ಪ್ರಭಾಸ್ ಬಿಟ್ರೆ ಬೇರೆನೂ ಇಲ್ವಾ? ಭಕ್ತಿಗಿಂತ ಕಣ್ಣಪ್ಪನ ಫೈಟಿಂಗ್ ಜಾಸ್ತಿನಾ?
ಹೇಗಿದೆ ಕಣ್ಣಪ್ಪ? ಪ್ರೇಕ್ಷಕರು ಹೇಳಿದ್ದೇನು?

ಪ್ರಭಾಸ್ ಬಿಟ್ರೆ ಬೇರೆನೂ ಇಲ್ವಾ?   ಭಕ್ತಿಗಿಂತ ಕಣ್ಣಪ್ಪನ ಫೈಟಿಂಗ್ ಜಾಸ್ತಿನಾ?ಹೇಗಿದೆ ಕಣ್ಣಪ್ಪ? ಪ್ರೇಕ್ಷಕರು ಹೇಳಿದ್ದೇನು?

ಮಂಚು ವಿಷ್ಣು ನಟನೆಯ ‘ಕಣ್ಣಪ್ಪ’ ಸಿನಿಮಾ ತೆರೆಗೆ ಬಂದಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿದ್ದು 5 ಭಾಷೆಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಣ್ಣಪ್ಪನಾಗಿ ಮಂಚುವಿಷ್ಣು ನಟಿಸಿದ್ದಾರೆ. ಇವರ ಜೊತೆ ಪ್ರಭಾಸ್​, ಅಕ್ಷಯ್ ಕುಮಾರ್, ಮೋಹನ್ ಲಾಲ್, ಮೋಹನ್ ಬಾಬು ಕಾಜೋಲ್ ಈ ಸಿನಿಮಾದಲ್ಲಿದ್ದಾರೆ. ಡಾಕ್ಟರ್ ರಾಜ್​ಕುಮಾರ್​ರ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ಅಣ್ಣಾವ್ರು ಶಿವಭಕ್ತ ಕಣ್ಣಪ್ಪನಾಗಿದ್ರು. ಶಿವನಿಗಾಗಿ ತನ್ನೆರಡೂ ಕಣ್ಣುಗಳನ್ನ ಕಿತ್ತುಕೊಟ್ಟಿದ್ರು. ಆದ್ರೆ ಈಗ ತೆರೆ ಮೇಲೆ ಬಂದಿರೋ ಕಣ್ಣಪ್ಪ ಶಿವಭಕ್ತ ಕಣ್ಣಪ್ಪ ಮಾತ್ರ ಅಲ್ಲ ಫೈಟರ್​ ಕಣ್ಣಪ್ಪ.. ಈ ಸಿನಿಮಾದಲ್ಲಿ ಕೇವಲ ಭಕ್ತಿ ಇಲ್ಲ, ಆ್ಯಕ್ಷನ್ ಧಮಾಕ ಇದೆ. ಪ್ಯಾನ್ ಇಂಡಿಯಾ ಸ್ಟೈಲ್​ಗೆ ತಕ್ಕಂತೆ ಕಣ್ಣಪ್ಪ ಆಕ್ಷನ್ ಹೀರೋ, ಮಾಸ್ ಹೀರೋ ಕಣ್ಣಪ್ಪನ್ನಾಗಿಸಿದ್ದಾರೆ.

ಕಣ್ಣಪ್ಪ ಸಿನಿಮಾದಲ್ಲಿ ಮಂಚು ವಿಷ್ಣು ಭಯವಿಲ್ಲದ ಶಿವನ ಪರಮ ಭಕ್ತನಾಗಿ ನಟಿಸಿದ್ದಾರೆ. ಅಕ್ಷಯ್ ಕುಮಾರ್ ಶಿವನ ರೋಲ್ ಮಾಡಿದ್ರೆ, ಕಾಜಲ್ ಅಗರ್ವಾಲ್ ಪಾರ್ವತಿ ಪಾತ್ರ ಮಾಡಿದ್ದಾರೆ. ಮೋಹನ್ ಲಾಲ್ ಕಿರಾತಕನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.  ಪ್ರಭಾಸ್ ರುದ್ರ ರೋಲ್​ ನೋಡೋಕೆ ಅವರ ಫ್ಯಾನ್ಸ್ ಕೂಡ ಕಾತುರದಿಂದ ಕಾದಿದ್ರು. ಈ ಸಿನಿಮಾದಲ್ಲಿ ಪ್ರೀತಿ ಮುಕುಂದನ್ ನಾಯಕಿಯಾಗಿ ನಟಿಸಿದ್ದಾರೆ.

ಬೇಡರ ಕಣ್ಣಪ್ಪ  ಕಥೆ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಬೇಡನಾಗಿದ್ದ ದಿಣ್ಣ ಬಳಿಕ ಶಿವನ ಪರಮಭಕ್ತ ಕಣ್ಣಪ್ಪನಾಗುವ ಕಥೆ ಚಿತ್ರದಲ್ಲಿದೆ. ಫಸ್ಟ್ ಆಫ್ ಆವರೇಜ್ ಆಗಿದ್ರೆ, ಸೆಕೆಂಡ್ ಆಫ್  ಬ್ಲಾಕ್‌ಬಸ್ಟರ್ ಆಗಿದೆ.. ಕೊನೆಯ 20 ನಿಮಿಷಗಳಲ್ಲಿ ವಿಷ್ಣು ಅಭಿನಯ ಸೂಪರ್ ಆಗಿದೆ. ಬಿಜಿಎಂ ಕೂಡ ಸೂಪರ್ ಆಗಿದೆ. ಆದ್ರೆ ಸಿನಿಮಾ ಅಲ್ಲಲ್ಲಿ ಬೋರ್ ಹೊಡೆಯುವ ಸನ್ನಿವೇಶಗಳಿವೆ. ಪ್ರಭಾಸ್ ರುದ್ರನಾಗಿ ಕಾಣಿಸಿಕೊಂಡಿದ್ದು, ಪ್ರಭಾಸ್ ಫ್ಯಾನ್ಸ್ ಅವರ ಪಾತ್ರವನ್ನ ಮೆಚ್ಚಿಕೊಂಡಿದ್ದಾರೆ. ಕಣ್ಣಪ್ಪ ಸಿನಿಮಾ ಮಾಡಿ ದಿಣ್ಣನಾಗಿ ನಟಿಸಬೇಕೆಂದು ಪ್ರಭಾಸ್ ಆಸೆ ಪಟ್ಟಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಮಂಚು ವಿಷ್ಣು ಚಿತ್ರದಲ್ಲಿ ಯಾವುದೇ ಸಂಭಾವನೆ ಪಡೆಯದೇ ಪ್ರಭಾಸ್ ಗೆಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್ ಲಾಲ್ ಕೂಡ ಸಂಭಾವನೆ ಪಡೆಯದೇ ಪಾತ್ರ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಸಿನಿಮಾ ಬಗ್ಗೆ ವಿಮರ್ಶೆ

ಇನ್ನೂ ಸಾಕಷ್ಟು ಜನ ಕಣ್ಣಪ್ಪ ಸಿನಿಮಾ ಬಗ್ಗೆ ಟ್ವಿಟ್ ಮಾಡಿ ವಿಮರ್ಶೆ ಮಾಡಿದ್ದಾರೆ. ರಾಮು ಎಂಬುವರು ಸಿನಿಮಾಕ್ಕೆ ಐದರಲ್ಲಿ 3 ಅಂಕಗಳನ್ನು ನೀಡಿದ್ದಾರೆ. ಮಂಚು ವಿಷ್ಣು ನಟನೆ ಸೆಕೆಂಡ್ ಆಫ್ ಚೆನ್ನಾಗಿದೆ. ಪ್ರಭಾಸ್ ಎಂಟ್ರಿ, ಸ್ಕ್ರೀನ್ ಪ್ರೆಸೆನ್ಸ್ ಅದ್ಭುತ. ಅಕ್ಷಯ್ ಕುಮಾರ್-ಕಾಜೊಲ್ ಎಂಟ್ರಿ ಚೆನ್ನಾಗಿದೆ. ಮೋಹನ್​ಲಾಲ್ ಮತ್ತು ಮೋಹನ್ ಬಾಬು ಸೀನ್​ಗಳು ಚೆನ್ನಾಗಿವೆ. ಸಿನಿಮಾದ ಆಕ್ಷನ್ ಚೆನ್ನಾಗಿಲ್ಲ ಹಾಗೂ ಸಿನಿಮಾದಲ್ಲಿ ಬರುವ ಲವ್ ಆಂಗಲ್ ಸಹ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.

ಶನ್ಮುಖ್ ಎಂಬುವರು ಟ್ವೀಟ್ ಮಾಡಿ, ಸಿನಿಮಾದ ಪೋಷಕ ಪಾತ್ರಗಳು ಚೆನ್ನಾಗಿಲ್ಲ, ನಟನೆಯೂ ಚೆನ್ನಾಗಿಲ್ಲ. ಕೆಲವು ಭಾಗಗಳಲ್ಲಿ ವಿಎಫ್​ಎಕ್ಸ್ ಅತ್ಯಂತ ಕೆಟ್ಟದಾಗಿದೆ. ಸಿನಿಮಾದ ಸಂಗೀತ ಚೆನ್ನಾಗಿದೆ. ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾನಲ್ಲಿ ಮಂಚು ವಿಷ್ಣು ನಟನೆ ಚೆನ್ನಾಗಿದೆ. ಮೋಹನ್ ಲಾಲ್ ಮತ್ತು ಮೋಹನ್ ಬಾಬು ಅವರಿಂದ ಸಿನಿಮಾಕ್ಕೆ ಏನೂ ಒಳ್ಳೆಯದಾಗಿಲ್ಲ. ಪ್ರಭಾಸ್ ಡೈಲಾಗ್ ಡೆಲಿವರಿ ಅಷ್ಟೇನೂ ಚೆನ್ನಾಗಿಲ್ಲ. ಇದೊಂದು ಸಾಧಾರಣ ಸಿನಿಮಾ ಅಷ್ಟೆ ಎಂದಿದ್ದಾರೆ.

 

Kishor KV