ರಾಹುಲ್ ಮತ್ತು ರಿಷಭ್ ಜೊತೆಯಾಟಕ್ಕೆ ಪತರುಗುಟ್ಟಿದ ಇಂಗ್ಲೆಂಡ್!- ಟಾರ್ಗೆಟ್ ಚೇಸ್ ಮಾಡಿ ಇತಿಹಾಸ ನಿರ್ಮಿಸುತ್ತಾ ಇಂಗ್ಲೆಂಡ್?

ರಾಹುಲ್ ಮತ್ತು ರಿಷಭ್ ಜೊತೆಯಾಟಕ್ಕೆ ಪತರುಗುಟ್ಟಿದ ಇಂಗ್ಲೆಂಡ್!- ಟಾರ್ಗೆಟ್ ಚೇಸ್ ಮಾಡಿ ಇತಿಹಾಸ ನಿರ್ಮಿಸುತ್ತಾ ಇಂಗ್ಲೆಂಡ್?

 

ಲೀಡ್ಸ್​ನಲ್ಲಿ ನಡೆಯುತ್ತಿರೋ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ರಣರೋಚಕ ಘಟ್ಟ ತಲುಪಿದೆ. ನಾಲ್ಕು ದಿನಗಳ ಪಂದ್ಯ ಮುಗಿದಿದ್ದು 5ನೇ ದಿನದ ಕೊನೆಯಾಟದತ್ತ ಎಲ್ಲರ ಕುತೂಹಲ ನೆಟ್ಟಿದೆ. ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಶತಕಕ್ಕೆ ಆಂಗ್ಲರು ಥಂಡಾ ಹೊಡೆದಿದ್ದು, ಭಾರತ ಇಂಗ್ಲೆಂಡ್ ಪಡೆಗೆ 371 ರನ್​ಗಳ ಬೃಹತ್ ಗುರಿ ನೀಡಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಆಪತ್ಬಾಂಧವ KL – ರಾಹುಲ್ ತಾಳ್ಮೆಗೆ ಆಂಗ್ಲರು ಥಂಡಾ 

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇಂಗ್ಲೆಂಡ್ 465 ರನ್ ಗಳಿಸಿತು. ಭಾರತ ಕೇವಲ 6 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದೀಗ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಪರ ಇಬ್ಬರು ಸೆಂಚುರಿ ಸಿಡಿಸಿದ್ದಾರೆ. ಹೆಮ್ಮೆಯ ಕನ್ನಡಿಗ ಕೆಎಲ್ ರಾಹುಲ್ ಕೂಲ್ ಆಗಿ ಬ್ಯಾಟ್ ಬೀಸಿದ್ದಾರೆ. ರಿಷಭ್ ಪಂತ್ ಫೈಯರ್ ಥರ ಸಿಡಿದಿದ್ದಾರೆ. ಆದ್ರೆ ಪಂತ್ ಮತ್ತು ರಾಹುಲ್ ವಿಕೆಟ್ ಬೀಳ್ತಿದ್ದಂತೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ರೀತಿಯೇ ದಿಢೀರ್ ಕುಸಿತ ಕಂಡಿದ್ದು ನಿರಾಶೆ ಮೂಡಿಸಿದೆ. ಬ್ಯಾಕ್ ಟು ಬ್ಯಾಕ್ ವಿಕೆಟ್​ಗಳು ಉರುಳಿದವು. 364 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತ ತಂಡ ಇಂಗ್ಲೆಂಡ್​ಗೆ 371 ರನ್​ಗಳ ಬೃಹತ್ ಗುರಿ ನೀಡಿದೆ.

100 ರನ್​ಗಳ ಗುರಿ ಮುಟ್ಟೋ ಮುನ್ನವೇ ಪ್ರಮುಖ ಮೂರು ವಿಕೆಟ್​ಗಳನ್ನ ಕಳೆದುಕೊಂಡಿದ್ದ ಟೀಂ ಇಂಡಿಯಾ ಪರ ನಾಲ್ಕನೇ ವಿಕೆಟ್ ವೇಳೆಗೆ ಜೊತೆಯಾದ ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು. ಇದೀಗ 2ನೇ ಇನ್ನಿಂಗ್ಸ್​​ನಲ್ಲಿ ರಾಹುಲ್ ಹಾಗೂ ರಿಷಭ್ ಪಂತ್ ಶತಕದಿಂದ 195 ರನ್​ಗಳ ಜೊತೆಯಾಟ ನೀಡಿದರು. ಅದರಲ್ಲೂ ತುಂಬಾ ತಾಳ್ಮೆಯಿಂದ ಆಡಿದ್ದು ಕೆಎಲ್ ರಾಹುಲ್. ರಾಹುಲ್ 202 ಎಸೆತಗಳಲ್ಲಿ 13 ಬೌಂಡರಿಗಳ ನೆರವಿನಿಂದ ಶತಕ ಪೂರ್ಣಗೊಳಿಸಿದರು. ಒಟ್ಟಾರೆ 247 ಎಸೆತಗಳಲ್ಲಿ 18 ಬೌಂಡರಿಗಳ ನೆರವಿನಿಂದ 137 ರನ್​ಗಳಿಸಿ ಔಟ್ ಆದರು. ಇದು ರಾಹುಲ್​ರ 9ನೇ ಶತಕವಾಗಿದೆ. ವಿಶೇಷ ಅಂದ್ರೆ ರಾಹುಲ್ 9 ಶತಕಗಳಲ್ಲಿ 8 ಶತಕಗಳು ವಿದೇಶದಲ್ಲಿ ಬಂದಿವೆ. ಕೇವಲ ಒಂದು ಶತಕ ಮಾತ್ರ ತವರಿನಲ್ಲಿ ಬಂದಿದೆ. ಇಂಗ್ಲೆಂಡ್​​ನಲ್ಲಿ 3, ಆಸ್ಟ್ರೇಲಿಯಾದಲ್ಲಿ 1, ದಕ್ಷಿಣ ಆಫ್ರಿಕಾದಲ್ಲಿ 2, ಶ್ರೀಲಂಕಾದಲ್ಲಿ 1, ವೆಸ್ಟ್​​ ಇಂಡೀಸ್​ನಲ್ಲಿ ಒಂದು ಶತಕ ಸಿಡಿಸಿದ್ದಾರೆ. ರಾಹುಲ್ ಶತಕದ ಬೆನ್ನಲ್ಲೇ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ತಮ್ಮ 8ನೇ ಟೆಸ್ಟ್ ಶತಕ ಪೂರೈಸಿದರು.  ಮೊದಲ ಇನ್ನಿಂಗ್ಸ್​​ನಲ್ಲಿ 134 ರನ್​ಗಳಿಸಿದ್ದ ರಿಷಭ್, 2ನೇ ಇನ್ನಿಂಗ್ಸ್​​ನಲ್ಲಿ 130 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್​ಗಳ ನೆರವಿನಿಂದ ಶತಕ ಪೂರೈಸಿದರು. ಒಟ್ಟಾರೆ 15 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 118 ರನ್​ಗಳಿಸಿದರು. ಆ ಬಳಿಕ ಬಂದ ಕರುಣ್ ನಾಯರ್ ನಾಯರ್ 20 ರನ್​ಗಳಿಗೆ ಆಟ ಮುಗಿಸಿದರು. ಜಡ್ಡು 25 ರನ್ ಗಳಿಸಿ ಅಜೇಯರಾಗಿ ಉಳಿದ್ರು.

ಲೀಡ್ಸ್ ಮೈದಾನದ ಈ ಪಂದ್ಯದ ಮತ್ತೊಂದು ಬ್ಯೂಟಿ ಅಂದ್ರೆ ಟೀಂ ಇಂಡಿಯಾ ಆಟಗಾರರ ಸೆಂಚುರಿ ಸುನಾಮಿ.  ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತೀಯ ಬ್ಯಾಟರ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಐವರು ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಕಳೆದ 93 ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ಭಾರತ ತಂಡವು ಒಮ್ಮೆಯೂ ಟೆಸ್ಟ್ ಪಂದ್ಯವೊಂದರಲ್ಲಿ 5 ಶತಕಗಳನ್ನು ಬಾರಿಸಿರಲಿಲ್ಲ. ಆದರೆ ಈ ಬಾರಿ ಯಂಗ್ ಇಂಡಿಯಾ ಬ್ಯಾಟರ್ ಗಳು ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 101 ರನ್ ಬಾರಿಸಿದರೆ, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶುಭ್ ಮನ್ ಗಿಲ್ 147 ರನ್ ಸಿಡಿಸಿದ್ದರು. ಇನ್ನು 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್ 134 ರನ್ ಸಿಡಿಸಿ ಅಬ್ಬರಿಸಿದರು. ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಆರಂಭಿಕ ದಾಂಡಿಗ ಕೆಎಲ್ ರಾಹುಲ್ 137 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ 118 ರನ್ ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಬ್ಯಾಟರ್ ಗಳು ಒಟ್ಟು 5 ಶತಕಗಳನ್ನು ಸಿಡಿಸಿದ್ದಾರೆ. ಈ ಶತಕಗಳೊಂದಿಗೆ 93 ವರ್ಷಗಳಲ್ಲಿ ಸಾಧ್ಯವಾಗದ ವಿಶೇಷ ಸಾಧನೆಯನ್ನು ಟೀಮ್ ಇಂಡಿಯಾ ಬ್ಯಾಟರ್ ಗಳು ಮಾಡಿದ್ದಾರೆ.

ಈಗಾಗ್ಲೇ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಯಾವುದೇ ನಷ್ಟವಿಲ್ಲದೆ 21 ರನ್​ಗಳನ್ನ ಕಲೆ ಹಾಕಿದೆ. ಸೋ ಉಳಿದಿರೋದು ಇನ್ನು 350 ರನ್​ಗಳು. ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ಚೇಸಿಂಗ್ ಕಷ್ಟಕರವೇನಲ್ಲ. ಈ ಮೈದಾನದಲ್ಲಿ ಆಡಿದ ಕೊನೆಯ 5 ಟೆಸ್ಟ್ ಪಂದ್ಯಗಳಲ್ಲೂ ನಾಲ್ಕನೇ ಇನಿಂಗ್ಸ್ ಆಡಿದ ತಂಡವೇ ಗೆದ್ದಿದೆ. ಅಲ್ಲದೆ ಈ ಮೈದಾನದಲ್ಲಿ 1948 ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್​ಗಳನ್ನು ಚೇಸ್ ಮಾಡಿ ಗೆದ್ದ ಇತಿಹಾಸವಿದೆ. ಇದಲ್ಲದೆ 2019 ರಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 362 ರನ್​ಗಳನ್ನು ಬೆನ್ನತ್ತಿ ಗೆದ್ದಿದೆ. ಆದ್ರೆ ಕಳೆದ 76 ವರ್ಷಗಳಲ್ಲಿ ಯಾವುದೇ ತಂಡ ಈ ಮೈದಾನದಲ್ಲಿ 370+ ಕ್ಕಿಂತ ಹೆಚ್ಚಿನ ಮೊತ್ತ ಚೇಸ್ ಮಾಡಿಲ್ಲ. ಸೋ ಭಾರತದ ಪರ ಅಡ್ವಾಂಟೇಜ್ ಇದೆಯಾದ್ರೂ ಭಾರತ ಗೆಲ್ಲೋದು ಅಷ್ಟು ಸುಲಭವಲ್ಲ. ಯಾಕಂದ್ರೆ ಮೊದಲ ಇನ್ನಿಂಗ್ಸ್​ನಲ್ಲಿ ಆಗಿರೋ ಮಿಸ್ಟೇಕ್ಸ್ ನೋಡಿದ್ರೆ ಈಗ್ಲೂ ರಿಸ್ಕ್ ಇದ್ದೇ ಇದೆ.

ಭಾರತ ತಂಡವು ಬ್ಯಾಟಿಂಗ್​ನಲ್ಲಿ ಮೊದಲ ಇನಿಂಗ್ಸ್​ನಲ್ಲಿ ಸಖತ್ತಾಗೇ ಪ್ರದರ್ಶನ ನೀಡಿತ್ತು. 471 ರನ್​ಗಳನ್ನ ಕಲೆ ಹಾಕಿತ್ತು. ಆದ್ರೆ ಕಳಪೆ ಫೀಲ್ಡಿಂಗ್​ನಿಂದಾಗಿ ಇಂಗ್ಲೆಂಡ್ 465 ರನ್​ ಗಳಿಸಲು ಸಾಧ್ಯವಾಯ್ತು. ಇಂಗ್ಲೆಂಡ್​ಗೆ ಅಷ್ಟು ರನ್ ತಲುಪೋಕೆ ಕಷ್ಟ ಆಗಿಲ್ಲ ಅಂದ್ರೆ ಇದೀಗ 371 ರನ್​ಗಳ ಗುರಿ ಚೇಸ್ ಮಾಡೋದೂ ಕಷ್ಟ ಅಂತಾ ಹೇಳೋಕೆ ಆಗಲ್ಲ. ಹೀಗಿದ್ರೂ ಭಾರತಕ್ಕೆ ಇರೋ ಭರವಸೆ ಅಂದ್ರೆ ಜಸ್ಪ್ರೀತ್ ಬುಮ್ರಾ. ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಬಳಿ ಬುಮ್ರಾಸ್ತ್ರವಿದೆ. ಆದ್ರೆ ಬುಮ್ರಾ ಎಫರ್ಟ್​ನ ಫೀಲ್ಡರ್ಸ್ ಕೈ ಚೆಲ್ಲುತ್ತಿದ್ದಾರೆ. ಫಸ್ಟ್ ಇನ್ನಿಂಗ್ಸ್​ನಲ್ಲಿ ಬುಮ್ರಾ 5 ವಿಕೆಟ್ ತೆಗೆದಿದ್ರು. ಬಟ್ ಭಾರತದ ಆಟಗಾರರು ಅವ್ರ ಮೂರು  ಕ್ಯಾಚ್​ಗಳನ್ನ ಮಿಸ್ ಮಾಡಿದ್ರು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಈ ತಪ್ಪುಗಳು ರಿಪೀಟ್ ಆಗಬಾರದು.

ಐದನೇ ದಿನದಾಟದ ಅಜೆಂಡಾ ಇದೇ ನೋಡಿ. ಭಾರತ ನೀಡಿರೋ ಬಿಗ್ ಟಾರ್ಗೆಟ್​ ಬೆನ್ನತ್ತಿರೋ ಇಂಗ್ಲೆಂಡ್​ ಎಚ್ಚರಿಕೆಯ ಆರಂಭ ಪಡೆದಿದೆ. ಜಾಕ್​ ಕ್ರಾವ್ಲಿ ಹಾಗೇ ಬೆನ್​ ಡಕೆಟ್ ಕೂಡ​​ ತಾಳ್ಮೆಯ ಆಟವಾಡ್ತಿದ್ದು 4ನೇ ದಿನದ ಅಂತ್ಯಕ್ಕೆ ವಿಕೆಟ್​ ನಷ್ಟವಿಲ್ಲದೇ 21 ರನ್ ​ಗಳಿಸಿದ್ದಾರೆ. ಹತ್ತು ವಿಕೆಟ್​ಗಳು ಅವ್ರ ಕೈಯಲ್ಲಿವೆ. ಹೀಗಾಗಿ ಕೊನೇ ದಿನದಾಟದಲ್ಲಿ 350 ರನ್ ಕಲೆ ಹಾಕಿದ್ರೆ ಇಂಗ್ಲೆಂಡ್ ತಂಡ ಮೊದಲ ಪಂದ್ಯವನ್ನ ಗೆದ್ದಂತಾಗುತ್ತೆ. ಭಾರತಕ್ಕೆ ಬೇಕಿರೋದು ವಿಕೆಟ್ಸ್. ಇಂಗ್ಲೆಂಡ್​ನ 10 ವಿಕೆಟ್​ಗಳನ್ನ ಎಗರಿಸಿದ್ರೆ ಲೀಡ್ಸ್​ನಲ್ಲಿ ಟೀಂ ಇಂಡಿಯಾ ಇತಿಹಾಸ ನಿರ್ಮಿಸಲಿದೆ. ಟೀಮ್​ ಇಂಡಿಯಾ ಬೌಲಿಂಗ್​ VS ಇಂಗ್ಲೆಂಡ್​ ಬ್ಯಾಟರ್ಸ್​​ ನಡುವಿನ ಬ್ಯಾಟಲ್​ ಕುತೂಹಲ ಕೆರಳಿಸಿದೆ.

ಇಲ್ಲಿ ಭಾರತ ತಂಡಕ್ಕೆ ಮತ್ತೊಂದು ಅಡ್ವಾಂಟೇಜ್ ಅಂದ್ರೆ  350+ ರನ್​ಗಳನ್ನು ನೀಡಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಸೋತಿರುವುದು ಕೇವಲ ಒಮ್ಮೆ ಮಾತ್ರ. ಭಾರತ ತಂಡವು ಈವರೆಗೆ 59 ಟೆಸ್ಟ್​ ಪಂದ್ಯಗಳಲ್ಲಿ ಕೊನೆಯ ಇನಿಂಗ್ಸ್​ನಲ್ಲಿ 350+ ರನ್​ಗಳ ಟಾರ್ಗೆಟ್ ನೀಡಿದೆ. ಈ ವೇಳೆ 42 ಬಾರಿ ಟೀಮ್ ಇಂಡಿಯಾ ಗೆದ್ದಿದೆ. ಇನ್ನು 16 ಪಂದ್ಯಗಳನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸೋತಿರುವುದು ಕೇವಲ ಒಂದು ಬಾರಿ ಮಾತ್ರ. ಅಂದರೆ ಟೀಮ್ ಇಂಡಿಯಾ 350+ ರನ್​ಗಳ ಗುರಿ ನೀಡಿ ಸೋತಿರುವುದು ಕೇವಲ ಒಮ್ಮೆ ಮಾತ್ರ. ಇದೀಗ ಇಂಗ್ಲೆಂಡ್ ಮುಂದಿರುವ ಗುರಿ 371 ರನ್​ಗಳು. ಇತ್ತ ಟೆಸ್ಟ್ ಇತಿಹಾಸದಲ್ಲಿ 350+ ರನ್​ಗಳ ಟಾರ್ಗೆಟ್ ನೀಡಿ ಒಮ್ಮೆ ಮಾತ್ರ ಸೋತಿರುವ ಭಾರತ ತಂಡದಿಂದ ಲೀಡ್ಸ್​ನಲ್ಲೂ ಭರ್ಜರಿ ಪ್ರದರ್ಶನ  ನೀಡ್ಬೇಕು. ಬುಮ್ರಾ ಜೊತೆಗೆ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕಡೆಯಿಂದಲೂ ಬೆಸ್ಟ್ ಪ್ರದರ್ಶನ ಬರಬೇಕು.

ಒಟ್ನಲ್ಲಿ ಟೀಂ ಇಂಡಿಯಾಗೆ ಬ್ಯಾಟಿಂಗ್​ನಲ್ಲಿ ಕಂಪ್ಲೀಟ್ ಸಪೋರ್ಟ್ ಸಿಕ್ಕಿಲ್ಲ. ಕೆ.ಎಲ್. ರಾಹುಲ್ ಔಟ್ ಆದ ನಂತರವೂ ಭಾರತ 5 ವಿಕೆಟ್ ನಷ್ಟಕ್ಕೆ 333 ರನ್‌ಗಳೊಂದಿಗೆ ಒಳ್ಳೆ ಸ್ಟೇಜ್​ನಲ್ಲೇ ಇತ್ತು. ಇನ್ನೂ ಐದು ವಿಕೆಟ್​ಗಳು ಖಾತೆಯಲ್ಲಿದ್ವು. ಹೀಗಿದ್ರೂ 364 ರನ್‌ಗಳಿಗೆ ಆಲೌಟ್ ಆದ್ರು. ಅಂದ್ರೆ ಕೇವಲ 31 ರನ್‌ಗಳಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾಯ್ತು. ಬೌಲಿಂಗ್​ನಲ್ಲಿ ಆಲ್​ರೌಂಡ್ ಪ್ರದರ್ಶನ ಬರ್ಲೇಬೇಕಿದೆ. ಬುಮ್ರಾ ಮೇಲೆಯೇ ಎಲ್ಲಾ ಜವಾಬ್ದಾರಿ ಬಿಡೋ ಬದ್ಲು ಉಳಿದ ಬೌಲರ್​ಗಳಿಂದಲೂ ಉತ್ತಮ ಪ್ರದರ್ಶನ ಬರ್ಬೇಕು. ಹಾಗೇ ಫೀಲ್ಡಿಂಗ್​ನಲ್ಲೂ ಇಂಪ್ರೂವ್ ಆಗ್ಬೇಕು. ಟೀಂ ಗೇಮ್ ಆಡದೇ ಇದ್ರೆ ದೊಡ್ಡ ಬೆಲೆ ತೆರೋದಂತೂ ಪಕ್ಕಾ.

Sulekha