BBK 12ಕ್ಕೆ ಕಿಪಿ ಕೀರ್ತಿ, ರೇಷ್ಮಾ.. ದೊಡ್ಮನೆಯಲ್ಲಿ ರಂಜಿತ್‌ಗೆ ಮತ್ತೆ ಚಾನ್ಸ್‌? – TRP ಗಿಮಿಕ್.. ಕಿಚ್ಚನ ಮಾತು ಲೆಕ್ಕಕ್ಕಿಲ್ವಾ?

BBK 12ಕ್ಕೆ ಕಿಪಿ ಕೀರ್ತಿ, ರೇಷ್ಮಾ.. ದೊಡ್ಮನೆಯಲ್ಲಿ ರಂಜಿತ್‌ಗೆ ಮತ್ತೆ ಚಾನ್ಸ್‌? – TRP ಗಿಮಿಕ್.. ಕಿಚ್ಚನ ಮಾತು ಲೆಕ್ಕಕ್ಕಿಲ್ವಾ?

ಬಿಗ್‌ ಬಾಸ್‌ ಕನ್ನಡ.. ಸೀಸನ್‌ 11 ಮುಗಿದು, ಈಗ12ನೇ ಸೀಸನ್‌ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶೋಗಾಗಿ ಈಗ ತೆರೆಮರೆಯಲ್ಲೇ ಸಿದ್ದತೆ ನಡಿತಾ ಇದೆ. ಆದ್ರೆ ಈ ಬಾರಿ ಯಾರು ಶೋ ಹೋಸ್ಟ್‌ ಮಾಡ್ತಾರೆ ಅನ್ನೋದ್ರ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ.. ಕಿಚ್ಚ ಸುದೀಪ್‌ ಹೋಸ್ಟ್‌ ಮಾಡ್ತಾರಾ? ಅಥವಾ ಸುದೀಪ್‌ ಜಾಗಕ್ಕೆ ಬೇರೆ ಯಾರು ಬರ್ತಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಇವೆಲ್ಲದ್ರ ಮಧ್ಯೆ ಈಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಕ್ಕೆ ಸ್ಪರ್ಧಿಗಳಾಗಿ ಯಾರು ಬರ್ತಾರೆ ಅನ್ನೋ ಪ್ರಶ್ನೆ ಕೂಡ ವೀಕ್ಷಕರನ್ನ ಕಾಡ್ತಿದೆ.. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಕೆಲ ವೈರಲ್‌ ಸ್ಟಾರ್ಸ್‌ ಹೆಸ್ರು ಜೋರಾಗಿ ಸದ್ದು ಮಾಡ್ತಿದೆ.

ಇದನ್ನೂ ಓದಿ: ಫಸ್ಟ್ ಮ್ಯಾಚ್ ಗಳಲ್ಲೇ ಪಾಕ್ ಬೆಂಡೆತ್ತಿದ ಭಾರತ – ಟೆಸ್ಟ್, ಏಕದಿನ, ಟಿ-20ಯಲ್ಲೂ ಭಾರತವೇ ಬಾಸ್!

ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.  ಶೋ ನೋಡಲು ವೀಕ್ಷಕರು ಕಾದು ಕೂತಿದ್ದಾರೆ. ಇತ್ತೀಚೆಗೆ ಕಿಚ್ಚ ಸುದೀಪ್‌ ಸೀಸನ್‌ 12 ರಲ್ಲೂ ಹೋಸ್ಟ್‌ ಮಾಡ್ತಾರೆ ಅನ್ನೋ ಸುದ್ದಿ ಸದ್ದು ಮಾಡಿತ್ತು.. ಅಷ್ಟೇ ಅಲ್ಲ ಕೆಲ ಕಂಡೀಷನ್ಸ್‌ ಹಾಕಿದ್ದಾರೆ. ವಿವಾದ ಮಾಡಿಕೊಂಡವರನ್ನ ಶೋಗೆ ಸೆಲೆಕ್ಟ್‌ ಮಾಡುವಂತಿಲ್ಲ ಎಂದಿದ್ದಾರೆ. ಇದಕ್ಕೆ ವಾಹಿನಿ ಕೂಡ ಒಪ್ಪಿಕೊಂಡಿದೆ ಅಂತಾ ಹೇಳಲಾಗಿತ್ತು. ಇದ್ರ ಬೆನ್ನಲ್ಲೇ ಈ ಬಾರಿಯ ಸೀಸನ್‌ ಗೆ ಯಾರ್ಯಾರು ಸ್ಪರ್ಧಿಗಳಾಗಿ ಭಾಗವಹಿಸ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಇದೀಗ  ಸೋಶಿಯಲ್‌ ಮೀಡಿಯಾದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ  ಸಂಭಾವ್ಯ ಸ್ಪರ್ಥಿಗಳ ಪಟ್ಟಿ ಕೂಡ ಹರಿದಾಡುತ್ತಿದೆ. ಅಷ್ಟಕ್ಕೂ ಈ ಲಿಸ್ಟ್‌ ನಲ್ಲಿ ಯಾರ್ಯಾರ ಹೆಸ್ರು ಇದೆ ಅಂತಾ ಹೇಳ್ತಾ ಹೋಗ್ತಿನಿ..

ಬಿಗ್‌ ಬಾಸ್‌ ಸೀಸನ್‌ 12 ಶುರುವಾಗ್ತಿದೆ ಅನ್ನೋ ಸುದ್ದಿ ಬರ್ತಿದ್ದಂತೆ ಕೆಲ ಸ್ಪರ್ಧಿಗಳ ಹೆಸ್ರು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಇದ್ರಲ್ಲಿ ರೀಲ್ಸ್‌ ರಾಣಿ ರೇಷ್ಮಾ ಹಾಗೂ ನವೀನ್ ದೊಡ್ಮನೆಗೆ ಎಂಟ್ರಿ ಕೊಡ್ತಾರೆ ಎಂದು ಹೇಳಲಾಗ್ತಿದೆ..‌ ಹೌದು, ರೀಲ್ಸ್‌ ರಾಣಿ ರೇಷ್ಮಾ ಸೋಶಿಯಲ್‌ ಮೀಡಿಯಾ ಪ್ರತಿಭೆ. ಆರಂಭದಲ್ಲಿ , ಬೆಳಗ್ಗೆ ಎದ್ದು ದಿನಚರಿ ಶುರು ಮಾಡುವ ಸಮಯದಿಂದ ಮಲಗುವ ಸಮಯದವರೆಗೂ ವಿಡಿಯೋ ಮಾಡಿ ತಾನು ಏನೇನ್ ಮಾಡ್ದೆ ಅಂತ ಜನರಿಗೆ ಅಪ್‌ಡೇಟ್‌ ಮಾಡ್ತಿದ್ದ ರೇಷ್ಮಾ ಈಗ ಸಖತ್‌ ಫೇಮಸ್.‌ ಇತ್ತೀಚೆಗಂತೂ ಎಲ್ಲಾ ಸೆಲೆಬ್ರಿಟಿ ಫಂಕ್ಷನ್‌ಗಳಲ್ಲೂ ರೇಷ್ಮಾ ಹಾಜರಾಗುತ್ತಿದ್ದಾರೆ. ಈಗಾಗಲೇ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಸಿದ್ದ ರೇಷ್ಮಾ ಈಗ ದೊಡ್ಮನೆಗೆ ಬರ್ತಿದ್ದಾರಂತೆ. ಅಷ್ಟೇ ಅಲ್ಲ ಅವ್ರ ರೀಲ್ಸ್‌ ಪಾರ್ಟ್ನರ್‌ ನವೀನ್‌ ಕೂಡ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಲಿದ್ದಾರೆಂದು ಹೇಳಲಾಗ್ತಿದೆ.

ಕಿಪಿ ಕೀರ್ತಿ.. ಹಾಯ್‌ ಜನರೇ ಎಂದು ಹೇಳೋ ಮೂಲಕ ಫೇಮಸ್‌ ಆದ ಈಕೆ.. ಲವ್‌,  ಬ್ರೇಕ್‌ಅಪ್‌ ಮೂಲಕ ಕೂಡ ಸದ್ದು ಮಾಡಿದ್ರು.. ಅದಾದ ಬಳಿಕ ಆಕೆ ಸೆಲೆಬ್ರಿಟಿ ಆಗಿದ್ದಾರೆ. ಕಿಪಿ ಕೀರ್ತಿಗೆ ಈಗಾಗಲೇ ಸಾಕಷ್ಟು ಫ್ಯಾನ್ಸ್‌ ಇದ್ದಾರೆ. ಈಕೆ ಕೂಡ ಬಿಗ್‌ ಬಾಸ್‌ ಸೀಸನ್‌ 12 ರಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ಖ್ಯಾತ ಜ್ಯೋತಿಷಿ ಆನಂದ್‌ ಗುರೂಜಿ ಅವರು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಆನಂದ್‌ ಗೂರುಜಿ ಅವರು ದೊಡ್ಮನೆ ಬಂದರೆ ಹೇಗೆ ಇರ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿದೆ. ಇವ್ರ ಸಹ ಸ್ಪರ್ಧಿಯಾಗಿ ಖಾಸಗಿ ವಾಹಿನಿಯಲ್ಲಿ ನಿರೂಪಕಿಯಾಗಿ ಹೆಚ್ಚು ಜನಪ್ರಿಯತೆಯನ್ನ ಪಡೆದಿರುವ ದಿವ್ಯಾ ವಸಂತ ಕೂಡ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಇವ್ರ ಹೆಸರು ಕೂಡ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿರೋ ಬಿಗ್‌ ಬಾಸ್‌ ಸ್ಪರ್ಧಿಗಳ ಲಿಸ್ಟ್‌ನಲ್ಲಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ರಂಜಿತ್‌ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ರು.. ಆದ್ರೆ ಲಾಯರ್‌ ಜಗದೀಶ್‌ ಜೊತೆ ಕಿರಿಕ್‌ ಮಾಡಿಕೊಂಡಿದ್ರು.. ಲಾಯರ್‌ ಜಗದೀಶ್‌ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ರು. ರೂಲ್ಸ್‌ ಬ್ರೇಕ್‌ ಮಾಡಿದ್ದಕ್ಕಾಗಿ ರಂಜಿತ್‌ ದೊಡ್ಮನೆಯಿಂದ ಔಟ್‌ ಆಗಿದ್ರು. ಇದೀಗ ರಂಜಿತ್‌  12 ಸೀಸನ್‌ ಗೆ ರಂಜಿತ್‌ ಅವರು ಎಂಟ್ರಿಯಾಗಲಿದ್ದಾರೆ ಎನ್ನಲಾಗಿದೆ. ಆದ್ರೆ ಇದು ಎಷ್ಟರಮಟ್ಟಿಗೆ ಸತ್ಯ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಭವ್ಯಾ ಗೌಡ ಸ್ಪರ್ಧಿಸಿದ್ರು. ಫ್ಯಾಮಿಲಿ ರೌಂಡ್‌ ಸಂಚಿಕೆಯಲ್ಲಿ ಭವ್ಯಾ ಫ್ಯಾಮಿಲಿ ಜೊತೆ ಆಕೆಯ ಅಕ್ಕ ಕೂಡ ಬಂದಿದ್ರು. ಫುಲ್‌ ಡೇ ದಿವ್ಯ ಗೌಡ ದೊಡ್ಮನೆಯಲ್ಲಿ ಇದ್ರು. ಅಲ್ಲಿಂದಲೇ ಆಕೆ ಫೇಮಸ್‌ ಆದ್ರು.. ಆಕೆಯನ್ನ ಮುಂದಿನ ಸೀಸನ್‌ ಗೆ ಕರೆಸಿ ಅಂತಾ ಫ್ಯಾನ್ಸ್‌ ಹೇಳ್ತಾ ಬಂದಿದ್ರು. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಕ್ಕೆ ಭವ್ಯಾ ಗೌಡ ಅಕ್ಕ ದಿವ್ಯಾ ಗೌಡ ಎಂಟ್ರಿ ಕೊಡೋ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.

ಇನ್ನು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಕ್ಕೆ ಯೂಟ್ಯೂಬರ್‌ ಸಮೀರ್‌ ಬರ್ತಾರೆ ಎಂದು ಹೇಳಲಾಗ್ತಿದೆ. ಸಮೀರ್‌ ತಮ್ಮ ಕಂಟೆಂಟ್‌ಗಳಿಂದ ಹೆಚ್ಚು ಜನಮನವನ್ನು ಗೆದ್ದಿದ್ದಾರೆ. ಸಮೀರ್‌ ಅವರು ಬಿಗ್‌ ಬಾಸ್‌ ಮನೆಗೆ ಬಂದ್ರೆ ಚೆನ್ನಾಗಿರುತ್ತೆ. ದೊಡ್ಮನೆಯಲ್ಲಿ ಹೇಗಿರ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ ಅಂತಾ ಬಿಗ್‌ ಬಾಸ್‌ ವೀಕ್ಷಕರು ಹೇಳ್ತಿದ್ದಾರೆ.

ಒಟ್ಟಾರೆ ಬಿಗ್‌ ಬಾಸ್‌ ಸೀಸನ್‌ 12 ಆರಂಭದಲ್ಲೇ ಸಾಕಷ್ಟು ಸದ್ದು ಮಾಡ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರೀ ವಿವಾದ ಸೃಷ್ಟಿಸಿದ, ಸದ್ದು – ಸುದ್ದಿ ಮಾಡಿದ ಇವರೆಲ್ಲರೂ  ಬಿಗ್ ಬಾಸ್ ಶೋಗೆ ಬಂದರೆ ವೀಕ್ಷಕರ ಗಮನ ಸೆಳೆಯೋದು ಗ್ಯಾರೆಂಟಿ. ಅದರಿಂದ ಟಿಆರ್‌ಪಿ ಏರಿಕೆ ಆಗುವ ಸಾಧ್ಯತೆಯೂ ಇರುತ್ತದೆ. ಆದರೆ, ವಿವಾದಾತ್ಮಕ ಸ್ಪರ್ಧಿಗಳು ಬೇಡ ಅಂತ ಕಿಚ್ಚ ಸುದೀಪ್ ಕಂಡೀಷನ್ ಹಾಕಿದ್ದಾರೆ ಅಂತಾ ಹೇಳಲಾಗ್ತಿದೆ. ಹೀಗಾಗಿ ಇವ್ರೆಲ್ಲಾ ದೊಡ್ಮನೆಗೆ ಬರ್ತಾರಾ? ಇಲ್ವಾ ಅನ್ನೋ ಕ್ಯೂರಿಯಾಸಿಟಿ ಇದ್ದೇ ಇದೆ.. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಪ್‌ಡೇಟ್‌ ಸಿಗುತ್ತಾ ಅಂತಾ ಕಾದು ನೋಡ್ಬೇಕು.

Shwetha M