ಲಾಂಗ್ ಡ್ರೈವ್ ಲವ್, ಕಾಮಕ್ಕಾಗಿ ಪೀಡಿಸಿದ ಗೃಹಿಣಿ – ನಾಲ್ಕು ದಿನದ ಪ್ರೀತಿ ಕೊಲೆಯಲ್ಲಿ ಅಂತ್ಯ

ಆ ಮಹಾತಾಯಿಗೆ ಇಬ್ಬರು ಮಕ್ಕಳು. ಗಂಡ ಆಟೋ ಡ್ರೈವರ್.. ಗಂಡನಿಗೂ ಹೆಂಡತಿ ಅಂದರೆ ಜೀವ. ಆದರೆ, ಹೆಂಡತಿಗೆ ಪರಪುರುಷರ ಮೇಲೆ ವಿಪರೀತ ಮೋಹ. ಇದೇ ಮೋಹ ಆಕೆಯ ದಾರುಣ ಅಂತ್ಯಕ್ಕೆ ಕಾರಣವಾಗಿದೆ. ತಲ್ಲಣ ಸೃಷ್ಟಿಸಿದ ಮಂಡ್ಯ ಗೃಹಿಣಿಯ ಕೊಲೆ ರಹಸ್ಯ ಇದೀಗ ಬಯಲಾಗಿದೆ.
ಇದನ್ನೂ ಓದಿ: ವಿಷದ ಮಾಂಸ ತಿಂದು ಹುಲಿಗಳು ಸಾವು – 5 ಜನ ವಶಕ್ಕೆ, ಪೊಲೀಸರಿಂದ ಗ್ರಾಮಸ್ಥರ ವಿಚಾರಣೆ
ಹಾಸನದ ಹೊಸಕೊಪ್ಪಲಿನ ನಿವಾಸಿ ಪ್ರೀತಿ ಎಂಬ ಗೃಹಿಣಿಗೆ ಮುದ್ದಾದ ಎರಡು ಮಕ್ಕಳು. ಈಕೆಯ ಗಂಡ ಆಟೋ ಡ್ರೈವರ್, ಈಕೆ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದಳು. ಪ್ರೀತಿಗೆ ಫೇಸ್ಬುಕ್ನಲ್ಲಿ ಚಾಟ್ ಮಾಡುವ ಅಭ್ಯಾಸ ಇತ್ತಂತೆ. ಇದೇ ರೀತಿ ಚಾಟ್ ಮಾಡುತ್ತಿದ್ದವಳಿಗೆ ಸಿಕ್ಕಿದ್ದ ಅರ್ಜೆಂಟ್ ಪ್ರೇಮಿ. ಕಳೆದ ಗುರುವಾರ ರಾತ್ರಿ ಮಂಡ್ಯ ಜಿಲ್ಲೆಯ ಕೆಆರ್ಪೇಟೆ ತಾಲೂಕಿನ ಕರೋಠಿ ಗ್ರಾಮ ಪುನೀತ್ ಎಂಬ ಯುವಕನಿಗೆ ಫೇಸ್ಬುಕ್ನಲ್ಲಿ ರಿಕ್ವೆಸ್ಟ್ ಕಳಿಸಿದ್ದಳು. ತನ್ನ ಅಕೌಂಟ್ಗೆ ರಿಕ್ವೆಸ್ಟ್ ಬಂದ್ದದ್ದೆ ತಡ ಪುನೀತ್ ಕೂಡಾ ಅಕ್ಸೆಪ್ಟ್ ಮಾಡಿದ್ದ. ಇದಾದ ನಂತರ ಪ್ರೀತಿ ಪುನೀತನಿಗೆ ಹಾಯ್ ಎಂದು ಮೆಸೇಜ್ ಮಾಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಪುನೀತ್ ರಿಪ್ಲೇ ಮಾಡಿದ್ದ. ಬಳಿಕ ಇಬ್ಬರು ಪರಸ್ಪರ ರಾತ್ರಿ ಇಡೀ ಮೆಸೇಜ್ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಪ್ರೀತಿ ಪುನೀತ್ ಜೊತೆ ಪೋನ್ ನಂಬರ್ ಎಕ್ಸ್ ಚೆಂಜ್ ಮಾಡಿದ್ದಾಳೆ. ಬಳಿಕ ಒಂದೇ ದಿನದಲ್ಲಿ ಮಾತುಕತೆ ನಡೆದಿದೆ. ನಂತರ ಮೀಟ್ ಮಾಡುವಂತೆ ಪುನೀತ್ ನನ್ನ ಒತ್ತಾಯಿಸಿದ್ದಾಳೆ. ಪುನೀತ್ ಕೂಡಾ ಭಾನುವಾರ ಬೆಳಗ್ಗೆ ತನ್ನ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಬಂದಿದ್ದಾನೆ. ಪ್ರೀತಿ ತನ್ನ ಗಂಡನ ಹತ್ತಿರ ತನ್ನ ಗೆಳತಿಯ ಮಗಳ ಶಾಸ್ತ್ರ ಇದೆ ಅಲ್ಲಿಗೆ ಹೋಗ್ತೀನಿ ಎಂದು ಸಿಂಗಾರ ಮಾಡಿಕೊಂಡು ಹೊರಟಿದ್ದಾಳೆ.
ಇತ್ತ ಪುನೀತ್ ಕೂಡಾ ಫೇಸ್ ಬುಕ್ ಗೆಳತಿಯನ್ನ ನೋಡಲು ಕಾಯುತ್ತಿದ್ದ. ಕೊನೆಗೆ ಇಬ್ಬರೂ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾರೆ. ಪುನೀತ್, ಕೆಆರ್ಎಸ್ ಕಡೆಗೆ ಕಾರನ್ನು ಡ್ರೈವ್ ಮಾಡಿದ್ದಾನೆ. ಬಳಿಕ ಅಲ್ಲಿ ಒಂದು ಲಾಡ್ಜ್ನಲ್ಲಿ ಬುಕ್ ಮಾಡಿಕೊಂಡು ತಮ್ಮ ಕಾಮದ ಬಯಕೆಯನ್ನು ತೀರಿಸಿಕೊಂಡಿದ್ದಾರೆ. ಆಕೆಗೆ ಮಾತ್ರ ತೃಪ್ತಿ ಆಗಿರಲಿಲ್ಲ. ಮತ್ತೊಮ್ಮೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಆದ್ರೆ ಪುನೀತ್ ಒಪ್ಪದೆ ಲಾಡ್ಜ್ ನಿಂದ ಹೊರಬಂದಿದ್ದಾರೆ.
ಕಾರಿನಲ್ಲಿಯೇ ಪ್ರೀತಿ, ಪದೇ ಪದೇ ಲೈಂಗಿಕ ಕ್ರಿಯೆಗೆ ಪೀಡಿಸಿದ್ದಾಳೆ. ಆದ್ರೆ, ಪುನೀತ್ ಒಪ್ಪಿರಲಿಲ್ಲ. ಆಗ ಸಿಟ್ಟಿನಲ್ಲಿ ಪ್ರೀತಿ ಪುನೀತ್ ಗೆ ಬಾಯಿಬಂದಂಗೆ ಕೊಂಕು ಮಾತಾಡಿದ್ದಾಳೆ. ಪುನೀತ್ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಕರೆದೋಗಿದ್ದಾನೆ. ಆ ವೇಳೆಯೂ ಸಹ ಪ್ರೀತಿ ಲೈಂಗಿಕ ಕ್ರಿಯೆ ಒತ್ತಾಯಿಸಿದ್ದಾಳೆ. ಪುನೀತ್ ಒಪ್ಪದ ಕಾರಣ ಹೀನಾಮಾನ ಬೈಯ್ದಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್ ಆಕೆಗೆ ಕಪಾಳ ಬಾರಿಸಿದ್ದಾನೆ. ಈ ವೇಳೆ ಆಕೆ ಪ್ರಜ್ಞೆ ತಪ್ಪಿದ್ದರಿಂದ ಗಾಬರಿಗೊಂಡು ಆಕೆಯನ್ನ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ. ತನ್ನ ಜಮೀನಿನಲ್ಲಿ ಶವ ಬಚ್ಚಿಟ್ಟಿದ್ದಾನೆ. ಇಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಕೊಲೆ ನಡೆದಿದೆ ಅಂತಾ ಹೇಳಲಾಗ್ತಿದೆ. ಆದರೆ, ಪ್ರೀತಿ ಸಂಬಂಧಿಕರು ದುಡ್ಡಿಗಾಗಿ ಕೊಲೆ ಮಾಡಿದ್ದಾನೆ ಅಂತಾ ಹೇಳುತ್ತಿದ್ದಾರೆ. ತನಿಖೆಯಲ್ಲಿ ಸತ್ಯಾಸತ್ಯತೆ ಬಯಲಾಗಬೇಕಿದೆ.

ನೋಡಿರಿ

