ಜೈ ಹಿಂದ್.. ಜೈ ಭಾರತ್.. ಬಾಹ್ಯಕಾಶದಿಂದಲೇ ಶುಭಾಂಶು ಶುಕ್ಲಾ ಮೊದಲ ಸಂದೇಶ!

ಜೈ ಹಿಂದ್.. ಜೈ ಭಾರತ್.. ಬಾಹ್ಯಕಾಶದಿಂದಲೇ ಶುಭಾಂಶು ಶುಕ್ಲಾ ಮೊದಲ ಸಂದೇಶ!

ಭಾರತದ ಬಾಹ್ಯಾಕಾಶ ಯಾನದಲ್ಲಿ ಒಂದು ದೊಡ್ಡ ಮತ್ತು ಐತಿಹಾಸಿಕ ಕ್ಷಣ ಕೊನೆಗೂ ಬಂದಿದೆ. ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದ್ದಾರೆ. ಇದೀಗ ಬಾಹ್ಯಕಾಶಕ್ಕೆ ಹಾರುತ್ತಿದ್ದಂತೆ ಗಗನಯಾತ್ರಿ ಶುಭಾಂಶು ಶುಕ್ಲಾ ಮೊದಲ ಸಂದೇಶ ಕಳುಹಿಸಿದ್ದಾರೆ.

ಇದನ್ನೂ ಓದಿ: ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ – 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಿವಿಧ ಪ್ರಯೋಗ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಆಕ್ಸಿಯಮ್ -4 ಮಿಷನ್‌ಗಾಗಿ ಐತಿಹಾಸಿಕ ಬಾಹ್ಯಾಕಾಶ ಯಾತ್ರೆ ಕೈಗೊಂಡ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಭಾರತದ ಜನತೆ ಜೊತೆ ತಮ್ಮ ಮೊದಲ ಸಂದೇಶ ಹಂಚಿಕೊಂಡಿದ್ದಾರೆ. ಭಾರತವನ್ನುದ್ದೇಶಿಸಿ ನಮಸ್ಕಾರ ಎಂಬ ಪದದೊಂದಿಗೆ ಮಾತು ಆರಂಭಿಸಿದರು. ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ.. 41 ವರ್ಷಗಳ ನಂತರ ನಾವು ಬಾಹ್ಯಾಕಾಶವನ್ನು ತಲುಪಿದ್ದೇವೆ. ಇದು ಒಂದು ಉತ್ತಮ ಸವಾರಿಯಾಗಿತ್ತು. ಎಂದು ಶುಭಾಂಶು ಶುಕ್ಲಾ ಭಾರತಕ್ಕಾಗಿ ತಮ್ಮ ಆರಂಭಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಕೆಟ್‌ ಸೆಕೆಂಡಿಗೆ 4.5 ಕಿ.ಮೀ ವೇಗದಲ್ಲಿ ಭೂಮಿಯ ಸುತ್ತಲೂ ಹಾರುತ್ತಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಭುಜದಲ್ಲಿ ಭಾರತೀಯ ತ್ರಿವರ್ಣ ಧ್ವಜವಿದೆ. ಧ್ವಜವು ಬಾಹ್ಯಾಕಾಶ ಹಾರಾಟದಲ್ಲಿ ಭಾರತವೇ ನನ್ನ ಜೊತೆಗಿದೆ ಎಂಬುದನ್ನು ನೆನಪಿಸುತ್ತದೆ. ಇದು ಐಎಸ್‌ಎಸ್‌ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ, ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಆರಂಭವೂ ಆಗಿದೆ. ನೀವು ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮವನ್ನು ಒಟ್ಟಿಗೆ ಪ್ರಾರಂಭಿಸೋಣ ಎಂದು ಎಂದಿದ್ದಾರೆ. ಶುಭಾಂಶು ಶುಕ್ಲಾ ತನ್ನ ಸಂದೇಶದ ಕೊನೆಗೆ ಜೈ ಹಿಂದ್‌.. ಜೈ ಭಾರತ್‌.. ಎಂದು ಹೇಳಿದ್ದಾರೆ.

Shwetha M