ಸುಮಾ ಗುಟ್ಟು.. ಕುಸಿದು ಬಿದ್ದ ಪುಟ್ಟಕ್ಕ.. ಪುಟ್ಟಕ್ಕ ಪಾತ್ರ ಎಂಡ್‌ ಆಯ್ತಾ? – ಸೀರಿಯಲ್‌ಗೆ ಉಮಾಶ್ರೀ ಗುಡ್‌ಬೈ?

ಸುಮಾ ಗುಟ್ಟು.. ಕುಸಿದು ಬಿದ್ದ ಪುಟ್ಟಕ್ಕ.. ಪುಟ್ಟಕ್ಕ ಪಾತ್ರ ಎಂಡ್‌ ಆಯ್ತಾ? – ಸೀರಿಯಲ್‌ಗೆ ಉಮಾಶ್ರೀ ಗುಡ್‌ಬೈ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಹೊಸ ಹೊಸ ತಿರುವು ಪಡೆದುಕೊಳ್ತಿದೆ.. ಕಂಠಿ ಸ್ನೇಹ ಮದುವೆ ಆಗ್ತಿದ್ದಂತೆ ಪುಟ್ಟಕ್ಕ ದೇವಸ್ಥಾನಕ್ಕೆ ಹೋಗಿದ್ಲು. ಈ ಬೆನ್ನಲ್ಲೇ ಕುತಂತ್ರಿಗಳು ಪುಟ್ಟಕ್ಕನ ಮೆಸ್‌ ಕ್ಲೋಸ್‌ ಮಾಡಿಸಿದ್ರು. ಅದಾದ್ಮೇಲೆ ಸುಮಾಳನ್ನ ಕಿಡ್ನ್ಯಾಪ್‌ ಮಾಡಿಸಿದ್ರು.. ಆದ್ರೆ ಪುಟ್ಟಕ್ಕ ದೇವಸ್ಥಾನದಿಂದ ಮನೆಗೆ ಬರ್ತಿದ್ದಂತೆ ಕಂಠಿ ಹಾಗೂ ಬಂಗಾರಮ್ಮ ಇರೋ ಸಮಸ್ಯೆಯನ್ನ ಬರೆಹರಿಸಿದ್ರು. ಪುಟ್ಟಕ್ಕನಿಗೆ ಯಾವ ವಿಚಾರವೂ ಗೊತ್ತಾಗದಂತೆ ಮ್ಯಾನೇಜ್‌ ಮಾಡಿದ್ರು.. ಆದ್ರೀಗ ರಾಜಿ ಮತ್ತೆ ಎಲ್ಲಾನೂ ಹಾಳು ಮಾಡಿದ್ದಾಳೆ.. ಮನೆಯವರು ಮುಚ್ಚಿಟ್ಟಿದ್ದ ಗುಟ್ಟನ್ನ ರಟ್ಟು ಮಾಡಿದ್ದಾಳೆ. ಇದನ್ನ ಕೇಳಿ ಪುಟ್ಟಕ್ಕ ಕುಸಿದು ಬಿದ್ದಿದ್ದಾಳೆ. ಆದ್ರೆ ಈ ಸೀನ್‌ ನೋಡ್ತಿದ್ದಂತೆ ಪುಟ್ಟಕ್ಕನ ಪ್ರಾತ್ರ ಎಂಡ್‌ ಆಯ್ತಾ ಅಂತಾ ವೀಕ್ಷಕರು ಕೇಳ್ತಿದ್ದಾರೆ.

ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಹೊಸ ಹೊಸ ತಿರುವು ಪಡೆದುಕೊಳ್ತಿದೆ.. ಆರಂಭದಲ್ಲಿ ಚೆನ್ನಾಗಿ ಮೂಡಿಬರ್ತಿದ್ದ ಸೀರಿಯಲ್..‌ ಈಗ ಕತೆ ಯಾವ ತಿರುವು ಪಡೆದುಕೊಳ್ತಿದೆ ಅಂತಾ ಅರ್ಥ ಮಾಡಿಕೊಳ್ಳೋಕೆ ಆಗ್ತಿಲ್ಲ. ಡಿಸಿ ಸ್ನೇಹ ಸತ್ತ ಬಳಿಕ ಪಾತ್ರಕ್ಕೆ ತಕ್ಕಂತೆ ಸ್ಟೋರಿ ಎಳಿತಾ ಹೋಗ್ತಿದ್ದಾರೆ ಸೀರಿಯಲ್‌ ಡೈರೆಕ್ಟರ್‌.. ಆರಂಭದಲ್ಲಿ ಸಹನಾ ಮನೆ ಬಿಟ್ಟು ಹೋಗಿದ್ಲು. ಅದಾದ್ಮೇಲೆ ಡಿಸಿ ಸ್ನೇಹ ಸಾವು.. ಬಳಿಕ ಸ್ನೇಹ ಸಾವಿಗೆ ರಾಧಾ ಕಾರಣ ಅಂತಾ ಗೊತ್ತಾಗಿ ಆಕೆಯನ್ನ ಜೈಲಿಗೆ ಕಳುಹಿಸಲಾಗಿದೆ. ಬಳಿಕ ಕಂಠಿ ಜೊತೆ ಇನ್ನೊಬ್ಬಳು ಸ್ನೇಹಳನ್ನ ಮದ್ವೆ ಮಾಡಿಸಲಾಯ್ತು.. ಎಲ್ಲ ಸರಿಹೋಯ್ತು ಅನ್ನುವಷ್ಟರಲ್ಲಿ ಪುಟ್ಟಕ್ಕ‌ ದೇವಸ್ಥಾನಕ್ಕೆ ಹೊರಡ್ತಾಳೆ.. ಆದ್ರೆ ಅಷ್ಟೊತ್ತಿಗೆ ಜೈಲಿನಲ್ಲಿರೋ ರಾಧಾ, ರಾಜಿ ಜೊತೆ ಸೇಕೊಂಡು ಕುತಂತ್ರ ಶುರುಮಾಡ್ತಾಳೆ.

ಹೌದು, ಪುಟ್ಟಕ್ಕ ದೇವಸ್ಥಾನಕ್ಕೆಂದು ಹೋಗಿದ್ಲು. ಅದಾದ್ಮೇಲೆ ಆಕೆಯನ್ನ ಸೀರಿಯಲ್‌ ನಲ್ಲಿ ತೋರಿಸಿರ್ಲಿಲ್ಲ.. ಕೇವಲ ಕಂಠಿ, ಬಂಗಾರಮ್ಮ, ಪುಟ್ಟಕ್ಕನ ಮನೆಯವರ ಮೇಲೆ ಕತೆ ಸಾಗ್ತಾ ಇತ್ತು. ಒಂದ್ಕಡೆ ಕುತಂತ್ರಿಗಳು ಪುಟ್ಟಕ್ಕನ ಮೆಸ್‌ ಕ್ಲೋಸ್‌ ಮಾಡಿಸಿದ್ರು.. ಲೈಸನ್ಸ್‌ ಇಲ್ಲ ಎಂದು ನೋಟಿಸ್‌ ಕಳ್ಸಿ, ಮೆಸ್‌ ನ ಮುಚ್ಚಿಸಿದ್ರು. ಅದಾದ್ಮೇಲೆ ಸುಮಾ ಕೆಲಸಕ್ಕೆ ಹೋಗಿ ವಾಪಾಸ್‌ ಬರ್ತಿದ್ದಂತೆ ಆಕೆಯನ್ನ ಕಿಡ್ನ್ಯಾಪ್‌ ಮಾಡಿಸಿದ್ರು. ಆದ್ರೆ ಕಂಠಿ ರೌಡಿಗಳಿಂದ ಆಕೆಯನ್ನ ಬಚಾವ್‌ ಮಾಡಿದ.. ಅದಾದ ಬಳಿಕ ಪುಟ್ಟಕ್ಕನ ಮೆಸ್‌ ಅನ್ನ ಈ ಕುತಂತ್ರಿಗಳೇ ಸೇರ್ಕೊಂಡು ಕ್ಲೋಸ್‌ ಮಾಡಿಸಿದ್ದು ಅಂತಾ ಕಂಠಿ ಹಾಗೂ ಬಂಗಾರಮ್ಮಗೆ ಗೊತ್ತಾಗುತ್ತೆ.. ಇದ್ರ ಬೆನ್ನಲ್ಲೇ  ಬಂಗಾರಮ್ಮ ಹಾಗೂ ಕಂಠಿ ಬೀಗ ಒಡೆದು ಮೆಸ್‌ ನ ಓಪನ್‌ ಮಾಡಿದ್ರು. ಅಷ್ಟೊತ್ತಿಗೆ ಪುಟ್ಟಕ್ಕ ವಾಪಾಸ್‌ ಮನೆಗೆ ಬಂದಿದ್ದಾಳೆ. ಆದ್ರೆ ಈ ವಿಚಾರವನ್ನ ಮನೆಯವರು ಆಕೆಯಿಂದ ಮುಚ್ಚಿಟ್ಟಿದ್ರು. ಆದ್ರೆ ರಾಜಿ ಬಂದು ಎಲ್ಲವನ್ನೂ ಪುಟ್ಟಕ್ಕಳ ಮುಂದೆ ಬಾಯಿಬಿಟ್ಟಿದ್ದಾಳೆ. ಸುಮಾ, ಮೆಸ್‌ ವಿಚಾರ ಗೊತ್ತಾಗ್ತಿದ್ದಂತೆ ಪುಟ್ಟಕ್ಕನಿಗೆ ಶಾಕ್‌ ಆಗಿದೆ. ನಿಂತಲ್ಲೇ ಆಕೆ ಕುಸಿದುಬಿದ್ದಿದ್ದಾಳೆ. ಇದೀಗ ಸೀರಿಯಲ್‌ ಫ್ಯಾನ್ಸ್‌ ಪುಟ್ಟಕ್ಕ ಪಾತ್ರ ಎಂಡ್‌ ಆಗುತ್ತಾ ಅಂತಾ ಕೇಳ್ತಿದ್ದಾರೆ.

ಹೌದು, ಕಳೆದ ಸುಮಾರು ದಿನಗಳಿಂದ ಪುಟ್ಟಕ್ಕ ಪಾತ್ರವನ್ನ ತೋರಿಸಲಾಗಿರ್ಲಿ.. ದೇವಸ್ಥಾನಕ್ಕೆ ಹೋಗಿದ್ದಾಳೆಂದು ಮಾತ್ರ ಹೇಳಲಾಗ್ತಿತ್ತು. ಸೀರಿಯಲ್‌ ನಲ್ಲಿ ಪುಟ್ಟಕ್ಕ ಕಾಣಿಸಿಕೊಳ್ಳದೇ ಇದ್ದಿದ್ದನ್ನ ನೋಡಿ ಸೀರಿಯಲ್‌ ಫ್ಯಾನ್ಸ್‌ ಪುಟ್ಟಕ್ಕ ಎಲ್ಲಿ? ಪುಟ್ಟಕ್ಕ ಪಾತ್ರಕ್ಕೆ ಉಮಾಶ್ರೀ ಗುಡ್‌ಬೈ ಹೇಳಿದ್ರಾ ಅಂತಾ ವೀಕ್ಷಕರು ಕೇಳ್ತಿದ್ರು.. ಈ ಬೆನ್ನಲ್ಲೇ ಉಮಾಶ್ರೀ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ರು.. ದೇವಸ್ಥಾನಕ್ಕೆ ಹೋದ ಪುಟ್ಟಕ್ಕ ವಾಪಸ್‌ ಬಂದಿದ್ದಾಳೆ ಅಂತಾ ತೋರಿಸಲಾಗಿತ್ತು. ಆದ್ರೀಗ ಪುಟ್ಟಕ್ಕ ಸುಮಾ ಕಿಡ್ನ್ಯಾಪ್‌, ಮೆಸ್‌ ಮುಚ್ಚಿದ ವಿಚಾರ ಕೇಳಿ ಕುಸಿದುಬಿದ್ದಿದ್ದಾಳೆ. ಆಕೆಗೆ ಏನಾಗಿದೆ ಅಂತಾ ತೋರಿಸಲಾಗಿಲ್ಲ.. ಇದೀಗ ಪುಟ್ಟಕ್ಕನ ಪಾತ್ರ ಎಂಡ್‌ ಆಗ್ತಿದ್ಯಾ ಅಥವಾ ಸೀರಿಯಲ್‌ ಎಂಡ್‌ ಆಗ್ತಿದ್ಯಾ ವೀಕ್ಷಕರು ಕೇಳ್ತಿದ್ದಾರೆ. ಆದ್ರೆ ಸದ್ಯಕ್ಕಂತೂ ಪುಟ್ಟಕ್ಕ ಪಾತ್ರ ಆಗ್ಲೀ, ಸೀರಿಯಲ್‌ ಎಂಡ್‌ ಆಗೋ ಸಾಧ್ಯತೆ ತೀರಾ ಕಡಿಮೆ. ಪುಟ್ಟಕ್ಕ ಪಾತ್ರ ಇಲ್ಲ ಅಂದ್ರೆ ಸೀರಿಯಲ್‌ ಸ್ಟೋರಿ ಕಿಲ್‌ ಆದಂಗೆ ಲೆಕ್ಕ.. ಈಗಾಗಲೇ ಸ್ನೇಹಾ ಸತ್ತಿರೋದಿಕ್ಕೆ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಇನ್ನು ಸೀರಿಯಲ್‌ ಎಂಡ್‌ ಆದ್ರೂ ಆ ಸ್ಲಾಟ್‌ಗೆ ಹೊಸ ಸೀರಿಯಲ್‌ ಕೂಡ ಇಲ್ಲ. ಹೀಗಾಗಿ ಸದ್ಯಕ್ಕಂತೂ ಸೀರಿಯಲ್‌ ಎಂಡ್‌ ಆಗಲ್ಲ.

Shwetha M