ENG ವಿರುದ್ಧ ರಿವೇಂಜ್ ಗೆ ರೆಡಿ – ಬುಮ್ರಾ ಔಟ್.. ಸಿಂಗ್ ಇನ್.. ಠಾಕೂರ್?
ವಾರದ ಗ್ಯಾಪ್.. ಏನೆಲ್ಲಾ ಗೇಮ್ ಪ್ಲ್ಯಾನ್?

ENG ವಿರುದ್ಧ ರಿವೇಂಜ್ ಗೆ ರೆಡಿ – ಬುಮ್ರಾ ಔಟ್.. ಸಿಂಗ್ ಇನ್.. ಠಾಕೂರ್?ವಾರದ ಗ್ಯಾಪ್.. ಏನೆಲ್ಲಾ ಗೇಮ್ ಪ್ಲ್ಯಾನ್?

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಐದು ಶತಕ ಬಾರಿಸಿಯೂ ಸೋತಿರುವ ಟೀಂ ಇಂಡಿಯಾ ನೆಕ್ಸ್​ಟ್ ಮ್ಯಾಚ್​ಗೆ ಬೌನ್ಸ್ ಬ್ಯಾಕ್ ಮಾಡ್ಲೇಬೇಕಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಎರಡನೇ ಪಂದ್ಯ ನಡೆಯಲಿದ್ದು ಆಂಗ್ಲರನ್ನ ಕಟ್ಟಿ ಹಾಕೋಕೆ ರಣತಂತ್ರವನ್ನೇ ರೆಡಿ ಮಾಡಿಕೊಳ್ಬೇಕಿದೆ. ಆಂಗ್ಲರ ಬಾಜ್‌ಬಾಲ್ ಚಕ್ರವ್ಯೂಹವನ್ನ ಬೇಧಿಸಲು  ಒಂದು ವಾರಕ್ಕೂ ಹೆಚ್ಚು ಟೈಂ ಇದೆ. ಸೋ ಈ ಗ್ಯಾಪಲ್ಲಿ ಭಾರತ ತಂಡ ಆಲ್​ರೌಂಡ್ ಪ್ರದರ್ಶನಕ್ಕೆ ರೆಡಿಯಾಗಲೇಬೇಕು. ಯಾಕಂದ್ರೆ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಬ್ರಹ್ಮಾಸ್ತ್ರ ಜಸ್ಪ್ರೀತ್ ಬುಮ್ರಾ ಕೂಡ ಗೈರಾಗೋ ಸಾಧ್ಯತೆ ಇದೆ.

ಸದ್ಯ ಒಂದು ಪಂದ್ಯ ಮುಗಿದಿದ್ದು ಎರಡನೇ ಪಂದ್ಯಕ್ಕೆ ಒಂದು ವಾರ ಗ್ಯಾಪ್ ಸಿಗುತ್ತೆ. ಭಾರತ vs ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಜುಲೈ 2 ರಿಂದ ಆರಂಭವಾಗಲಿದ್ದು ಜುಲೈ 6ರವರೆಗೆ ನಡೆಯಲಿದೆ.  ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಈ ಹಣಾಹಣಿ ನಡೆಯಲಿದೆ. ಌಸ್ ಯೂಶುಯಲ್ ಭಾರತೀಯ ಕಾಲಮಾನ ಮಧ್ಯಾಹ್ನ 3.30 ಕ್ಕೆ ಪಂದ್ಯ ಸ್ಟಾರ್ಟ್ ಆಗಲಿದೆ.

ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ವಿಕೆಟ್‌ಗಳಿಂದ ಸೋಲು ಕಂಡಿದೆ. ಆದ್ರೆ ಪಂದ್ಯದ ಆರಂಭಕ್ಕೂ ಮುನ್ನವೇ ಯಾರ್ಕರ್ ಸ್ಪೆಷಲಿಸ್ಟ್  ಜಸ್ಪ್ರೀತ್ ಬುಮ್ರಾ ಅವರನ್ನ ಒಟ್ಟಾರೆಯಾಗಿ ಮೂರು ಪಂದ್ಯಗಳಿಗಷ್ಟೇ ಕಣಕ್ಕಿಳಿಸಬೇಕು ಎಂದು ಬಿಸಿಸಿಐ ಆಡಳಿತ ಮಂಡಳಿ ಸೂಚಿಸಿತ್ತು. ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ ಐದು ವಿಕೆಟ್‌ಗಳನ್ನು ಕಬಳಿಸಿದರು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಸಿಗಲಿಲ್ಲ. ಇದೀಗ ಬುಮ್ರಾ ಸರಣಿಯ ಮುಂದಿನ ಪಂದ್ಯದಲ್ಲಿ ಆಡೋದು ಡೌಟ್ ಇದೆ. ಇನ್ನುಳಿದ 4 ಪಂದ್ಯಗಳಲ್ಲಿ ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಖಚಿತಪಡಿಸಿದ್ದಾರೆ. ಪದೇಪದೆ ಇಂಜುರಿಗೆ ತುತ್ತಾಗುವ ಬುಮ್ರಾರನ್ನ ಟೀಂ ಇಂಡಿಯಾದಲ್ಲಿ ಆಡಿಸೋದ್ರ ಜೊತೆಗೆ ಅವ್ರಿಗೆ ರೆಸ್ಟ್ ಕೂಡ ಜಾಸ್ತಿ ಕೊಡ್ಬೇಕಾಗುತ್ತೆ. ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಒಂದು ವೇಳೆ ಬುಮ್ರಾ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಸಿದರೆ ಅವರು ಮತ್ತೆ ನೋವಿನ ಸಮಸ್ಯೆಗೆ ಸಿಲುಕಬಹುದು. ಅದು ಅವರ ಟೆಸ್ಟ್ ವೃತ್ತಿಜೀವನದ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು ಇಂಗ್ಲೆಂಡ್ ವಿರುದ್ಧದ ಸರಣಿಯ ನಡುವೆ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತಿದೆ.

ಟೀಂ ಇಂಡಿಯಾದ ಸಾಕಷ್ಟು ಅಭಿಮಾನಿಗಳನ್ನ ಕಾಡ್ತಿರೋ ಪ್ರಶ್ನೆ ಇದೆ. ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾದಿಂದ ಹೊರಗುಳಿದ್ರೆ ಯಾರಿಗೆ ಚಾನ್ಸ್ ಕೊಡ್ತಾರೆ ಅನ್ನೋದು. ಸದ್ಯ ಈ ಪ್ರಶ್ನೆಗೆ ಹರ್ಷಿತ್ ರಾಣಾ ಅಥವಾ ಅರ್ಷದೀಪ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಭಾರತ ತಂಡದಲ್ಲಿರುವುದು ಆರು ವೇಗಿಗಳು. ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್. ಇವರಲ್ಲಿ ಬುಮ್ರಾ, ಸಿರಾಜ್ ಹಾಗೂ ಪ್ರಸಿದ್ಧ್ ಮೊದಲ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಬುಮ್ರಾ ಹೊರುಗಳಿದರೆ, ಉಳಿದ ಮೂವರಿಂದ ಒಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅದರಂತೆ ಅರ್ಷದೀಪ್ ಸಿಂಗ್ ಅಥವಾ ಹರ್ಷಿತ್ ರಾಣಾಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಈಗಾಗ್ಲೇ ಫಸ್ಟ್ ಮ್ಯಾಚಲ್ಲೇ ಸೋತಿರೋ ಭಾರತ ತಂಡದಲ್ಲಿ ಮುಂದಿನ ಪಂದ್ಯಕ್ಕೆ ಕೆಲ ಬದಲಾವಣೆಗಳು ಆಗೋದು ಕೂಡ ಗ್ಯಾರಂಟಿಯಾಗಿದೆ.

ಬರ್ಮಿಂಗ್ ಹ್ಯಾಮ್​ನಲ್ಲಿ ನಡೆಯಲಿರೋ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಬದಲಾವಣೆಗಳು ಆಗೋದಂತೂ ಪಕ್ಕಾ. ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಡೋ ಸಾಧ್ಯತೆ ಇದೆ. ತುಂಬಾ ಕ್ರೂಶಿಯಲ್ ಟೈಮ್​ನಲ್ಲೇ ಬ್ಯಾಟಿಂಗ್‌ನಲ್ಲಿ ಫೇಲ್ಯೂರ್ ಆದ್ರು. ಒಂದು ವೇಳೆ ಭಾರತ ತಂಡದ ಆಯ್ಕೆ ಮಂಡಳಿ ಮತ್ತೊಬ್ಬ ಆಲ್‌ರೌಂಡರ್ ಅನ್ನು ಆಯ್ಕೆ ಮಾಡಿದರೆ, ಎರಡನೇ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರೇ ಬದಲಿ ಆಟಗಾರರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಪಿಚ್ ಪರಿಸ್ಥಿತಿಗಳನ್ನು ಅವಲಂಬಿಸಿ ಭಾರತವು ಶಾರ್ದೂಲ್ ಠಾಕೂರ್ ಬದಲಿಗೆ ಹೆಚ್ಚುವರಿ ವೇಗಿ ಅಥವಾ ಸ್ಪಿನ್ನರ್ ಅನ್ನು ಆಯ್ಕೆ ಮಾಡಿದರೆ ಆಶ್ಚರ್ಯವೇನಿಲ್ಲ. ಅಲ್ದೇ ಶುಭಮನ್ ಗಿಲ್ ನೇತೃತ್ವದ ತಂಡವು ಲೀಡ್ಸ್‌ನಲ್ಲಿ 20 ವಿಕೆಟ್‌ಗಳನ್ನು ಪಡೆಯುವಲ್ಲಿ ಫೇಲ್ಯೂರ್ ಆಗಿದೆ. ಭಾರತವು ವೇಗಿಯೊಂದಿಗೆ ಪಂದ್ಯ ಆಡಲು ನಿರ್ಧರಿಸಿದರೆ, ಎಡಗೈ ಸೀಮರ್ ಅರ್ಶ್‌ದೀಪ್ ಸಿಂಗ್ ಸೇರ್ಪಡೆಯಾಗಬಹುದು. ಸೋ ಉಳಿದಂತೆ ಈಗಿರೋ ತಂಡವೇ ಕಂಟಿನ್ಯೂ ಆಗ್ಬೋದು. ಅಂದ್ರೆ ಬ್ಯಾಟಿಂಗ್​ನಲ್ಲಿ ಯಾವುದೇ ಬದಲಾವಣೆ ಇರಲ್ಲ. ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ಸಿ), ರಿಷಭ್ ಪಂತ್ (ವಿಕೆ), ಕರುಣ್ ನಾಯರ್ ಇರ್ತಾರೆ. ಆಲ್​ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ ಇರ್ತಾರೆ. ಬಟ್ ಶಾರ್ದೂಲ್ ಠಾಕೂರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಬರಬಹುದು. ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದ್ರೆ ಅರ್ಶದೀಪ್ ಸಿಂಗ್​ಗೆ ಚಾನ್ಸ್ ಸಿಗಬಹುದು. ಉಳಿದಂತೆ ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಕಂಟಿನ್ಯೂ ಆಗ್ತಾರೆ.

Shantha Kumari