ಬೆಂಗಳೂರು ಜನರ ಪ್ರಾಣಕ್ಕೆ ಕಂಟಕವಾದ ಮರಗಳು – BBMP ಅಧಿಕಾರಿಗಳ ವಿರುದ್ಧ FIR ದಾಖಲು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದ್ರೆ ಸಾಕು, ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯುತ್ತೆ. ಮರಗಳು ಧರೆಗುರುಳುತ್ತವೆ. ಮೊನ್ನೆಯಷ್ಟೇ ಮರದ ಕೊಂಬೆಯೊಂದು ಅಕ್ಷಯ್ ಎಂಬ ಯುವಕ ಸಾವನ್ನಪ್ಪಿದ್ದ. ಈ ಘಟನೆ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಇದೀಗ ಬಿಬಿಎಂಪಿ ಹೊಸ ಆದೇಶಗಳನ್ನ ಜಾರಿ ಮಾಡಿದೆ. ಬಿಬಿಎಂಪಿಯ ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಜಗತ್ತಿಗೇ ತೈಲ ಹಾಹಾಕಾರ- ಹೊರ್ಮುಜ್ ಜಲಸಂಧಿ ಮುಚ್ಚುತ್ತಾ ಇರಾನ್?
ಮರದ ಕೊಂಬೆ ಬಿದ್ದು ಯುವಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಬಿಎಂಪಿಯ ಅರಣ್ಯಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆನಕ್ ರಾಜ್ ಎಂಬುವವರು ಹನುಮಂತ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಿಬಿಎಂಪಿಯ ಮೂವರು ಅರಣ್ಯಾಧಿಕಾರಿಗಳಾದ ಆರ್ಎಫ್ಓ, ಎಸಿಎಫ್, ಡಿಎಫ್ಓ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಅಕ್ಷಯ್ ಸಾವಿಗೆ ಕಾರಣವಾಗಿದೆ. ಎ1 ಆರೋಪಿ ಆರ್ಎಫ್ಓ, ಎ2 ಆರೋಪಿ ಎಸಿಎಫ್, ಎ3 ಆರೋಪಿ ಡಿಎಫ್ಓ ಆಗಿದ್ದು, ಯುವಕನ ಸಾವಿಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ಆರೋಪಿಗಳಾಗಿರುವ ಬಿಬಿಎಂಪಿ ಅರಣ್ಯಾಧಿಕಾರಿಗಳಿಗೆ ಕರೆದು ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಮರಗಳಿಗೆ ಗೈಡ್ಲೈನ್ಸ್!
- ಅವೈಜ್ಞಾನಿಕ ಕಾಮಾಗಾರಿಗಳು ಮರಗಳ ಆರೋಗ್ಯ ಮೇಲೆ ಪರಿಣಾಮ
- ಅಸಮರ್ಪಕ ಗಾಳಿ, ನೀರಿನ ಒಳಹರಿವಿನಿಂದ ಬೇರು ಪೋಷಣೆ ಆಗ್ತಿಲ್ಲ
- ವೃಕ್ಷಗಳ ಬೇರು ಆಳಕ್ಕೆ ಇಳಿಯದೆ ದುಷ್ಪರಿಣಾಮಗಳಿಗೆ ಕಾರಣ ಆಗ್ತಿದೆ
- ಮಳೆ, ಗಾಳಿಯಲ್ಲಿ ಶಕ್ತಿ ಕುಂದಿ ಮರಗಳು, ರೆಂಬೆ-ಕೊಂಬೆಗಳು ಬೀಳುತ್ತಿವೆ
- ಕಾಂಕ್ರೀಟಿಕರಣದಿಂದ ಮರಗಳ ಬೇರುಮಟ್ಟದಲ್ಲೇ ಶಕ್ತಿ ಕಳೆದುಕೊಂಡಿವೆ
- ರಸ್ತೆ ಬದಿ ನೆಡಲಾದ ಮರಗಳ ಕುರಿತು ಬಿಬಿಎಂಪಿಯಿಂದ ಅಧಿಸೂಚನೆ
- 1 ಮೀ. ಸುತ್ತಳತೆಯಲ್ಲಿನ ಕಾಂಕ್ರೀಟ್, ಕಲ್ಲು, ಸಿಮೆಂಟ್ ಬ್ಲಾಕ್ಗಳ ತೆರವು

ನೋಡಿರಿ

