ವೈರಲ್ ಆದ ಭಾರತ, ಚೀನಾ ಸೈನಿಕರ ಹೊಡೆದಾಟ ವಿಡಿಯೋ
ನವದೆಹಲಿ: ಅರುಣಾಚಲ ಪ್ರದೇಶದಲ್ಲಿನ ತವಾಂಗ್ ವಲಯದ ವಾಸ್ತವ ನಿಯಂತ್ರಣ ರೇಖೆಯ(ಎಲ್ಎಸಿ) ಬಳಿ ಡಿ. 9 ಭಾರತ ಮತ್ತು ಚೀನಾ ಪಡೆಗಳ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಭಾರತ-ಚೀನಾ ಸೈನಿಕರ ಮಧ್ಯೆ ಹೊಡೆದಾಟ ನಡೆದಿದ್ದು, ಎರಡೂ ದೇಶಗಳ ಕೆಲ ಸೈನಿಕರು ಗಾಯಗೊಂಡಿದ್ದಾರೆ. ಬಳಿಕ ವಿವಾದಾತ್ಮಕ ಪ್ರದೇಶದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದಾರೆ. ಈ ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸೈನಿಕರ ಹೊಡೆದಾಟದ ವಿಡಿಯೋವೊಂದು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಭಾರತ- ಚೀನಾ ಘರ್ಷಣೆ: ಈಡೇರದ ಚರ್ಚೆಯ ಬೇಡಿಕೆ – ಸಭಾತ್ಯಾಗ ಮಾಡಿದ ವಿಪಕ್ಷಗಳು
ವೈರಲ್ ಆದ ವಿಡಿಯೋದಲ್ಲಿ, ಚೀನಾ ಸೈನಿಕರು ಭಾರತದ ಗಡಿ ಭೂಪ್ರದೇಶವನ್ನು ವಶಪಡಿಸಿಕೊಳ್ಳಲು ನಡೆಸಿದ ಸಂಘಟಿತ ಪ್ರಯತ್ನವನ್ನು ತೋರಿಸಲಾಗಿದೆ. ಭಾರತದ ಗಡಿಯನ್ನು ದಾಟಲು ಬರುತ್ತಿರುವ ಚೀನಾ ಸೈನಿಕರು ಭಾರತೀಯ ಸೈನಿಕರನ್ನು ಥಳಿಸಿದ್ದಾರೆ. ಈ ಕಾರಣಕ್ಕೆ ಭಾರತೀಯ ಸೈನಿಕರು ಚೀನಾದ ಸೈನಿಕರನ್ನು ಲಾಠಿಗಳಿಂದ ಹೊಡೆಯುವುದನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ. ಈ ವಿಡಿಯೋ ಡಿಸೆಂಬರ್ 9ರ ಘಟನೆಗೆ ಸಂಬಂಧಿಸಿದ್ದಲ್ಲ ಎನ್ನಲಾಗುತ್ತಿದೆ.
Interesting video of Indian forces thwarting Chinese PLA attempts to enter Indian territory at the LAC. This is an undated video. Location unknown. It doesn’t seem to be of Tawang incident in Arunachal but definitely from similar area and post 2020 Galwan clash. Watch now 👇 pic.twitter.com/e5mra6DK9t
— Aditya Raj Kaul (@AdityaRajKaul) December 13, 2022
ವೈರಲ್ ಆದ ವಿಡಿಯೋ ಜೂನ್ 2020ರಲ್ಲಿ ಪೂರ್ವ ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ 20 ಮಂದಿ ಸೈನಿಕರು ಸಾವನ್ನಪ್ಪಿದ್ದರು ಮತ್ತು 40ಕ್ಕೂ ಹೆಚ್ಚು ಚೀನೀ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.
Video running around.. don’t know when this was shot but feast to watch!! pic.twitter.com/zLJcpkdwe7
— Chakravarty Sulibele (@astitvam) December 13, 2022