ದೀಪಿಕಾ ಬಿಕಿನಿ ಬಣ್ಣದ ಮೇಲೆ ಕೆಂಗಣ್ಣು – ಶುರುವಾಯ್ತು ಬಾಯ್ಕಾಟ್ ಪಠಾಣ್ ಟ್ರೆಂಡ್

ದೀಪಿಕಾ ಬಿಕಿನಿ ಬಣ್ಣದ ಮೇಲೆ ಕೆಂಗಣ್ಣು – ಶುರುವಾಯ್ತು ಬಾಯ್ಕಾಟ್ ಪಠಾಣ್ ಟ್ರೆಂಡ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್​ ಖಾನ್​ ಅನೇಕ ವರ್ಷಗಳ ಬಳಿಕ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದ್ದಾರೆ. ಜೊತೆಗೆ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಕೂಡಾ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಬೇಷರಂ ರಂಗ್​… ಹಾಡು ಬಿಡುಗಡೆಯಾಗಿ ಕೆಲವೇ ಗಂಟೆಗೆ ಮಿಲಿಯನ್ ಗಟ್ಟಲೇ ವ್ಯೂವ್ಸ್ ಕೂಡಾ ಪಡೆದುಕೊಂಡಿದೆ. ಜೊತೆಗೆ ಈ ಹಾಡಿನ ವಿವಾದ ಅಷ್ಟೇ ಬಿಸಿಯಾಗಿ ಮುಂದುವರೆದಿದೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದಕ್ಕೆ ಅನೇಕರು ಕಿಡಿಕಾರಿದ್ದಾರೆ. ಕೇಸರಿ ಬಿಕಿನಿ ಧರಿಸಿ ಬೇಷರಂ ರಂಗ್ ಎಂದಿರುವುದಕ್ಕೆ ಅನೇಕರು ತರಕಾರು ತೆಗೆದಿದ್ದಾರೆ.

ಇದನ್ನೂ ಓದಿ:  ಕೆ.ಎಲ್ ರಾಹುಲ್ ಮತ್ತು ಅಥಿಯಾ ಮದುವೆಗೆ ಡೇಟ್ ಫಿಕ್ಸ್ – ಜನವರಿ 23ಕ್ಕೆ ಸೆಲೆಬ್ರಿಟಿ ಜೋಡಿಗಳ ಕಲ್ಯಾಣ

ಬೇಷರಂ ರಂಗ್ ಎಂದರೆ ನಾಚಿಕೆಯಿಲ್ಲದ ಬಣ್ಣ. ಇದಕ್ಕೆ ಕೇಸರಿ ಬಣ್ಣದ ಬಿಕಿನಿ ಹಾಕಿಕೊಂಡು ದೀಪಿಕಾ ಅವರಂತ ದೊಡ್ಡ ಸ್ಟಾರ್ ಕಾಣಿಸಿಕೊಂಡಿದ್ದು ಸರಿಯಲ್ಲ ಅನ್ನೋ ಕಾಮೆಂಟ್ ಕೇಳಿಬರುತ್ತಿದೆ. ಶಾರುಖ್​ ಖಾನ್​ ನಟನೆಯ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಅನ್ನೋ ಒತ್ತಾಯವೂ ಕೇಳಿಬರುತ್ತಿದೆ. ಈಗ ಸೋಶಿಯಲ್​ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್​ ಶುರುವಾಗಿದೆ. ಈಗಾಗಲೇ ಅನೇಕರು ಬಹಿಷ್ಕರಿಸಿ ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ.  ಇದರ ಬೆನ್ನಲ್ಲೇ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಕೂಡಾ ಬೇಷರಮ್ ರಂಗ್ ಹಾಡಿನ ವಿರುದ್ಧ ಕಿಡಿಕಾರಿದ್ದಾರೆ.   ಪಠಾಣ್ ಸಿನಿಮಾ ಬಾಯ್ಕಾಟ್ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಪಠಾಣ್ ಚಿತ್ರದ ಹಾಡಿನಲ್ಲಿರುವುದು ನಾಚಿಕೆಗೇಡಿನ ಸಂಗತಿ. ಇದು ಹಿಂದೂಗಳಿಗೆ ಮಾಡಿರುವ ಅವಮಾನ ಎಂದಿದ್ದಾರೆ. ಬಾಲಿವುಡ್ ಮೇಲಿಂದ ಮೇಲೆ ದೇಶದ ಧರ್ಮದ ಮೇಲೆ, ದೇವರ ಮೇಲೆ ಅವಮಾನ ಮಾಡುತ್ತಾ ಬಂದಿರುವುದು ಸರಿಯಲ್ಲ. ಚಿತ್ರದಲ್ಲಿರುವ ಹಾಡನ್ನು ರದ್ದು ಮಾಡಬೇಕು. ಮೊದಲೇ ಬಾಲಿವುಡ್ ಮುಸ್ಲಿಂರ ಹಿಡಿತದಲ್ಲಿರುವ ಚಿತ್ರರಂಗ. ಅದರಲ್ಲೂ ಮೂರು ಜನ ಖಾನ್‌ಗಳಿದ್ದಾರಲ್ಲ. ಅವರೇ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

suddiyaana