ ಕನ್ನಡದ ಒಂದೇ ಒಂದು ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿಲ್ಲ. ಆ ಮಟ್ಟಿಗೆ ಪರಭಾಷಾ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ರಶ್ಮಿಕಾ ನಟನೆಯ ಬಹುತೇಕ ಚಿತ್ರಗಳು ಗೆದ್ದಿವೆ. ಪುಷ್ಪಾ ಸಿನಿಮಾವಂತೂ ರಶ್ಮಿಕಾಗೆ ದೊಡ್ಡ ಗೆಲುವನ್ನೇ ತಂದುಕೊಟ್ಟಿದೆ. ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಿಕೊಂಡಿದೆ ಈ ಸಿನಿಮಾ. ಹಾಗಾಗಿ ರಶ್ಮಿಕಾ ಸಿನಿಮಾದಲ್ಲಿ ಇದ್ದರೆ, ಆ ಸಿನಿಮಾ ಗೆಲುವು ಗ್ಯಾರಂಟಿ ಎಂದೇ ಬಣ್ಣಿಸಲಾಗುತ್ತಿದೆ. ಇದೀಗ ವಿಭಿನ್ನ ಪಾತ್ರದ ಮೂಲಕ ರಶ್ಮಿಕಾ ತೆರೆಮೇಲೆ ಮಿಂಚಲಿದ್ದಾರೆ. ಈ ಪಾತ್ರ ಕೂಡ ರಶ್ಮಿಕಾಗೆ ಗೆಲುವು ತಂದುಕೊಡುತ್ತಾ ಅನ್ನೋದನ್ನ ಕಾದು ನೋಡ್ಬೇಕು.

Shwetha M