ಮದುವೆ ಶಾಸ್ತ್ರ ನಡೆಯುವಾಗಲೇ, ಹೊಡೆದಾಡಿಕೊಂಡ ನೆಂಟರಿಷ್ಟರು – ವಿಡಿಯೋ ವೈರಲ್

ಮದುವೆ ಶಾಸ್ತ್ರ ನಡೆಯುವಾಗಲೇ, ಹೊಡೆದಾಡಿಕೊಂಡ ನೆಂಟರಿಷ್ಟರು – ವಿಡಿಯೋ ವೈರಲ್

ಮದುವೆ ಮನೆ ಎಂದಾಕ್ಷಣ ಅಲ್ಲಿ ತಯಾರಿ ಸಾಕಷ್ಟು ಇರುತ್ತದೆ. ಶಾಸ್ತ್ರ, ಸಂಪ್ರದಾಯ, ಅತಿಥಿ ಸತ್ಕಾರ, ಊಟ ಉಪಚಾರ ಯಾವುದರಲ್ಲೂ ಕೊರತೆಯಾಗಬಾರದೆಂದು ವಿಶೇಷ ಕಾಳಜಿ ವಹಿಸಲಾಗುತ್ತದೆ. ಮದುವೆ ಎನ್ನುವುದು ಜೀವನದಲ್ಲಿ ಒಂದು ಬಾರಿ ಘಟಿಸುವಂಥಹ ಸುಂದರ ಕ್ಷಣವಾಗಿರುವುದರಿಂದ ಈ ವೇಳೆ ನಡೆಯುವ ಅನಾಹುತಗಳು ನಡೆಯಬಾರದು ಎಂಬ ವಿಶೇಷ ಕಾಳಜಿ ಇರುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ನಡೆಯಬಾರದ್ದು ನಡೆದೇ ಹೋಗುತ್ತದೆ. ಈ ಮದುವೆಯಲ್ಲೂ ನಡೆದಿದ್ದು ಅದೇ…

ಇದನ್ನೂ ಓದಿ: ಕೊಳಕು ಜೀನ್ಸ್​ಪ್ಯಾಂಟ್ ಬೆಲೆ ಲಕ್ಷ ರೂಪಾಯಿ! – ಏನಿದರ ವಿಶೇಷತೆ?

ಸಾಮಾಜಿಕ ಜಾಲತಾಣಗಳಲ್ಲಿ ಮದುವೆಯ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ವೈರಲ್ ಆದ ದೃಶ್ಯದಲ್ಲಿ ಕುಟುಂಬಸ್ಥರು ಅಂದಕೊಂಡಂತೆ ವಿವಾಹ ಶಾಸ್ತ್ರಗಳು ನಡೆಯುತ್ತಿತ್ತು. ಮದುವೆಯ ಪ್ರಮುಖ ಭಾಗವಾದ ಹಾರ ಬದಲಾವಣೆ ಕೂಡಾ ನೆರವೇರಿತ್ತು. ಇನ್ನೇನು ವಧು ವರನಿಗೆ ಆರತಿ ಬೆಳಗುತ್ತಿರುವ ವೇಳೆ ಮದುವೆಯ ಚಿತ್ರಣವೇ ಬದಲಾಗಿದೆ.

ಒಂದು ಕಡೆ ವೇದಿಕೆಯಲ್ಲಿ ಮದುವೆಯ ಶಾಸ್ತ್ರಗಳು ನೆರವೇರುತ್ತಿದ್ದರೆ, ಇನ್ನೊಂದು ಕಡೆ ಬಂಧು ಮಿತ್ರರು ಜಗಳವಾಡಿಕೊಂಡಿದ್ದಾರೆ. ಗಲಾಟೆ ಎಂದರೆ ಸುಮ್ಮನೆ ಬಾಯಿಯಲ್ಲಿ ಬೈದಾಡಿಕೊಂಡ ಗಲಾಟೆ ಅಲ್ಲ. ನೆಂಟರಿಷ್ಟರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಮೊದಲು ಒಂದಿಬ್ಬರ ಮಧ್ಯೆ ಶುರುವಾದ ಜಗಳ, ಕ್ರಮೇಣ ಇಡೀ ಮದುವೆ ಮನೆಗೆ ಹರಡಿಕೊಂಡು ಬಿಟ್ಟಿದೆ. ಕೈಗೆ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ಎತ್ತಿಕೊಂಡು ಹೊಡೆದಾಡಿದ್ದಾರೆ. ಈ ಗಲಾಟೆ ನೋಡಿ ಬೆದರಿದ ವಧು-ವರ ಒಂದು ಕ್ಷಣ ಮಂಟಪದಿಂದ ಇಳಿಯಲು ಸಿದ್ದರಾಗಿದ್ದರು. ಆದರೆ ಪಕ್ಕದಲ್ಲೇ ನಿಂತಿದ್ದ ಮಹಿಳೆಯರು ತಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

View this post on Instagram

 

A post shared by Rk Raj (@rajuraj2794)

suddiyaana