ಕಾಂಗೋದಲ್ಲಿ ಪ್ರವಾಹ, ಭೂಕುಸಿತ – 120ಕ್ಕೂ ಹೆಚ್ಚು ಮಂದಿ ಸಾವು

ಕಾಂಗೋದಲ್ಲಿ ಪ್ರವಾಹ, ಭೂಕುಸಿತ – 120ಕ್ಕೂ ಹೆಚ್ಚು ಮಂದಿ ಸಾವು

ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ರಾಜಧಾನಿ ಕಿನ್ಶಾಸದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿ, ಭಾರಿ ಭೂಕುಸಿತ ಸಂಭವಿಸಿ 120 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಭಾರಿ ಮಳೆಯಿಂದ, ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ. ಅಲ್ಲಲ್ಲಿ ಮನೆಗಳು ಜಲಾವೃತಗೊಂಡಿದೆ. ಅಲ್ಲದೇ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ, 120 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.  ಕಿನ್ಶಾಸದಿಂದ ಮಟಾಡಿಯ ಮುಖ್ಯ ಬಂದರಿಗೆ ಸಂಪರ್ಕಿಸುವ ರಸ್ತೆಗಳು ಕುಸಿದಿದ್ದು,  3-4 ದಿನಗಳ ಕಾಲ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಲ್ಲಿನ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

ಇದನ್ನೂ ಓದಿ: ಇದು 1962 ಅಲ್ಲ, ಭಾರತದ ಗಡಿ ಮುಟ್ಟಿದ್ರೆ ತಕ್ಕ ಉತ್ತರ ನೀಡುತ್ತೇವೆ – ಚೀನಾಗೆ ಸಿಎಂ ಪೆಮಾ ಖಂಡು ಎಚ್ಚರಿಕೆ

ಭೂಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದ್ದು, ನಾಪತ್ತೆಯಾದವರನ್ನು ಪತ್ತೆ ಹಚ್ಚಲು  ಶೋಧ ನಡೆಸಲಾಗುತ್ತಿದೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. 2009 ರಲ್ಲಿ ಕಿನ್ಶಾಸ ಸುತ್ತಮುತ್ತ ಇದೇ ರೀತಿಯ ಭೀಕರ ಪ್ರವಾಹ ಹಾಗೂ ಭೂಕುಸಿತ ಉಂಟಾಗಿತ್ತು. ಅದರಲ್ಲಿ 32 ಜನ ಸಾವನ್ನಪ್ಪಿದ್ದರು.

suddiyaana