ಜಗತ್ತಿಗೇ ತೈಲ ಹಾಹಾಕಾರ- ಹೊರ್ಮುಜ್ ಜಲಸಂಧಿ ಮುಚ್ಚುತ್ತಾ ಇರಾನ್?
ಆರ್ಥಿಕ ಹೊಡೆತ.. ಸಿಡಿದೇಳುತ್ತಾ ಅಮೆರಿಕ

ಇಸ್ರೇಲ್ ಮತ್ತು ಇರಾನ್ ನಡುವೆ ಯಾರೂ ಊಹಿಸದ ರೀತಿಯಲ್ಲಿ ವಾರ್ ನಡೆಯುತ್ತಿದೆ. ಎರಡು ದೇಶಗಳು ಕೂಡ ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋ ರೇಂಜ್ಗೆ ದಾಳಿಗಳನ್ನ ನಡೆಸುತ್ತಿವೆ. ಅದ್ರಲ್ಲೂ ಇಸ್ರೇಲ್ ಪೆಟ್ಟಿನಿಂದ ಸುಧಾರಿಸಿಕೊಂಡು ಅದಕ್ಕೆ ತಕ್ಕ ಉತ್ತರವನ್ನ ಇರಾನ್ ಕೂಡ ನೀಡುತ್ತಿದೆ. ಜೊತೆಗೆ ಇಸ್ರೇಲ್ನನ್ನು ಬೆಂಬಲಿಸುತ್ತಿರುವ ಜಗತ್ತಿನ ಪ್ರಮುಖ ದೇಶಗಳಿಗೆ ಬಿಸಿ ಮುಟ್ಟಿಸಲು ಇರಾನ್ ಮುಂದಾಗಿದೆ. ಇದ್ರ ಜೊತೆಗೆ ಭಾರತದ ಮೇಲೂ ಎಫೆಕ್ಟ್ ಬೀಳಲಿದೆ.
ವಿಶ್ವದ 5ನೇ ಒಂದು ಭಾಗ ತೈಲ, ಅನಿಲ ಸಾಗಣೆ ಮಾರ್ಗವಾದ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ ಮುಂದಾಗಿದೆ. ಇದು ಜಗತ್ತಿನಲ್ಲಿ ತೈಲಾತಂಕಕ್ಕೆ ಕಾರಣವಾಗಿದೆ. ತೈಲ ಮತ್ತು ಅನಿಲಕ್ಕಾಗಿ ಕೊಲ್ಲಿ ರಾಷ್ಟ್ರಗಳನ್ನೇ ನೆಚ್ಚಿಕೊಂಡಿರುವ ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳ ಆತಂಕಕ್ಕೆ ಕಾರಣವಾಗಿದೆ.
ಹೊರ್ಮುಜ್ ಜಲಸಂಧಿ ಮುಚ್ಚುತ್ತಾ ಇರಾನ್?
ಪರ್ಶಿಯನ್ ಕೊಲ್ಲಿಗೆ ಹೊರ್ಮುಜ್ ಜಲಸಂಧಿ ಏಕೈಕ ಮಾರ್ಗವಾಗಿದೆ. ಈ ಜಲಸಂಧಿಯ ಒಂದು ಕಡೆ ಇರಾನ್, ಮತ್ತೂಂದೆಡೆ ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಹರಡಿಕೊಂಡಿವೆ. ಇದು ಪರ್ಶಿ ಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿಗೆ ಮತ್ತು ಹಿಂದೂ ಮಹಾಸಾಗರದಲ್ಲಿ ಅರಬಿ ಸಮುದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಕೇವಲ 33 ಕಿಲೋ ಮೀಟರ್ ಅಗಲದ ಅತಿ ಕಿರಿದಾದ ಜಲಸಂಧಿಯಾಗಿದೆ. ಆದರೆ ಜಲಮಾರ್ಗದ ಹಡಗು ಮಾರ್ಗಗಳು ಇನ್ನೂ ಕಿರಿದಾ ಗಿದೆ. ಒಂದು ಆಗಮನ ಮತ್ತು ನಿರ್ಗಮನ ಮಾರ್ಗ ಗಳಿದ್ದು ಅವೂ ಕೇವಲ 3 ಕಿಲೋ ಮೀಟರ್ ಮಾತ್ರ ಅಗಲ ವಾಗಿವೆ. ಹಾಗಾಗಿ ಇದು ದಾಳಿಗಳ ಮತ್ತು ಮುಚ್ಚುವ ಬೆದರಿಕೆಗಳಿಗೆ ಸದಾಕಾಲ ಗುರಿಯಾಗುತ್ತಲೇ ಇರುತ್ತದೆ.
ಹೊರ್ಮುಜ್ ಜಲಸಂಧಿ ಮುಚ್ಚಿದರೆ ಏನಾಗುತ್ತೆ?
ಒಂದು ವೇಳೆ ಇರಾನ್ ಹೊರ್ಮುಜ್ ಜಲಸಂಧಿ ಮುಚ್ಚುವ ದುಸ್ಸಾಹಸಕ್ಕೆ ಇಳಿದರೆ ಜಗತ್ತಿನ ಶೇ.20ರಷ್ಟು ತೈಲ ಪೂರೈಕೆ ಸ್ಥಗಿತಗೊಳ್ಳುತ್ತದೆ. ಪರ್ಶಿಯನ್ ಕೊಲ್ಲಿ ತೀರದಲ್ಲಿರುವ ಸೌದಿ ಅರೇಬಿಯಾ, ಯುಎಇ, ಒಮಾನ್, ಬಹ್ಮನ್, ಕತಾರ್, ಕುವೈಟ್, ಇರಾಕ್, ಇರಾನ್ನ ದೇಶಗಳಿದ್ದು ಈ ಮಾರ್ಗದ ಮೂಲಕವೇ ಜಗತ್ತಿನ ವಿವಿಧ ದೇಶಗಳಿಗೆ ಶೇ.90ರಷ್ಟು ತೈಲ ಸರಬರಾಜಾಗುತ್ತಿದ್ದು ಇದು ಬಂದ್ ಆಗುತ್ತದೆ.
ಯುದ್ಧದಿಂದ ಹೊರ್ಮುಜ್ ಜಲಸಂಧಿಯಂತಹ ಪ್ರಮುಖ ವ್ಯಾಪಾರ ಮಾರ್ಗಗಳು ಘರ್ಷಣೆಯಲ್ಲಿ ಸಿಲುಕಿಕೊಳ್ಳ ಬಹುದೆಂಬ ಆತಂಕ ಹೆಚ್ಚುತ್ತಿರುವ ನಡುವೆಯೇ ತೈಲ ಕಂಪೆನಿಗಳು, ಹಡಗು ಸಂಸ್ಥೆಗಳ ಮತ್ತು ನಿಯಂತ್ರಕ ಸಂಸ್ಥೆಗಳು ಪರದಾಡುತ್ತಿವೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಆತಂಕದ ಅಲೆಗಳು ಸೃಷ್ಟಿಯಾಗಿದ್ದು ತೈಲದ ಬೆಲೆಯೂ ಏರಿಕೆಯಾಗಿದೆ. ಇರಾನ್ ಜಾಗತಿಕ ತೈಲ ಪೂರೈಕೆಯ ಮಹತ್ವದ ಭಾಗವಾಗಿರುವುದರಿಂದ ಪೆಟ್ರೋಲಿಯಂ ಮತ್ತು ಅದರ ಇತರ ಉತ್ಪನ್ನಗಳ ಬಳಕೆಯ ಮೇಲೆ ಜಗತ್ತಿನಾದ್ಯಂತ ಪರಿಣಾಮ ಬೀರುತ್ತದೆ. ಆದರೆ ಇರಾನ್ನ ತೈಲ ಮೂಲ ಸೌಕರ್ಯದ ಮೇಲೆ ಯಾವುದೇ ತೀವ್ರ ತರದ ದಾಳಿ ಮಾಡುವುದರಿಂದ ಇಸ್ರೇಲ್ ದೂರವಿದೆ. ಒಂದು ವೇಳೆ ಈ ನಡೆ ಬದಲಾದರೆ ಜಗತ್ತಿ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ.
ಇರಾನ್ನ ಕ್ಷಿಪಣಿಗಳನ್ನು ಹೊಡೆದುರುಳಿಸಲು ಅಮೆರಿಕ ಸಹಾಯ ಮಾಡಿದರೂ ಅಮೆರಿಕ ನೇರವಾಗಿ ಇರಾನ್ ಮೇಲೆ ದಾಳಿ ಮಾಡಿಲ್ಲ. ಇಸ್ರೇಲ್ನ ದಾಳಿಯಲ್ಲಿ ಅಮೆರಿಕ ಭಾಗವಾಗಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಇರಾನ್ ಕೂಡ ಮಧ್ಯ ಪ್ರಾಚ್ಯದಲ್ಲಿ ಅಮೆರಿಕನ್ ಪಡೆಗಳು ಅಥವಾ ಅದರ ಹಿತಾಸಕ್ತಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಆದರೂ ಹೊರ್ಮುಜ್ ಜಲಸಂಧಿ ಮುಚ್ಚುವುದು ಅಮೆರಿಕನ್ನರ ಆರ್ಥಿಕತೆಗೆ ಹೊಡೆತ ಕೊಡುತ್ತದೆ. ಇದು ಅಮೆರಿಕದ ಮಿಲಿಟರಿ ಪ್ರತಿಕ್ರಿಯೆಗೂ ಕೂಡ ಕಾರಣವಾಗಬಹುದು. ಅಮೆರಿಕ ಹೊರತುಪಡಿಸಿ ಅತಿ ಹೆಚ್ಚು ಅಮೆರಿಕದ ಸೇನಾಪಡೆಗಳು ಮಧ್ಯಪ್ರಾಚ್ಯದ ಕತಾರ್, ಜೋರ್ಡಾನ್, ಯುಎಇ, ಬಹ್ಮನ್, ಕುವೈಟ್, ಇರಾಕ್ನಲ್ಲಿದ್ದು ಇರಾನ್ನ ಯಾವುದೇ ದುಡುಕು ನಿರ್ಧಾರ ಖಂಡಿತವಾಗಿಯೂ ಸೇನಾ ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ.
1980 ಮತ್ತು 1988ರ ನಡುವಿನ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಎರಡೂ ಕಡೆ ಲಕ್ಷಾಂತರ ಜನರು ಸಾವನ್ನಪ್ಪಿದರು. ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಅಪಾರ ಪ್ರಮಾಣದ ದಾಳಿಗಳು ನಡೆದವು. ಇದನ್ನು “ಟ್ಯಾಂಕರ್ ಯುದ್ಧ’ ಎಂದು ಕೂಡ ಕರೆಯಲಾಯಿತು. ಆದರೆ, ಎಂದಿಗೂ ಹೊರ್ಮುಜ್ ಜಲಸಂಧಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿರಲಿಲ್ಲ. ಈಗೂ ಕೂಡ ಅದ್ದನ್ನ ಮುಚ್ಚುವುದು ಅಷ್ಟು ಸುಲಭವಲ್ಲ.

ನೋಡಿರಿ

