3 ಬಾರಿ ಡಬಲ್ ಸೆಂಚುರಿ.. ಲಂಕಾ ವಿರುದ್ಧ 264 ರನ್ – ರೋಹಿತ್ ಶರ್ಮಾ ಹಿಟ್ ಮ್ಯಾನ್ ಜರ್ನಿ!

3 ಬಾರಿ ಡಬಲ್ ಸೆಂಚುರಿ.. ಲಂಕಾ ವಿರುದ್ಧ 264 ರನ್ – ರೋಹಿತ್ ಶರ್ಮಾ ಹಿಟ್ ಮ್ಯಾನ್ ಜರ್ನಿ!

ರೋಹಿತ್ ಶರ್ಮಾರ ಕ್ರಿಕೆಟ್ ಜರ್ನಿ ಈಸಿಯಾಗಿರಲಿಲ್ಲ. ಬಡ ಮಧ್ಯಮ ಕುಟುಂಬದಲ್ಲಿ ಹುಟ್ಟಿದ್ದ ರೋಹಿತ್ ಶರ್ಮಾಗೆ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ವಿಪರೀತ ವ್ಯಾಮೋಹ. ತಮ್ಮ ತರಬೇತುದಾರ ದಿನೇಶ್ ಲಾಡ್ ಅವರ ಮಾರ್ಗದರ್ಶನದಲ್ಲಿ ಶಾಲಾ ಕ್ರಿಕೆಟ್‌ನಲ್ಲೇ ಟ್ಯಾಲೆಂಟ್ ತೋರಿಸಿದ್ರು. ಗಿಲೆಸ್ ಮತ್ತು ಹ್ಯಾರಿಸ್ ಶೀಲ್ಡ್‌ನಂತಹ ಶಾಲಾ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಬಳಿಕ ಮುಂಬೈನ ಅಂಡರ್-20 ತಂಡಕ್ಕೆ ಆಯ್ಕೆಯಾದರು. ನಂತರ ಅಂಡರ್-17 ಮತ್ತು ಅಂಡರ್-19 ವಿಶ್ವಕಪ್ ತಂಡಗಳಲ್ಲಿ ಸ್ಥಾನ ಪಡೆದರು, ಅಲ್ಲಿ 2006 ರಲ್ಲಿ ಶ್ರೀಲಂಕಾದಲ್ಲಿ ನಡೆದ U-19 ವಿಶ್ವಕಪ್‌ನಲ್ಲಿ ಉತ್ತಮ ರನ್ ಗಳಿಸಿದ ರೋಹಿತ್ ಭಾರತ ತಂಡಕ್ಕೆ ಆಯ್ಕೆಯಾದರು. ಇಲ್ಲಿಂದ ಹತ್ತತ್ರ ಎರಡ ದಶಕಗಳ ಕಾಲ ರೋಹಿತ್ ಹಿಂತಿರುಗಿ ನೋಡಿದ್ದೇ ಇಲ್ಲ.

ಇದನ್ನೂ ಓದಿ : PAK ಕ್ರಿಕೆಟ್ ನಲ್ಲಿ ಅಲ್ಲೋಲ ಕಲ್ಲೋಲ – ತ್ರಿವಳಿ ಸ್ಟಾರ್ಸ್ ಗೆ PCB ಗೇಟ್ ಪಾಸ್

ರೋಹಿತ್ ಶರ್ಮಾ 2007 ರಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಕನ್ಸೆಸ್ಟಿನ್ಸಿ ಪರ್ಫಾಮೆನ್ಸ್ ನೀಡಲು ಹೆಣಗಾಡಿದ್ರು. ಆದ್ರೆ 2013 ರಲ್ಲಿ ಮಹೇಂದ್ರ ಸಿಂಗ್ ಧೋನಿ ಒತ್ತಾಯದಿಂದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಅವಕಾಶ ಪಡೆದ್ರು. ಅಷ್ಟೇ. ಆ ಬಳಿಕ ರೋಹಿತ್ ಶರ್ಮಾ ಹಿಟ್​ಮ್ಯಾನ್ ಆಗಿ ಬದಲಾಗಿದ್ರು. ಸಹಸ್ರಾರು ರನ್​, ಭಾರತ ತಂಡದಲ್ಲೇ ಹಿಂದೆಂದು ಕೇಳಿದರ ದಾಖಲೆಗಳೊಂದಿಗೆ ಹೊಸ ಮೈಲುಗಲ್ಲುಗಳನ್ನ ಸ್ಥಾಪಿಸಿದ್ರು. ಆರಂಭಿಕನಾಗಿ ಭಾರತದ ಪರ ವೇಗವಾಗಿ 9 ಸಾವಿರ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾದಂತಹ ಬಲಿಷ್ಠ ಬೌಲಿಂಗ್ ಪಡೆಯಲ್ಲೂ ಲೀಲಾಜಾಲವಾಗಿ ಬ್ಯಾಟಿಂಗ್ ಬೀಸುತ್ತಿದ್ದ ಹಿಟ್​ಮ್ಯಾನ್ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ದ್ವಿಶತಕ ಸಿಡಿಸಿ ವಿಶ್ವಕ್ರಿಕೆಟ್​​ಗೆ ತಾವೆಷ್ಟು ಡೇಂಜರಸ್ ಬ್ಯಾಟರ್ ಎಂಬುದನ್ನ ತೋರಿಸಿಕೊಟ್ಟಿದ್ದರು.

50 ಓವರ್​​ಗಳ ಪಂದ್ಯದಲ್ಲಿ ಶತಕ ಸಿಡಿಸೋದೇ ಗ್ರೇಟ್. ಇನ್ನು ಡಬಲ್ ಸೆಂಚುರಿ ಸಿಡಿಸೋದು ಅಂದ್ರೆ ಈಸಿ ಅಲ್ವೇ ಅಲ್ಲ. ಅದ್ರಲ್ಲೂ ಒಂದಲ್ಲ ಎರಡಲ್ಲ ಬರೋಬ್ಬರಿ ಮೂರು ಡಬಲ್ ಸೆಂಚುರಿ ಸಿಡಿಸಿದ್ದಾರೆ. ಅಲ್ದೇ ODIನಲ್ಲಿ ಮೂರು ದ್ವಿಶತಕಗಳನ್ನು (209, 264, 208*) ರನ್ ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆ ಹೊಂದಿದ್ದಾರೆ. ಕೆಲವೊಂದು ಟೀಮ್ಸ್ ಈಗ್ಲೂ ಏಕದಿನ ಕ್ರಿಕೆಟ್​​ನಲ್ಲಿ 250ರ ಗಡಿ ದಾಟಲು ಹೆಣಗಾಡುತ್ತಿವೆ. ಆದರೆ ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಏಕಾಂಗಿಯಾಗಿ 264 ರನ್‌ಗಳಿಸಿದ್ದಾರೆ. ಏಕದಿನದಲ್ಲಿ ಒಬ್ಬ ಆಟಗಾರನ ಅತ್ಯಧಿಕ ವೈಯಕ್ತಿಕ ಸ್ಕೋರ್ ಕೂಡ ಇದೇ ಆಗಿದೆ. ಬಹುಶಃ ಈ ವಿಶ್ವದಾಖಲೆ ಮುರಿಯಲು ದಶಕಗಳೇ ಉರುಳಬಹುದು. ಇನ್ನು ODI ಯಲ್ಲಿ 11,000 ರನ್ ಗಳಿಸಿದ ನಾಲ್ಕನೇ ಭಾರತೀಯರಾಗಿದ್ದಾರೆ.

ರೋಹಿತ್ ಶರ್ಮಾರನ್ನ ಹಿಟ್​ಮ್ಯಾನ್ ಅಂತಾ ಕರೆಯೋದು ಇದಕ್ಕೇ ನೋಡಿ. ಬೌಲರ್​​ಗಳ ಪಾಲಿಗೆ ಸಿಂಹಸ್ವಪ್ನರಾಗಿರುವ ರೋಹಿತ್ ಬೌಂಡರಿ, ಸಿಕ್ಸರ್​ಗಳಲ್ಲೇ ಡೀಲ್ ಮಾಡ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ಮೂರೂ ಮಾದರಿಯಲ್ಲಿ ಸೇರಿ ಒಟ್ಟು 637 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈ ಮೈಲಿಗಲ್ಲು ಸಾಧಿಸಿದ ಮೊದಲ ಕ್ರಿಕೆಟಿಗ ಅವರು. ಇನ್ನು ಯುನಿವರ್ಸಲ್ ಬಾಸ್ ಅಂತಾನೇ ಕರೆಸಿಕೊಳ್ಳೋ ಕ್ರಿಸ್ ಗೇಲ್ 553 ಸಿಕ್ಸ್ ಸಿಡಿಸಿ ಸೆಕೆಂಡ್ ಪ್ಲೇಸ್ ನಲ್ಲಿದ್ದಾರೆ. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರವನ್ನ ಹೇಳ್ಳೇಬೇಕು. ರೋಹಿತ್ ಶರ್ಮಾ ಒಂದೇ ಪಂದ್ಯದಲ್ಲಿ ಬರೋಬ್ಬರಿ 16 ಸಿಕ್ಸರ್ ಸಿಡಿಸಿದ್ದಾರೆ. ಅದೂ ಕೂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಬಲಿಷ್ಠ ಬೌಲಿಂಗ್ ಪಡೆಯಿದ್ದ ಕಾಂಗರೂ ಬೌಲರ್​​ಗಳನ್ನ ಸಣ್ಣಪುಟ್ಟ ಟೀಮ್ ಬೌಲರ್​ಗಳಂತೆ ಚಚ್ಚಿ ಬೀಸಾಕಿದ್ದರು. ಆ ಪಂದ್ಯದಲ್ಲಿ ಕೇವಲ 158 ಎಸೆತಗಳಲ್ಲಿ 209ರನ್​ ಸಿಡಿಸಿದ್ದರು. ಇನ್ನು ಟಿ-20ಐನಲ್ಲಿ ಐದು ಶತಕಗಳೊಂದಿಗೆ 4,231 ರನ್​ ಸಿಡಿಸಿದ್ದಾರೆ.

ಇನ್ನು ರೋಹಿತ್ ಶರ್ಮಾ 2021 ರಲ್ಲಿ T20I ಖಾಯಂ ನಾಯಕತ್ವ ವಹಿಸಿಕೊಂಡರು. 2022 ರಲ್ಲಿ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ನಾಯಕರಾದರು. ರೋಹಿತ್ ನಾಯಕತ್ವದಲ್ಲಿ ಭಾರತ 2024 ರ T20 ವಿಶ್ವಕಪ್ ಗೆದ್ದಿದೆ. ಹಾಗೇ 2025ರ ಚಾಂಪಿಯನ್ಸ್ ಟ್ರೋಫಿ ಟೈಟಲ್​ನೂ ಮುಡಿಗೇರಿಸಿಕೊಂಡಿದೆ. ಇನ್ನು 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರವೇಶಿಸಿದರು ಮತ್ತು 2009 ರಲ್ಲಿ ತಂಡದ ವೈಸ್ ಕ್ಯಾಪ್ಟನ್ ಆಗಿದ್ರು. 2011 ರಿಂದ ಮುಂಬೈ ಇಂಡಿಯನ್ಸ್‌ಗೆ ಸೇರಿದ ಅವರು, 2013 ರಲ್ಲಿ ನಾಯಕತ್ವ ವಹಿಸಿ ತಂಡವನ್ನು ಐದು ಬಾರಿ ಅಂದ್ರೆ 2013, 2015, 2017, 2019, 2020 ಚಾಂಪಿಯನ್‌ ಪಟ್ಟಕ್ಕೇರಿಸಿದ್ರು. ಇದು ಐಪಿಎಲ್ ಇತಿಹಾಸದಲ್ಲಿ ದಾಖಲೆಯಾಗಿದೆ.

Shantha Kumari

Leave a Reply

Your email address will not be published. Required fields are marked *