ಮೆಟ್ರೋ ಪ್ರಯಾಣಿಕರಿಗೆ ಶಾಕ್ – ಈ ದಿನದಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ!

ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಉದ್ಯೋಗಿಗಳು ಸೇರಿದಂತೆ ಲಕ್ಷಾಂತರ ಜನರ ಸುಖಕರ ಪ್ರಯಾಣಕ್ಕೆ ಅನುಕೂಲವಾಗಿದೆ. ಇದೀಗ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿಯೊಂದಿದೆ. ಈ ದಿನದಂದು ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ: ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಜೊತೆಗಿರೋ ಫೋಟೋ ಡಿಲೀಟ್
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್)ವು ಇದೇ ಜೂನ್ 22 ರಂದು ಭಾನುವಾರ ನೇರಳೆ ಮಾರ್ಗದ ಹಲಸೂರು ಮತ್ತು ಟ್ರಿನಿಟಿ ಮೆಟ್ರೋ ನಿಲ್ದಾಣಗಳ ನಡುವೆ ನಿಗದಿತ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದೆ. ಹೀಗಾಗಿ ಅಂದು ಬೆಳಗ್ಗೆ 7 ಗಂಟೆಯಿದ 9 ಗಂಟೆವರೆಗೆ ಎಂ.ಜಿ ರಸ್ತೆ- ಬೈಯ್ಯಪ್ಪನಹಳ್ಳಿ ಮಾರ್ಗದ ಮಧ್ಯೆ ತಾತ್ಕಾಲಿಕವಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಲಿದೆ.
ಇದೇ ನೇರಳೆ ಮಾರ್ಗದ ಇತರೆ ಮಾರ್ಗಗಳಾದ ಚಲ್ಲಘಟ್ಟದಿಂದ ಎಂ.ಜಿ ರಸ್ತೆ ಮತ್ತು ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ (ಕಾಡುಗೋಡಿ) ಬೆಳಗ್ಗೆ 7 ಗಂಟೆಯಿಂದ ನಿಗದಿಯಂತೆ ಕಾರ್ಯನಿರ್ವಹಿಸಲಿದೆ. ಹಾಗೂ ಹಸಿರು ಮಾರ್ಗದ ರೆಸ್ಮ್ ಸಂಸ್ಥೆ ಮತ್ತು ಮಾದಾವರ ನಡುವೆ ಮೆಟ್ರೋ ಸೇವೆಗಳು ಬೆಳಗ್ಗೆ 7 ಗಂಟೆಯಿಂದ ಎಂದಿನಂತೆ ಕಾರ್ಯನಿರ್ವಸಲಿದೆ.
ಮೆಟ್ರೋ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪೂರ್ವ ತಯಾರಿಗೆ ಯೋಜಿಸಿಕೊಳ್ಳುವಂತೆ ವಿನಂತಿಸಲಾಗಿದೆ. ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ತೊಂದರೆ ಆಗುತ್ತಿರುವುದಕ್ಕೆ ಬಿಎಂಆರ್ಸಿಎಲ್ ವಿಷಾದ ವ್ಯಕ್ತಪಡಿಸಿದೆ.

ನೋಡಿರಿ

