ಟೆಸ್ಟ್ ಕ್ರಿಕೆಟ್ ಗೆ ICC ನ್ಯೂ ರೂಲ್ಸ್ – DRS, ಕ್ಯಾಚ್, ಶಾರ್ಟ್ ರನ್ ಟ್ವಿಸ್ಟ್

ಟೆಸ್ಟ್ ಕ್ರಿಕೆಟ್ ಗೆ ICC ನ್ಯೂ ರೂಲ್ಸ್ – DRS, ಕ್ಯಾಚ್, ಶಾರ್ಟ್ ರನ್ ಟ್ವಿಸ್ಟ್

ಕ್ರಿಕೆಟ್​​ನ ಮತ್ತಷ್ಟು ರಣರೋಚಕವಾಗಿಸಲು ಐಸಿಸಿ ಒಂದಷ್ಟು ಹೊಸ ರೂಲ್ಸ್​ಗಳನ್ನ ತಂದಿದೆ. ಇದರಲ್ಲಿ ಕೆಲವೊಂದು ನಿಯಮಗಳನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025-2ರ ಟೂರ್ನಿಯ ಆರಂಭದಲ್ಲೇ ಜಾರಿಗೆ ತರಲಾಗಿದ್ದು, ವೈಟ್ ಬಾಲ್ ಕ್ರಿಕೆಟ್ ನ ಹೊಸ ನಿಯಮಗಳು ಜುಲೈ 2 ರಿಂದ ಜಾರಿಗೆ ಬರಲಿವೆ.

ಇದನ್ನೂ ಓದಿ: RCB ಫ್ಯಾನ್ಸ್ ಬಲಿ.. BCCI ಕಟ್ಟೆಚ್ಚರ! – ಕಪ್ ಗೆದ್ರೂ ಇನ್ಮುಂದಿಲ್ಲ ಸೆಲೆಬ್ರೇಷನ್

ನಂಬರ್ 1 – ಟೆಸ್ಟ್ ಕ್ರಿಕೆಟ್‌ ನಲ್ಲಿ ಸ್ಟಾಪ್ ಕ್ಲಾಕ್ ನಿಯಮ

ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಜಾರಿಗೆ ತಂದು ಆಲ್ರೆಡಿ ಒಂದು ವರ್ಷ ಆಗಿತ್ತು. ಇದೀಗ ಈ ನಿಯಮವನ್ನು ಟೆಸ್ಟ್‌ನಲ್ಲೂ ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ. ಟೆಸ್ಟ್‌ ಪಂದ್ಯಗಳಲ್ಲಿ ನಿಧಾನಗತಿಯ ಓವರ್ ದೊಡ್ಡ ಸಮಸ್ಯೆಯಾಗಿತ್ತು. ಈಗ ಹೊಸ ಐಸಿಸಿ ನಿಯಮದ ಪ್ರಕಾರ, ಫೀಲ್ಡಿಂಗ್ ತಂಡವು ಹಿಂದಿನ ಓವರ್ ಮುಗಿದ ಒಂದು ನಿಮಿಷದೊಳಗೆ ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಆಗ್ಲಿಲ್ಲ ಅಂದ್ರೆ ಅಂಪೈರ್ ಎರಡು ಸಲ ಎಚ್ಚರಿಕೆ ಕೊಡ್ತಾರೆ. ಆ ನಂತ್ರವೂ ನಿಧಾನವಾಗಿ ಬೌಲಿಂಗ್ ಮಾಡಿದ್ರೆ ಪ್ರತಿ ಬಾರಿಯೂ ಐದು ರನ್‌ಗಳನ್ನು ದಂಡವಾಗಿ ವಿಧಿಸಲಾಗುತ್ತದೆ. 80 ಓವರ್‌ಗಳ ನಂತರ ಎಚ್ಚರಿಕೆಗಳನ್ನು ಮತ್ತೆ ಹೊಸದಾಗಿ ಆರಂಭಿಸಲಾಗುತ್ತದೆ. ಈ ನಿಯಮವು 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಾತ್ರ ಅನ್ವಯಿಸುತ್ತದೆ.

ನಂಬರ್ 2 – ಶಾರ್ಟ್ ರನ್ ಮಾಡಿದ ಬ್ಯಾಟರ್ ಗೆ 5 ರನ್ ದಂಡ!

ಶಾರ್ಟ್ ರನ್ ವಿಚಾರವಾಗಿಯೂ ಐಸಿಸಿ ದೊಡ್ಡ ನಿರ್ಧಾರಕ್ಕೆ ಮುಂದಾಗಿದೆ. ಈ ಹಿಂದೆ ಶಾರ್ಟ್ ರನ್ ಮಾಡಿದರೆ ಐದು ರನ್​ಗಳ ದಂಡ ವಿಧಿಸಲಾಗುತ್ತಿತ್ತು. ಬಟ್ ಹೊಸ ನಿಯಮಗಳ ಪ್ರಕಾರ ಬ್ಯಾಟ್ಸ್ ಮನ್ ಉದ್ದೇಶಪೂರ್ವಕವಾಗಿ ಹೆಚ್ಚುವರಿ ರನ್ ಕದಿಯಲು ರನ್ ಪೂರ್ಣಗೊಳಿಸದಿದ್ದರೆ ಅಂದರೆ ಸ್ಟ್ರೈಕ್​ನಲ್ಲಿದ್ದ ಬ್ಯಾಟ್ಸ್​ಮನ್ ಎರಡನೇ ರನ್​ಗೆ ಓಡುವ ಯತ್ನದಲ್ಲಿ ನಾನ್ ಸ್ಟ್ರೈಕ್ ತುದಿಯನ್ನು ಮುಟ್ಟದೆ ವಾಪಸ್ ಆಗಿದ್ದರೆ ಅಂಪೈರ್ ಫೀಲ್ಡಿಂಗ್ ತಂಡವನ್ನು ಯಾವ ಬ್ಯಾಟ್ಸ್​ಮನ್ ಸ್ಟ್ರೈಕ್​ನಲ್ಲಿ ಇರಬೇಕೆಂದು ಕೇಳುತ್ತಾರೆ. ಫೀಲ್ಡಿಂಗ್ ತಂಡ ಯಾವ ಆಟಗಾರನ ಹೆಸರನ್ನು ಹೇಳುತ್ತದೋ ಆತ ಸ್ಟ್ರೈಕ್ ತೆಗೆದುಕೊಳ್ಳಬೇಕಾಗುತ್ತದೆ. ಅಲ್ದೇ ಶಾರ್ಟ್ ರನ್ ಮಾಡಿದ ಬ್ಯಾಟ್ಸ್​ಮನ್ ತಂಡಕ್ಕೆ ಐದು ರನ್​ಗಳ ದಂಡ ವಿಧಿಸಲಾಗುತ್ತದೆ.

ನಂಬರ್ 3 – ಚೆಂಡಿನ ಮೇಲೆ ಎಂಜಲು ಹಚ್ಚಿದ್ರೆ ಹೊಸ ಬಾಲ್ ಕೊಡಲ್ಲ! 

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೆಂಡಿನ ಮೇಲೆ ಎಂಜಲು ಹಚ್ಚುವ ನಿಷೇಧ ಕಂಟಿನ್ಯೂ ಆಗುತ್ತೆ. ಈ ಹಿಂದೆ ಬೌಲರ್‌ಗಳಿಗೆ ಹೊಸ ಬಾಲ್ ಅಗತ್ಯ ಇದ್ದಾಗ ಅವ್ರು ಚೆಂಡಿನ ಮೇಲೆ ಎಂಜಲು ಹಚ್ಚುತ್ತಿದ್ರು. ಇದ್ರಿಂದ ಚೆಂಡು ಬೇಗ ಹಾಳಾಗ್ತಿತ್ತು. ಆ ನಂತರ ಬೌಲರ್​ಗಳು ಬೌಲಿಂಗ್ ಸಮಯದಲ್ಲಿ ತಮಗೆ ಅನುಕೂಲವಾಗುವಂತೆ ಅಂಪೈರ್‌ಗಳಿಂದ ಹೊಸ ಚೆಂಡನ್ನು ಕೇಳುತ್ತಿದ್ದರು. ಬಟ್ ಇನ್ಮುಂದೆ ಚೆಂಡಿನ ಮೇಲೆ ಲಾಲಾರಸ ಹಚ್ಚಿದ್ರೆ ಅಂಪೈರ್‌ಗಳು ಅದನ್ನು ಬದಲಾಯಿಸುವುದು ಕಡ್ಡಾಯವಲ್ಲ. ಚೆಂಡು ಸಂಪೂರ್ಣವಾಗಿ ಒದ್ದೆಯಾಗಿ ಕಂಡುಬಂದಾಗ ಅಥವಾ ಹಾನಿಗೊಳಗಾದಾಗ ಮಾತ್ರ ಅದನ್ನು ಬದಲಾಯಿಸಲಾಗುತ್ತದೆ. ಚೆಂಡನ್ನು ಬದಲಾಯಿಸುವ ನಿರ್ಧಾರವನ್ನು ಸಂಪೂರ್ಣವಾಗಿ ಅಂಪೈರ್‌ಗಳಿಗೆ ಬಿಡಲಾಗಿದೆ.

ನಂಬರ್ 4 – ಡಿಆರ್‌ಎಸ್ ಪ್ರೋಟೋಕಾಲ್ ನಲ್ಲೂ ಬದಲಾವಣೆ!

ಡಿಆರ್‌ಎಸ್ ಪ್ರೋಟೋಕಾಲ್‌ನಲ್ಲಿಯೂ ಐಸಿಸಿ ದೊಡ್ಡ ಬದಲಾವಣೆ ಮಾಡಿದೆ. ಫಾರ್ ಎಕ್ಸಾಂಪಲ್ ಒಬ್ಬ ಬ್ಯಾಟರ್ ಕ್ಯಾಚ್ ಔಟ್ ನೀಡಿದರೆ ಔಟ್ ಆಗಿಲ್ಲ ಅಂತಾ ರಿವ್ಯೂ ಕೇಳ್ತಾರೆ ಅಂತಾ ಇಟ್ಕೊಳಿ. ಕ್ಯಾಚ್ ಔಟ್ ಎಂದು ಘೋಷಿಸಿದ ನಂತರ, ಟಿವಿ ಅಂಪೈರ್ ಈಗ ಮತ್ತೊಂದು ಔಟ್ ಮೋಡ್ ಪರಿಶೀಲಿಸುತ್ತಾರೆ. ಉದಾಹರಣೆಗೆ ಎಲ್‌ಬಿಡಬ್ಲ್ಯೂ. ಈ ಹಿಂದೆ, ಕ್ಯಾಚ್ ಔಟ್ ಆಗದಿದ್ದರೆ, ಎಲ್‌ಬಿಡಬ್ಲ್ಯೂಗೆ ಡೀಫಾಲ್ಟ್ ನಿರ್ಧಾರವು ನಾಟ್ ಔಟ್ ಆಗಿತ್ತು. ಆದರೆ ಹೊಸ ನಿಯಮದಲ್ಲಿ, ಎಲ್‌ಬಿಡಬ್ಲ್ಯೂಗಾಗಿ ಬಾಲ್-ಟ್ರ್ಯಾಕಿಂಗ್ ಗ್ರಾಫಿಕ್ ಅನ್ನು ತೋರಿಸಲಾಗುತ್ತದೆ ಮತ್ತು ಬ್ಯಾಟ್ಸ್‌ಮನ್ ಇಲ್ಲಿ ಔಟ್ ಎಂದು ಕಂಡುಬಂದರೆ, ಬ್ಯಾಟರ್ ಪೆವಿಲಿಯನ್‌ ಸೇರಬೇಕಾಗುತ್ತೆ.

ನಂಬರ್ 5 –  ಕ್ಯಾಚ್ ಗಳ ವಿಚಾರದಲ್ಲೂ ದೊಡ್ಡ ಬದಲಾವಣೆ!

ಕ್ಯಾಚ್‌ಗಳಿಗೆ ಸಂಬಂಧಿಸಿದಂತೆಯೂ ಐಸಿಸಿ ಒಂದು ದೊಡ್ಡ ನಿಯಮವನ್ನು ಬದಲಾಯಿಸಿದೆ. ಪ್ರಸ್ತುತ ಫೀಲ್ಡ್ ಅಂಪೈರ್‌ಗಳಿಗೆ ಕ್ಯಾಚ್ ಸರಿಯಾಗಿದ್ಯಾ ಇಲ್ವಾ ಅನ್ನೋ ಕನ್ಫ್ಯೂಸ್ ಇದ್ರೆ ಟಿವಿ ಅಂಪೈರ್ ಮೊರೆ ಹೋಗುತ್ತಿದ್ದರು. ಇದನ್ನು ಮೂರನೇ ಅಂಪೈರ್ ಪರಿಶೀಲಿಸಿದ ಸಮಯದಲ್ಲಿ ಅದು ನೋ ಬಾಲ್ ಆಗಿದ್ದರೆ, ಬ್ಯಾಟಿಂಗ್ ತಂಡಕ್ಕೆ ಒಂದು ರನ್ ಸಿಗುತ್ತಿತ್ತು ಮತ್ತು ಕ್ಯಾಚ್ ಸರಿಯಾಗಿ ತೆಗೆದುಕೊಳ್ಳಲಾಗಿದೆಯೇ ಅಥವಾ ಇಲ್ಲವೇ ಅನ್ನೋ ಬಗ್ಗೆ ಪರಿಶೀಳನೆ ಮಾಡ್ತಿರಲಿಲ್ಲ. ಬಟ್ ಈಗ ಹೊಸ ನಿಯಮದ ಪ್ರಕಾರ, ಈಗ ಮೂರನೇ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುತ್ತಾರೆ. ಕ್ಯಾಚ್ ಸರಿಯಾಗಿದ್ದರೆ, ಬ್ಯಾಟಿಂಗ್ ತಂಡವು ನೋ-ಬಾಲ್‌ಗೆ ಕೇವಲ ಒಂದು ಹೆಚ್ಚುವರಿ ರನ್ ಮಾತ್ರ ಪಡೆಯುತ್ತದೆ. ಆದರೆ ಕ್ಯಾಚ್ ಪೂರ್ಣಗೊಂಡಿಲ್ಲದಿದ್ದರೆ, ಈ ಸಮಯದಲ್ಲಿ ಬ್ಯಾಟ್ಸ್‌ಮನ್‌ಗಳು ರನ್​ಗಾಗಿ ಓಡಿದ್ದರೆ, ಆಗ ನೋ ಬಾಲ್​ ಜೊತೆಗೆ ಬ್ಯಾಟ್ಸ್​ಮನ್​ಗಳು ಎಷ್ಟು ರನ್​ಗಳನ್ನು ಓಡಿರುತ್ತಾರೋ ಅಷ್ಟು ರನ್​ಗಳನ್ನು ಬ್ಯಾಟಿಂಗ್ ತಂಡಕ್ಕೆ ನೀಡಲಾಗುತ್ತದೆ.

ನಂಬರ್ 6 – ಬದಲಿ ಆಟಗಾರನ ನಿಯಮವೂ ಬದಲು

ಇನ್ಮುಂದೆ ಟೆಸ್ಟ್ ಪಂದ್ಯಗಳಲ್ಲಿ ಆಟಗಾರನೊಬ್ಬ ಗಂಭೀರವಾಗಿ ಗಾಯವಾದರೆ, ಪೂರ್ಣಕಾಲಿಕ ಬದಲಿ ಆಟಗಾರನನ್ನು ಆಡಿಸಬಹುದು. ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಏಕದಿನ ಮಾದರಿಯಲ್ಲಿ ಜಾರಿಯಲ್ಲಿರುವ ಕನ್ಕಷನ್ ಸಬ್ ಸ್ಟಿಟ್ಯೂಟ್ ನಂತೆಯೇ ಇರುತ್ತದೆ. ಆದರೆ, ತಂಡಗಳು ಈ ನಿಯಮವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಅಂಪೈರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಾಯವನ್ನು ಪರಿಶೀಲನೆ ಮಾಡುತ್ತಾರೆ. ಪೂರ್ಣ ಸಮಯದ ಬದಲಿ ಆಟಗಾರನನ್ನು ಅನುಮೋದಿಸಲು ಗಾಯವು ಮ್ಯಾಚ್ ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೋಚರಿಸಬೇಕು. ಪರಿಶೀಲನೆ ಬಳಿಕವಷ್ಟೇ ಬದಲಾವಣೆಗೆ ಅವಕಾಶ ಇರುತ್ತೆ.

Sulekha