‘ಕುಬೇರ’ ಗೆದ್ದ ಖುಷಿಯಲ್ಲಿ ವಾರಿಯರ್ ಆದ ರಶ್ಮಿಕಾ ಮಂದಣ್ಣ – ಮಹಿಳಾ ಪ್ರಧಾನ ಪಾತ್ರದಲ್ಲಿ ನ್ಯಾಷನಲ್ ಕ್ರಷ್

ತಮಿಳು ನಟ ಧನುಷ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಕುಬೇರ ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದೆ. ಈಗಾಗಲೇ ಕುಬೇರ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಇದೇ ಯಶಸ್ಸಿನ ಖುಷಿಯಲ್ಲಿರುವ ರಶ್ಮಿಕಾ ಮಂದಣ್ಣ ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾನೇ ಹೈಲೆಟ್ಸ್. ಯಾಕೆಂದ್ರೆ, ಈ ಬಾರಿ ರಶ್ಮಿಕಾ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಮರೆಯದ ಮೀನಾ ಕುಮಾರಿ ಬದುಕು ಹೇಗಿತ್ತು? – ಸಿನಿಮಾ ಆಗಲಿದೆ ದಿಗ್ಗಜ ನಟಿಯ ದುರಂತ ಅಂತ್ಯ
ಹೊಸ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರದ್ದು ವಾರಿಯರ್ ಅವತಾರ. ಈ ಚಿತ್ರದ ಟೈಟಲ್ ಜೂನ್ 27ರಂದು ಅನೌನ್ಸ್ ಆಗಲಿದೆ. ಇದೀಗ ರಶ್ಮಿಕಾ ಅವರ ಹೊಸ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ರಶ್ಮಿಕಾ ಲುಕ್ ಗಮನ ಸೆಳೆಯುತ್ತಿದೆ. ಕಾಡಿನ ಮಧ್ಯೆ ರಶ್ಮಿಕಾ ನಿಂತಿದ್ದಾರೆ. ಅವರು ವಾರಿಯರ್ ರೀತಿ ಕಾಣಿಸಿದ್ದಾರೆ. ಅವರ ಕೈಯಲ್ಲಿ ಆಯುಧ ರೀತಿಯ ಒಂದು ವಸ್ತುವಿದೆ. ‘ಬೇಟೆಗೊಳಗಾಗಿ ಗಾಯಗೊಂಡರೂ ಅಚಲವಾಗಿ ನಿಂತಿದ್ದಾಳೆ’ಎಂಬ ಅರ್ಥ ಬರುವ ರೀತಿಯಲ್ಲಿ ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಸಿನಿಮಾದ ಪೋಸ್ಟರ್ ಹಾಗೂ ಟೈಟಲ್ ಜೂನ್ 27ರ ಮುಂಜಾನೆ 10:08ಕ್ಕೆ ರಿಲೀಸ್ ಆಗಲಿದೆ.
ಈ ಚಿತ್ರವನ್ನು ಅನ್ಫಾರ್ಮುಲಾ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಸಂಸ್ಥೆಗೆ ಇದು ಮೊದಲ ಅನುಭವ. ಸಿನಿಮಾ ಬಗ್ಗೆ ಹಾಗೂ ನಿರ್ಮಾಣ ಸಂಸ್ಥೆ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಿಲ್ಲ. ಚಿತ್ರದ ಟೈಟಲ್ ಜೊತೆ ಈ ವಿಚಾರವೂ ರಿವೀಲ್ ಆಗುವ ಸಾಧ್ಯತೆ ಇದೆ. ರಶ್ಮಿಕಾ ಮಂದಣ್ಣ ಅವರು ಈಗಾಗಲೇ ‘ದಿ ಗರ್ಲ್ಫ್ರೆಂಡ್’ ಹೆಸರಿನ ಮಹಿಳಾ ಪ್ರಧಾನ ಚಿತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೂಡಾ ನಡೆಯುತ್ತಿದೆ.

ನೋಡಿರಿ

