TESTನಲ್ಲಿ ಫೇಲ್ ಆದ್ರಾ ಗೌತಮ್ ಗಂಭೀರ್ ? – ಟೀಂ ಇಂಡಿಯಾ ಡೇಂಜರ್ ಝೋನ್..!

ಇವತ್ತು ವಿಶ್ವಕ್ರಿಕೆಟ್ನ ದೊಡ್ಡಣ್ಣ ಆಗಿದೆ ಅಂದ್ರೆ ಅದಕ್ಕೆ ಕಾರಣ ಕೂಡ ಟೆಸ್ಟ್ ಕ್ರಿಕೆಟ್ನಲ್ಲಿನ ಪಾರುಪತ್ಯವೇ. ಆದ್ರೆ ಈಗ ಆ ಲೆಗಸಿ ಅಳಿಸಿ ಹೋಗೋ ಆತಂಕ ಎದುರಾಗ್ತಿದೆ. ಬ್ಯಾಕ್ ಟು ಬ್ಯಾಕ್ ಸೋಲುಗಳ ಸುಳಿಗೆ ಬೀಳ್ತಿದೆ. ಭಾರತ ಟೆಸ್ಟ್ ಫಾರ್ಮೆಟ್ನಲ್ಲಿ ಯಾಕೆ ಸಾಲು ಸಾಲು ಸೋಲು ಕಾಣ್ತಿದೆ ಅನ್ನೋ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಟೆಸ್ಟ್ ನಲ್ಲಿ ಟೀಮ್ ಇಂಡಿಯಾಗೆ ಸೋಲಿನ ಆರಂಭ – 5 ಶತಕ ಬಾರಿಸಿಯೂ ಸೋತ ಭಾರತ
ಇಂಗ್ಲೆಂಡ್ ವಿರುದ್ಧದ ಓಪನಿಂಗ್ ಟೆಸ್ಟ್ ಮ್ಯಾಚ್ನಲ್ಲೇ ಭಾರತ ಸೋಲಿನ ಮೂಲಕ ಖಾತೆ ಓಪನ್ ಮಾಡಿದೆ. ಅದೂ ಅತ್ಯಂತ ಹೀನಾಯ ಸೋಲು. 148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವ ತಂಡ ಕೂಡ ಒಂದೇ ಪಂದ್ಯದಲ್ಲಿ 5 ಸೆಂಚುರಿ ಬಾರಿಸಿ ಸೋತ ಇತಿಹಾಸವೇ ಇರ್ಲಿಲ್ಲ. ಅದರಲ್ಲೂ ರನ್ಗಳ ಗುಡ್ಡೆ ಹಾಕಿದ್ರೂ ಡಿಫೆನ್ಸ್ ಮಾಡಿಕೊಳ್ಳೋಕೆ ಆಗದೇ ಮಂಡಿಯೂರಿದ್ದಾರೆ. ಕಳೆದ ವರ್ಷದವರೆಗೂ ಟೆಸ್ಟ್ ಕ್ರಿಕೆಟ್ನ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿದ್ದ ಭಾರತ ಈಗ ಸಾಲು ಸಾಲು ಸೋಲಿನ ಸುಳಿಗೆ ಬಿದ್ದು ಒದ್ದಾಡ್ತಿದೆ. ಭಾರತದ ಸೋಲಿಗೆ ಒನ್ ಆಫ್ ದಿ ಮೋಸ್ಟ್ ರೀಸನ್ ಮಿಡಲ್ ಆರ್ಡರ್.
ಟಾಪ್ ಆರ್ಡರ್ ಓಕೆ.. ಮಿಡಲ್ ಆರ್ಡರ್ ಫೇಲ್ಯೂರ್ ಯಾಕೆ?
ಹೆಡಿಂಗ್ಲಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋತಿದೆ ನಿಜ. ಹಾಗಂತ ಬ್ಯಾಟಿಂಗ್ ಫೇಲ್ಯೂರ್ ಏನೂ ಇರಲಿಲ್ಲ. ಟಾಪ್ ಆರ್ಡರ್ ಬ್ಯಾಟರ್ಗಳು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದರು. ಆದರೆ, ಮಿಡಲ್ ಆರ್ಡರ್ ಕಂಪ್ಲೀಟ್ ಅಟ್ಟರ್ ಫ್ಲ್ಯಾಪ್. ಟೀಮ್ ಇಂಡಿಯಾದ ಟಾಪ್-5 ಬ್ಯಾಟರ್ ಗಳು ಎರಡು ಇನಿಂಗ್ಸ್ಗಳ ಮೂಲಕ ಕಲೆಹಾಕಿದ ಒಟ್ಟು ಮೊತ್ತ 721 ರನ್ಗಳು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದವರು ಎರಡು ಇನಿಂಗ್ಸ್ ಗಳಿಂದ ಕೇವಲ 65 ರನ್ ಕಲೆ ಹಾಕಿದ್ದಾರೆ. ಕರುಣ್ ನಾಯರ್, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಕಂಪ್ಲೀಟ್ ಫೇಲ್ಯೂರ್ ಆಗಿದ್ದಾರೆ. ಅದರ ಜೊತೆಗೆ ಫೀಲ್ಡಿಂಗ್ನಲ್ಲೂ ಎಫೆಕ್ಟಿವ್ ಆಗಿ ಇರಲಿಲ್ಲ. ಕ್ಯಾಚ್ ಬಿಟ್ಟು ಬಿಟ್ಟು ಆಂಗ್ಲರಿಗೆ ಜೀವದಾನ ಕೊಟ್ಟ ಗೆಲ್ಲಿಸಿದ್ದಾರೆ. ಅದರಲ್ಲೂ ಯಶಸ್ವಿ ಜೈಸ್ವಾಲ್ ಒಬ್ಬರೇ ಪಂದ್ಯದಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟರು. ಇದರ ಪರಿಣಾಮವಾಗಿ ಟೀಂ ಇಂಡಿಯಾಕ್ಕೆ ಹೀನಾಯ ಸೋಲು ಎದುರಾಯಿತು. ಹಾಗೇ ಇಲ್ಲಿ ಟೀಂ ಇಂಡಿಯಾ ಫೇಲ್ಯೂರ್ ಎಷ್ಟಿದ್ಯೋ ಗೌತಮ್ ಗಂಭೀರ್ ಕೋಚ್ ಆದ್ಮೇನೆ ನಮ್ಮ ಟೆಸ್ಟ್ ಕ್ರಿಕೆಟ್ ಎತ್ತ ಸಾಗ್ತಿದೆ ಅನ್ನೋದೂ ಕೂಡ ಆತಂಕ ಮೂಡಿಸ್ತಿದೆ.
ಗಂಭೀರ್ ಕೋಚ್ ಆದ್ಮೇಲೆ 11 ಟೆಸ್ಟ್ ಪಂದ್ಯ.. ಗೆದ್ದಿದ್ದು ಮೂರೇ!
2024ರ ಟಿ-20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಹೆಡ್ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಕೆಳಗಿಳಿದಿದ್ರು. ಆ ಬಳಿಕ ಗೌತಮ್ ಗಂಭೀರ್ ಕೋಚ್ ಹುದ್ದೆಗೇರಿದ್ರು. ಅಲ್ಲಿಂದ ಈಚೆಗೆ ಗಂಭೀರ್ ಗರಡಿಯಲ್ಲಿ ಭಾರತ ತಂಡ ಈವರೆಗೆ 11 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ಹನ್ನೊಂದು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ ಮೂರೇ ಮೂರು ಪಂದ್ಯಗಳನ್ನ ಅಂದ್ರೆ ನಂಬಲೇಬೇಕು.
2024ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಈ ಎರಡೂ ಪಂದ್ಯಗಳನ್ನ ಗೆದ್ದು ಸರಣಿಯನ್ನ ಭಾರತ ಕೈವಶ ಮಾಡಿಕೊಂಡಿತ್ತು. ಆದ್ರೆ ಆ ಬಳಿಕ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಈ ಸರಣಿಯಲ್ಲಿ ಭಾರತ ಅತ್ಯಂತ ಹೀನಾಯವಾಗಿ ಸೋಲು ಕಂಡಿತ್ತು. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಝಿಲೆಂಡ್ 8 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಇದು 36 ವರ್ಷಗಳ ಬಳಿಕ ಭಾರತದಲ್ಲಿ ನ್ಯೂಝಿಲೆಂಡ್ ತಂಡಕ್ಕೆ ದಕ್ಕಿದ ಮೊದಲ ಗೆಲುವಾಗಿತ್ತು. ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಳೆದ 19 ವರ್ಷಗಳಿಂದ ಗೆಲ್ಲುತ್ತಾ ಬಂದಿದ್ದ ಟೀಮ್ ಇಂಡಿಯಾದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಬಿದ್ದಿತ್ತು. ಅಲ್ದೇ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 46 ರನ್ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ತವರಿನಲ್ಲಿ ಭಾರತ ತಂಡ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್. ಅಲ್ದೇ ಮುಂದಿನ ಎರಡು ಪಂದ್ಯಗಳಲ್ಲೂ ಸೋತು ನ್ಯೂಜಿಲೆಂಡ್ ವಿರುದ್ಧ ವೈಟ್ ವಾಶ್ ಆಗಿತ್ತು. 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ನ್ಯೂಝಿಲೆಂಡ್ ವಿರುದ್ಧ ಸರಣಿಯನ್ನ ಸೋತಿತ್ತು. ಗಂಭೀರ್ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ಕಿವೀಸ್ ವಿರುದ್ಧದ 9 ದಶಕಗಳ ಪಾರುಪತ್ಯಕ್ಕೆ ತೆರೆ ಎಳೆದಿದೆ. ಅಲ್ದೇ ಕಳೆದ 12 ವರ್ಷಗಳಿಂದ ಭಾರತ ತವರಿನಲ್ಲಿ ಯಾವುದೇ ಸರಣಿಯನ್ನ ಸೋತಿದ್ದೇ ಇರಲಿಲ್ಲ. ಈ ಲೆಗಸಿಯೂ ಕೊನೆಯಾಗಿತ್ತು. ಇದೆಲ್ಲಕ್ಕಿಂತ ಇಂಪಾರ್ಟೆಂಟ್ ಅಂದ್ರೆ ಭಾರತ ಕಳೆದ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತಿದ್ದೇ ಇರಲಿಲ್ಲ. ಬಟ್ ಗಂಭೀರ್ ನೇತೃತ್ವದಲ್ಲಿ ಅದೂ ಕೂಡ ನಡೆದು ಹೋಯ್ತು. ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಅದೇ ರಾಗ. ಟೀಮ್ ಇಂಡಿಯಾ 10 ವರ್ಷಗಳಿಂದ ಆಸ್ಟ್ರೇಲಿಯಾ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಆದರೆ ಈ ಬಾರಿ ಆಸೀಸ್ ಪ್ರವಾಸ ಮಾಡಿದ್ದ ಟೀಮ್ ಇಂಡಿಯಾ 3-1 ಅಂತರದಿಂದ ಹೀನಾಯವಾಗಿ ಸೋಲೊಪ್ಪಿಕೊಳ್ತು. ಈ ಮೂಲಕ ದಶಕದ ಗೆಲುವಿನ ನಾಗಾಲೋಟವೂ ಅಂತ್ಯವಾಗಿತ್ತು. ಅಲ್ದೇ ಭಾರತ ಕಳೆದ ಎರಡು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (2021, 2023) ಆಡಿತ್ತು. ಆದರೆ ಗಂಭೀರ್ ಕೋಚ್ ಆದ ಬಳಿಕ ಕಳಪೆ ಪ್ರದರ್ಶನ ನೀಡಿದ ಟೀಮ್ ಇಂಡಿಯಾ 2025 ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೇರಲು ಸಾಧ್ಯವಾಗಲಿಲ್ಲ. ಇದೀಗ 2025-27ರ ನಡುವಿನ ಡಬ್ಲ್ಯೂಟಿಸಿ ಫೈನಲ್ ರೇಸ್ ಶುರುವಾಗಿದೆ. ಇಂಗ್ಲೆಂಡ್ ಸರಣಿಯಿಂದಲೇ ರೇಸ್ ಶುರುವಾಗಿದೆ. ಆದ್ರೀಗ ಮೊದಲ ಪಂದ್ಯದಲ್ಲೇ ಸೋತು ಸೋಲಿನ ಆರಂಭ ಮಾಡಿದ್ದಾರೆ. ಅದೂ ಕೂಡ ಐತಿಹಾಸಿಕ ಸೋಲು. 1948 ರಲ್ಲಿ ಆಸ್ಟ್ರೇಲಿಯಾ 404 ರನ್ ಚೇಸ್ ಮಾಡಿದ್ದು ಈವರೆಗಿನ ದಾಖಲೆಯಾಗಿತ್ತು. ಆ ಬಳಿಕ ಯಾವುದೇ ತಂಡ 370+ ಸ್ಕೋರ್ ಬೆನ್ನತ್ತಿ ಗೆದ್ದಿರಲಿಲ್ಲ. ಆದರೆ ಈ ಬಾರಿ ಟೀಮ್ ಇಂಡಿಯಾ ನೀಡಿದ 371 ರನ್ಗಳ ಗುರಿಯನ್ನು ಇಂಗ್ಲೆಂಡ್ ಗೆದ್ದು ತೋರಿಸಿದೆ. ಸೋ ಅಲ್ಲಿಗೆ ಗಂಭೀರ್ ಕೋಚ್ ಆದ್ಮೇಲೆ ಭಾರತ ತಂಡವು 7 ಪಂದ್ಯಗಳಲ್ಲಿ ಹೀನಾಯವಾಗಿ ಸೋಲು ಕಂಡಿದೆ. 1 ಪಂದ್ಯ ಡ್ರಾನಲ್ಲಿ ಕೊನೆಗೊಂಡರೆ, 3 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ.
ಒಟ್ನಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ಪರಂಪರೆಗೆ ಪೆಟ್ಟು ಬೀಳ್ತಿದೆ. ಟಿ-20 ಹಾಗೇ ಏಕದಿನದಲ್ಲಿ ಪಾರಮ್ಯ ಮೆರೆದ್ರೂ ಕೂಡ ರೆಡ್ ಬಾಲ್ ಫಾರ್ಮೆಟ್ ಡೇಂಜರ್ ಝೋನ್ನಲ್ಲಿದೆ.

ನೋಡಿರಿ

