ಇಸ್ರೇಲ್‌ನ ಆಸ್ಪತ್ರೆ ಮೇಲೆ ಇರಾನ್ ದಾಳಿ- ಖಡಕ್ ಎಚ್ಚರಿಕೆ ಕೊಟ್ಟ ಇಸ್ರೇಲ್ ಪ್ರಧಾನಿ

ಇಸ್ರೇಲ್‌ನ ಆಸ್ಪತ್ರೆ ಮೇಲೆ ಇರಾನ್ ದಾಳಿ- ಖಡಕ್ ಎಚ್ಚರಿಕೆ ಕೊಟ್ಟ  ಇಸ್ರೇಲ್ ಪ್ರಧಾನಿ

ಇರಾನ್ ಮತ್ತು ಇಸ್ರೇಲ್‌ ನಡುವಿನ ಯುದ್ಧ ಜೋರಾಗಿ ನಡೆಯುತ್ತಿದ್ದು, ಎರಡೂ ರಾಷ್ಟ್ರಗಳ ನಡುವಿನ ಕ್ಷಿಪಣಿ ದಾಳಿ ಮತ್ತಷ್ಟು ತೀವ್ರಗೊಂಡಿದೆ. ಇಂದು ಬೆಳಗ್ಗೆ ಇಸ್ರೇಲ್ ಮೇಲೆ ಇರಾನ್ ಡಜನ್ ಗಟ್ಟಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ನಾಗರಿಕ ಪ್ರದೇಶಗಳ ಮೇಲೆ ‘ಹಲವಾರು ದಾಳಿ’ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಅಧಿಕಾರಿಯೊಬ್ಬರು ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ಇನ್ನು ಇರಾನ್‌ನಿಂದ ದಕ್ಷಿಣ ಇಸ್ರೇಲ್‌ನ ಸೊರೊಕಾ ಆಸ್ಪತ್ರೆ ಸೇರಿದಂತೆ  ಜನರಿರೋ ಹಲವಾರು ಪ್ರದೇಶಗಳ ಮೇಲೆ ದಾಳಿ  ನಡೆದಿದೆ. ಇರಾನಿನ ಕ್ಷಿಪಣಿಯು ದಕ್ಷಿಣ ಇಸ್ರೇಲಿ ನಗರವಾದ ಬೀರ್ ಶೆವಾದಲ್ಲಿರುವ ಪ್ರಮುಖ ಆಸ್ಪತ್ರೆಯಾದ ಸೊರೊಕಾ ವೈದ್ಯಕೀಯ ಕೇಂದ್ರಕ್ಕೆ ಅಪ್ಪಳಿಸಿದ್ದು, ವ್ಯಾಪಕ ಹಾನಿ ಉಂಟು ಮಾಡಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.

ಸೊರೊಕಾ ಇಸ್ರೇಲ್‌ನ ಪ್ರಮುಖ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗಿದೆ ಮತ್ತು ಅದರ ವೆಬ್‌ಸೈಟ್ ಪ್ರಕಾರ ದಕ್ಷಿಣದಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಚಿಕಿತ್ಸೆಯನ್ನು ಒದಗಿಸುತ್ತದೆ. ಗಾಜಾದಿಂದ ಕೇವಲ 22 ಮೈಲುಗಳಷ್ಟು ದೂರದಲ್ಲಿರುವ ಸೊರೊಕಾ ಯುದ್ಧದಲ್ಲಿ ಗಾಯಗೊಂಡ ಜನರಿಗೆ ಪ್ರಾಥಮಿಕ ಸ್ಥಳಾಂತರ ತಾಣವಾಗಿದೆ.

ಇಸ್ರೇಲ್‌ನ ದಕ್ಷಿಣದಲ್ಲಿರುವ ಪ್ರಮುಖ ಆಸ್ಪತ್ರೆ ಸೇರಿದಂತೆ ಹಲವು ನಾಗರಿಕ ಪ್ರದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರ, ಇರಾನ್ ‘ಭಾರೀ ಬೆಲೆ ತೆರಲಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ಎಚ್ಚರಿಸಿದ್ದಾರೆ.

 

 

Kishor KV