ಭಾರತದ ಮನವಿಗೆ ಸ್ಪಂದಿಸಿದ ಇರಾನ್‌ – ವಿದ್ಯಾರ್ಥಿಗಳನ್ನು ಶಿಫ್ಟ್‌ ಮಾಡಲು ಭೂ ಗಡಿ ತೆರೆದ ಇರಾನ್‌

ಭಾರತದ ಮನವಿಗೆ ಸ್ಪಂದಿಸಿದ ಇರಾನ್‌ – ವಿದ್ಯಾರ್ಥಿಗಳನ್ನು ಶಿಫ್ಟ್‌ ಮಾಡಲು ಭೂ ಗಡಿ ತೆರೆದ ಇರಾನ್‌

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮುಂದುವರಿದಿದೆ. ಈ ದಾಳಿಯಲ್ಲಿ 224 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಾಗಿ ನಾಗರಿಕರು, ಆದರೆ ಇಸ್ರೇಲ್ 24 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಇರಾನಿನ ದಾಳಿಯಿಂದ ಉಂಟಾದ ಹಾನಿಯಿಂದಾಗಿ ಸುಮಾರು 3,000 ಇಸ್ರೇಲಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಹೇಳಿದ್ದಾರೆ. ಇದೀಗ ಕನಿಷ್ಠ 10 ಸಾವಿರ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಸುರಕ್ಷಿತ ಮಾರ್ಗವನ್ನು ಒದಗಿಸುವಂತೆ ಭಾರತ ಸರ್ಕಾರ ಮಾಡಿದ ಮನವಿಗೆ ಇರಾನ್‌ ಸ್ಪಂದಿಸಿದೆ.

ಇದನ್ನೂ ಓದಿ: ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ – ಕೋಲ್ಕತ್ತಾದಲ್ಲಿ ಪ್ರಯಾಣಿಕರನ್ನು ಕೆಳಗಿಳಿಸಿದ ಸಿಬ್ಬಂದಿ

ಭಾರತದ ಮನವಿಗೆ ಪ್ರತಿಕ್ರಿಯಿಸಿದ ಇರಾನ್ ತನ್ನ ವಾಯುಪ್ರದೇಶವನ್ನು ಸ್ಥಗಿತಗೊಳಿಸಿರುವುದರಿಂದ, ವಿದ್ಯಾರ್ಥಿಗಳು ಅಜರ್‌ಬೈಜಾನ್, ತುರ್ಕಮೆನಿಸ್ತಾನ್ ಮತ್ತು ಅಫ್ಘಾನಿಸ್ತಾನಕ್ಕೆ ದಾಟಲು ತನ್ನ ಭೂ ಗಡಿಗಳನ್ನು ಬಳಸಬಹುದು ಎಂದು ಹೇಳಿದೆ.

ರಾಜಧಾನಿ ಟೆಹ್ರಾನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ಬಸ್‌ಗಳ ಮೂಲಕ ಮೊದಲ ಬ್ಯಾಚ್ ಅನ್ನು ಕೋಮ್ ಸಿಟಿಗೆ ಶಿಫ್ಟ್ ಮಾಡಲಾಗಿದೆ. ಟೆಹ್ರಾನ್‌ನ ಜಫ್ರಿಯಾ ಪ್ರದೇಶದಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುತಿರುವ 9 ಕನ್ನಡಿಗರು ಸ್ಥಳಾಂತರ ಮಾಡುವಂತೆ ವಿದೇಶಾಂಗ ಸಚಿವರಿಗೆ  ಕರ್ನಾಟಕ ನಾನ್ ರೆಸಿಡೆನ್ಸಿ ಪೋರಂ  ಪತ್ರ ಬರೆದಿದೆ.

Shwetha M