ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು – ಸೌಂದರ್ಯದಲ್ಲಿ ಇವರನ್ನು ಮೀರಿಸುವವರೇ ಇಲ್ಲ..!

ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವ ಮಹಿಳೆಯರು – ಸೌಂದರ್ಯದಲ್ಲಿ ಇವರನ್ನು ಮೀರಿಸುವವರೇ ಇಲ್ಲ..!

ವಿಶ್ವದಲ್ಲಿ ವಿಸ್ಮಯಗಳು ಅನೇಕ. ಕೆಲವೊಂದು ಸಂಪ್ರದಾಯಗಳು, ರೀತಿ ನೀತಿಗಳು ಕೂಡಾ ಕುತೂಹಲಭರಿತ. ಅದರಲ್ಲೂ ಕಾಡುವಾಸಿಗಳ ಬದುಕು ನಿಜಕ್ಕೂ ವಿಸ್ಮಯ. ಇಲ್ಲೊಂದು ಬುಡಕಟ್ಟು ಜನಾಂಗದ ಮಹಿಳೆಯರ ಬಗ್ಗೆ ನಿಮಗೆ ಅಚ್ಚರಿ ಅನಿಸಬಹುದು. ಕಾಡಿನಲ್ಲಿ ವಾಸವಾಗಿರುವ ಈ ಬುಡಕಟ್ಟಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ. ಅದು ಕೂಡಾ ಅವರ ಮದುವೆಯ ದಿನ.

ಇದನ್ನೂ ಓದಿ: ನಿದ್ದೆಯಲ್ಲೇ ಕಳೆದುಹೋಗುವ ಮುನ್ನ ಎಚ್ಚರ! – ಅತಿಯಾಗಿ ನಿದ್ರೆ ಮಾಡಿದ್ರೆ ಆರೋಗ್ಯಕ್ಕೇ ಕುತ್ತು!

ಸ್ನಾನ ಎಂದರೆ ದೇಹ ಶುದ್ಧಿ. ಜೊತೆಗೆ ಮನಸಿಗೂ ನೆಮ್ಮದಿ. ಪ್ರತಿದಿನ ಸ್ನಾನ ಮಾಡಿದರೆ ಶುಭ್ರತೆಯ ಭಾವ. ಜೊತೆಗೆ ಅದೇನೋ ಸಮಾಧಾನ. ಆದರೆ, ಆಫ್ರಿಕಾದ ಹೃದಯ ಭಾಗದಲ್ಲಿರುವ ಒಂದು ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರು ಈ ಎಲ್ಲಾ ವಿಚಾರದಲ್ಲೂ ಉಲ್ಟಾ. ಅವರು ಜೀವನದಲ್ಲಿ ಒಮ್ಮೆ ಮಾತ್ರವೇ ಸ್ನಾನ ಮಾಡುವುದು. ನಮೀಬಿಯಾ ದೇಶದ ಮರುಭೂಮಿಯಲ್ಲಿ ವಾಸಿಸುವ ಹಿಂಬಾ ಬುಡಕಟ್ಟು ಜನಾಂಗದ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರವೇ ಸ್ನಾನ ಮಾಡುವುದು. ಹಿಂಬಾ ಜನಾಂಗದಲ್ಲಿ ಮಹಿಳೆಯರು ದಿನನಿತ್ಯ ಸ್ನಾನ ಮಾಡುವುದಿಲ್ಲ. ಇದು ಇವರ ಸಂಪ್ರದಾಯವೂ ಹೌದು. ಜೊತೆಗೆ ಇವರು ವಾಸ ಮಾಡುವ ವಾತವಾರಣ ಕೂಡಾ ಇದಕ್ಕೆ ಕಾರಣವಾಗಿರಬಹುದು.

ಹಿಂಬಾ ಜನರು ವಾಸಿಸುವ ಪ್ರದೇಶ ಮರುಭೂಮಿಯಾಗಿದೆ. ಇಲ್ಲಿ ನೀರಂತೂ ಮರೀಚಿಕೆಯಾಗಿದೆ. ಈ ಸಮುದಾಯದ ಮಹಿಳೆಯರು ತಮ್ಮ ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುತ್ತಾರೆ. ಅದು ಕೂಡ ಅವರ ಮದುವೆ ದಿನ. ಮದುವೆಯ ದಿನಕ್ಕೆ ಅವರು ವಿಶೇಷ ರೀತಿಯಲ್ಲಿ ದೇಹ ಶುದ್ಧಿಗೊಳಿಸಿ, ಸಂಪ್ರದಾಯದಂತೆ ವಿಶೇಷ ತಯಾರಿ ಮಾಡಿಕೊಳ್ಳುತ್ತಾರೆ. ಇದು ಸ್ನಾನವನ್ನು ಸಂತೋಷದ ಆಚರಣೆಯಾಗಿ ಪರಿಗಣಿಸುವ ಅವರ ನಂಬಿಕೆಗೆ ಸಾಕ್ಷಿಯಾಗಲಿದೆ. ಉಳಿದ ದಿನಗಳಲ್ಲಿ ಅವರು ದಿನನಿತ್ಯ ಸ್ವಚ್ಛತೆಗೆ ‘ಧೂಮ ಸ್ನಾನ’ ಎಂಬ ವಿಧಾನವನ್ನು ಬಳಸುತ್ತಾರೆ. ಇದು ಮಣ್ಣಿನ ಮತ್ತು ತೆಂಗಿನ ತೆಳ್ಳಗಿನ ನಾರಿಗೆ ಹಚ್ಚಿದ ಕುಸುಮ ಗಿಡದ ಹೊನ್ನಿನಿಂದ ತೆಗೆದ ಧೂಮದಿಂದ ದೇಹಕ್ಕೆ ತಾಗಿಸಿಕೊಳ್ಳುವುದು ಇವರ ಸಾಂಪ್ರದಾಯ. ಹೀಗೆ ತಾವು ಕೊಬ್ಬು, ನೊಣಗಳು, ಕ್ರಿಮಿ, ಕೀಟಗಳನ್ನು ದೂರಪಡಿಸುತ್ತಾರೆ .

ನಿಮಗೆ ಇನ್ನೊಂದು ಅಚ್ಚರಿ ವಿಷಯ ಇದೆ.  ನಾವು ನಿತ್ಯ ಸ್ನಾನ ಮಾಡಿ, ಮುಖತೊಳೆದು ಚರ್ಮದ ಆರೈಕೆ ಮಾಡಿಕೊಳ್ಳುತ್ತೇವೆ. ಆದರೆ, ಇವರು ಸ್ನಾನ ಮಾಡದೆ ಇದ್ದರು ಸೌಂದರ್ಯಕ್ಕೆ ಕಡಿಮೆಯಿಲ್ಲ. ತಮ್ಮ ಚರ್ಮವನ್ನು ತುಂಬಾ ಚೆನ್ನಾಗಿ ಆರೈಕೆ ಮಾಡಿಕೊಳ್ಳುತ್ತಾರೆ. ಚರ್ಮದ ಆರೈಕೆಗೆ ಒಂದು ವಿಶಿಷ್ಟ ಮಿಶ್ರಣವನ್ನು ಬಳಸುತ್ತಾರೆ. ಇದು ಪಶು ಕೊಬ್ಬು ಮತ್ತು ಕೆಂಪು ಮಣ್ಣಿನಿಂದ ತಯಾರಿತ ಎಣ್ಣೆ ಲೋಷನ್ ಆಗಿದ್ದು, ತೇವಾಂಶ ಉಳಿಸಿ, ಸೂರ್ಯನ ತೀವ್ರತೆಯಿಂದ ಚರ್ಮವನ್ನು ರಕ್ಷಿಸುತ್ತದೆ. ಹಿಂಬಾ ಜನರು ತಮ್ಮ ಚರ್ಮ ಹಾಗೂ ಕೂದಲಿನಲ್ಲಿ ಒಂದು ವಿಶೇಷ ಮಿಶ್ರಣವನ್ನು ಹತ್ತಿಸುತ್ತಾರೆ. ಇದು ಒಟ್ಜೈಜ್ ಎಂದು ಕರೆಯಲ್ಪಡುವದು. ಎಣ್ಣೆಯ (butterfat) ಜೊತೆಗೆ ಕೆಂಪು ಅಕ್ಕೂರ ಮಣ್ಣು (ochre), ಕೆಲವು ಸುಗಂಧಿ ಹಣ್ಣುಗಳೊಡನೆ ಮಿಶ್ರಣ ಮಾಡಿದ ವಸ್ತುಗಳನ್ನು ಬಳಸುತ್ತಾರೆ. ಇದರಿಂದ ಚರ್ಮದ ರಕ್ಷಣೆ, ದುರ್ವಾಸನೆಯಿಂದಲೂ ಮುಕ್ತಿ, ಕೀಟ ನಿರೋಧಕ ಲಾಭಗಳು ಸಿಗುತ್ತವೆ .

ಹಿಂಬಾ ಜನರು ಕುರಿಗಳನ್ನು ಸಾಕುತ್ತಾರೆ. ಹಸುಗಳನ್ನೂ ಸಹ ಸಾಕಣೆ ಮಾಡುತ್ತಾರೆ. ಆದರೆ ಮಾಂಸವನ್ನು ಮಾತ್ರ ವಿಶೇಷ ಸಂದರ್ಭಗಳಲ್ಲಿ ಸೇವಿಸುತ್ತಾರೆ. ಹಿಂಬಾ ಸಮುದಾಯದವರ ಆರ್ಥಿಕತೆಗೆ ಹಸುಗಳು ಅಧಾರ. ಪ್ರತಿ ಕುಟುಂಬದಲ್ಲಿ ಹಸುಗಳು ಮೌಲ್ಯವೆಂದು ಪರಿಗಣಿಸಲ್ಪಡುತ್ತವೆ. ಹಿಂಬಾ ಮಹಿಳೆಯರು ಭಕ್ಷ್ಯ ತಯಾರಿ, ನೀರು ತರುವುದು, ದೇಹಗಳ ಸ್ವಚ್ಛತೆ, ಆಭರಣಗಳ ತಯಾರಿ ಸೇರಿ ಜೀವನದ ಪ್ರಮುಖ ಕೆಲಸಗಳನ್ನು ಇವರೇ ಮಾಡುತ್ತಾರೆ. ಸಾಂಪ್ರದಾಯಿಕ ಜೀವನಶೈಲಿ ಮತ್ತು ಪ್ರಕೃತಿಯೊಂದಿಗೆ ಹೊಂದಾಣಿಕೆಯ ವಿಚಾರದಲ್ಲಿ ಈ ಬುಡಕಟ್ಟು ಜನರನ್ನು ಮೆಚ್ಚಲೇಬೇಕು. ಸ್ನಾನವಿಲ್ಲದೆ ಕೂಡ ಸ್ವಚ್ಛತೆಯನ್ನು ಕಾಪಾಡುವ ಅವರ ವಿಧಾನಗಳು ನಮಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

Sulekha