ಪಂತ್ ಮತ್ತು ಕೆ.ಎಲ್. ರಾಹುಲ್ ಶತಕ – ಇಂಗ್ಲೆಂಡ್‌ಗೆ 371 ರನ್‌ಗಳ ಬೃಹತ್ ಗುರಿ

ಪಂತ್ ಮತ್ತು ಕೆ.ಎಲ್. ರಾಹುಲ್ ಶತಕ – ಇಂಗ್ಲೆಂಡ್‌ಗೆ 371 ರನ್‌ಗಳ ಬೃಹತ್ ಗುರಿ
Leeds [England], Jun 21 (ANI): India's Jasprit Bumrah and teammates celebrate the wicket of England's Ben Duckett during the second day of the 1st test match, at Headingley Cricket Ground in Leeds on Saturday. (@BCCI X/ANI Photo)

ಲೀಡ್ಸ್‌ನಲ್ಲಿ ನಡೆಯುತ್ತಿರೋ ಇಂಗ್ಲಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 364 ರನ್‌ಗಳಿಗೆ ಆಲೌಟ್ ಆಯಿತು. ರಿಷಭ್ ಪಂತ್ ಮತ್ತು ಕೆ.ಎಲ್. ರಾಹುಲ್ ಅವರ ಶತಕಗಳು ಹೊರತುಪಡಿಸಿ, ಉಳಿದ ಬ್ಯಾಟ್ಸ್‌ಮನ್‌ಗಳು ಹೇಳಿಕೊಳ್ಳುವಂತ ಪ್ರದರ್ಶನ ನೀಡಿಲ್ಲ.  ಪಂತ್ ಮತ್ತು ರಾಹುಲ್ ನಡುವಿನ 195 ರನ್‌ಗಳ ಪಾಲುದಾರಿಕೆ ತಂಡಕ್ಕೆ ಆಸರೆಯಾಯಿತು. ಇಂಗ್ಲೆಂಡ್ ಗೆಲುವಿಗೆ 371 ರನ್‌ಗಳ ಬೃಹತ್ ಗುರಿ ಪಡೆದುಕೊಂಡಿದೆ.

ಇದನ್ನೂ ಓದಿ:ನಿದ್ದೆಯಲ್ಲೇ ಕಳೆದುಹೋಗುವ ಮುನ್ನ ಎಚ್ಚರ! – ಅತಿಯಾಗಿ ನಿದ್ರೆ ಮಾಡಿದ್ರೆ ಆರೋಗ್ಯಕ್ಕೇ ಕುತ್ತು!

90 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನದಾಟವನ್ನು ಮುಗಿಸಿದ್ದ ಟೀಂ ಇಂಡಿಯಾ, ಇಲ್ಲಿಂದ ನಾಲ್ಕನೇ ದಿನದಾಟವನ್ನು ಮುಂದುವರೆಸಿತು. ಆದರೆ ತಂಡವು ನಾಯಕ ಶುಭಮನ್ ಗಿಲ್ ಬೇಗನೆ ವಿಕೆಟ್ ಒಪ್ಪಿಸಿದರು. ಇದರ ನಂತರ, ಪಂತ್ ಮತ್ತು ರಾಹುಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ಬೌಲರ್‌ಗಳು ವಿಕೆಟ್​ಗಾಗಿ ಕಾಯುವಂತೆ ಮಾಡಿದರು. ಚಹಾ ವಿರಾಮಕ್ಕೂ ಮೊದಲು 118 ರನ್‌ ಬಾರಿಸಿದ್ದ ಪಂತ್ ವಿಕೆಟ್ ಒಪ್ಪಿಸಿದರು. ಇದರ ನಂತರ, ರಾಹುಲ್ ಇನ್ನಿಂಗ್ಸ್ ನಿಭಾಯಿಸಿದರಾದರೂ ಅವರು ಕೂಡ 137 ರನ್ ಬಾರಿಸಿ ಔಟಾದರು. ರಾಹುಲ್ ಪೆವಿಲಿಯನ್‌ಗೆ ಹಿಂತಿರುಗಿದ ತಕ್ಷಣ, ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಹೆಣಗಾಡಲು ಪ್ರಾರಂಭಿಸಿದರು.

ರಾಹುಲ್ ಔಟಾದ ತಕ್ಷಣ ಭಾರತದ ಇನ್ನಿಂಗ್ಸ್ ಕುಸಿಯಿತು. 84 ನೇ ಓವರ್‌ನಲ್ಲಿ ಬ್ರೈಡನ್ ಕಾರ್ಸೆ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಆಗ ಟೀಂ ಇಂಡಿಯಾದ ಸ್ಕೋರ್ 333 ರನ್‌ಗಳಾಗಿತ್ತು. ಇದರ ನಂತರ, ತಂಡದ ಸ್ಕೋರ್‌ಗೆ ಕೇವಲ 2 ರನ್‌ಗಳನ್ನು ಸೇರಿಸುವುದರೊಳಗೆ ಕರುಣ್ ನಾಯರ್ ಕೂಡ ಔಟಾದರು. ನಂತರ ಶಾರ್ದೂಲ್ ಠಾಕೂರ್ ಕೂಡ 349 ರನ್‌ಗಳಲ್ಲಿ ತಮ್ಮ ವಿಕೆಟ್ ಕಳೆದುಕೊಂಡರು. ಅದೇ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಔಟಾದರು. ಅಂತಿಮವಾಗಿ ಟೀಂ ಇಂಡಿಯಾ 364 ರನ್‌ಗಳಿಗೆ ಆಲೌಟ್ ಆಯಿತು. ಅಂದರೆ, ಭಾರತ ಕೇವಲ 31 ರನ್‌ಗಳಿಗೆ ತನ್ನ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

Kishor KV