ಕ್ಯಾಚ್ ಬಿಟ್ಟು ಮ್ಯಾಚ್ ಬಿಟ್ಟ ಜೈಸ್ವಾಲ್! – ಜೈಸ್ವಾಲ್ ಬಿಟ್ಟ ಕ್ಯಾಚ್‌ಗಳೆಷ್ಟು? – ಭಾರತದ ಕಳಪೆ ಫೀಲ್ಡಿಂಗ್‌ಗೆ ಸೋಲಿಗೆ ಕಾರಣ?

ಕ್ಯಾಚ್ ಬಿಟ್ಟು ಮ್ಯಾಚ್ ಬಿಟ್ಟ ಜೈಸ್ವಾಲ್! – ಜೈಸ್ವಾಲ್ ಬಿಟ್ಟ ಕ್ಯಾಚ್‌ಗಳೆಷ್ಟು? – ಭಾರತದ ಕಳಪೆ ಫೀಲ್ಡಿಂಗ್‌ಗೆ ಸೋಲಿಗೆ ಕಾರಣ?

ಕ್ರಿಕೆಟ್​ನಲ್ಲಿ ಕನ್ನಡ ಕಾಮೆಂಟ್ರಿ ಕೇಳುವಾಗ ನಾರ್ಮಲಿ ಕಾಮೆಂಟೇಟರ್ ಶ್ರೀನಿವಾಸ್ ಮೂರ್ತಿ ಅಲಿಯಾಸ್  ಜಾನಿಯವ್ರು ಯಾವಾಗ್ಲೂ ಒಂದು ಮಾತು ಹೇಳುತ್ತಾರೆ. ಕ್ಯಾಚ್ ಬಿಟ್ರೋ ಮ್ಯಾಚ್ ಬಿಟ್ರೋ ಅಂತಾ. ಭಾರತ ವರ್ಸಸ್ ಇಂಗ್ಲೆಂಡ್ ನಡುವಿನ ಫಸ್ಟ್ ಮ್ಯಾಚ್ ಸೋಲಿಗೆ ಭಾರತದ ಫೀಲ್ಡಿಂಗ್ ಫೇಲ್ಯೂರೇ ಕಾರಣ ಅನ್ನೋದನ್ನ ಬಿಡಿಸಿ ಹೇಳ್ಬೇಕಾಗಿಲ್ಲ. ಅದ್ರಲ್ಲೂ ಯಶಸ್ವಿ ಜೈಸ್ವಾಲ್ ಅಂತೂ ಮಿಸ್ ಫೀಲ್ಡ್​ನಿಂದಲೇ ಇಂಗ್ಲೆಂಡ್ ತಂಡವನ್ನ ಗೆಲ್ಲಿಸಿಬಿಟ್ರು. ಅಷ್ಟಕ್ಕೂ ಜೈಸ್ವಾಲ್ ಬಿಟ್ಟ ಕ್ಯಾಚ್​ಗಳೆಷ್ಟು? ಬ್ಯಾಟಿಂಗ್ & ಬೌಲಿಂಗ್ ಅಲ್ಲದೇ ಫೀಲ್ಡಿಂಗ್ ಎಷ್ಟು ಮಹತ್ವದ ಪಾತ್ರವಹಿಸುತ್ತೆ ಎಂಬ ಬಗ್ಗೆ ವಿಸ್ತ್ತೃತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: TESTನಲ್ಲಿ ಫೇಲ್ ಆದ್ರಾ ಗೌತಮ್ ಗಂಭೀರ್ ? – ಟೀಂ ಇಂಡಿಯಾ ಡೇಂಜರ್ ಝೋನ್..!

ಒಂದು ಪಂದ್ಯದ ಸೋಲು ಅಥವಾ ಗೆಲುವನ್ನ ಒಂದು ಕ್ಯಾಚ್ ಅಥವಾ ಕ್ಯಾಚ್ ಡ್ರಾಪ್ ಟರ್ನಿಂಗ್ ಮಾಡಿಬಿಡಬಹುದು. ಗೆಲ್ಲೋ ಸ್ಟೇಜ್​ನಲ್ಲಿದ್ದವರು ಸೋಲುತ್ತಾರೆ, ಸೋಲಬೇಕಿದ್ದವರು ಗೆದ್ದು ಬಿಡ್ತಾರೆ. ಅದರಲ್ಲೂ ಟೆಸ್ಟ್ ಮ್ಯಾಚ್ ಅಂತಾ ಬಂದಾಗ ಫೀಲ್ಡಿಂಗ್ ತುಂಬಾ ಮಹತ್ವದ್ದು. ಈ ಸಲ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಶತಕ ಬಾರಿಸಿತ್ತು. ಬೌಲಿಂಗ್ ಕೂಡ ಚೆನ್ನಾಗಿಯೇ ಇತ್ತು.  ಸೋಲೋಕೆ ಕಾರಣವೇ ಕಳಪೆ ಫೀಲ್ಡಿಂಗ್. ಜೈಸ್ವಾಲ್ ಅಂತೂ ನಾಲ್ಕು ಕ್ಯಾಚ್​ಗಳನ್ನ ಬಿಟ್ಟು ಪಂದ್ಯವನ್ನೂ ದಾನ ಮಾಡಿಬಿಟ್ಟಿದ್ದರು.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸಾಕಷ್ಟು ಕ್ಯಾಚ್ ಡ್ರಾಪ್ ಮಾಡಿ ಕಳಪೆ ಫೀಲ್ಡಿಂಗ್ ಮಾಡಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ನೀಡಿದ್ದ 371 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಪರ ಬೆನ್ ಡಕೆಟ್ ಅವರ ಅಮೋಘ 149 ರನ್, ಜೋ ರೂಟ್ ಅವರ 53* ಮತ್ತು ಜೇಮೀ ಸ್ಮಿತ್ ಅವರ ಭರ್ಜರಿ 44* ರನ್‌ಗಳಿಂದ ಗೆದ್ದು ಬೀಗಿದ್ದರು. ಇಡೀ ಟೆಸ್ಟ್ ಪಂದ್ಯದಲ್ಲಿ ಭಾರತ ಎಂಟು ಕ್ಯಾಚಿಂಗ್ ಅವಕಾಶಗಳನ್ನು ಕೈಚೆಲ್ಲಿತು. ಇದು ಇಂಗ್ಲೆಂಡ್​ಗೆ ವರದಾನವಾಗಿತ್ತು. ಈ ಎಂಟು ಕ್ಯಾಚ್ ಗಳು ಮಿಸ್ ಆಗಿದ್ದರ ಪರಿಣಾಮ ಭಾರತಕ್ಕೆ 250 ರನ್‌ಗಳು ಹೆಚ್ಚುವರಿಯಾದವು.

ಯಶಸ್ವಿ ಜೈಸ್ವಾಲ್ ಮೊದಲನೇ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ 11 ರನ್ ಗಳಿಸಿದ್ದ ಬೆನ್ ಡಕೆಟ್ ಅವರ ಕ್ಯಾಚ್ ಬಿಟ್ಟು ಜೀವದಾನ ಕೊಟ್ಟರು. ಅಂತಿಮವಾಗಿ 23.5 ಓವರ್‌ಗಳವರೆಗೂ ಆಡಿದ ಡಕೆಟ್ 62 ರನ್ ಗಳಿಸಿ ಔಟಾದರು. ಇನ್ನು ಅದೇ ಇನ್ನಿಂಗ್ಸ್​​ನ ಏಳನೇ ಓವರ್‌ನಲ್ಲಿ ಭಾರತದ ಗನ್ ಫೀಲ್ಡರ್ ರವೀಂದ್ರ ಜಡೇಜಾ ಕೈಗೆ ಸಿಕ್ಕ ಚೆಂಡನ್ನ ನೆಲಕ್ಕೆ ತಾಗಿಸಿ ಡಕೆಟ್‌ಗೆ ಜೀವದಾನ ಕೊಟ್ಟಿದ್ರು. ಇನ್ನು 31 ನೇ ಓವರ್‌ನಲ್ಲಿ, ಓಲಿ ಪೋಪ್ 60 ರನ್‌ಗಳಿಸಿದ್ದಾಗ ಜೈಸ್ವಾಲ್ ಮತ್ತೊಂದು ಕ್ಯಾಚ್ ಆಪರ್ಚುನಿಟಿ ಡ್ರಾಪ್ ಮಾಡಿದ್ರು. ಪರಿಣಾಮ ಓಲಿ ಪೋಪ್ 106 ರನ್‌ಗಳಿಸಿ ವಾಪಸ್ ಆದರು. ಇನ್ನು 72ನೇ ಓವರ್‌ನಲ್ಲಿ 46 ರನ್ ಗಳಿಸಿದ್ದ ಹ್ಯಾರಿ ಬ್ರೂಕ್ ಅವರನ್ನ ಪಂತ್​ಗೆ ಔಟ್ ಮಾಡೋ ಅವಕಾಶ ಇತ್ತು. ಅಲ್ದೇ ಬ್ರೂಕ್ 82 ರನ್ ಗಳಿಸಿದ್ದಾಗ ಜೈಸ್ವಾಲ್ ಮತ್ತೊಂದು ಜೀವದಾನ ಕೊಟ್ಟರು. ಅಂತಿಮವಾಗಿ ಕ್ಯಾಚ್ ಬಿಟ್ಟ ಪರಿಣಾಮ 99 ರನ್ ಗಳಿಸಿ ಬ್ರೂಕ್ ಔಟಾದರು. 72ನೇ ಓವರ್‌ನಲ್ಲಿ ಕೇವಲ 19 ರನ್‌ಗಳಿದ್ದಾಗ ಜೇಮೀ ಸ್ಮಿತ್ ಅವರ ಕ್ಯಾಚ್ ಅನ್ನು ಕೈಚೆಲ್ಲುವ ಮೂಲಕ ಸಾಯಿ ಸುದರ್ಶನ್ ತಪ್ಪು ಮಾಡಿದ್ರು. ಪರಿಣಾಮ ಸ್ಮಿತ್ 40 ರನ್ ಗಳಿಸಿದ್ರು. ಎರಡನೇ ಇನ್ನಿಂಗ್ಸ್​ನಲ್ಲೂ ಇದೇ ಕಥೆ. ಈ ಸಲ ಜಸ್ಪ್ರೀತ್ ಬುಮ್ರಾ ತಮ್ಮದೇ ಬೌಲಿಂಗ್​ನಲ್ಲಿ ಜ್ಯಾಕ್ ಕ್ರಾಲಿ 38 ರನ್‌ಗಳಿಸಿದ್ದಾಗ ಸಿಕ್ಕ ಕ್ಯಾಚ್ ಹಿಡಿಯೋಕೆ ವಿಫಲರಾದ್ರು. ಪರಿಣಾಮ ಕ್ರಾಲಿ 65 ರನ್‌ಗಳನ್ನ ಬಾರಿಸಿದರು. 39 ನೇ ಓವರ್‌ನಲ್ಲಿ ಡಕೆಟ್ ಅವರ ಕ್ಯಾಚ್ ಅನ್ನು ಚೆಲ್ಲುವ ಮೂಲಕ ಜೈಸ್ವಾಲ್ ದಾಖಲೆಯ ನಾಲ್ಕನೇ ಅವಕಾಶವನ್ನು ಕೈಚೆಲ್ಲಿದರು. ಪರಿಣಾಮ ಡಕೆಟ್ 149 ರನ್‌ಗಳೊಂದಿಗೆ ಡ್ರೆಸ್ಸಿಂಗ್ ಕೋಣೆಗೆ ವಾಪಸ್ ಆದರು.

ಭಾರತದ ಪರ ಜೈಸ್ವಾಲ್ 4 ಸಲ ಕ್ಯಾಚ್ ಮಿಸ್ ಮಾಡಿದ್ರೆ ಉಳಿದವರಿಂದಲೂ ಕೂಡ ಮಿಸ್ ಫೀಲ್ಡ್ ಆಗಿದೆ. ಈ ಕ್ಯಾಚ್​ಗಳನ್ನ ಮಿಸ್ ಮಾಡಿದ್ದರ ಪರಿಣಾಮ ಬರೋಬ್ಬರಿ 250+ ರನ್ಸ್​ನ ಹೆಚ್ಚುವರಿ ನೀಡಿದಂತಾಗಿದೆ. ಮುಂದಿನ ಪಂದ್ಯದಲ್ಲಾದ್ರೂ ಫೀಲ್ಡಿಂಗ್​ನಲ್ಲಿ ಸುಧಾರಿಸಿಕೊಂಡಿಲ್ಲ ಅಂದರೆ ಮತ್ತೊಮ್ಮೆ ನಿರಾಶೆಯ ಫಲಿತಾಂಶ ಬರೋದು ಗ್ಯಾರಂಟಿ.

Sulekha