RO-KO ಕ್ರೇಜ್ ಗೆ ಬೆಚ್ಚಿದ ಆಸೀಸ್ – ವಿದಾಯ ಗೌರವ.. ಟಿಕೆಟ್ಸ್ ಸೋಲ್ಡ್​ ಔಟ್!
2025ರಲ್ಲಿ ಎಷ್ಟು ಸರಣಿ ಆಡ್ತಾರೆ? 

RO-KO ಕ್ರೇಜ್ ಗೆ ಬೆಚ್ಚಿದ ಆಸೀಸ್ – ವಿದಾಯ ಗೌರವ.. ಟಿಕೆಟ್ಸ್ ಸೋಲ್ಡ್​ ಔಟ್!2025ರಲ್ಲಿ ಎಷ್ಟು ಸರಣಿ ಆಡ್ತಾರೆ? 

ಪ್ರಸ್ತುತ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ಸ್ ಅಂದ್ರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಈಗಾಗ್ಲೇ ಟೀಂ ಇಂಡಿಯಾದಲ್ಲಿ ಟಿ-20 ಹಾಗೂ ಟೆಸ್ಟ್ ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳಿದ್ದು ಏಕದಿನ ಮಾದರಿ ಕ್ರಿಕೆಟ್​ನಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಈ ಇಬ್ಬರು ಸ್ಟಾರ್ಸ್ ಕೊನೆಯದಾಗಿ ಐಪಿಎಲ್​ನಲ್ಲಿ ಕಾಣಿಸಿಕೊಂಡಿದ್ರು. ಸದ್ಯ ಫ್ಯಾಮಿಲಿ ಜೊತೆ ರೆಸ್ಟ್ ಮೂಡ್​ನಲ್ಲಿದ್ದು, ಇದೇ ವರ್ಷ ಮತ್ತೆ ಭಾರತದ ಪರ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಆಗಸ್ಟ್​ನಲ್ಲಿ ಬಾಂಗ್ಲಾ ವಿರುದ್ಧ ಏಕದಿನ ಪಂದ್ಯಗಳನ್ನಾಡಲಿದ್ದು ಆ ನಂತ್ರ ಆಸ್ಟ್ರೇಲಿಯಾಗೆ ಹಾರಲಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಕಾಂಗರೂನಾಡಿನ ಮ್ಯಾಚ್​ನ ಎಲ್ಲಾ ಟಿಕೆಟ್ಸ್ ಆಲ್ರೆಡಿ ಸೋಲ್ಡ್ ಔಟ್ ಆಗಿವೆ.

ಇದನ್ನೂ ಓದಿ : ಟೆಸ್ಟ್ ಕ್ರಿಕೆಟ್ ಗೆ ICC ನ್ಯೂ ರೂಲ್ಸ್ – DRS, ಕ್ಯಾಚ್, ಶಾರ್ಟ್ ರನ್ ಟ್ವಿಸ್ಟ್

ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಮತ್ತು ಟಿ-20ಈ ಸರಣಿಗೆ ಭಾರತೀಯ ಅಭಿಮಾನಿಗಳು ಕಾಯ್ತಿದ್ದಾರೆ. ಈ ವೇಳೆ ಉಭಯ ತಂಡಗಳ ನಡುವೆ 3 ಏಕದಿನ ಮತ್ತು 5 ಟಿ20 ಪಂದ್ಯಗಳು ನಡೆಯಲಿವೆ. ಇದಕ್ಕಾಗಿ ಭಾರತ ತಂಡ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳಲಿದೆ. ಈ ಎಲ್ಲಾ ಪಂದ್ಯಗಳು ಆಸ್ಟ್ರೇಲಿಯಾದ ಎಂಟು ಸ್ಥಳಗಳಲ್ಲಿ ನಡೆಯಲಿವೆ.

ರೋ-ಕೊ ಕ್ರೇಜ್!

ಪಂದ್ಯ                      ದಿನಾಂಕ                    ಮೈದಾನ

ಮೊದಲ ಏಕದಿನ          ಅ. 19                  ಪರ್ತ್ ಕ್ರೀಡಾಂಗಣ

ಎರಡನೇ ಏಕದಿನ         ಅ.23                  ಅಡಿಲೇಡ್ ಓವಲ್

ಮೂರನೇ ಏಕದಿನ         ಅ.25                ಸಿಡ್ನಿ ಕ್ರಿಕೆಟ್ ಮೈದಾನ

ಸೋ ಈ ಮೂರು ಪಂದ್ಯಗಳ ಪೈಕಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಏಕದಿನ ಪಂದ್ಯ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್‌ಗಳು ಪಂದ್ಯಕ್ಕೆ ನಾಲ್ಕು ತಿಂಗಳ ಮೊದಲೇ ಮಾರಾಟವಾಗಿದ್ದು, ಇದು ಈ ಪಂದ್ಯಗಳಿಗೆ ಇರುವ ಡಿಮ್ಯಾಂಡ್ ತೋರಿಸ್ತಿದೆ.

ರೋ-ಕೊ ಪಂದ್ಯಕ್ಕೆ ಡಿಮ್ಯಾಂಡ್!

ಎಂಸಿಜಿಯಲ್ಲಿ ನಡೆಯಲಿರುವ ಪಂದ್ಯ ಹಾಗೂ ಗಬ್ಬಾದಲ್ಲಿನ ಪಂದ್ಯ

ಎರಡು ವಾರಗಳಲ್ಲೇ 90,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟ

ಶೇಕಡಾ 16 ಕ್ಕಿಂತ ಹೆಚ್ಚು ಟಿಕೆಟ್‌ ಗಳನ್ನು ಭಾರತೀಯ ಅಭಿಮಾನಿ ಕ್ಲಬ್‌

ಫ್ಯಾನ್ಸ್ ಇಂಡಿಯಾ ಕೂಡ 1,400 ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಖರೀದಿ

2027 ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಈ ಸರಣಿಯು ತುಂಬಾನೇ ಮುಖ್ಯ

ಮ್ಯಾಚ್ ಇನ್ನೂ ನಾಲ್ಕು ತಿಂಗಳುಗಳು ಇರುವಾಗ್ಲೇ ಟಿಕೆಟ್ ಸೋಲ್ಡ್ ಔಟ್​ಗೆ ಕಾರಣವೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಈ ಇಬ್ಬರು ಆಟಗಾರರಿಗೆ ಇರುವ ಅಭಿಮಾನಿಗಳ ಬಳಗವನ್ನು ಕಂಡು ಸ್ವತಃ ಕ್ರಿಕೆಟ್‌ ಆಸ್ಟ್ರೇಲಿಯಾಗೇ ದಂಗಾಗಿದೆ. ಏಕದಿನ ಸರಣಿಯ ಶೇಕಡಾ 90 ರಷ್ಟು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ತಿಳಿಸಿದೆ. ಶೇಕಡಾ 16 ರಷ್ಟು ಟಿಕೆಟ್‌ಗಳನ್ನು ಭಾರತೀಯ ಅಭಿಮಾನಿಗಳ ಕ್ಲಬ್ ಖರೀದಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದು, ಒಬ್ಬನೇ ಅಭಿಮಾನಿ ಭಾರೀ ಸಂಖ್ಯೆಯಲ್ಲಿ ಟಿಕೆಟ್ ಖರೀದಿ ಮಾಡಿದನ್ನು ಸಹ ಖಚಿತ ಪಡಿಸಿದೆ. ಅಷ್ಟಕ್ಕೂ ಈ ಮಟ್ಟಿಗೆ ಕ್ರೇಜ್ ಹೆಚ್ಚಾಗೋಕೆ ಕಾರಣವೂ ಇದೆ. ಅದೇನಂದ್ರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ರೋಹಿತ್ ಮತ್ತು ಕೊಹ್ಲಿಗೆ ಈ ಸರಣಿಯಲ್ಲಿ ವಿಶೇಷ ಗೌರವ ನೀಡೋದಾಗಿ ಘೋಷಣೆ ಮಾಡಿದೆ.

ಐತಿಹಾಸಿಕ ಬೀಳ್ಕೊಡುಗೆ!

ಕ್ರಿಕೆಟ್ ಲೋಕ ಕಂಡ ಇಬ್ಬರು ದಂತೆಕತೆಗಳು ರೋಹಿತ್ & ಕೊಹ್ಲಿ

ದಿಗ್ಗಜರಿಗೆ ಆಸ್ಟ್ರೇಲಿಯಾ ಕ್ರಿಕೆಟ್​​ ವಿಶೇಷ ಗೌರವ ನೀಡೋದಾಗಿ ಘೋಷಣೆ

ಪ್ರಸ್ತುತ ಏಕದಿನ ಕ್ರಿಕೆಟ್​ನಲ್ಲಿ ಮಾತ್ರ ಟೀಂ ಇಂಡಿಯಾದ ಭಾಗವಾಗಿದ್ದಾರೆ

ಅಕ್ಟೋಬರ್​ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ

ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವಿದಾಯದ ಸರಣಿಯಾಗಿ ಏರ್ಪಡಿಸಲು ಸಿದ್ಧತೆ

ಆಸ್ಟ್ರೇಲಿಯಾ ಪ್ರವಾಸವನ್ನು ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ವಿದಾಯ

ಐತಿಹಾಸಿಕ ಗಳಿಗೆಗ ಸಾಕ್ಷಿಯಾಗೋಕೆ ಫ್ಯಾನ್ಸ್ ಕೂಡ ಕ್ಯೂರಿಯಸ್ ಆಗಿರುವ ಫ್ಯಾನ್ಸ್
ಟೀಂ ಇಂಡಿಯಾಗೆ ದಶಕದವರೆಗೆ ಸೇವೆ ಸಲ್ಲಿಸಿರುವ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿದ್ದಾರೆ. ಇಬ್ಬರು ಸ್ಟಾರ್ ಆಟಗಾರರು 2027 ರ ಏಕದಿನ ವಿಶ್ವಕಪ್ ವರೆಗೆ ಆಡಲು ಬಯಸಿದ್ದಾರೆ. ಮುಂದಿನ ವಿಶ್ವಕಪ್ ಗೆದ್ದ ನಂತರವೇ ಇಬ್ಬರೂ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲು ಪ್ಲ್ಯಾನ್ ಮಾಡಿದ್ದಾರೆ.  ಆದ್ರೆ ಆಡ್ತಾರಾ ಅಂದ್ರೆ ಅದಕ್ಕೆ ಸಾಕಷ್ಟು ಸವಾಲುಗಳೂ ಇವೆ. ಯಾಕಂದ್ರೆ 2027ರ ಏಕದಿನ ವಿಶ್ವಕಪ್ ಟೂರ್ನಿಯು ದಕ್ಷಿಣ ಆಫ್ರಿಕಾ, ಜಿಂಬಾಂಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಪ್ರತಿಷ್ಠಿತ ಐಸಿಸಿ ಟೂರ್ನಿ ನಡೆಯುವ ಹೊತ್ತಿಗೆ ವಿರಾಟ್ ಕೊಹ್ಲಿಗೆ 38 ವರ್ಷ ಮತ್ತು ರೋಹಿತ್ ಶರ್ಮಾಗೆ 40 ವರ್ಷ ವಯಸ್ಸಾಗಿರುತ್ತದೆ. ಅಲ್ಲಿಯವರೆಗೆ ಭಾರತ ಒಂಬತ್ತು ದ್ವಿಪಕ್ಷೀಯ ಸರಣಿಗಳಲ್ಲಿ 27 ಏಕದಿನ ಪಂದ್ಯಗಳನ್ನು ಆಡಬೇಕಾಗಿದೆ. ಅಂದರೆ ಕೊಹ್ಲಿ ಮತ್ತು ರೋಹಿತ್ ವರ್ಷಕ್ಕೆ 15 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ ಇದೆ. 2027ರ ಏಕದಿನ ವಿಶ್ವಕಪ್​ಗೂ ಒಂದು ವರ್ಷ ಮುಂಚಿತವಾಗಿ  ಭಾರತ ತಂಡದ ರೂಪುರೇಷೆಗಳು ಸಿದ್ಧವಾಗಲಿದೆ. ಅದಕ್ಕೂ ಮುನ್ನ ಈ ವರ್ಷ ಟೀಮ್ ಇಂಡಿಯಾ, ಬಾಂಗ್ಲಾದೇಶ್, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ತಲಾ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.

Shantha Kumari