ತಾಯಿ ಅನಾರೋಗ್ಯ.. ಲಕ್ಷ್ಮೀ ನಿವಾಸಕ್ಕೆ ಶ್ವೇತಾ ಗುಡ್ಬೈ – ಲಕ್ಷ್ಮೀ ಪಾತ್ರಕ್ಕೆ ನಟಿ ಮಾಧುರಿ ಎಂಟ್ರಿ!

ಲಕ್ಷ್ಮೀ ನಿವಾಸ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಆದ್ರೀಗ ಸೀರಿಯಲ್ ನಲ್ಲಿ ಸಾಕಷ್ಟು ಬದಲಾವಣೆಯಾಗ್ತಿದೆ. ಇತ್ತೀಚೆಗಷ್ಟೇ ತನು ಪಾತ್ರಧಾರಿ ಯುಕ್ತಾ ಸೀರಿಯಲ್ ಗೆ ಗುಡ್ಬೈ ಹೇಳಿದ್ರು. ಇದೀಗ ಸೀರಿಯಲ್ ನ ಪ್ರಮುಖ ನಟಿಯೊಬ್ಬರು ಸೀರಿಯಲ್ನಿಂದ ಹೊರ ನಡೆದಿದ್ದಾರೆ. ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ವೇತಾ ಏಕಾಏಕಿ ಸೀರಿಯಲ್ಗೆ ಗುಡ್ಬೈ ಹೇಳಿದ್ದಾರೆ. ಇದೀಗ ಸೀರಿಯಲ್ ಬಿಡೋದಿಕ್ಕೆ ಕಾರಣ ಏನು ಅನ್ನೋದನ್ನ ಕೂಡ ತಿಳಿಸಿದ್ದಾರೆ.
ಲಕ್ಷ್ಮೀ ನಿವಾಸ ಸೀರಿಯಲ್ ವೀಕ್ಷಕರ ಮನಗೆದ್ದಿದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಪ್ರತಿಯೊಂದು ಪಾತ್ರವೂ ವಿಭಿನ್ನವಾಗಿ ಮೂಡಿಬರ್ತಿದೆ. ಅದ್ರಲ್ಲೂ ನಟಿ ಶ್ವೇತಾ.. ಲಕ್ಷ್ಮೀ ಪಾತ್ರದ ಮೂಲಕ ವೀಕ್ಷಕರಿಗೆ ಅಚ್ಚುಮೆಚ್ಚಾಗಿದ್ರು.. ಆದ್ರೆ ಕಳೆದ ಕೆಲವು ದಿನಗಳಿಂದ ಆಕೆ ಸೀರಿಯಲ್ ನಲ್ಲಿ ಕಾಣಿಸಿಕೊಂಡಿರ್ಲಿಲ್ಲ.. ಲಕ್ಷ್ಮೀ ಎಲ್ಲ ಅಂತಾ ವೀಕ್ಷಕರು ಕೇಳ್ತಾ ಇದ್ರು.. ಇದೀಗ ನಟಿ ಶ್ವೇತಾ ಸೀರಿಯಲ್ ಫ್ಯಾನ್ಸ್ಗೆ ಶಾಕ್ ಕೊಟ್ಟಿದ್ದಾರೆ.. ಲಕ್ಷ್ಮೀ ಪಾತ್ರಕ್ಕೆ ಏಕಾಏಕಿ ಗುಡ್ಬೈ ಹೇಳಿದ್ದಾರೆ. ಇದು ಅವ್ರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸೀರಿಯಲ್ಗೆ ವಿದಾಯ ಹೇಳಿದ್ಯಾಕೆ ಅಂತಾ ಅನೇಕರು ಕೇಳ್ತಾ ಇದ್ರು.. ಇದೀಗ ನಟಿ ಕಡೆಗೂ ಈ ಬಗ್ಗೆ ಅಪ್ಡೇಟ್ ನೀಡಿದ್ದಾರೆ.. ಸೀರಿಯಲ್ನಿಂದ ಹೊರ ಬಂದಿದ್ದೇಕೆ ಅಂತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಹೌದು, 90ರ ದಶಕದಲ್ಲಿ ನಟಿ ಶ್ವೇತಾ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದರು. ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಈಕೆ ಬಳಿಕ ಗೆಜ್ಜೆನಾದ, ಕರ್ಪೂರದ ಗೊಂಬೆ, ಹೆತ್ತವರು, ಲಕ್ಷ್ಮೀ ಮಹಾಲಕ್ಷ್ಮೀ, ಮುದ್ದಿನ ಅಳಿಯ, ಕೋಟಿಗೊಬ್ಬ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ರು.. ಅಷ್ಟೇ ಅಲ್ಲ ಧಾರವಾಹಿಗಳಲ್ಲೂ ಕೆಲ ಪಾತ್ರಕ್ಕೆ ಜೀವ ತುಂಬಿದ್ರು. ಆದರೆ ಆನಂತರ ಶ್ರೇತಾ ಕನ್ನಡ ಚಿತ್ರರಂಗದಿಂದ ದೂರವಾಗಿದ್ರು. ಆ ಸಮಯದಲ್ಲಿ ಗಂಡ ಶ್ರೀಧರ್ ಗೆ ಹಣಕಾಸಿನ ವಿಚಾರದಲ್ಲಿ ಮೋಸ ಆಗುತ್ತೆ. ಅದಾದ ಬಳಿಕ ಗಂಡನಿಗೆ ಆಕ್ಸಿಡೆಂಟ್ ಆಗುತ್ತೆ. ಸದ್ಯ ಶ್ವೇತಾ ಪತಿ ವೀಲ್ಚೇರ್ ನಲ್ಲೇ ಓಡಾಡುತ್ತಿದ್ದಾರೆ. ಅಂದಿನಿಂದ ಮನೆಯ ಜವಾಬ್ದಾರಿ ನಟಿ ಮೇಲೆ ಬೀಳುತ್ತೆ. ಈ ಎಲ್ಲಾ ಕಾರಣ ಆಕೆ ನಟನೆಯಿಂದ ದೂರ ಉಳಿದಿದ್ರು. ಕಳೆದ ವರ್ಷ ‘ಲಕ್ಷ್ಮೀ ನಿವಾಸ’ ಸೀರಿಯಲ್ ಮೂಲಕ ನಟನೆಗೆ ಕಮ್ಬ್ಯಾಕ್ ಮಾಡಿದ್ರು.. ಲಕ್ಷ್ಮೀ ಪಾತ್ರದಲ್ಲಿ ಶ್ವೇತಾ ಅಷ್ಟೇ ಮುಗ್ಧತೆಯಿಂದ ನಟಿಸಿದ್ದಾರೆ. ಆ ಸೀರಿಯಲ್ನಿಂದ ಉತ್ತಮ ಹೆಸರನ್ನು ಕೂಡ ಅವರು ಸಂಪಾದಿಸಿದ್ದರು. ಆದ್ರೀಗ ಆಕೆ ಸೀರಿಯಲ್ ನಿಂದ ಆಚೆ ಬಂದಿದ್ದಾರೆ.. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ನೀಡಿದ್ದಾರೆ. ನನ್ನ ವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಬ್ರೇಕ್ ಪಡೆಯುತ್ತಿದ್ದೇನೆ. ಥ್ಯಾಂಕ್ಯು ಕರ್ನಾಟಕ.. ತುಂಬಾ ಪ್ರೀತಿಯಿಂದ ನನ್ನನ್ನು ಸ್ವೀಕರಿಸಿದ್ದಕ್ಕಾಗಿ.. ಸೆಟ್ಗಳಲ್ಲಿ ನಾನು ಕೆಲವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಕನ್ನಡ ಪ್ರೇಕ್ಷಕರಿಗೆ ಪುನಃ ಪರಿಚಯಿಸಿದ್ದಕ್ಕಾಗಿ ಜೀ ಕನ್ನಡಕ್ಕೆ ತುಂಬಾ ಧನ್ಯವಾದಗಳು.. ಮತ್ತೆ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ಶ್ವೇತಾ ಸೀರಿಯಲ್ಗೆ ಗುಡ್ಬೈ ಹೇಳ್ತಿದ್ದಂತೆ, ಲಕ್ಷ್ಮೀ ಪಾತ್ರಕ್ಕೆ ಹೊಸ ನಟಿಯ ಆಯ್ಕೆ ಆಗಿದೆ. ಈ ಬಗ್ಗೆ ಲಕ್ಷ್ನೀ ನಿವಾಸ ಸೀರಿಯಲ್ ನಲ್ಲಿ ವಿಶ್ವನ ತಾಯಿ ಪಾತ್ರ ಮಾಡ್ತಿರೋ ನಟಿ ವಿಜಯಲಕ್ಷ್ಮೀ ಅಪ್ಡೇಟ್ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲಕ್ಷ್ಮೀ ಪಾತ್ರಕ್ಕೆ ಆಯ್ಕೆಯಾದ ನಟಿಯನ್ನ ಪರಿಚಯಿಸಿದ್ದಾರೆ. ಕನ್ನಡ ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಮಾಧುರಿ ಅವರನ್ನ ಲಕ್ಷ್ಮೀ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಮಾಧುರಿ ನಟಿ ತಾರಾ, ಸೌಂದರ್ಯ, ಜಯಂತಿ ಹೀಗೆ ದೊಡ್ಡ ಕಲಾವಿದರ ಜೊತೆಗೆ ನಟಿಸಿದ ಅನುಭವ ಇದೆ. ಇನ್ನು ನಟಿ ಮಾಧುರಿಗೆ ಮೊದಲು ಆಕ್ಷನ್ ಕಟ್ ಹೇಳಿದ್ದೇ ನಟ ಉಪೇಂದ್ರ ಅವರು. ಅಜಾಗಜಾಂತರ ಸಿನಿಮಾದಲ್ಲಿ ಹೀರೋಯಿನ್ ಫ್ರೆಂಡ್ ಆಗಿ ಮಾಧುರಿ ನಟಿಸಿದ್ದರು. ಅದಾದಮೇಲೆ ಅಮೃತಧಾರೆ, ಗೌತಮಿ, ಮಾಂಗಲ್ಯ ಮುಂತಾದ ಸೀರಿಯಲ್ನಲ್ಲೂ ನಟಿಸಿದ್ರು.. ಅದಾದ್ಮೇಲೆ ಮಾಧುರಿ ಚಿತ್ರರಂಗದಿಂದ ದೂರ ಉಳಿದಿದ್ರು.. ಇದೀಗ ಮತ್ತೆ ಹಲವು ವರ್ಷಗಳ ಬಳಿಕ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ.. ಅದೂ ಕೂಡ ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ.. ಇದೀಗ ಲಕ್ಷ್ಮೀ ಪಾತ್ರದ ಮೂಲಕ ವೀಕ್ಷಕರ ಮನಗೆಲ್ತಾರಾ ಅಂತಾ ಕಾದು ನೋಡ್ಬೇಕು.

ನೋಡಿರಿ

