ತೆಲಂಗಾಣದ ಪ್ರಸಿದ್ಧ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ನೀತಾ ಅಂಬಾನಿ!

ತೆಲಂಗಾಣದ ಪ್ರಸಿದ್ಧ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ನೀತಾ ಅಂಬಾನಿ!

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಗೆ ದೇವರ ಮೇಲೆ ಸಾಕಷ್ಟು ಭಕ್ತಿದೆ. ಆಗಾಗ ಪ್ರಸಿದ್ಧ ದೇಗುಲಕ್ಕೆ ಭೇಟಿ ನೀಡುದಲ್ಲದೆ, ದೇವಾಲಯಗಳ ಅಭಿವೃದ್ಧಿಗೆ ದೇಣಿಗೆ ನೀಡಿದ್ದಾರೆ. ಇದೀಗ ನೀತಾ ಅಂಬಾನಿ ತೆಲಂಗಾಣದ ಯಲ್ಲಮ್ಮ ದೇವಸ್ಥಾನಕ್ಕೆ 1ಕೋಟಿ ರೂ. ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ಭೂ ಕುಸಿತದಿಂದ ಶಿರಾಡಿಘಾಟ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್ –  ಬೆಂಗಳೂರು – ಮಂಗಳೂರು ಸಂಚಾರಕ್ಕೆ ಬದಲಿ ಮಾರ್ಗ!

ನೀತಾ ಅಂಬಾನಿಗೆ ಬಾಲಕಂಪೇಟ್‌ನಲ್ಲಿರುವ ಯಲ್ಲಮ್ಮ ದೇವಿಯ ಮೇಲೆ ಆಳವಾದ ನಂಬಿಕೆಯಿದೆ. ಪ್ರತಿ ಬಾರಿ ಹೈದರಾಬಾದ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಐಪಿಎಲ್ ಪಂದ್ಯ ನಡೆಯುವ ಸಮಯದಲ್ಲಿ, ಯಲ್ಲಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಈ ವರ್ಷ ಏಪ್ರಿಲ್ 23 ರಂದು, ನೀತಾ ಅಂಬಾನಿ ತಮ್ಮ ತಾಯಿ ಪೂರ್ಣಿಮಾ ದಲಾಲಾ ಮತ್ತು ಸಹೋದರಿ ಮಮತಾ ದಲಾಲಾ ಅವರೊಂದಿಗೆ ಯಲ್ಲಮ್ಮ ದೇವಿಯ ದರ್ಶನ ಪಡೆದಿದ್ದರು. ಈ ವೇಳೆ ದೇವಾಲಯವು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೊಡುಗೆ ನೀಡುವಂತೆ ಆಡಳಿತ ಮಂಡಳಿ ನೀತಾ ಅಂಬಾನಿಯ ಬಳಿ ಕೇಳಿಕೊಂಡಿತ್ತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ನೀತಾ ಈಗ 1 ಕೋಟಿ ರೂ.ಗಳನ್ನು ದೇಣಿಗೆ ನೀಡಿದ್ದಾರೆ.

ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಹೇಂದ್ರ ಗೌರ್ ಮಾತನಾಡಿ, ನೀತಾ ಅಂಬಾನಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತವನ್ನು ಸ್ಥಿರ ಠೇವಣಿಯಲ್ಲಿ ಇಡಲಾಗುತ್ತದೆ ಮತ್ತು ಅದರಿಂದ ಬರುವ ಬಡ್ಡಿಯನ್ನು ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವ ಜನರಿಗೆ ಉಚಿತ ಊಟವನ್ನು ಆಯೋಜಿಸಲು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.

Shwetha M