5 ಶತಕ ಸಿಡಿಸಿಯೂ ಸೋಲಿನ ಚರಿತ್ರೆ – ಯಂಗ್ ಇಂಡಿಯಾ ಮಿಸ್ಟೇಕ್ಸ್ ಏನು?

ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭಿಸಿದ್ದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲೇ ಸೋಲು ಕಂಡಿದೆ. ಮತ್ತೊಂದೆಡೆ ಆಲ್ ರೌಂಡ್ ಪ್ರದರ್ಶನ ನೀಡಿದ ಇಂಗ್ಲೆಂಡ್ ಪಡೆ ತವರಿನಲ್ಲಿ ಮತ್ತೆ ಪಾರುಪತ್ಯ ಮೆರೆದಿದೆ. ಟೆಸ್ಟ್ ಇತಿಹಾಸದಲ್ಲೇ ಸೆಕೆಂಡ್ ಹೈಯೆಸ್ಟ್ ರನ್ ಚೇಸ್ ಮೂಲಕ ಹೆಡಿಂಗ್ಲಿಯಲ್ಲಿ ಬೆನ್ ಡಕೆಟ್ ಟೀಂ ದಾಖಲೆಯ ಗೆಲುವು ದಾಖಲಿಸಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 113 ಓವರ್ಗಳಲ್ಲಿ 471 ರನ್ಗಳಿಸಿತ್ತು. ನಂತರ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 100.4 ಓವರ್ಗಳಲ್ಲಿ 465 ರನ್ಗಳಿಸಿತ್ತು. ಸೋ ಎರಡನೇ ಇನ್ನಿಂಗ್ಸ್ನಲ್ಲಿ 364 ರನ್ಗಳಿಸಿ ಭಾರತ ಇಂಗ್ಲೆಂಡ್ಗೆ 371 ರನ್ಗಳ ಗುರಿ ನೀಡಿತ್ತು. ಆದ್ರೆ ಅಂತಿಮವಾಗಿ ಇಂಗ್ಲೆಂಡ್ ವಿರುದ್ಧ ಭಾರತ 5 ವಿಕೆಟ್ಗಳ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಆಂಗ್ಲರ ತಂಡ ಮುನ್ನಡೆ ಸಾಧಿಸಿದೆ.
ಇದನ್ನೂ ಓದಿ : ಟೆಸ್ಟ್ ನಲ್ಲಿ ಟೀಮ್ ಇಂಡಿಯಾಗೆ ಸೋಲಿನ ಆರಂಭ – 5 ಶತಕ ಬಾರಿಸಿಯೂ ಸೋತ ಭಾರತ
371 ರನ್ ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಪಡೆ ಅದ್ಭುತ ಪ್ರದರ್ಶನ ನೀಡಿತು. ಅದ್ರಲ್ಲೂ ಓಪನರ್ಸ್ ಆಗಿ ಇನ್ನಿಂಗ್ಸ್ ಆರಂಭಿಸಿದ ಕ್ರಾಲಿ ಮತ್ತು ಬೆನ್ ಡಕೆಟ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. ಈ ಇಬ್ಬರ ಪಾರ್ಟ್ನರ್ ಶಿಪ್ನ ಬ್ರೇಕ್ ಮಾಡೋದೇ ಭಾರತಕ್ಕೆ ದೊಡ್ಡ ಸವಾಲಾಗಿತ್ತು. 4ನೇ ದಿನದಂತ್ಯಕ್ಕೆ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ಗಳಿಸಿದ್ದ ಇಂಗ್ಲೆಂಡ್ ತಂಡ ಇಂದು 90 ಒವರ್ಗಳಲ್ಲಿ 350 ರನ್ಗಳಿಸಬೇಕಿತ್ತು. 5ನೇ ದಿನ ಬ್ಯಾಟಿಂಗ್ ಆರಂಭಿಸಿದ ಬೆನ್ ಡಕೆಟ್ ಹಾಗೂ ಕ್ರಾಲೆ ಮೊದಲ ವಿಕೆಟ್ ಜೊತೆಯಾಟದಲ್ಲಿ ವಿಶ್ವದಾಖಲೆಯ 188 ರನ್ಗಳಿಸಿದರು. ಬೆನ್ ಡಕೆಟ್ 170 ಎಸೆತಗಳಲ್ಲಿ 21 ಬೌಂಡರಿ, 1 ಸಿಕ್ಸರ್ ಜೊತೆಗೆ 149 ರನ್ಗಳಿಸಿದರೆ, ಕ್ರಾಲೆ 126 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 65 ರನ್ಗಳಿಸಿದರು. ಸೋ ಇಂಗ್ಲೆಂಡ್ ಗೆಲುವಿಗೆ ಈ ಜೋಡಿ ಅತಿದೊಡ್ಡ ಬುನಾದಿ ಹಾಕಿಕೊಟ್ಟಿತ್ತು. ಕ್ರೌಲಿ ಹಾಗೂ ಡಕೆಟ್ ಅವರ ಈ ಜೊತೆಯಾಟ ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ದಾಖಲಾದ ಅತಿದೊಡ್ಡ ಆರಂಭಿಕ ಪಾಲುದಾರಿಕೆಯಾಗಿದೆ. ಹಾಗೇ ವೈಯಕ್ತಿಕವಾಗಿಯೂ ಬೆನ್ ಡಕೆಟ್ ಮತ್ತೊಂದು ಸಾಧನೆ ಮಾಡಿದ್ದು, ಡಿಸೆಂಬರ್ 2022 ರಿಂದ 18 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಡಕೆಟ್ ಖಾತೆ ಸೇರಿದೆ. ಭಾರತೀಯ ಬೌಲರ್ಗಳು ವಿಕೆಟ್ಗಾಗಿ ಪರದಾಡುವಂತೆ ಮಾಡಿದ ಇವರಿಬ್ಬರು ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ರು. ಆ ಬಳಿಕ ಪ್ರಸಿದ್ಧ್ ಕೃಷ್ಣ ಕ್ರಾಲಿ ವಿಕೆಟ್ ತೆಗೆಯೋ ಮೂಲಕ ಅವ್ರ ಓಟಕ್ಕೆ ಬ್ರೇಕ್ ಹಾಕಿದ್ರು. 65 ರನ್ ಗಳಿಸಿದ್ದ ಕ್ರೌಲಿ ಕ್ಯಾಚ್ ಔಟ್ ಆದ್ರು. ಆ ಬಳಿಕ ಪೋಪ್ ಮತ್ತು ಹ್ಯಾರಿ ಬ್ರೂಕ್ ಬೇಗ ವಿಕೆಟ್ ಒಪ್ಪಿಸಿದ್ರೂ ಕೂಡ ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಸ್ಮಿತ್ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಗೆಲುವಿನ ದಡ ಮುಟ್ಟಿಸಿದ್ರು. ಅಷ್ಟಕ್ಕೂ ಇಂಗ್ಲೆಂಡ್ ತಂಡದ ಗೆಲುವಿಗೆ ಟೀಂ ಇಂಡಿಯಾದ ಮಿಸ್ಟೇಕ್ಸ್ ಕೂಡ ಕಾರಣವಾಯ್ತು.
ತನ್ನದೇ ತಪ್ಪಿನಿಂದ ಸೋತ ಭಾರತ!
ಎಲ್ಲಾ ಬ್ಯಾಟರ್ ಗಳಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ
ಮೊದಲನೇ ಇನ್ನಿಂಗ್ಸ್ ನಲ್ಲೇ ಉತ್ತಮ ಲೀಡ್ ಸಿಗಲಿಲ್ಲ
ಸಾಲು ಸಾಲು ಕ್ಯಾಚ್ ಡ್ರಾಪ್.. ಕಳಪೆ ಫೀಲ್ಡಿಂಗ್
ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕ್ರಾಲಿ & ಡಕೆಟ್ ಜೊತೆಯಾಟ
ಬುಮ್ರಾ ಮತ್ತು ಸಿರಾಜ್ ಎರಡನೇ ಇನ್ನಿಂಗ್ಸ್ ವಿಕೆಟ್ ಲೆಸ್
ಶುಭ್ ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಪೇಲ್ಯೂರ್
ಸೀನಿಯರ್ಸ್ ಪ್ಲೇಯರ್ಸ್ ಆಬ್ಸೆನ್ಸ್ + ಅನುಭವದ ಕೊರತೆ
ತವರಿನ ಪಿಚ್ ಅಡ್ವಾಂಟೇಜ್ ಪಡೆದ ಇಂಗ್ಲೆಂಡ್ ಪಡೆ

ನೋಡಿರಿ

