ಶಾರ್ದೂಲ್ಗೆ ಚಾನ್ಸ್ ಕೊಟ್ಟಿದ್ದೇ ತಪ್ಪಾ? ಬ್ಯಾಡ್ ಬ್ಯಾಟಿಂಗ್.. ವೇಸ್ಟ್ ಬೌಲಿಂಗ್!
ನಿತೀಶ್ ಕೈ ಬಿಟ್ಟು ತಪ್ಪು ಮಾಡಿದ್ರಾ?

ಟೀಂ ಇಂಡಿಯಾದ ಪ್ಲೇಯಿಂಗ್ ಇಲವೆನ್ ಬಗ್ಗೆ ಈಗ ಪ್ರಶ್ನೆ ಏಳುವಂತೆ ಮಾಡಿದೆ. ಅದ್ದಕ್ಕೆ ಕಾರಣ ಶಾರ್ದೂಲ್ ಠಾಕೂರ್.. ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡರಲ್ಲೂ ತಂಡಕ್ಕೆ ಇವರು ನೆರವಾಗಿಲ್ಲ. ಆದರೂ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಲಾಗಿದೆ. ಇದು ಈಗ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
19 ತಿಂಗಳು ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಶಾರ್ದೂಲ್ ಠಾಕೂರ್, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಡುವ ಹನ್ನೊಂದರೊಳಗೆ ಸ್ಥಾನ ಪಡೆದಿದ್ದಾರೆ. ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು. ಇನ್ನು ಬೌಲಿಂಗ್ ವೇಳೆ ಕೇವಲ 6 ಓವರ್ಗಳನ್ನು ಬೌಲ್ ಮಾಡಿದ್ದಾರೆ. ಇಂಗ್ಲೆಂಡ್ನ ಮೊದಲ ಇನ್ನಿಂಗ್ಸ್ನಲ್ಲಿ, ಭಾರತ ಒಟ್ಟು ಐದು ಬೌಲರ್ಗಳೊಂದಿಗೆ ಬೌಲಿಂಗ್ ಮಾಡಿತು. ಅವರಲ್ಲಿ ನಾಲ್ವರು 20 ಕ್ಕೂ ಹೆಚ್ಚು ಓವರ್ಗಳನ್ನು ಬೌಲ್ ಮಾಡಿದರು. ಆದರೆ, ಶಾರ್ದೂಲ್ ಠಾಕೂರ್ ಕೇವಲ 6 ಓವರ್ ಬೌಲಿಂಗ್ ಮಾಡಿದ್ದಾರೆ. 6 ಓವರ್ಗೆ 38 ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನೂ ಸೆಕೆಂಡ್ ಇನ್ನಿಂಗ್ಸ್ನಲ್ಲಿ 12 ಬಾಲ್ಗೆ 4 ರನ್ಗಳಿಸಿದ್ದಾರೆ. ಇದ್ದನ್ನ ನೋಡಿದ್ರೆ ಶಾರ್ದೂಲ್ ಬ್ಯಾಟಿಂಗ್ನಲ್ಲೂ ವೇಸ್ಟ್ ಬೌಲಿಂಗ್ನಲ್ಲೂ ವೇಸ್ಟ್ ಆದರೆ ಹೆಸರಿಗೆ ಮಾತ್ರ ಆಲ್ರೌಂಡರ್, ಹಾಗಾದ್ರೆ ತಂಡದಲ್ಲಿ ಇದ್ದೂ ಪ್ರಯೋಜನವೇನು ಅನ್ನೋ ಪ್ರಶ್ನೆಗಳು ಕೇಳಿ ಬರ್ತಿದೆ.
ಶಾರ್ದೂಲ್ ಬದಲು ನಿತೀಶ್ಗೆ ಚಾನ್ಸ್ ಸಿಗಬೇಕಿತ್ತು
ಲೀಡ್ಸ್ ಟೆಸ್ಟ್ ಗೂ ಮೊದಲು ಶಾರ್ದೂಲ್ ಠಾಕೂರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ನಡುವೆ ಅಂತಿಮ ಇಲೆವನ್ ನಲ್ಲಿ ಸ್ಥಾನ ಪಡೆಯುವುದಕ್ಕೆ ಬಹಳ ಪೈಪೋಟಿ ಏರ್ಪಟ್ಟಿತ್ತು. ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲೂ ನಿತೀಶ್ ಕುಮಾರ್ ರೆಡ್ಡಿ ಅವರು ಆಲ್ರೌಂಡ್ ಪ್ರದರ್ಶನ ನೀಡಿದ್ದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುತ್ತಾರೆಂದು ಅಂದುಕೊಳ್ಳಲಾಗಿತ್ತು. ಆದರೆ ಶುಕ್ರವಾರ ಪಂದ್ಯಕ್ಕೂ ಮುನ್ನ ತಂಡದ ಪ್ರಕಟಣೆ ಆದಾಗ ಅಚ್ಚರಿ ಕಾದಿತ್ತು. ಅಂತಿಮ ಇಲೆವೆನ್ ನಲ್ಲಿ ಶಾರ್ದೂಲ್ ಠಾಕೂರ್ ಅವರ ಹೆಸರಿತ್ತು. ಆದ್ರೆ ಶಾರ್ದೂಲ್ ಬೌಲಿಂಗ್ ಮತ್ತು ಬ್ಯಾಟಿಂಗ್ ಫೆಲ್ಯೂರ್ ಆಗಿದ್ದಾರೆ. ಒಂದು ವೇಳೆ ನಿತೀಶ್ ಕುಮಾರ್ ರೆಡ್ಡಿಗೆ ಅವಕಾಶ ನೀಡಿದ್ದರೆ, ಅವರು ಬ್ಯಾಟಿಂಗ್ನಲ್ಲಿ ಕನಿಷ್ಠ ಒಂದಷ್ಟು ರನ್ ಗಳಿಸುತ್ತಿದ್ದರು ಅನ್ನೋ ಮಾತು ಕೇಳಿ ಬರ್ತಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ನಿತೀಶ್ಗೆ ಚಾನ್ಸ್ ನೀಡಬೇಕು ಅನ್ನೋ ಒತ್ತಾಯ ಕೇಳಿ ಬರ್ತಿದೆ?
ನಂಬಿಕೆ ಇಲ್ಲದಿದ್ರೆ ಯಾಕೆ ಆಡಿಸ್ತೀರಾ?
ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ “ಶಾರ್ದೂಲ್ ಠಾಕೂರ್ ಅವರ ಬಗ್ಗೆ ಟೀಮ್ ಇಂಡಿಯಾದ ಆಡಳಿತ ಗಮನಹರಿಸಬೇಕು. ಅವರ ಬೌಲಿಂಗ್ ಅನ್ನು ನಂಬದಿದ್ದರೆ, ಅವರನ್ನು ಏಕೆ ಆಡಿಸುತ್ತಿದ್ದೀರಿ? ಇದು ಖಂಡಿತವಾಗಿಯೂ ಒಂದು ಸಮಸ್ಯೆ. ನೀವು ಬೌಲರ್ ಅನ್ನು ನಂಬದಿದ್ದರೆ, ಅವರನ್ನು ಏಕೆ ಆಡಿಸಿದ್ದೀರಿ? ನೀವು ನಾಲ್ಕು ವೇಗದ ಬೌಲರ್ಗಳನ್ನು ಆಡಿಸಿದಾಗ, ಶಾರ್ದೂಲ್ಗೆ ಸಮಾನ ಅವಕಾಶ ಸಿಗುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ನೋಡಿರಿ

