ಜಗತ್ತಿಗೆ ಕಂಟಕವಾಗುತ್ತಾ ಮಧ್ಯಪ್ರಾಚ್ಯ ಕಾಳಗ? ಪೆಟ್ರೋಲ್ ಬೆಲೆಯ ಗತಿ ಏನು?
ಇಸ್ರೇಲ್ ಬೆನ್ನಿಗೆ ನಿಂತಿತಾ ಅಮೆರಿಕ?

ಜಗತ್ತಿಗೆ ಕಂಟಕವಾಗುತ್ತಾ ಮಧ್ಯಪ್ರಾಚ್ಯ ಕಾಳಗ?    ಪೆಟ್ರೋಲ್ ಬೆಲೆಯ ಗತಿ ಏನು?ಇಸ್ರೇಲ್ ಬೆನ್ನಿಗೆ ನಿಂತಿತಾ ಅಮೆರಿಕ?

ಇಸ್ರೇಲ್ ಸೇನೆ ಯಾವಾಗ ಇರಾನ್ ಮೇಲೆ ಭೀಕರ ದಾಳಿ ಮಾಡ್ತಾ, ಆಗಲೇ ಇಡೀ ವಿಶ್ವವೇ ಬೆಚ್ಚಿ ಬೆದ್ದಿದೆ. ಯಾಕಂದ್ರೆ  ಎರಡೂ  ಯುದ್ಧಕ್ಕೆ ನಾಂದಿ ಹಾಡಿದ್ರೆ ವಿಶ್ವಕ್ಕೆ ಸಮಸ್ಯೆ ಆಗುತ್ತೆ ಭಯ ಕಾಡುತ್ತಿದೆ. ಭಯ ಯಾಕಂದ್ರೆ ಅ ಇರಾನ್ & ಇಸ್ರೇಲ್ ದೇಶಗಳ ಬಳಿ ಘೋರ ಘನಘೋರ ಅಸ್ತ್ರಗಳು ಇದ್ದು, ಅಕಸ್ಮಾತ್ ಈ ಅಸ್ತ್ರಗಳನ್ನ ಬಳಕೆ ಮಾಡಿದರೆ ಭವಿಷ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ. ಈಗ ನಿಧಾನವಾಗಿ ಹೊತ್ತಿರೋ ಕಿಡಿ, ಬೆಂಕಿಯ ಜ್ವಾಲೆಯಾಗೋಕೆ ಹೆಚ್ಚು ದಿನ ಬೇಕಿಲ್ಲ.

ಮಧ್ಯಪ್ರಾಚ್ಯ ದೇಶಗಳಲ್ಲಿ ನೆಮ್ಮದಿ ಅನ್ನೋದೆ ಮಾಯವಾಗಿದೆ.  ದಿನಕ್ಕೊಂದು ಯುದ್ಧ ಶುರುವಾಗುತ್ತಿದೆ. ಹೀಗೆ ಭಾರಿ ದೊಡ್ಡ ಮಟ್ಟದಲ್ಲಿ ಯುದ್ಧ ಅಲ್ಲಿ ನಡೆಯುತ್ತಿರುವ ಕಾರಣಕ್ಕೆ ಜನ ಜೀವ ಉಳಿದ್ರೆ ಸಾಕಪ್ಪ ಸಾಕು ಅಂತಿದ್ದಾರೆ.  ಭಾರತದ ಆಪರೇಷನ್​ ಸಿಂಧೂರ್​ ರೀತಿ.. ಇಸ್ರೇಲ್​ ಆಪರೇಷನ್‌ ರೈಸಿಂಗ್‌ ಲಯನ್ ಅಂತ ಹೆಸರಿಟ್ಟು.. ಡಜನ್‌ ಗಟ್ಟಲೆ ಜೆಟ್‌ಗಳನ್ನ ಕಳುಹಿಸಿ.. ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ.. ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇರಾನ್‌ನ ಪ್ರಮುಖ ಮಿಲಿಟರಿ ಕಮಾಂಡರ್‌ಗಳು ಮತ್ತು ಪರಮಾಣು ವಿಜ್ಞಾನಿಗಳು ಸಾವನ್ನಪ್ಪಿದ್ದರು.  ಇದ್ದಕ್ಕೆ ಪ್ರತಿ ದಾಳಿ ಮಾಡೇ ಮಾಡ್ತೀವಿ ಅಂತ ಇರಾನ್ ಹೇಳಿತ್ತು. ಅದ್ದರಂತೆ ಸೇಡು ತೀರಿಸಿಕೊಂಡಿದೆ.  ವಿಶೇಷವಾಗಿ, ಯಹೂದಿ ರಾಷ್ಟ್ರದ ಉತ್ತರ ಭಾಗವನ್ನು ಗುರಿಯಾಗಿಸಿಕೊಂಡು ಇರಾನ್‌ ದಾಳಿ ನಡೆಸುತ್ತಿದೆ. ಇಸ್ರೇಲ್‌ ರಾಜಧಾನಿ ಟೆಲ್‌ ಅವೀವ್‌ನಲ್ಲಿ ನಡೆದ ಡ್ರೋನ್‌ ಹಾಗೂ ಕ್ಷಿಪಣಿ ದಾಳಿಯಲ್ಲಿ ಹಲವಾರು ನಾಗರಿಕರು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇರಾನ್ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಪ್ರಮುಖ ಸೇನಾ ಅಧಿಕಾರಿಗಳು ಸೇರಿದಂತೆ ಇಸ್ಲಾಮಿಕ್‌ ರೆವೆಲ್ಯುಶನರಿ ಗಾರ್ಡ್ಸ್‌ನ ಮುಖ್ಯಸ್ಥ ಹುಸೇನ್‌ ಸಲಾಮಿ ಸಾವನ್ನಪ್ಪಿದ್ದಾರೆ. ಇದು ಇರಾನ್‌ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇರಾನ್‌ ಸೇನ್‌ ಇಸ್ರೇಲ್‌ಗೆ ನುಗ್ಗಿದೆ. ರಾಜಧಾನಿ ಟೆಲ್‌ ಅವೀವ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಪೆಟ್ರೋಲ್ ರೇಟ್ ಹೆಚ್ಚಳ ಸಾಧ್ಯತೆ  

ಇರಾನ್‌ ಹಾಗೂ ಇಸ್ರೇಲ್‌ನ ಈ ನಡೆಯಿಂದ ಮದ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಇದರಿಂದ ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಅನ್ನೋ ಮಾತು ಕೇಳಿ ಬರ್ತಿದೆ.

 ಇರಾನ್ ನೆಲದಲ್ಲಿ ಪರಮಾಣು ಸೋರಿಕೆ?

ಹೇಗಾದರೂ ಮಾಡಿ ಇರಾನ್ ದೇಶಕ್ಕೆ ಸರಿಯಾದ ಪಾಠ ಕಲಿಸಬೇಕು ಅನ್ನೋ ರೀತಿಯಲ್ಲೇ ಇಸ್ರೇಲ್ ಈಗ ದಾಳಿ ಮಾಡುತ್ತಿದೆ. ಆದರೆ ಹೀಗೆ ದಾಳಿ ಮಾಡುವ ಸಮಯದಲ್ಲೇ ಇರಾನ್ ದೇಶದ ಪರಮಾಣು ಸ್ಥಾವರಕ್ಕೆ ಕೂಡ ಭಾರಿ ದೊಡ್ಡ ಹಾನಿ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಇರಾನ್ ದೇಶದ ಪರಮಾಣು ಸ್ಥಾವರ ಮೇಲೆ ಇಸ್ರೇಲ್ ದಾಳಿ ಮಾಡಿದೆ & ಇದರಿಂದ ವಿಕಿರಣ ಸೋರಿಕೆ ಶುರುವಾಗಿದೆ ಎಂಬ ಆರೋಪ ಕೂಡ ಈಗ ಕೇಳಿ ಬಂದಿದೆ.

ಎಲ್ಲಾ ರಾಯಭಾರ ಕಚೇರಿ ಮುಚ್ಚಿದ ಇಸ್ರೇಲ್

ಇರಾನ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ ನಂತರ ವಿಶ್ವದಾದ್ಯಂತ ಇರುವ ತನ್ನ ಎಲ್ಲಾ ರಾಯಭಾರ ಕಚೇರಿಗಳನ್ನು ಇಸ್ರೇಲ್ ಮುಚ್ಚುತ್ತಿದೆ. ಜಗತ್ತಿನ ವಿವಿಧ ರಾಷ್ಟ್ರಗಳು ತನ್ನ ನಾಗರಿಕರು ಜಾಗರೂಕರಾಗಿರಬೇಕು, ಯಹೂದಿ ಅಥವಾ ಇಸ್ರೇಲ್ ನ ಯಾವುದೇ ಲಾಂಛವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು ಎಂದು ರಾಯಬಾರ ಕಚೇರಿಯ ವೆಬ್ ಸೈಟ್ ಗಳಲ್ಲಿ ಹೇಳಲಾಗಿದೆ. ಇಸ್ರೇಲ್ ರಾಯಭಾರಿ ಕಚೇರಿಯ ಯಾವುದೇ ಸೇವೆಗಳು ಇರುವುದಿಲ್ಲ. ಯಾವುದೇ ದಾಳಿ ಎದುರಾದರೂ ನಾಗರಿಕರು ಸ್ಥಳೀಯ ಭದ್ರತಾ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಎಚ್ಚರಿಕೆಯ ಸಂದೇಶದಲ್ಲಿ ತಿಳಿಸಲಾಗಿದೆ.

ಭಯ ಆಗುತ್ತಿದೆ ನಮ್ಮನ್ನ ಸ್ಥಳಾಂತರಿಸಿ ಎಂದ ವಿದ್ಯಾರ್ಥಿಗಳು

ಇರಾನ್ ಮತ್ತು ಇಸ್ರೇಲ್ ಮಧ್ಯೆ ಉದ್ವಿಗ್ನತೆ ಹಿನ್ನೆಲೆ ಟೆಹರಾನ್‌ನಿಂದ ತಮ್ಮನ್ನು ಸ್ಥಳಾಂತರಿಸುವಂತೆ ಭಾರತೀಯ ವಿದ್ಯಾರ್ಥಿಗಳು ಭಾರತ ಸರಕಾರಕ್ಕೆ ಕೋರಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ ಮತ್ತು ನಾವು ಸುರಕ್ಷಿತವಾಗಿದ್ದೇವೆ, ಆದರೆ ನಾವು ಭಯಭೀತರಾಗಿದ್ದೇವೆ. ಬೆಳಗಿನ ಜಾವ 3:30ರ ಸುಮಾರಿಗೆ ದಾಳಿ ಪ್ರಾರಂಭವಾಯಿತು ಮತ್ತು ಭೂಮಿ ನಡುಗಿದ ಅನುಭವವಾಯಿತು. ಇದು ಕಳವಳಕಾರಿ ಅನುಭವವಾಗಿತ್ತು ಎಂದು ಟೆಹರಾನ್‌ನ ಯುನಿವರ್ಸಿಟಿ ಆಫ್ ಮೆಡಿಕಲ್ ಸೈನ್ಸ್ ನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಕಾಶ್ಮೀರ ಮೂಲದ  ತಬಿಯಾ ಝಹ್ರಾ ಹೇಳಿದ್ದಾರೆ. ಒಟ್ನಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಬೀಕರ ಕಾಳಗ ನಡೆಯುತ್ತಿದ್ದು, ದೊಡ್ಡ ಯುದ್ಧಕ್ಕೆ ನಾಂದಿ ಹಾಡುವ ಎಲ್ಲ ಲಕ್ಷಣಗಳು ಕಾಣುತ್ತಿದೆ.

ಇರಾನ್ ಅಣ್ವಸ್ತ್ರ ಹೊಂದಲು ಬಿಡಲ್ಲ ಎಂದ ಡೊನಾಲ್ಡ್​ ಟ್ರಂಪ್

ಇಸ್ರೇಲ್​ ದಾಳಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮಾತನಾಡಿ, ದಾಳಿ ಬಗ್ಗೆ ನಮಗೆ ಮೊದಲೇ ಮಾಹಿತಿ ಇತ್ತು.. ಇರಾನ್ ಅಣ್ವಸ್ತ್ರ ಹೊಂದಲು ಬಿಡಲ್ಲ ಅಂತ ವಾರ್ನಿಂಗ್​ ಮಾಡಿದ್ದಾರೆ. ಇಸ್ರೇಲ್​ ಪ್ರಧಾನಿ ನ್ಯಾಥನ್ಯಾಹು ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರಿಗೆ ಕರೆ ಮಾಡಿ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಶಾಂತಿ ಕಾಪಾಡಿಕೊಳ್ಳುವಂತೆ ಇಸ್ರೇಲ್​ ಪ್ರಧಾನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ಯಾಕೆ..?

ಕಳೆದ ಕೆಲ ತಿಂಗಳಿನಿಂದ ಇರಾನ್ ಭಾರೀ ಪ್ರಮಾಣದಲ್ಲಿ ಪರಮಾಣು ಬಾಂಬ್ ತಯಾರಿಸಲು ಅಗತ್ಯವಾದ ಯುರೇನಿಯಂ ಅನ್ನು ಸಂಸ್ಕರಿಸಿದೆ. ಇದು ಕೆಲವೇ ದಿನಗಳಲ್ಲಿ ಕನಿಷ್ಠ 15 ಪರಮಾಣು ಬಾಂಬ್ ಸಿದ್ಧಪಡಿಸುವ ಸಾಮರ್ಥವನ್ನು ಇರಾನ್‌ಗೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವಕ್ಕೆ ಭಂಗ ತರುವ ಸಂಗತಿ. ಹೀಗಾಗಿ ನಮ್ಮ ಅಸ್ತಿತ್ವ ಉಳಿ ಸಿಕೊಳ್ಳುವ ನಿಟ್ಟಿನಲ್ಲಿ ಇರಾನ್‌ನ ಪರಮಾಣು ಬಾಂಬ್ ತಯಾರಿ ಸಾಮರ್ಥ್ಯ ನಾಶ ಮಾಡಬೇಕು ಎನ್ನುವ ಉದ್ದೇಶದಿಂದ ಇರಾನ್‌ನ 200ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಸ್ರೇಲ್ ಕ್ಷಿಪಣಿ ಮತ್ತು ಡೋನ್ ದಾಳಿ ನಡೆಸಿದೆ. ಇದರ ಜೊತೆಗೆ ಇಸ್ರೇಲ್ ವಿರುದ್ದ ಸದಾ ದಾಳಿ ನಡೆಸುವ ಹಮಾಸ್, ಹಿಜ್ಜುಲ್ಲಾ ಉಗ್ರರಿಗೂ ಇರಾನ್ ಆರ್ಥಿಕ ಮತ್ತು ಸೇನಾ ನೆರವು ನೀಡುತ್ತಿದೆ. ಜೊತೆಗೆ ತನ್ನ ವಿರುದ್ಧ ಸಂಚು ರೂಪಿಸುವ ಇರಾಕ್, ಲೆಬನಾನ್, ಸಿರಿಯಾ, ಗಾಜಾದಲ್ಲಿನ ವಿವಿಧ ಸಂಘಟನೆ ಗಳನ್ನು ಇರಾನ್ ಬೆಂಬಲಿಸುತ್ತಿದೆ ಅನ್ನೋದು ಇಸ್ರೇಲ್ ಆಕ್ರೋಶ. ಒಟ್ನಲ್ಲಿ ಎರಡು ದೇಶಗಳ ನಡುವೆ ದೊಡ್ಡ ಮಟ್ಟದಲ್ಲಿ ವಾರ್ ನಡೆಯುತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ.

Kishor KV

Leave a Reply

Your email address will not be published. Required fields are marked *