ಭರ್ಜರಿ ವೀವ್ಸ್ ಕೊಟ್ಟ RCB – ಟಿ20 ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ

ರೆಡ್ ಆರ್ಮಿ ಈ ಸಲ ಕಪ್ ಗೆದ್ದು ಇತಿಹಾಸವ್ನ ಸೃಷ್ಟಿ ಮಾಡಿದೆ. ಕಾಲ್ತುಳಿತ ದುರಂತ ಒಂದು ಆಗಿಲ್ಲ ಅಂದ್ರೆ ಆ ಖುಷಿ ಇನ್ನೂ ಮರೆಯಾಗುತ್ತಿರಲಿಲ್ಲ.. ಆ ದುರಂತದಿಂದ ಕಪ್ ಗೆದ್ದ ಖುಷಿ ಮಾಯವಾಗಿದೆ.. ಬಟ್ ಈ ಸಲದ ಐಪಿಎಲ್ ಟೂರ್ನಿ ಇತಿಹಾಸವನ್ನ ನಿರ್ಮಿಸಿದೆ. ಇದು ಮುಂದೆ ಬ್ರೇಕ್ ಆಗಲ್ಲ ಅನ್ನೋ ಮಾತು ಕೂಡ ಕೇಳಿ ಬರ್ತಿದೆ..
ಐಪಿಎಲ್ ವೀಕ್ಷಿಸಿದ 100 ಕೋಟಿಗೂ ಹೆಚ್ಚು ಜನ
ಈ ಬಾರಿಯ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದಂತಿತ್ತು. ಆರ್ಸಿಬಿ ಈ ಸಲ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು ಮರೆಯಲಾಗದ ಸಂಗತಿ. ಇದ್ರ ಜೊತೆ ಈ ಬಾರಿಯ ಐಪಿಎಲ್ ಟೂರ್ನಿ ಒಂದು ಬಿಲಿಯನ್ ವೀಕ್ಷಕರನ್ನು ಗಳಿಸಿದೆ. ಅಂದರೆ, ನೂರು ಕೋಟಿಗೂ ಅಧಿಕ ಜನರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವೀಕ್ಷಿಸಿದವರ ಸಂಖ್ಯೆ 100 ಕೋಟಿ ದಾಟಿದೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆಯನ್ನು ಈ ಟೂರ್ನಿ ಪಡೆದಿದೆ. ಫುಟ್ಬಾಲ್ಗೆ ಹೋಲಿಸಿದರೆ ಐಪಿಎಲ್ ಟೂರ್ನಿಗೆ ಕಡಿಮೆ ವೀಕ್ಷಕರಿದ್ದರೂ ಒಂದು ದೇಶಕ್ಕೆ ಸೀಮಿತವಾದ ಟೂರ್ನಿಗೆ ಇಷ್ಟು ದೊಡ್ಡ ವೀಕ್ಷಣೆ ಸಿಕ್ಕಿದ್ದು ಊಗೆಗೂ ಮೀರಿದ್ದು.
1,400 ಕೋಟಿ ಗಂಟೆಗಳ ವೀಕ್ಷಣೆ
ಅಷ್ಟೇ ಅಲ್ಲ, ಟಿವಿ, ಡಿಜಿಟಲ್ ಇತ್ಯಾದಿ ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಐಪಿಎಲ್ 2025 ಟೂರ್ನಿಯ ಪಂದ್ಯಗಳು ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದಿವೆ. ಅಂದರೆ, 84,000 ಕೋಟಿ ನಿಮಿಷ ಅಥವಾ 1,400 ಕೋಟಿ ಗಂಟೆಗಳ ವೀಕ್ಷಣೆ ಪಡೆದಿವೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ.
ಅತಿಹೆಚ್ಚು ವೀಕ್ಷಣೆ ಪಡೆದ ಫೈನಲ್ ಪಂದ್ಯ
ಐಪಿಎಲ್ ಪಂದ್ಯಗಳ ಪೈಕಿ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ಅತಿಹೆಚ್ಚು ವೀಕ್ಷಣೆ ಪಡೆದಿದೆ. ಐಪಿಎಲ್ ಮಾತ್ರವಲ್ಲ, ಯಾವುದೇ ಟಿ20 ಪಂದ್ಯಕ್ಕೆ ಸಿಕ್ಕ ಅತಿಹೆಚ್ಚು ವೀಕ್ಷಣೆ. ಆ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್ಗಳಲ್ಲಿ 16.9 ಕೋಟಿ ವೀಕ್ಷಕರು ನೋಡಿದ್ದಾರೆ. ಒಟ್ಟು 1,500 ಕೋಟಿ ನಿಮಿಷಗಳಷ್ಟು ವೀಕ್ಷಣೆ ಪಡೆದಿದೆ. ಐಪಿಎಲ್ 2025 ಟೂರ್ನಿಗೆ ಸಿಕ್ಕ 840 ಬಿಲಿಯನ್ ನಿಮಿಷಗಳ ವೀಕ್ಷಣೆಯಲ್ಲಿ ಟಿವಿ ವಾಹಿನಿಗಳ ಮೂಲಕ 456 ಬಿಲಿಯನ್ ನಿಮಿಷ ಲೈವ್ ವೀಕ್ಷಣೆ ಆಗಿದೆ. ಜಿಯೋಹಾಟ್ಸ್ಟಾರ್ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ 384.6 ಬಿಲಿಯನ್ ನಿಮಿಷಗಳ ವೀಕ್ಷಣೆ ಆಗಿದೆ. ಬನ್ನಿ ಹಾಗಿದ್ರೆ ಐಪಿಎಲ್ ಮತ್ತು ಬೇರೆ ಪ್ರಮುಖ ಕ್ರಿಡೆಗಳ ನಡುವೆ ಎಷ್ಟು ವ್ಯತ್ಯಾಸವಿದೆ ಅನ್ನೋದ್ದನ್ನ ನೋಡೋಣ.
ಈ ಬಾರಿಯ ಐಪಿಎಲ್ 1 ಬಿಲಿಯನ್ ವೀಕ್ಷಕರು ನೋಡಿದ್ದು, 840 ಬಿಲಿಯನ್ ನಿಮಿಷಗಳ ವೀಕ್ಷಣೆ ಆಗಿದೆ. ಒಂದು ದೇಶಕ್ಕೆ ಸೀಮತವಾದ ಐಪಿಎಲ್ ಈ ಮೂಲಕ ಇತಿಹಾಸ ನಿರ್ಮಿಸಿದೆ. ಇನ್ನೂ 2023 ರಲ್ಲಿ ನಡೆದ ಐಸಿಸಿ ವರ್ಲ್ಡ್ ಕಪ್ 1 ಟ್ರಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದಿತ್ತು. ಹಾಗೇ ಫೀಫಾ ಫುಟ್ಬಾಲ್ ವರ್ಲ್ಡ್ ಕಪ್ 2022 ಟಿವಿಯಲ್ಲಿ 3.5 ಬಿಲಿಯನ್ ವೀಕ್ಷಕರು ವೀಕ್ಷಣೆ ಮಾಡಿದ್ರು. ಫೈನಲ್ ಪಂದ್ಯವೊಂದಕ್ಕೇ 1.5 ಬಿಲಿಯನ್ ವೀಕ್ಷಕರು ಬಂದಿದ್ದಾರೆ. ಬ್ಯಾಸ್ಕೆಟ್ಬಾಲ್ ವರ್ಲ್ಡ್ ಕಪ್ 2019 ಟಿವಿಯಲ್ಲಿ 3 ಬಿಲಿಯನ್ ವೀಕ್ಷಕರನ್ನ ಕಂಡಿದೆ. ಇನ್ನು ರಗ್ಬಿ ವರ್ಲ್ಡ್ ಕಪ್ 2023 80 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದಿದೆ.
ಒಟ್ನಲ್ಲಿ ಫುಟ್ಬಾಲ್ ಮತ್ತು ಬ್ಯಾಸ್ಕೆಟ್ಬಾಲ್ ಕ್ರೀಡೆಗಳು ಕ್ರಿಕೆಟ್ಗಿಂತ ಹೆಚ್ಚು ಜನಪ್ರಿಯವಾಗಿವೆ. ಹೆಚ್ಚು ದೇಶಗಳಲ್ಲಿ ಇದನ್ನು ನೋಡುತ್ತಾರೆ. ಆದ್ರೆ ಒಂದು ದೇಶಕ್ಕೆ ಸಿಮೀತವಾದ ಐಪಿಎಲ್ ಟೂರ್ನಿಗೆ ಇಷ್ಟು ವೀಕ್ಷಣೆ ಸಿಕ್ಕಿದ್ದು ಸಾಮನ್ಯವಿಷ್ಯ ಅಲ್ಲವೇ ಅಲ್ಲ.

ನೋಡಿರಿ

