ಭಾರತ –  ಚೀನಾ ಗಡಿ ಸಂಘರ್ಷ… ಪರಿಸ್ಥಿತಿ “ಸ್ಥಿರವಾಗಿದೆ” ಎಂದ ಚೀನಾ

ಭಾರತ –  ಚೀನಾ ಗಡಿ ಸಂಘರ್ಷ… ಪರಿಸ್ಥಿತಿ “ಸ್ಥಿರವಾಗಿದೆ” ಎಂದ ಚೀನಾ

ಬೀಜಿಂಗ್: ಡಿ. 9 ರಂದು ಅರುಣಾಚಲ ಗಡಿಯ ಯಂಗ್​​ಟ್ಸೆ ಪ್ರದೇಶದಲ್ಲಿ ಭಾರತ – ಚೀನಾ ಸೇನಿಕರ ನಡುವೆ ಘರ್ಷಣೆ ನಡೆದ ಬಳಿಕ ಚೀನಾ ಮೊದಲ ಬಾರಿಗೆ ಸಂಘರ್ಷದ ಕುರಿತು ಪ್ರತಿಕ್ರಿಯೆ ನೀಡಿದೆ. ಭಾರತದೊಂದಿಗಿನ ತನ್ನ ಗಡಿಯಲ್ಲಿ ಪರಿಸ್ಥಿತಿ “ಸ್ಥಿರವಾಗಿದೆ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಹೇಳಿದ್ದಾರೆ.

“ನಮಗೆ ತಿಳಿದಿರುವಂತೆ, ಚೀನಾ-ಭಾರತದ ಗಡಿ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ. ಉಭಯ ದೇಶಗಳು ರಾಜತಾಂತ್ರಿಕ ಮತ್ತು ಸೇನಾ ಮಟ್ಟದ ಮಾತುಕತೆ ಮೂಲಕ  ಪರಿಹರಿಸಿಕೊಳ್ಳಲಿವೆ. ಭಾರತ ಸಹ ಚೀನಾದ ದಿಕ್ಕಿನಲ್ಲಿಯೇ ಮುನ್ನಡೆಯುತ್ತದೆ” ಎಂದು ವೆನ್‌ಬಿನ್ ಹೇಳಿದ್ದಾರೆ.

ಇದನ್ನೂ ಓದಿ: ‘ಹೆಸರಿಗೆ ಖರ್ಗೆ ಅಧ್ಯಕ್ಷ – ನಿರ್ಧಾರಕ್ಕೆ ಗಾಂಧಿ ಕುಟುಂಬ’, ಕಾಂಗ್ರೆಸ್ ವಿರುದ್ಧ ಟ್ವೀಟ್‌ ಮೂಲಕ ಬಿಜೆಪಿ ಟೀಕೆ

ಉಭಯ ದೇಶಗಳು ಮಾಡಿಕೊಂಡ ಒಪ್ಪಂದವನ್ನು ಶ್ರದ್ಧೆಯಿಂದ ಜಾರಿಗೆ ತರಬೇಕು ಎಂದು  ಒತ್ತಾಯಿಸಿದ ವಾಂಗ್ ವೆನ್‌ಬಿನ್, ಎರಡೂ ಕಡೆಯವರು ಸಹಿ ಮಾಡಿದ ಒಪ್ಪಂದಗಳು ಮತ್ತು ಒಪ್ಪಂದಗಳ ಮನೋಭಾವವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚೀನಾ-ಭಾರತ ಒಟ್ಟಾಗಿ ಗಡಿ ಪ್ರದೇಶದ ಶಾಂತಿ ಮತ್ತು ನೆಮ್ಮದಿಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದ್ದಾರೆ.

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಕಳೆದ ಶುಕ್ರವಾರ ನಡೆದ ಮುಖಾಮುಖಿ ಸಂಘರ್ಷದಲ್ಲಿ ಭಾರತೀಯ ಸೈನಿಕರಿಗಿಂತ ಚೀನಾ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

suddiyaana