ನಟಿಗೆ ಕಿಸ್ ಕೊಟ್ಟು ಕೆಟ್ಟ ಗಿಲ್ಲಿ! – ತಮಾಷೆ ಹೆಸ್ರಲ್ಲಿ ಅಡ್ವಾಂಟೇಜ್?
ಗಿಲ್ಲಿ ನಟನ ಮೇಲೆ ಶಿಲ್ಪಾ ಗರಂ

ಗಿಲ್ಲಿನಟ.. ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆದ ಪ್ರತಿಭೆ ಈಗ ಕರುನಾಡಿನ ಜನರಿಗೆ ಚಿರ ಪರಿಚಿತ.. ಗಿಲ್ಲಿನಟ ಸ್ಟೇಜ್ನಲ್ಲಿ ಇದ್ದಾರೆ ಅಂದ್ರೆ ಅಲ್ಲಿ 100% ಕಾಮಿಡಿ ಪಕ್ಕಾ.. ಇದೀಗ ಈ ಹಳ್ಳಿ ಹೈದ ತನ್ನ ಟ್ಯಾಲೆಂಟ್ನಿಂದಲೇ ಕೆಲ ರಿಯಾಲಿಟಿ ಶೋನಲ್ಲಿ ಮಿಂಚಿದ್ದಾರೆ. ಇದೀಗ ಕಲರ್ಸ್ ಕನ್ನಡಲ್ಲಿ ಪ್ರಸಾರವಾಗ್ತಿರೋ ಕ್ವಾಟ್ಲೆ ಕಿಚನ್ ಗೂ ಎಂಟ್ರಿಕೊಟ್ಟಿದ್ದಾರೆ.. ಆದ್ರೀಗ ಗಿಲ್ಲಿನಟ ಶೋ ಆರಂಭದಲ್ಲೇ ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ.. ತಮಾಷೆ ಹೆಸ್ರಲ್ಲಿ ಅಡ್ವಾಂಟೇಜ್ ತೆಗೆದುಕೊಂಡ್ರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.. ನಟಿಗೆ ಪದೇ ಪದೆ ಕಿಸ್ ಕೊಟ್ಟು ಕಿರಿಕ್ ಮಾಡಿಕೊಂಡಿದ್ದಾರೆ.. ಇದೀಗ ಶಿಲ್ಪಾ ಕಾಮತ್ ನಟನ ವಿರುದ್ಧ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: 80 ಓವರ್.. ನ್ಯೂ ಬಾಲ್ ರೂಲ್ಸ್ ಏನು? – ಅಂಪೈರ್ ಜೊತೆ ಪದೇಪದೆ ಕಿರಿಕ್ ಸರಿನಾ?
ಕಲರ್ಸ್ ಕನ್ನಡದಲ್ಲಿ ಕ್ವಾಟ್ಲೆ ಕಿಚನ್ ಎಂಬ ಹೊಸ ಕಾಮಿಡಿ ಕುಕ್ಕಿಂಗ್ ಶೋ ಆರಂಭವಾಗಿದೆ. ಜೂನ್ 14ರಿಂದ ಈ ಶೋ ಆರಂಭವಾಗಿದ್ದು, ಸೀರಿಯಲ್ ನಟ, ನಟಿಯರು, ಕಾಮಿಡಿ ಸ್ಟಾರ್ಗಳು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋನಲ್ಲಿ ಕುಕ್ ಆಗಿ ನೂರು ಜನ್ಮಕೂ ಸೀರಿಯಲ್ ಖ್ಯಾತಿಯ ಶಿಲ್ಪಾ ಕಾಮತ್ ಸ್ಪರ್ಧಿಸುತ್ತಿದ್ದಾರೆ. ಹಾಗೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ ನಟ ಸಹ ಕ್ವಾಟ್ಲೆ ಕೊಡೋಕೆ ಈ ಶೋಗೆ ಬಂದಿದ್ದಾರೆ. ಶಿಲ್ಪಾ ಕಾಮತ್ಗೆ ಗಿಲ್ಲಿನಟ ಪಾರ್ಟ್ನರ್ ಆಗಿದ್ದಾರೆ. ಈ ವೇಳೆ ಅಡ್ವಾಂಟೇಜ್ ರೌಂಡ್ನಲ್ಲಿ ಅಡ್ವಾಂಟೇಜ್ ತಗೊಂಡು ಶಿಲ್ಪಾ ಕಾಮತ್ ಕೈಗೆ ಗಿಲ್ಲಿ ನಟ ಮೇಲಿಂದ ಮೇಲೆ ಮುತ್ತು ಕೊಟ್ಟಿದ್ದಾರೆ. ಇದರಿಂದ ಶಿಲ್ಪಾ ಕಾಮತ್ ಗರಂ ಆಗಿದ್ದು ಮಾತ್ರ ಸುಳ್ಳಲ್ಲ!
ಹೌದು, ಕ್ವಾಟ್ಲೆ ಕಿಚನ್ ಕಾರ್ಯಕ್ರಮದ ಎರಡನೇ ವಾರ ನಟಿ ಶಿಲ್ಪಾ ಕಾಮತ್ಗೆ ಗಿಲ್ಲಿ ನಟ ಕ್ವಾಟ್ಲೆ ಪಾರ್ಟ್ನರ್ ಆಗಿ ಆಯ್ಕೆ ಆದ್ರು. ವಿಶೇಷ ಅಂದ್ರೆ ಈ ವೇಳೆ ಗಿಲ್ಲಿ ನಟ.. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೋಗಿ ಅವತಾರ ತಾಳಿದ್ದರು. ಮೇನ್ ಕುಕ್ಕಿಂಗ್ ರೌಂಡ್ಗೆ ಅಡ್ವಾಂಟೇಜ್ ಪಡೆಯಲು ಕುಕ್ಗಳು ಅಡ್ವಾಂಟೇಜ್ ಟಾಸ್ಕ್ ಪೂರ್ಣಗೊಳಿಸಬೇಕಿತ್ತು. ಅಡ್ವಾಂಟೇಜ್ ಟಾಸ್ಕ್ ಪ್ರಕಾರ.. ಕ್ವಾಟ್ಲೆಗಳಿಗೆ ಕುಕ್ಗಳು ಪಾನಿ ಪೂರಿ ತಿನ್ನಿಸಬೇಕಿತ್ತು. 20 ನಿಮಿಷ ಅವಧಿಯಲ್ಲಿ ಯಾರು ಹೆಚ್ಚು ಪಾನಿ ಪೂರಿ ತಿನ್ನುತ್ತಾರೋ, ಅವರು ಗೆದ್ದಂತೆ. ಈ ರೌಂಡ್ನಲ್ಲಿ ಗಿಲ್ಲಿ ನಟನಿಗೆ ಕುಕ್ ಶಿಲ್ಪಾ ಕಾಮತ್ ಪಾನಿ ಪುರಿ ತಿನ್ನಿಸಲು ಆರಂಭಿಸಿದರು. ಈ ವೇಳೆ ಗಿಲ್ಲಿನಟ ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡಿದ್ದಾರೆ. ಪಾನಿಪುರಿ ತಿನ್ನಿಸುವಾಗ ಶಿಲ್ಪಾ ಕಾಮತ್ ಕೈಗೆ ಗಿಲ್ಲಿ ನಟ ಮುತ್ತು ಕೊಡಲು ಶುರುಮಾಡಿದ್ರು.. ಶಿಲ್ಪಾ ಕಾಮತ್ ಎಷ್ಟೇ ಅವಾಯ್ಡ್ ಮಾಡಿದ್ರೂ ಗಿಲ್ಲಿನಟ ಕಿಸ್ ಕೊಡ್ತಾನೆ ಇದ್ರು.. ಇದನ್ನ ಗಮನಿಸಿದ ಆಂಕರ್ ಅನುಪಮಾ ಗೌಡ.. ಪಕ್ಕದಲ್ಲಿದ್ದ ಡಮ್ಮಿ ಲಾಂಗ್ನ ತೋರಿಸಿ ಗಿಲ್ಲಿ ನಟನನ್ನ ಎಚ್ಚರಿಸಲು ಯತ್ನಿಸಿದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಪಾನಿಪುರಿ ತಿನ್ನಿಸಲು ಕೈಮುಂದಿಟ್ಟಾಗ ಶಿಲ್ಪಾ ಕಾಮತ್ಗೆ ಗಿಲ್ಲಿ ನಟ ಪಟ್ ಅಂತ ಮುತ್ತು ಕೊಟ್ಟುಬಿಡುತ್ತಿದ್ದರು. ಇದು ನಟಿಗೆ ಕಿರಿ ಕಿರಿ ಅನ್ನಿಸಿದೆ. ಈ ಬಗ್ಗೆ ಶೋನ ಶಿಲ್ಪಾ ಹೇಳಿಕೊಂಡಿದ್ದಾರೆ. ಗಿಲ್ಲಿ ಅಡ್ವಾಂಟೇಜ್ ತಗೊಂಡು ಕೈಗೆ ಮುತ್ತು ಕೊಡುತ್ತಿದ್ದರು. ಕೈಯಲ್ಲಿ ಗ್ಲೌಸ್ ಇತ್ತು ಅಂತ ಸುಮ್ಮನೆ ಇದ್ದೆ. ಇಲ್ಲಾಂದಿದ್ರೆ ಒಂದು ಕೈ ನೋಡಿಕೊಳ್ತಿದ್ದೆ ಎಂದು ಹೇಳಿದ್ದಾರೆ.
ಇದೀಗ ಗಿಲ್ಲಿನಟನ ವಿರುದ್ಧ ವೀಕ್ಷಕರು ಕೂಡ ಅಸಮಧಾನ ಹೊರ ಹಾಕಿದ್ದಾರೆ. ಗಿಲ್ಲಿ ನಟನ ಮಾತುಗಳು, ಆಕ್ಟಿಂಗ್ ಎಲ್ಲವೂ ಒಳ್ಳೇದೇ.. ಆದರೆ ಇಂತಹ ಗುಣ ನೋಡುಗರಿಗೆ ಇಷ್ಟ ಆಗಲ್ಲ.. ತಮಾಷೆ ಅಂತಾ ಹೇಳ್ಕೊಂಡು ಹೆಣ್ಣುಮಕ್ಕಳ ಜೊತೆ ಹೀಗೆ ವರ್ತಿಸೋದು ಸರಿಯಲ್ಲ.. ಅತೀ ಆದ್ರೆ ಅಮೃತಾನು ವಿಷ ಆಗುತ್ತೆ.. ತಾನು ಏನೂ ಮಾಡಿದ್ರು.. ಮಾತಾಡಿದ್ರು ಜನ ನಕ್ಕು ಚಪ್ಪಾಳೆ ತಟ್ಟುತ್ತಾರೆ ಅನ್ನೋ ಭ್ರಮೇಲಿ ಇರ್ತಾರೆ.. ಅಂತಾ ಕಾಮೆಂಟ್ ಮಾಡಿದ್ದಾರೆ.

ನೋಡಿರಿ

